ನವದೆಹಲಿ : PM Kisan Samman Yojana 9th Installment : ಬಹಳ ದಿನಗಳಿಂದ ಪಿಎಂ ಕಿಸಾನ್ ಯೋಜನೆಯ 9 ನೇ ಕಂತಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಒಳ್ಳೆಯ ಸುದ್ದಿ ಇದೆ. ಆಗಸ್ಟ್ 9 ರಂದು ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ (PM Kisan Samman Yojana), 9 ನೇ ಕಂತಿನ ಹಣವು ದೇಶಾದ್ಯಂತ ರೈತರ ಖಾತೆಗೆ ಬರಲಿದೆ.  ನೀವು ಕೂಡ ಈ ಯೋಜನೆಯಡಿ ಅರ್ಜಿ ಸಲ್ಲಿಸಿದ್ದರೆ, ತಕ್ಷಣವೇ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೇ ಎಂದು ಪರಿಶೀಲಿಸಿಕೊಳ್ಳಿ. 


COMMERCIAL BREAK
SCROLL TO CONTINUE READING

ನಿರೀಕ್ಷೆಯಲ್ಲಿದ್ದ ರೈತರು : 
ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ (PM Kisan) 9 ನೇ ಕಂತಿನ ಹಣಕ್ಕಾಗಿ, ರೈತರು ಬಹಳ ದಿನಗಳಿಂದ ನಿರೀಕ್ಷೆಯಲ್ಲಿದ್ದರು. ಈ ಯೋಜನೆಯಡಿ ಈವರೆಗೆ 8 ಕಂತುಗಳನ್ನು ರೈತರ ಖಾತೆಗೆ (Farmers account) ಕಳುಹಿಸಲಾಗಿದೆ. ಅಂದರೆ, ಇದುವರೆಗೂ ಸರ್ಕಾರವು ರೈತರ ಖಾತೆಗೆ 16,000 ರೂ.ಗಳನ್ನು ರೈತರ ಖಾತೆಗೆ ಸಂದಾಯ ಮಾಡಿದೆ. 


ಇದನ್ನೂ  ಓದಿ : Saral Pension Yojana: ಈಗ 60 ಅಲ್ಲ 40ನೇ ವಯಸ್ಸಿನಲ್ಲಿಯೂ ಪಿಂಚಣಿ ಸಿಗುತ್ತೆ


ನಿಮ್ಮ ಕಂತಿನ ಸ್ಟೇಟಸ್ ಅನ್ನು ಪರಿಶೀಲಿಸಿ :
1. ನಿಮ್ಮ ಕಂತಿನ ಸ್ಟೇಟಸ್ ಅನ್ನು ಪರಿಶೀಲಿಸಲು ನೀವು ಮೊದಲು ವೆಬ್‌ಸೈಟ್‌ಗೆ ಹೋಗಿ.
2. ಇದರ ನಂತರ ಬಲಭಾಗದಲ್ಲಿರುವ ಫಾರ್ಮರ್ಸ್ ಕಾರ್ನರ್ (Farmers Corner) ಮೇಲೆ ಕ್ಲಿಕ್ ಮಾಡಿ.
3. ಈಗ Beneficiary Status ಆಯ್ಕೆಯನ್ನು ಕ್ಲಿಕ್ ಮಾಡಿ.
4. ಈಗ ನಿಮ್ಮ ಎದುರು ಹೊಸ ಪುಟ ತೆರೆಯುತ್ತದೆ.
5. ಇಲ್ಲಿ ನೀವು ನಿಮ್ಮ ಆಧಾರ್ ಸಂಖ್ಯೆ (Aadhaar), ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
6. ಇದರ ನಂತರ ನೀವು ನಿಮ್ಮ ಖಾತೆಯ ಸಂಪೂರ್ಣ ಮಾಹಿತಿ ಪಡೆಯಬಹುದು. 


ಯೋಜನೆಯ ಉದ್ದೇಶವೇನು? :
 ದೇಶದ ರೈತರ ಆದಾಯವನ್ನು ಹೆಚ್ಚಿಸುವುದು ಮತ್ತು ಅವರಿಗೆ ನೇರವಾಗಿ ಆರ್ಥಿಕ ಸಹಾಯ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಆರಂಭಿಸಲಾಗಿದೆ. ೯ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದ ರೈತರಿಗೆ ಇದೀಗ ಸಿಹಿ ಸುದ್ದಿ ಸಿಕ್ಕಿದೆ.  ನೀವು ಕೂಡ ಅರ್ಜಿ ಸಲ್ಲಿಸಿದ್ದರೆ ನಿಮ್ಮ ಹೆಸರನ್ನು ಪಟ್ಟಿಯಲ್ಲಿ ಪರಿಶೀಲಿಸಬಹುದು.


ಇದನ್ನೂ  ಓದಿ : e₹UPI Prepaid e-Voucher Launched - PM Modiಯಿಂದ e₹UPI ಬಿಡುಗಡೆ, ಇನ್ಮುಂದೆ ಕ್ಯಾಶ್ಲೆಸ್ ಹಾಗೂ ಸಂಪರ್ಕ ರಹಿತ ಹಣ ಪಾವತಿ ಮಾಡಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ