ಜೀವನದಲ್ಲಿ ಹಣಕಾಸಿಗೆ ಸಂಬಂಧಿಸಿದ ಈ 5 ತಪ್ಪುಗಳನ್ನು ಎಂದಿಗೂ ಮಾಡಬೇಡಿ

Finance Tips: ಭವಿಷ್ಯ ಉಜ್ವಲವಾಗಿರಬೇಕು ಎಂದಾದರೆ ನಾವು ದುಡಿಯುವ ಸಮಯದಲ್ಲಿ ಇಳಿವಯಸ್ಸಿಗಾಗಿ ಒಂದಿಷ್ಟು ಹಣವನ್ನು ಕೂಡಿಡಬೇಕು. ಆದರೆ, ನಮ್ಮಲ್ಲಿ ಬಹುತೇಕ ಜನರು ಪ್ರಸ್ತುತದ ಆವಶ್ಯಕತೆಗಳನ್ನು ಪೂರೈಸುವುದಕ್ಕಾಗಿಯೇ ಹೆಚ್ಚಿನ ಒತ್ತು. ನೀಡುತ್ತಾರೆ. ಭವಿಷ್ಯಕ್ಕಾಗಿ ಉಳಿತಾಯ ಮಾಡುವುದನ್ನೇ ಮರೆಯುತ್ತಾರೆ. ನೀವು ನಿಮ್ಮ ಜೀವನದಲ್ಲಿ ಈ ಐದು ತಪ್ಪುಗಳನ್ನು ಮಾಡುತ್ತಿದ್ದರೆ ಕೂಡಲೇ ಎಚ್ಚೆತ್ತುಕೊಳ್ಳಿ. ಇಲ್ಲದಿದ್ದರೆ ವಯಸ್ಸಾದ ಕಾಲದಲ್ಲಿ ನಾನಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

1 /5

ದುಡಿಯುವ ಸಮಯದಲ್ಲಿಯೇ ನಿವೃತ್ತಿ ಬದುಕಿನ ಬಗ್ಗೆ ಯೋಚಿಸಿ, ಸರಿಯಾದ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಬಹಳ ಮುಖ್ಯ. ಒಂದೊಮ್ಮೆ ನೀವು ಕೆಲಸ ಮಾಡುವಾಗ ನಿಮ್ಮ ನಿವೃತ್ತಿಗಾಗಿ ಯೋಜಿಸದಿದ್ದರೆ, ಭವಿಷ್ಯದಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

2 /5

ಹಿಂದೆಲ್ಲಾ ಹಿರಿಯರು ತಿಪ್ಪೆಗೆ ಎಸೆದರೂ ಲೆಕ್ಕವಿಡುವಂತೆ ಸಲಹೆ ನೀಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಆದಾಯ ಹೆಚ್ಚಾದಂತೆ ಖರ್ಚುಗಳು ಕೂಡ ಹೆಚ್ಚಾಗುತ್ತಿವೆ. ಆದರೆ, ನೀವು ನಿಮ್ಮ ಮನೆಯ ಖರ್ಚನ್ನು ನಿರ್ವಹಿಸಲು ಮಾತ್ರವಲ್ಲ ನಿಮ್ಮ ವೈಯಕ್ತಿಕ ಖರ್ಚುಗಳನ್ನು ನಿರ್ವಹಿಸಲು ಕೂಡ ಬಜೆಟ್ ರೂಪಿಸುವುದು ಬಹಳ ಮುಖ್ಯ. ಇಲ್ಲದಿದ್ದರೆ, ಮಿತಿ ಮೀರಿದ ಖರ್ಚು ನಿಮ್ಮನ್ನು ಹಣಕಾಸಿನ ಸಂಕಷ್ಟಕ್ಕೆ ಸಿಲುಕಿಸಬಹುದು. 

3 /5

ಕೆಲವರು ಪ್ರಸ್ತುತ ಹಣ ಉಳಿತಾಯದ ದೃಷ್ಟಿಯಿಂದ ವಿಮೆಗಳಲ್ಲಿ ಹೂಡಿಕೆಯನ್ನು ತಪ್ಪಿಸುತ್ತಾರೆ. ಆದರೆ, ಪ್ರತಿಯೊಬ್ಬರೂ ಕೂಡ ಭವಿಷ್ಯದ ಸುರಕ್ಷತೆಯ ದೃಷ್ಟಿಯಿಂದ ಜೀವ ವಿಮೆ ಮತ್ತು ಆರೋಗ್ಯ ವಿಮೆಗಳಂತಹ ವಿಮಾ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಕೂಡ ತುಂಬಾ ಅಗತ್ಯ. ವಿಮೆಯನ್ನು ಪಡೆಯುವ ಮೂಲಕ, ನೀವು ಜೀವನದಲ್ಲಿ ಹಠಾತ್ ವೆಚ್ಚಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳುತ್ತೀರಿ. 

4 /5

ಸದ್ಯದ ಹಣಕಾಸಿನ ಆವಶ್ಯಕತೆಗಳನ್ನು ಪೂರೈಸಲು ಹಲವರು  ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುತ್ತಾರೆ. ಬೇರೆಯವರಿಂದ ಸಾಲ ಪಡೆಯುವುದಕ್ಕಿಂತ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವುದು ಒಂದರ್ಥದಲ್ಲಿ ಒಳ್ಳೆಯದೇ. ಇದರಲ್ಲಿ ನೀವು ಕ್ಯಾಶ್‌ಬ್ಯಾಕ್ ಸೇರಿದಂತೆ ಇತರ ಪ್ರಯೋಜನಗಳ ಜೊತೆಗೆ 40-50 ದಿನಗಳವರೆಗೆ ಹಣವನ್ನು ಬಡ್ಡಿರಹಿತವಾಗಿ ಬಳಸುವ ಆಯ್ಕೆಯನ್ನು ಪಡೆಯುತ್ತೀರಿ. ಆದರೆ ನೀವು ನಿಗದಿತ ಸಮಯದಲ್ಲಿ ಬಿಲ್ ಪಾವತಿಸದಿದ್ದರೆ ಹಣಕಾಸಿನ ಸಮಸ್ಯೆಗಳು ಹೆಚ್ಚಾಗುತ್ತವೆ. 

5 /5

ನೀವು ತಿಂಗಳಿಗೆ ಎಷ್ಟೇ ಹಣ ಸಂಪಾದಿಸಿದರೂ ಕೂಡ ಉಳಿತಾಯ ಮಾಡದಿದ್ದರೆ ಭವಿಷ್ಯದಲ್ಲಿ, ವಯಸ್ಸಾದ ಕಾಲದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸೀಳುಕುವುದರಲ್ಲಿ ಅನುಮಾನವೇ ಇಲ್ಲ. ಹಾಗಾಗಿ, ಎಂದಿಗೂ ಕೂಡ ಉಳಿತಾಯವನ್ನು ನಿರ್ಲಕ್ಷಿಸಬೇಡಿ. ಆರ್ಥಿಕ ತಜ್ಞರ ಪ್ರಕಾರ, ಪ್ರತಿ ತಿಂಗಳು ನಿಮ್ಮ ಸಂಬಳದ ಕನಿಷ್ಠ 20% ಉಳಿಸಬೇಕು ಎಂದು ಹೇಳಲಾಗುತ್ತದೆ. ವೃದ್ದಾಪ್ಯದಲ್ಲಿ ಒತ್ತಡ ಮುಕ್ತ ಜೀವನವನ್ನು ನಡೆಸಲು ನಿಮ್ಮ ಆದಾಯದ ಒಂದು ಭಾಗವನ್ನು ತಪ್ಪದೇ ಉಳಿತಾಯ ಮಾಡಿ.