New Royal Enfield Classic 350 - ದೀರ್ಘಕಾಲದ ನಿರೀಕ್ಷೆಯ ನಂತರ ರಾಯಲ್ ಎನ್‍ಫೀಲ್ಡ್ (Royal Enfield) ಬೈಕ್ ಪ್ರಿಯರಿಗೆ ಹೊಸ ಉಡುಗೊರೆಯೊಂದನ್ನು ನೀಡಿದೆ. ಕಂಪನಿಯು ಇಂದು ತನ್ನ ಅತ್ಯುತ್ತಮ ಮಾರಾಟವಾದ ಬೈಕ್ ಕ್ಲಾಸಿಕ್ 350 ನ (New Royal Enfield Classic) ಮುಂದಿನ ಪೀಳಿಗೆಯ ಮಾದರಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅತ್ಯಂತ ಆಕರ್ಷಕ ನೋಟ ಮತ್ತು ಬಲವಾದ ಎಂಜಿನ್ ಶಕ್ತಿಯಿಂದ ನಿರ್ವಹಿಸಲ್ಪಡುವ ಈ ಬೈಕ್ ಅನ್ನು ಒಟ್ಟು 5 ಟ್ರಿಮ್ ಮತ್ತು 11 ಆಕರ್ಷಕ ಬಣ್ಣಗಳೊಂದಿಗೆ ಪರಿಚಯಿಸಲಾಗಿದೆ. ಇದರ ಆರಂಭಿಕ ಬೆಲೆಯನ್ನು ರೂ 1,84,374 (New Royal Enfield Classic 350 Price)ಕ್ಕೆ ನಿಗದಿಪಡಿಸಲಾಗಿದೆ (ಎಕ್ಸ್ ಶೋ ರೂಂ, ದೆಹಲಿ).


COMMERCIAL BREAK
SCROLL TO CONTINUE READING

ಇಂದು ನಡೆದ ವರ್ಚುವಲ್ ಕಾರ್ಯಕ್ರಮದಲ್ಲಿ (New Royal Enfield 350 Launched)  ಕಂಪನಿಯು ತನ್ನ ಈ  ಬೆಸ್ಟ್ ಸೆಲ್ಲಿಂಗ್ ಬೈಕಿನ ಮುಂದಿನ ಪೀಳಿಗೆಯ ಮಾದರಿಯನ್ನು ಬಿಡುಗಡೆ ಮಾಡಿದೆ. ಹೊಸ ಕ್ಲಾಸಿಕ್ 350 ಅನ್ನು ರೆಡ್ಡಿಚ್, ಹೆಲ್ಕಾನ್, ಸಿಗ್ನಲ್‌ಗಳು, ಡಾರ್ಕ್ ಮತ್ತು ಕ್ರೋಮ್ ಸೇರಿದಂತೆ ಒಟ್ಟು ಐದು ಟ್ರಿಮ್‌ಗಳಲ್ಲಿ ಪರಿಚಯಿಸಲಾಗಿದೆ. ಈ ಬೈಕಿನ ಅಧಿಕೃತ ಬುಕಿಂಗ್ ಇಂದು ಸಂಜೆ 6 ಗಂಟೆಯಿಂದ ಆರಂಭವಾಗಲಿದ್ದು, ಆಸಕ್ತ ಗ್ರಾಹಕರು ಕಂಪನಿಯ ಡೀಲರ್‌ಶಿಪ್ ಮತ್ತು ಅಧಿಕೃತ ವೆಬ್‌ಸೈಟ್ ಮೂಲಕ ಬುಕ್ ಮಾಡಬಹುದು. ಈ ಬೈಕಿನೊಂದಿಗೆ, ಕಂಪನಿಯು 3 ವರ್ಷಗಳ ಪ್ರಮಾಣಿತ ವಾರಂಟಿ ಮತ್ತು 1 ವರ್ಷದ ರೋಡ್ ಸೈಡ್ ಅಸಿಸ್ಟೆಂಟ್ ಒದಗಿಸುತ್ತದೆ.


ಹೊಸ ಪ್ಲಾಟ್ ಫಾರ್ಮ್ ಹಾಗೂ ಪವರ್ಫುಲ್ ಇಂಜಿನ್
ಹೊಸ ಕ್ಲಾಸಿಕ್ 350 ಬೈಕ್,  ಕಂಪನಿಯ ಹೊಸ "ಜೆ" ಮಾಡ್ಯುಲರ್ ಆರ್ಕಿಟೆಕ್ಚರ್ ಅನ್ನು ಆಧರಿಸಿದೆ, ಈ ತಂತ್ರಜ್ಞಾನದ ಮೇಲೆ ಕಂಪನಿ ಇತ್ತೀಚೆಗೆ ಪರಿಚಯಿಸಿರುವ ಮೆಟಿಯೋರ್ 350 ಕೂಡ ಸಿದ್ಧಗೊಂಡಿದೆ. ಇದರಲ್ಲಿ, ಕಂಪನಿಯು 349 ಸಿಸಿ ಸಾಮರ್ಥ್ಯದ ಹೊಸ ಫ್ಯೂಲ್  ಇಂಜೆಕ್ಟ್ ಎಂಜಿನ್ ಅನ್ನು ಬಳಸಿದೆ. ಇದು 20.2 ಬಿಹೆಚ್ ಪಿ ಪವರ್ ಮತ್ತು 27 ಎನ್ ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ 5 ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಬರುತ್ತದೆ. ಈ ಬೈಕ್ ಸಿಂಗಲ್ ಮತ್ತು ಡ್ಯುಯಲ್ ಸೀಟ್ ವೆರಿಯಂಟ್‌ಗಳಲ್ಲಿಯೂ ಕೂಡ ಲಭ್ಯವಿರಲಿದೆ.


ಸಿಗುತ್ತವೆ ಈ ವಿಶೇಷ ವೈಶಿಷ್ಟ್ಯಗಳು (New Royal Enfield Classic Specifications)
ಈ ಬೈಕಗೆ  ಕಂಪನಿಯು ಕೇವಲ ಹೊಸ ಗ್ರಾಫಿಕ್ಸ್ ಮತ್ತು ಲುಕ್ ನಿಂದ ಮಾತ್ರ ಅಲಂಕರಿಸದೆ, ಅದರ ಯಾಂತ್ರಿಕತೆ ಮತ್ತು ತಂತ್ರಜ್ಞಾನವನ್ನು ಸಹ ಬದಲಾಯಿಸಿದೆ. ಇದು ಹಿಂದಿನ ಮಾದರಿಗಿಂತಲೂ ಉತ್ತಮವಾಗಿದೆ. ಹೊಸ ಕ್ಲಾಸಿಕ್ 350 ರಲ್ಲಿ, ಕಂಪನಿಯು ಪೈಲಟ್ ಲ್ಯಾಂಪ್‌ಗಳು, ನವೀಕರಿಸಿದ ಇಂಧನ ಟ್ಯಾಂಕ್ ಗ್ರಾಫಿಕ್ಸ್, ಹೊಸ ವಿನ್ಯಾಸದ ಎಕ್ಸಾಸ್ಟ್ (ಸೈಲೆನ್ಸರ್) ಮತ್ತು ಹೊಸ ಟೈಲ್ ಲೈಟ್‌ನೊಂದಿಗೆ ಹೊಸ ಹೆಡ್‌ಲ್ಯಾಂಪ್‌ಗಳನ್ನು ನೀಡಿದೆ.


ಇದನ್ನೂ ಓದಿ-RC Renewal: 'ಹಳೆಯ ವಾಹನ ಮಾಲೀಕ'ರಿಗೆ ಬಿಗ್ ಶಾಕ್: 'RC ನವೀಕರಣ' ಫೀಸ್ ಭಾರಿ ಹೆಚ್ಚಳ!


ಇದರ ಜೊತೆಗೆ ಈ ಬೈಕಿನಲ್ಲಿ (Royal Enfield) ಹೆಚ್ಚು ವಿಶಾಲವಾದ ಮತ್ತು ಆರಾಮದಾಯಕವಾದ ಸೀಟುಗಳನ್ನು ನೀಡಲಾಗಿದೆ, ಇದು ಚಾಲಕ ಹಾಗೂ ಹಿಂದೆ ಕುಳಿತ ಅಥವಾ ಪೀಲನ್ ರೈಡರ್ ಇಬ್ಬರಿಗೂ ಕೂಡ ಆರಾಮದಾಯಕ ಸವಾರಿಯ ಅನುಭವ ಒದಗಿಸುತದೆ. ಹ್ಯಾಂಡಲ್‌ಬಾರ್ ಈ ಮೊದಲಿನ ಮಾದರಿಯಂತೆ ಇದ್ದರು ಕೂಡ,  ಗ್ರಿಪ್ಸ್, ಸ್ವಿಚ್ ಕ್ಯೂಬ್, ಇನ್ಫೋ ಸ್ವಿಚ್ ಹಾಗೂ ಅಂಡಾಕಾರದ ಮಾಸ್ಟರ್ ಸಿಲಿಂಡರ್ ನಲ್ಲಿನ ಮಾರ್ಪುಗಳೊಂದಿಗೆ ಏರ್ಗೋನಾಮಿಕ್ಸ್ ನಲ್ಲಿ ಸುಧಾರಣೆಗಳನ್ನು ಮಾಡಲಾಗಿದೆ.


ಇದನ್ನೂ ಓದಿ-Honda CB 350 RS ಬೈಕ್ ಬುಕಿಂಗ್ ಪ್ರಾರಂಭ, ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯಿರಿ


ಇತರ ವಿಶೇಷ ವೈಶಿಷ್ಟ್ಯಗಳಲ್ಲಿ ಇಂಟಿಗ್ರೇಟೆಡ್ ಇಗ್ನಿಷನ್ ಮತ್ತು ಸ್ಟೀರಿಂಗ್ ಲಾಕ್, ಎಲ್ಸಿಡಿ ಮಾಹಿತಿ ಫಲಕ ಮತ್ತು ಯುಎಸ್‌ಬಿ ಚಾರ್ಜರ್‌ನೊಂದಿಗೆ ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿವೆ. ಇದಲ್ಲದೇ, ಬ್ಲೂಟೂತ್ ಆಧಾರಿತ ಟ್ರಿಪ್ಪರ್ ನ್ಯಾವಿಗೇಶನ್ ಅನ್ನು ಬೈಕ್‌ನಲ್ಲಿ ನೀಡಲಾಗಿದೆ, ಇದು ಮೀಸಲಾದ ಟಿಎಫ್ಟಿ ಡಿಸ್ಪ್ಲೇ ಸಾಧನದೊಂದಿಗೆ ಬರುತ್ತದೆ. ಇದರಲ್ಲಿ ನೀವು ಗೂಗಲ್ ನ್ಯಾವಿಗೇಷನ್ ಅನ್ನು ಸಹ ಪಡೆಯುತ್ತೀರಿ, ಇದನ್ನು ಮೊದಲು ಮೇಟರ್ 350 ರಲ್ಲಿ ಗಮನಿಸಲಾಗಿತ್ತು.


ಇದನ್ನೂ ಓದಿ-ಮೊಬೈಲ್‌ನಿಂದ ಬೈಕ್‌ಗಳನ್ನು ಖರೀದಿಸಲು ಈ ಕಂಪನಿಯ ಹೊಸ ವೈಶಿಷ್ಟ್ಯವನ್ನು ತಿಳಿಯಿರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ