IRFC ಷೇರಿನ ರಿಟರ್ನ್: ಸರಿಯಾದ ಸ್ಟಾಕ್ ಆಯ್ಕೆ ಮಾಡುವ ಸಾಮರ್ಥ್ಯ ಮತ್ತು ಉತ್ತಮ ಅವಧಿಗೆ ತಮ್ಮ ಹೂಡಿಕೆಯನ್ನು ಹಿಡಿದಿಟ್ಟುಕೊಳ್ಳುವ ತಾಳ್ಮೆ ಇದ್ದರೆ ಷೇರು ಮಾರುಕಟ್ಟೆಯು ಯಾರನ್ನಾದರೂ ಶ್ರೀಮಂತರನ್ನಾಗಿ ಮಾಡುತ್ತದೆ. ಕಳೆದ 1 ವರ್ಷದಲ್ಲಿ ಕೆಲವು ಸ್ಟಾಕ್‌ಗಳು ಹೂಡಿಕೆದಾರರ ಹಣವನ್ನು ಡಬಲ್ ಮಾಡಿದ್ದು, ಹೂಡಿಕೆದಾರರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿವೆ. ಅತ್ಯಂತ ಕಡಿಮೆ ಸಮಯದಲ್ಲಿ ಈ ಷೇರುಗಳು ಮ್ಯಾಜಿಕ್ ಮಾಡಿದ್ದು, ಭರ್ಜರಿ ರಿಟರ್ನ್ ನೀಡಿವೆ. ಕೇವಲ ಒಂದೇ ಒಂದು ವರ್ಷದಲ್ಲಿ ರೈಲ್ವೆ ಷೇರೊಂದು ಬರೋಬ್ಬರಿ 200% ರಿಟರ್ನ್ ನೀಡಿದೆ.


COMMERCIAL BREAK
SCROLL TO CONTINUE READING

ಹೌದು, ಇಂಡಿಯನ್ ರೈಲ್ವೇ ಫೈನಾನ್ಸ್ ಕಾರ್ಪೊರೇಷನ್ (IRFC) ಷೇರು ಕಳೆದ 12 ತಿಂಗಳುಗಳಿಂದ ಏರುಮುಖ ಪ್ರವೃತ್ತಿಯನ್ನು ತೋರಿಸುತ್ತಿದೆ. ಇದು ಕಳೆದ 1 ತಿಂಗಳಲ್ಲಿಯೇ ಸುಮಾರು ಶೇ.50ರಷ್ಟು ಲಾಭ ನೀಡಿದೆ. ಈ ಷೇರು 52 week high ದಾಟಿದ್ದು, ಬಹುತೇಕ ಪ್ರತಿ ತಿಂಗಳು ಅಪ್ಪರ್ ಸರ್ಕ್ಯೂಟ್‌ಗಳಿಗೆ ಸಾಕ್ಷಿಯಾಗಿದೆ.


ಇದನ್ನೂ ಓದಿ: ಜೀವನದಲ್ಲಿ ಹಣಕಾಸಿಗೆ ಸಂಬಂಧಿಸಿದ ಈ 5 ತಪ್ಪುಗಳನ್ನು ಎಂದಿಗೂ ಮಾಡಬೇಡಿ


ಒಂದೇ ದಿನದಲ್ಲಿ 19.64% ರಿಟರ್ನ್


ಸೋಮವಾರ ಐಆರ್‌ಎಫ್‌ಸಿ ಷೇರುಗಳು ಒಂದೇ ವಹಿವಾಟಿನಲ್ಲಿ ಭರ್ಜರಿ ಏರಿಕೆ ಕಂಡಿದೆ. ಇದು ಶೇ.19.64ರಷ್ಟು ಏರಿಕೆ ಕಂಡು ವಹಿವಾಟು ಅಂತ್ಯಗೊಳಿಸಿತು. ಸೋಮವಾರ 57.70 ರೂ.ನಲ್ಲಿ ಪ್ರಾರಂಭವಾದ ಈ ಸ್ಟಾಕ್ ದಿನದಾದ್ಯಂತದ ವೇಳೆಗೆ 66.90 ರೂ.ಗೆ ಏರಿತು. ಅಂದರೆ 19.64% ಲಾಭ ನೀಡುವ ಮೂಲಕ ಹೂಡಿಕೆದಾರರಿಗೆ ಭರ್ಜರಿ ಲಾಭ ನೀಡಿತು. ಮಂಗಳವಾರ ಸಹ IRFC ಷೇರು ಶೇ.8.32ರಷ್ಟು ಏರಿಕೆ ಕಂಡು ಹೂಡಿಕೆದಾರರಿಗೆ ಭರ್ಜರಿ ಲಾಭ ನೀಡಿತು. ಇಂದು ಬೆಳಗ್ಗೆ 69.75 ರೂ.ನಿಂದ ಆರಂಭವಾದ ಈ ಷೇರು ವಹಿವಾಟಿನ ಅಂತ್ಯಕ್ಕೆ 72.25 ರೂ.ಗೆ ತಲುಪಿದೆ.


ಇದನ್ನೂ ಓದಿ: ಜಾಗತಿಕ ಮಾರುಕಟ್ಟೆಯ ಪ್ರಭಾವ : ಭಾರೀ ಇಳಿಕೆ ಕಂಡ ಚಿನ್ನದ ಬೆಲೆ !


1 ತಿಂಗಳಲ್ಲಿ 45.23% ಆದಾಯ


ಆಗಸ್ಟ್ 7ರಂದು IRFC ಷೇರುಗಳು 46.20 ರೂ.ನ ಮಟ್ಟದಲ್ಲಿತ್ತು. ಸತತ ಏರಿಕೆ ಕಾಣುವ ಮೂಲಕ ಹೂಡಿಕೆದಾರರ ಕೈ ಹಿಡಿದ ಈ ಷೇರು ಕಳೆದ 5 ದಿನಗಳಲ್ಲಿ 44.64%, ಕಳೆದ 1 ತಿಂಗಳಿನಲ್ಲಿ ಶೇ. 45.23% ಮತ್ತು ಕಳೆದ 1 ವರ್ಷದಲ್ಲಿ ಶೇ.222.54% ಲಾಭವನ್ನು ನೀಡಿದೆ.  IRFC ಷೇರಿನ ಪ್ರಸ್ತುತ 52 ವಾರದ ಗರಿಷ್ಠ 75.70 ರೂ. ಇದ್ದರೆ, ಅದರ ಪ್ರಸ್ತುತ 52 ವಾರದ ಕನಿಷ್ಠ 20.80 ರೂ. ಆಗಿದೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.