7th Pay Commission: ಡಿಎ ಬಾಕಿ ಕುರಿತಾದ ಬಿಗ್ ಅಪ್ಡೇಟ್ ಪ್ರಕಟ, ಈ ದಿನ ಖಾತೆಗೆ ಬರಲಿದೆ ಹಣ!

7th Pay Commission Big Update: ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೊಮ್ಮೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಹೌದು, ಕೊರೊನಾ ಕಾಲದಲ್ಲಿ ಬಾಕಿ ಉಳಿದ 18 ತಿಂಗಳ ಡಿಎ ಹಣ ಶೀಘ್ರದಲ್ಲಿಯೇ ನೌಕರರ ಖಾತೆ ಸೇರಲಿದೆ ಎನ್ನಲಾಗಿದೆ. ಬನ್ನಿ ಈ ಕುರಿತಾದ ಮಹತ್ವದ ಅಪ್ಡೇಟ್ ತಿಳಿದುಕೊಳ್ಳೋಣ ಬನ್ನಿ.  

Written by - Nitin Tabib | Last Updated : Jul 8, 2022, 04:58 PM IST
  • ಕೇಂದ್ರ ಸರ್ಕಾರಿ ನೌಕರರಿಗೆ ಶೀಘ್ರದಲ್ಲಿಯೇ ಸಂತಸದ ಸುದ್ದಿ ಸಿಗಲಿದೆ ಎನ್ನಲಾಗಿದೆ. ಈ ತಿಂಗಳು,
  • ಡಿಎ ಹೆಚ್ಚಳದ ಜೊತೆಗೆ, 18 ತಿಂಗಳ ಬಾಕಿ ಇರುವ ಡಿಎ ಬಗ್ಗೆಯೂ ಸರ್ಕಾರ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆ ಇದೆ.
  • ಹೌದು, ಕೇಂದ್ರ ನೌಕರರು ತಮ್ಮ ಬಾಕಿ ಡಿಎ ಪಾವತಿಸಬೇಕು ಎಂದು ಬಹುದಿನಗಳಿಂದ ಕೇಂದ್ರ ಸರಾರವನ್ನು ಒತ್ತಾಯಿಸುತ್ತಿದ್ದಾರೆ.
7th Pay Commission: ಡಿಎ ಬಾಕಿ ಕುರಿತಾದ ಬಿಗ್ ಅಪ್ಡೇಟ್ ಪ್ರಕಟ, ಈ ದಿನ ಖಾತೆಗೆ ಬರಲಿದೆ ಹಣ! title=
7th pay commission latest update

7th Pay Commission Latest News: ಕೇಂದ್ರ ಸರ್ಕಾರಿ ನೌಕರರಿಗೆ ಶೀಘ್ರದಲ್ಲಿಯೇ ಸಂತಸದ ಸುದ್ದಿ ಸಿಗಲಿದೆ ಎನ್ನಲಾಗಿದೆ. ಈ ತಿಂಗಳು, ಡಿಎ ಹೆಚ್ಚಳದ ಜೊತೆಗೆ, 18 ತಿಂಗಳ ಬಾಕಿ ಇರುವ ಡಿಎ ಬಗ್ಗೆಯೂ ಸರ್ಕಾರ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆ ಇದೆ. ಹೌದು, ಕೇಂದ್ರ ನೌಕರರು ತಮ್ಮ ಬಾಕಿ ಡಿಎ ಪಾವತಿಸಬೇಕು ಎಂದು ಬಹುದಿನಗಳಿಂದ ಕೇಂದ್ರ ಸರಾರವನ್ನು ಒತ್ತಾಯಿಸುತ್ತಿದ್ದಾರೆ.

ಕೇಂದ್ರ ನೌಕರರಿಗೆ ಬಾಕಿ ಡಿಎ ಹಣ ಸಿಗಲಿದೆ!
ಕೇಂದ್ರ ಸರ್ಕಾರದ ಲಕ್ಷಾಂತರ ಖಾತೆಗೆ ಸರ್ಕಾರ ಆಗಸ್ಟ್‌ ತಿಂಗಳಿನಲ್ಲಿ ಬಾಕಿ ಇರುವ ಡಿಎಯನ್ನು ಪಾವತಿಸಬಹುದು ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಕೇಂದ್ರ ನೌಕರರು ಜನವರಿ 2020 ರಿಂದ ಜೂನ್ 2021 ರವರೆಗೆ ಸರ್ಕಾರದಿಂದ ತಡೆಹಿಡಿಯಲಾದ ಡಿಎಯನ್ನು ಪಾವತಿಗೆ ನಿರಂತರವಾಗಿ ಒತ್ತಾಯಿಸುತ್ತಿದ್ದಾರೆ. ಈ ಹಿಂದೆ ಹಲವು ಬಾರಿ ಸರ್ಕಾರ ನೌಕರರ ಖಾತೆಗೆ 2 ಲಕ್ಷ ಡಿಎ ಬಾಕಿ ಹಾಕಲಿದೆ ಎಂಬ ಸುದ್ದಿ ಬಂದಿತ್ತು, ಆದರೆ ಸರ್ಕಾರ ಅದನ್ನು ಪ್ರತಿ ಬಾರಿ ನಿರಾಕರಿಸಿತು ಮತ್ತು ನೌಕರರ ಕಾಯುವಿಕೆ ಇಂದಿಗೂ ಮುಂದುವರೆದಿದೆ. ಇದೀಗ ಕೇಂದ್ರ ನೌಕರರ ಖಾತೆಗೆ ಒಂದೇ ಬಾರಿ 1.50 ಲಕ್ಷ ಹಾಕಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ-SBI Alert: ಹಲವು ಖಾತೆಗಳನ್ನು ಫ್ರೀಜ್ ಮಾಡಿದ ಭಾರತೀಯ ಸ್ಟೇಟ್ ಬ್ಯಾಂಕ್, ಈ ರೀತಿ ನಿಮ್ಮ ಖಾತೆ ಅನ್ಫ್ರೀಜ್ ಮಾಡಿ

ಈ ಸಭೆಯಲ್ಲಿ ತೀರ್ಮಾನ ಸಾಧ್ಯತೆ
ಹಣಕಾಸು ಸಚಿವಾಲಯದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಮತ್ತು ವೆಚ್ಚ ಇಲಾಖೆ (ಡಿಒಪಿಟಿ) ಅಧಿಕಾರಿಗಳ ಜಂಟಿ ಸಲಹಾ ಕಾರ್ಯವಿಧಾನದ (ಜೆಎಸ್‌ಎಂ) ಸಭೆ ನಡೆಯಲಿದೆ. ಇದರಲ್ಲಿ ನೌಕರರ ಡಿಎ ಬಾಕಿ ಪಾವತಿ ಕುರಿತು ಚರ್ಚೆ ನಡೆಸಬಹುದು. ಈ ಸಭೆಯಲ್ಲಿ ಡಿಎ ಹೆಚ್ಚಳದ ಬಗ್ಗೆಯೂ ಘೋಷಣೆಯಾಗುವ ನಿರೀಕ್ಷೆಯಿದೆ. ಪ್ರಸ್ತುತ ಶೇ.34 ರ ದರದಲ್ಲಿ DA ಪಾವತಿಸಲಾಗುತ್ತಿದೆ ಎಂಬುದು ಗಮನಾರ್ಹ. ಆದರೆ AICPI ಯ ಅಂಕಿಅಂಶಗಳ ಪ್ರಕಾರ, ಜುಲೈನಲ್ಲಿ DA ಯಲ್ಲಿ 5 ರಿಂದ 6% ರಷ್ಟು ಹೆಚ್ಚಳವಾಗಬಹುದು ಎನ್ನಲಾಗಿದೆ.

ಇದನ್ನೂ ಓದಿ-Today Vegetable Price: ಇಂದಿನ ಈರುಳ್ಳಿ, ಟೊಮೆಟೋ ಬೆಲೆ ಹೀಗಿದೆ ನೋಡಿ..

18 ತಿಂಗಳ ಬಾಕಿ ತುಟ್ಟಿಭತ್ಯೆಯ ಹಣ
ಕೋವಿಡ್‌ನಿಂದಾಗಿ ಸರ್ಕಾರವು ಕೇಂದ್ರ ನೌಕರರಿಗೆ 18 ತಿಂಗಳ ಡಿಎ ತಡೆಹಿಡಿದಿಟ್ಟು ಎಂಬುದು ಇಲ್ಲಿ ಉಲ್ಲೇಖನೀಯ. ಇದಾದ ನಂತರ ಹಲವು ಬಾರಿ ನೌಕರರ ಡಿಎ ಹೆಚ್ಚಾದರೂ ಕೂಡ ಇದುವರೆಗೆ 18 ತಿಂಗಳ ಬಾಕಿ ಹಣ ಬಂದಿಲ್ಲ. ಸರ್ಕಾರ ಶೀಘ್ರವೇ ಬಾಕಿ ಪಾವತಿಸಲಿದೆ ಎಂಬ ಭರವಸೆಯನ್ನು ನೌಕರರು ಹೊಂದಿದ್ದಾರೆ. ಆದರೆ, ಇದುವರೆಗೆ ಬಾಕಿ ಇರುವ ಡಿಎ ಪಾವತಿ ಮತ್ತು ಹೆಚ್ಚಳದ ಕುರಿತು ಸರ್ಕಾರದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ನೌಕರರು ತಮ್ಮ ವೇತನ ಶ್ರೇಣಿಗೆ ಅನುಗುಣವಾಗಿ ಡಿಎ ಬಾಕಿಯನ್ನು ಪಡೆಯುತ್ತಾರೆ ಎಂಬುದು ಇಲ್ಲಿ ಗಮನಾರ್ಹ ಸಂಗತಿಯಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News