Nitin Gadkari on Petrol: ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆಯ ನಡುವೆಯೇ  ಕೇಂದ್ರ ಸಚಿವ ನಿತಿನ್ ಗಡ್ಕರಿ ಶುಕ್ರವಾರ ಮಹತ್ವದ ಹೇಳಿಕೆಯೊಂದನ್ನು ಹೇಳಿಕೆ ನೀಡಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ಪೆಟ್ರೋಲ್ ಖಾಲಿಯಾಗಲಿದೆ ಎಂಬ ಆಘಾತಕಾರಿ ಹೇಳಿಕೆಯನ್ನು ಕೇಂದ್ರ ಸಾರಿಗೆ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ನೀಡಿದ್ದಾರೆ. ಅವರ ಈ ಹೇಳಿಕೆಯು ವಾಹನಗಳಿಂದ ಹೆಚ್ಚುತ್ತಿರುವ ಮಾಲಿನ್ಯ ಮತ್ತು ಎಲೆಕ್ಟ್ರಿಕ್ ವಾಹನಗಳ ಭವಿಷ್ಯಕ್ಕೆ ಸಂಬಂಧಿಸಿದೆ. ಸರ್ಕಾರವು ನಿರಂತರವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸುತ್ತಿದೆ ಎಂಬುದು ಇಲ್ಲಿ ಉಲ್ಲೇಖನೀಯ.


COMMERCIAL BREAK
SCROLL TO CONTINUE READING

ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ನಿತಿನ್ ಗಡ್ಕರಿ
ಮಹಾರಾಷ್ಟ್ರದ ಅಕೋಲಾದಲ್ಲಿರುವ  ಡಾ.ಪಂಜಾಬರಾವ್ ದೇಶಮುಖ್ ಕೃಷಿ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ನಿತೀನ್ ಗಡ್ಕರಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯವು ಅವರಿಗೆ ‘ಡಾಕ್ಟರ್ ಆಫ್ ಸೈನ್ಸ್’ ಪದವಿಯನ್ನು ನೀಡಿ ಗೌರವಿಸಿದೆ. ಪೆಟ್ರೋಲ್‌ಗೆ ಪರ್ಯಾಯಗಳ ಕುರಿತು ಮಾತನಾಡಿದ ಕೇಂದ್ರ ಸಚಿವರು, ವಿದರ್ಭದಲ್ಲಿ ತಯಾರಿಸಿದ ಜೈವಿಕ ಎಥೆನಾಲ್ ಅನ್ನು ವಾಹನಗಳಲ್ಲಿ ಬಳಸಲಾಗುತ್ತಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.


ಇದನ್ನೂ ಓದಿ-7th Pay Commission: ಡಿಎ ಬಾಕಿ ಕುರಿತಾದ ಬಿಗ್ ಅಪ್ಡೇಟ್ ಪ್ರಕಟ, ಈ ದಿನ ಖಾತೆಗೆ ಬರಲಿದೆ ಹಣ!


ಅನ್ನದಾತರಾಗುವ ಬದಲು ಶಕ್ತಿದಾತರಾಗಿ
ಬಾವಿ ನೀರಿನಿಂದ ಹಸಿರು ಜಲಜನಕವನ್ನು ತಯಾರಿಸಬಹುದು ಎಂದು ಹೇಳಿರುವ ಗಡ್ಕರಿ, ಅದರ ಬೆಲೆ ಕೆಜಿಗೆ 70 ರೂ. ಇರಲಿದೆ ಎಂದಿದ್ದಾರೆ. ರೈತರ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಿ ಮಾತನಾಡಿರುವ ಅವರು, ಹೊಲದಲ್ಲಿ ಗೋಧಿ, ಅಕ್ಕಿ, ಜೋಳ ಉತ್ಪಾದನೆಯಿಂದ ಭವಿಷ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದ ಅವರು, ರೈತರು ಅನ್ನದಾತರಾಗುವ ಬದಲು ಶಕ್ತಿದಾತರಾಗುವ ಕಾಲ ಸನ್ನಿಹಿತವಾಗಿದೆ ಎಂದಿದ್ದಾರೆ. 


ಇದನ್ನೂ ಓದಿ-SBI Alert: ಹಲವು ಖಾತೆಗಳನ್ನು ಫ್ರೀಜ್ ಮಾಡಿದ ಭಾರತೀಯ ಸ್ಟೇಟ್ ಬ್ಯಾಂಕ್, ಈ ರೀತಿ ನಿಮ್ಮ ಖಾತೆ ಅನ್ಫ್ರೀಜ್ ಮಾಡಿ


ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ಇರುವ ಒಟ್ಟು  ಪೆಟ್ರೋಲ್ ಖಾಲಿಯಾಗಲಿದೆ ಎಂದು ಹೇಳಿರುವ ಗಡ್ಕರಿ. ಎಥೆನಾಲ್ ಕುರಿತಂತೆ ತೆಗೆದುಕೊಂಡ ನಿರ್ಧಾರದಿಂದ ದೇಶಕ್ಕೆ ವಾರ್ಷಿಕವಾಗಿ 20,000 ಕೋಟಿ ರೂಪಾಯಿ ಉಳಿತಾಯವಾಗಿದೆ ಎಂದು ಹೇಳಿದ್ದಾರೆ. ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳು ಹಸಿರು ಜಲಜನಕ, ಎಥೆನಾಲ್ ಮತ್ತು ಸಿಎನ್‌ಜಿಯಿಂದ ಓಡುವ ದಿನ ದೂರವಿಲ್ಲ ಎಂದು ಗಡ್ಕರಿ ಪುನರುಚ್ಚರಿಸಿದ್ದಾರೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ