SBI Alert: ಹಲವು ಖಾತೆಗಳನ್ನು ಫ್ರೀಜ್ ಮಾಡಿದ ಭಾರತೀಯ ಸ್ಟೇಟ್ ಬ್ಯಾಂಕ್, ಈ ರೀತಿ ನಿಮ್ಮ ಖಾತೆ ಅನ್ಫ್ರೀಜ್ ಮಾಡಿ

SBI Alert: ಜುಲೈನಲ್ಲಿ, ಹಲವು ನಿಯಮಗಳನ್ನು ಬದಲಾಯಿಸಲಾಗಿದೆ. ಈ ನಿಯಮಗಳ ಅಡಿಯಲ್ಲಿ, ಬ್ಯಾಂಕ್ ಖಾತೆಯಲ್ಲಿ ಇ-ಕೆವೈಸಿ ಮಾಡುವುದು ಅವಶ್ಯಕ ಎನ್ನಲಾಗಿದೆ. ಜುಲೈನಲ್ಲಿ, KYC ಪೂರ್ಣಗೊಳ್ಳದ ಖಾತೆಗಳನ್ನು ಫ್ರೀಜ್ ಮಾಡುವ ಬಗ್ಗೆ ಬ್ಯಾಂಕ್ ಹೇಳಿತ್ತು.  

Written by - Nitin Tabib | Last Updated : Jul 8, 2022, 02:36 PM IST
  • ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರ ಪಾಲಿಗೆ ಒಂದು ಮಹತ್ವದ ಸುದ್ದಿ ಪ್ರಕಟವಾಗಿದೆ.
  • ನೀವು ಸಹ ಬ್ಯಾಂಕಿನ ಗ್ರಾಹಕರಾಗಿದ್ದರೆ, ತಕ್ಷಣ ನಿಮ್ಮ ಖಾತೆಯನ್ನು ಪರಿಶೀಲಿಸಿ.
  • ಬ್ಯಾಂಕ್ ದೊಡ್ಡ ಪ್ರಮಾಣದಲ್ಲಿ ಖಾತೆಗಳನ್ನು ಫ್ರೀಜ್ ಮಾಡಿದೆ,
SBI Alert: ಹಲವು ಖಾತೆಗಳನ್ನು ಫ್ರೀಜ್ ಮಾಡಿದ ಭಾರತೀಯ ಸ್ಟೇಟ್ ಬ್ಯಾಂಕ್, ಈ ರೀತಿ ನಿಮ್ಮ ಖಾತೆ ಅನ್ಫ್ರೀಜ್ ಮಾಡಿ title=
State Bank Of India Latest News

SBI Account Freeze: ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರ ಪಾಲಿಗೆ ಒಂದು ಮಹತ್ವದ ಸುದ್ದಿ ಪ್ರಕಟವಾಗಿದೆ. ನೀವು ಸಹ ಬ್ಯಾಂಕಿನ ಗ್ರಾಹಕರಾಗಿದ್ದರೆ, ತಕ್ಷಣ ನಿಮ್ಮ ಖಾತೆಯನ್ನು ಪರಿಶೀಲಿಸಿ. ಬ್ಯಾಂಕ್ ದೊಡ್ಡ ಪ್ರಮಾಣದಲ್ಲಿ ಖಾತೆಗಳನ್ನು ಫ್ರೀಜ್ ಮಾಡಿದೆ, ಫ್ರೀಜ್ ಮಾಡಲಾಗಿರುವ ಖಾತೆಗಳ KYC ಪೂರ್ಣಗೊಂಡಿಲ್ಲ. ಇಂತಹ ಖಾತೆಗಳನ್ನು ಬ್ಯಾಂಕ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಮತ್ತು ಇದೀಗ ಅಂತಹ ಗ್ರಾಹಕರು ಯಾವುದೇ ರೀತಿಯ ವಹಿವಾಟು ಮಾಡಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಗ್ರಾಹಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಹಲವು ಗ್ರಾಹಕರು ತಮ್ಮ ಖಾತೆಯನ್ನು ಫ್ರೀಜ್ ಮಾಡಿರುವ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಆ ಜನರು ತಮ್ಮ ಖಾತೆಯಿಂದ ಸಂಬಳವನ್ನು ಹಿಂಪಡೆಯಲು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. KYC ಯ ಕಾರಣದಿಂದಾಗಿ ನಿಮ್ಮ ಖಾತೆಯನ್ನು ಸಹ ಫ್ರೀಜ್ ಮಾಡಲಾಗಿದ್ದರೆ, ಈ ಪ್ರಕ್ರಿಯೆಯ ಮೂಲಕ ನೀವು ಅದನ್ನು ಅನ್ ಫ್ರೀಜ್ ಮಾಡಬಹುದು.

ಇದನ್ನೂ ಓದಿ-ಅಮೆಜಾನ್‌ನಿಂದ 48ಗಂಟೆಗಳ ವಿಶೇಷ ಸೇಲ್: ಈ ಸ್ಪೆಷಲ್ ಜನರಿಗೆ ಭಾರೀ ರಿಯಾಯಿತಿ

KYC ಮಾಡುವುದು ಅವಶ್ಯಕ
ಜುಲೈನಲ್ಲಿ, ಹಲವು ರೀತಿಯ ನಿಯಮಗಳನ್ನು ಬದಲಾಯಿಸಲಾಗಿದೆ.ಈ ನಿಯಮಗಳಲ್ಲಿ, ಬ್ಯಾಂಕ್ ಖಾತೆಯಲ್ಲಿ ಇ-ಕೆವೈಸಿ ಮಾಡುವುದು ಅವಶ್ಯಕ ಎಂಬ ನಿಯಮ ಕೂಡ ಇದೆ. ಜುಲೈನಲ್ಲಿ, KYC ಪೂರ್ಣಗೊಳ್ಳದ ಖಾತೆಗಳನ್ನು ಫ್ರೀಜ್ ಮಾಡುವ ಕುರಿತು ಬ್ಯಾಂಕ್ ಈಗಾಗಲೇ ಎಚ್ಚರಿಕೆಯ ಸಂದೇಶ ರವಾನಿಸಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ ಎಲ್ಲಾ ಬ್ಯಾಂಕ್‌ಗಳಿಗೆ ಮಾರ್ಗಸೂಚಿಗಳನ್ನು ನೀಡಿದ್ದು, ಗ್ರಾಹಕರಿಂದ ಬೇಗನೆ KYC ಮಾಡಿಸಿಕೊಳ್ಳಬೇಕು ಎಂದು ಸೂಚಿಸಿತ್ತು. ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರತಿ ಗ್ರಾಹಕರು ತಮ್ಮ ಖಾತೆಯ KYC ಅನ್ನು ಪ್ರತಿ 10 ವರ್ಷಗಳಿಗೊಮ್ಮೆ ನವೀಕರಿಸಬೇಕಾಗುತ್ತದೆ.

ಇದನ್ನೂ ಓದಿ-Today Vegetable Price: ಇಂದಿನ ಈರುಳ್ಳಿ, ಟೊಮೆಟೋ ಬೆಲೆ ಹೀಗಿದೆ ನೋಡಿ..

ಈ ರೀತಿ ನಿಮ್ಮ ಕೆವೈಸಿ ನವೀಕರಿಸಿ
KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಲು, ನೀವು ನಿಮ್ಮ PAN ಕಾರ್ಡ್ ಮತ್ತು ಆಧಾರ್ ಕಾರ್ಡ್‌ನ ನಕಲನ್ನು ಸಲ್ಲಿಸಬೇಕಾಗುತ್ತದೆ. ಇದರೊಂದಿಗೆ, ನೀವು ಬ್ಯಾಂಕ್‌ಗೆ ಹೋಗಿ KYC ಫಾರ್ಮ್ ಅನ್ನು ಭರ್ತಿ ಮಾಡಬೇಕು. ಇದರ ನಂತರ, ಈ ಫಾರ್ಮ್ ಅನ್ನು ಪಾಸ್ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ಸಲ್ಲಿಸಬೇಕು. ಇದರ ನಂತರ KYC ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News