ಸರ್ಕಾರಿ ನೌಕರರ ಬಡ್ತಿಗೆ ಹೊಸ ನಿಯಮ ! ಹೊರ ಬಿದ್ದಿದೆ ಅಧಿಕೃತ ಆದೇಶ

ಸರ್ಕಾರ ಮಹತ್ವದ ನಿಯಮವೊಂದನ್ನು ಬದಲಾಯಿಸಿದೆ.  ಕೇಂದ್ರ ನೌಕರರಿಗೆ ಕಚೇರಿ ಜ್ಞಾಪಕ ಪತ್ರವನ್ನೂ ನೀಡಲಾಗಿದೆ. ಬಡ್ತಿಗೆ ಸಂಬಂಧಿಸಿದ ನಿಯಮಗಳನ್ನು ಅದರಲ್ಲಿ ಸ್ಪಷ್ಟಪಡಿಸಿದೆ.   

Written by - Ranjitha R K | Last Updated : Sep 5, 2023, 09:00 AM IST
  • ಬಡ್ತಿಗಾಗಿ ಕನಿಷ್ಠ ಅವಶ್ಯಕತೆ ನಿಯಮದಲ್ಲಿ ಬದಲಾವಣೆ.
  • ಬಡ್ತಿಗೆ ಮಾನದಂಡಗಳನ್ನು ನಿಗದಿಪಡಿಸಲಾಗಿದೆ.
  • ತುಟ್ಟಿಭತ್ಯೆ ಶೀಘ್ರದಲ್ಲೇ ನಾಲ್ಕು ಶೇಕಡಾ ಹೆಚ್ಚಿಸಲಾಗುವುದು.
ಸರ್ಕಾರಿ ನೌಕರರ ಬಡ್ತಿಗೆ ಹೊಸ ನಿಯಮ ! ಹೊರ ಬಿದ್ದಿದೆ ಅಧಿಕೃತ ಆದೇಶ title=

ಬೆಂಗಳೂರು : ಕೇಂದ್ರ ಸರ್ಕಾರಿ ನೌಕರರಿಗೆ ಇದು ಸಿಹಿ ಸುದ್ದಿ. ಸರ್ಕಾರ ಮಹತ್ವದ ನಿಯಮವೊಂದನ್ನು ಬದಲಾಯಿಸಿದೆ. 7ನೇ ವೇತನ ಆಯೋಗದ ಪ್ರಯೋಜನ ಪಡೆಯುತ್ತಿರುವ ನೌಕರರು ಇದರ ಲಾಭ ಪಡೆಯಲಿದ್ದಾರೆ.  ಕೇಂದ್ರ ನೌಕರರಿಗೆ ಕಚೇರಿ ಜ್ಞಾಪಕ ಪತ್ರವನ್ನೂ ನೀಡಲಾಗಿದೆ. ಬಡ್ತಿಗೆ ಸಂಬಂಧಿಸಿದ ನಿಯಮಗಳನ್ನು ಅದರಲ್ಲಿ ಸ್ಪಷ್ಟಪಡಿಸಿದೆ. 

ಬಡ್ತಿಗೆ ಕನಿಷ್ಠ ಅವಶ್ಯಕತೆಯ ನಿಯಮದಲ್ಲಿ ಬದಲಾವಣೆ : 
ವೇತನ ಆಯೋಗದ ಅಡಿಯಲ್ಲಿ ಬಡ್ತಿ ಪ್ರಯೋಜನವನ್ನು ಪಡೆಯುತ್ತಾರೆ. ರಕ್ಷಣಾ ಸಚಿವಾಲಯ ಈ ಕುರಿತು ಆದೇಶ ಹೊರಡಿಸಿದೆ. ಹೊರಡಿಸಿದ ಆದೇಶದ ಪ್ರಕಾರ, ನೌಕರರ ಬಡ್ತಿಗೆ ಕನಿಷ್ಠ ಅವಶ್ಯಕತೆಯ ನಿಯಮವನ್ನು ಬದಲಾಯಿಸಲಾಗಿದೆ. ವೇತನ ಆಯೋಗದ ವ್ಯಾಪ್ತಿಯಲ್ಲಿರುವ ಎಲ್ಲಾ ಭದ್ರತಾ ಸಿಬ್ಬಂದಿಯನ್ನು ಈ ತಿದ್ದುಪಡಿಯಲ್ಲಿ ಸೇರಿಸಲಾಗುತ್ತದೆ. ಇದರೊಂದಿಗೆ ಸೇವಾ ರಕ್ಷಣಾ ಕಾರ್ಮಿಕರಿಗೆ ಬಡ್ತಿ ನೀಡುವ ಮಾನದಂಡಗಳನ್ನು ನಿಗದಿಪಡಿಸಲಾಗಿದೆ.

ಇದನ್ನೂ ಓದಿ : ಹಳೆ ಪಿಂಚಣಿ ಯೋಜನೆ ಬಗ್ಗೆ ಅಪ್‌ಡೇಟ್: ಉದ್ಯೋಗಿಗಳಿಗೆ ಸಿಗಲಿದೆ ಗುಡ್ ನ್ಯೂಸ್!

ಬಡ್ತಿಗೆ ಮಾನದಂಡ ನಿಗದಿ : 
ಸಚಿವಾಲಯ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ನೌಕರರ ಬಡ್ತಿಗೆ ವಿವಿಧ ಹಂತಗಳಲ್ಲಿ ಕೆಲಸ ಮಾಡಿದ ಅನುಭವದ ಅಗತ್ಯವಿದೆ ಎಂದು ಷರತ್ತು ವಿಧಿಸಲಾಗಿದೆ. ಇದಕ್ಕಾಗಿ,  ಹಂತ 1 ರಲ್ಲಿ 2 ರಿಂದ 3 ವರ್ಷಗಳ ಕಾಲ ಕೆಲಸ ಮಾಡಿರುವ ಅನುಭವವನ್ನು ಹೊಂದಿರಬೇಕು. ಹೀಗಾಗಿ ರಕ್ಷಣಾ ಸಚಿವಾಲಯ ನೀಡಿರುವ ಮಾಹಿತಿಯಂತೆ ತಕ್ಷಣದಿಂದ ಜಾರಿಗೆ ಬರುವಂತೆ ಈ ಆದೇಶಗಳನ್ನು ಹೊರಡಿಸಲಾಗಿದೆ. ಎಲ್ಲಾ ನೌಕರರಿಗೂ ತಕ್ಷಣದಿಂದಲೇ  ಬಡ್ತಿ ನೀಡಲಾಗುವುದು.

ಆದರೂ ಷರತ್ತುಗಳು ಮತ್ತು ಅರ್ಹತೆಗಳನ್ನು ಪೂರೈಸುವುದು ಕಡ್ಡಾಯವಾಗಿದೆ. ಹಂತ 1ರಿಂದ 3ರವರೆಗೆ 3 ವರ್ಷಗಳ ಅನುಭವದ ಅಗತ್ಯವಿದೆ. ಹಂತ 2 ರಿಂದ 4 ರವರೆಗೆ ಉದ್ಯೋಗಿಗಳಿಗೆ 3 ರಿಂದ 8 ವರ್ಷಗಳ ಅನುಭವದ ಅಗತ್ಯವಿದೆ. ಬಡ್ತಿಗಾಗಿ, 17 ನೇ ಹಂತದವರೆಗಿನ ಉದ್ಯೋಗಿಗಳಿಗೆ ಒಂದರಿಂದ 12 ವರ್ಷಗಳ ಅನುಭ ಹೊಂದಿರಬೇಕು.

ಇದನ್ನೂ ಓದಿ : ಸಾಲು ಸಾಲು ಹಬ್ಬಗಳ ನಡುವೆ ಎಷ್ಟಾಗಿದೆ ಗೊತ್ತಾ ಚಿನ್ನ-ಬೆಳ್ಳಿ ದರ ?

ಶೀಘ್ರದಲ್ಲೇ  ತುಟ್ಟಿ ಭತ್ಯೆಯಲ್ಲಿ ನಾಲ್ಕು ಶೇಕಡಾ ಹೆಚ್ಚಳ : 
ಜುಲೈ  ತುಟ್ಟಿಭತ್ಯೆಯಲ್ಲಿ ಕೇಂದ್ರ ನೌಕರರು ಶೇಕಡಾ ನಾಲ್ಕರಷ್ಟು  ಹೆಚ್ಚಳವನ್ನು ನಿರೀಕ್ಷಿಸುತ್ತಿದ್ದಾರೆ. ಇದರ ಅಧಿಕೃತ ಅಧಿಸೂಚನೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇದಕ್ಕಾಗಿ ಪ್ರಸ್ತಾವನೆಗಳನ್ನೂ ಸಿದ್ಧಪಡಿಸಲಾಗುತ್ತಿದೆ.  ತುಟ್ಟಿಭತ್ಯೆಯಲ್ಲಿ 4% ಹೆಚ್ಚಳವು ಉದ್ಯೋಗಿಗಳ ಒಟ್ಟು ಡಿಎಯನ್ನು 46% ಕ್ಕೆ ಹೆಚ್ಚಿಸುತ್ತದೆ. ಇದಲ್ಲದೇ ಈಗ ರಕ್ಷಣಾ ಸಚಿವಾಲಯದ ನೌಕರರಿಗೂ ಬಡ್ತಿಯ ಲಾಭವನ್ನು ನೀಡಲಾಗುವುದು.

ವೇತನ ಎಷ್ಟು ಹೆಚ್ಚ್ಳವಾಗುವುದು : 
ಕನಿಷ್ಠ ಮೂಲ ವೇತನದ ಲೆಕ್ಕಾಚಾರ (ರೂ. 18,000)
1. ಉದ್ಯೋಗಿಯ ಮೂಲ ವೇತನ - ರೂ 18,000
2. ಹೊಸ ತುಟ್ಟಿಭತ್ಯೆ  (46%) - ರೂ.8280/ತಿಂಗಳು
3. ಹಿಂದಿನ ತುಟ್ಟಿಭತ್ಯೆ  (42%) - ರೂ.7560/ತಿಂಗಳು
4. ತುಟ್ಟಿಭತ್ಯೆಯಲ್ಲಿ ಹೆಚ್ಚಳ - 8280-7560= ರೂ 720/ತಿಂಗಳು
5 .ವಾರ್ಷಿಕ ವೇತನ ಹೆಚ್ಚಳ - 720X12 = ರೂ 8640

ಇದನ್ನೂ ಓದಿ : ವೇತನ ನಿಯಮಗಳಲ್ಲಿ ಬದಲಾವಣೆ : ಈ ತಿಂಗಳಿನಿಂದಲೇ ಕೈ ಸೇರುವುದು ಅಧಿಕ ವೇತನ

ಗರಿಷ್ಠ ಮೂಲ ವೇತನದ ಲೆಕ್ಕಾಚಾರ (ರೂ. 56,900)
1. ಉದ್ಯೋಗಿಯ ಮೂಲ ವೇತನ - ರೂ 56,900
2. ಹೊಸ ತುಟ್ಟಿಭತ್ಯೆ    (46%) - ರೂ 26,174/ತಿಂಗಳು
3. ಹಿಂದಿನ ತುಟ್ಟಿಭತ್ಯೆ (42%) - ರೂ 23,898/ತಿಂಗಳು
4. ತುಟ್ಟಿಭತ್ಯೆಯಲ್ಲಿ ಹೆಚ್ಚಳ  - 26,174=26,174-26,828-26 /ತಿಂಗಳು
5. ವಾರ್ಷಿಕ ವೇತನ ಹೆಚ್ಚಳ - 2276X12 = ರೂ 27312

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News