e₹UPI Prepaid e-Voucher Launched - PM Modiಯಿಂದ e₹UPI ಬಿಡುಗಡೆ, ಇನ್ಮುಂದೆ ಕ್ಯಾಶ್ಲೆಸ್ ಹಾಗೂ ಸಂಪರ್ಕ ರಹಿತ ಹಣ ಪಾವತಿ ಮಾಡಿ

e₹UPI Prepaid e-Voucher Launched - ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹಣರಹಿತ ಹಾಗೂ ಸಂಪರ್ಕ ರಹಿತ ಹಣ ಪಾವತಿ ಸೇವೆಯಾಗಿರುವ e₹UPI ಗೆ ಚಾಲನೆ ನೀಡಿದ್ದಾರೆ. e₹UPI ಒಂದು ಡಿಜಿಟಲ್ ಹಣ ಪಾವತಿಯ ವೇದಿಕೆಯಾಗಿದೆ. ತನ್ಮೂಲಕ ಲಾಭಾರ್ಥಿಗಳಿಗೆ ನೇರ ಲಾಭ ಸಿಗಲಿದೆ.

Written by - Nitin Tabib | Last Updated : Aug 2, 2021, 05:48 PM IST
  • ಇರುಪೀ ಇ-ವೌಚರ್ ಬಿಡುಗಡೆ ಮಾಡಿದ ಪ್ರಧಾನಿ ಮೋದಿ.
  • e₹UPI ವೌಚರ್ ಸೇವೆ ದೇಶದಲ್ಲಿ ಡಿಜಿಟಲ್ ಟ್ರಾನ್ಸಾಕ್ಷನ್, DBT ಸೇವೆಯನ್ನು ಇನ್ನಷ್ಟು ಬಲಿಷ್ಠಗೊಳಿಸಲಿದೆ.
  • ಇದರಿಂದ Targeted, Transparent ಹಾಗೂ Leakage Free Deliveryಗೆ ಎಲ್ಲರಿಗೂ ಸಹಾಯ ಸಿಗಲಿದೆ ಎಂದ ಪ್ರಧಾನಿ.
e₹UPI Prepaid e-Voucher Launched - PM Modiಯಿಂದ e₹UPI ಬಿಡುಗಡೆ, ಇನ್ಮುಂದೆ ಕ್ಯಾಶ್ಲೆಸ್ ಹಾಗೂ ಸಂಪರ್ಕ ರಹಿತ ಹಣ ಪಾವತಿ ಮಾಡಿ title=
e₹UPI Prepaid e-Voucher Launched (File Photo)

ನವದೆಹಲಿ: e₹UPI Prepaid e-Voucher Launched - ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಂದು ಹಣರಹಿತ ಹಾಗೂ ಸಂಪರ್ಕ ರಹಿತ ಹಣ ಪಾವತಿ ಸೇವೆಯಾಗಿರುವ e₹UPI ಗೆ ಚಾಲನೆ ನೀಡಿದ್ದಾರೆ. e₹UPI ಒಂದು ಡಿಜಿಟಲ್ ಹಣ ಪಾವತಿಯ ವೇದಿಕೆಯಾಗಿದೆ. ತನ್ಮೂಲಕ ಲಾಭಾರ್ಥಿಗಳಿಗೆ ನೇರ ಲಾಭ ಸಿಗಲಿದೆ.

ಈ ಸಂದರ್ಭದಲ್ಲಿ ಮಾತನಾಡಿರುವ ಪ್ರಧಾನಿ ಮೋದಿ, 'e₹UPI' ಒಂದು ರೀತಿಯ Person ಜೊತೆಗೆ Purpose Specific ಆಗಿದೆ. ಇದರಿಂದ ಯಾವ ಉದ್ದೇಶದಿಂದ ಲಾಭ ನೀದಲಾಗುತ್ತಿದೆಯೋ ಅದೇ ಉದ್ದೇಶಕ್ಕೆ ಅದು ಉಪಯೋಗ ಕೂಡ ಆಗಲಿದೆ ಮತ್ತು ಅದನ್ನು  e₹UPI ಖಾತರಿಪಡಿಸಲಿದೆ ಎಂದು ಹೇಳಿದ್ದಾರೆ.

'ಸರ್ಕಾರ ಮಾತ್ರವಲ್ಲ, ಯಾವುದೇ ಸಾಮಾನ್ಯ ಸಂಸ್ಥೆ ಅಥವಾ ಸಂಘಟನೆ ಯಾರಿಗಾದರೂ ಅವರ ಚಿಕಿತ್ಸೆಯಲ್ಲಿ ಅಥವಾ  ಅವರ ಶಿಕ್ಷಣದಲ್ಲಿ ಅಥವಾ ಇನ್ನಾವುದೇ ಕೆಲಸಕ್ಕೆ ಸಹಾಯ ಮಾಡಲು ಬಯಸಿದರೆ, ಅವರು ನಗದು ಬದಲು e₹UPI ನೀಡಲು ಸಾಧ್ಯವಾಗಲಿದೆ. ಇದರಿಂದ ಅವರು ನೀಡುತ್ತಿರುವ ಹಣ, ನೆರವು ಅವರು ಹೇಳುತ್ತಿರುವ ಕಾರ್ಯಕ್ಕೆ ಬಳಕೆಯಾಗುತ್ತಿದೆ ಎಂಬುದು ಖಚಿತವಾಗಲಿದೆ' ಎಂದು  ಪ್ರಧಾನಿ ಮೋದಿ ಹೇಳಿದ್ದಾರೆ.

'ಇಂದು ಡಿಜಿಟಲ್ ಗವರ್ನನ್ಸ್  (Digital Governance)ದೇಶಕ್ಕೆ ಹೊಸ ಆಯಾಮವನ್ನೇ ನೀಡುತ್ತಿದೆ.  e₹UPI ವೌಚರ್ ಸೇವೆ ದೇಶದಲ್ಲಿ ಡಿಜಿಟಲ್ ಟ್ರಾನ್ಸಾಕ್ಷನ್, DBT ಸೇವೆಯನ್ನು ಇನ್ನಷ್ಟು ಬಲಿಷ್ಠಗೊಳಿಸಲಿದೆ. ಇದರಿಂದ Targeted, Transparent ಹಾಗೂ Leakage Free Deliveryಗೆ ಎಲ್ಲರಿಗೂ ಸಹಾಯ ಸಿಗಲಿದೆ' ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 

ಇದನ್ನೂ ಓದಿ-Cardless Cash Withdrawal : ಈಗ ಡೆಬಿಟ್ ಕಾರ್ಡ್ ಇಲ್ಲದೆಯೇ ATM ನಿಂದ ಹಣ ವಿತ್ ಡ್ರಾ ಮಾಡಬಹುದು

ಮಾಹಿತಿ ಗಳ ಪ್ರಕಾರ ಇ-ವೌಚರ್ ರೂಪದಲ್ಲಿ ಮೊಬೈಲ್ ಮೇಲೆ QR Code ಅಥವಾ SMS ಬರಲಿದೆ. ಹಲವು ಸರ್ಕಾರಿ ಯೋಜನೆಗಳಲ್ಲಿ  e₹UPI ಅನ್ನು ಬಳಕೆಯಾಗಲಿದೆ. ಇದರಿಂದ ನಗದು ವಹಿವಾಟಿಗೆ ಬ್ರೇಕ್ ಬೀಳಲಿದೆ ಹಾಗೂ ಮಧ್ಯವರ್ತಿಯ ರೊಲ್ ಗೆ ಕಡಿವಾಣ ಬೀಳಲಿದೆ. 

ಇದನ್ನೂ ಓದಿ-Aadhaar Card Update: ಈಗ ನಿಮ್ಮ ಆಧಾರ್ ಕಾರ್ಡ್ ಕಳೆದುಹೋದರೂ ಚಿಂತಿಸಬೇಕಿಲ್ಲ

ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಆನ್ಲೈನ್ ಪೇಮೆಂಟ್ ಗಿಂತ ಇದು ಹೇಗೆ ಭಿನ್ನ?
ವಾಸ್ತವದಲ್ಲಿ ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ (NPC) ಈ ವಯ್ವಸ್ಥೆಯನ್ನು ಅಭಿವೃದ್ಧಿಪಡಿಸಿದೆ. QR ಕೋಡ್ ಹಾಗೂ SMS ಆಧಾರಿತ e-ವೌಚರ್ ಗಳ ಬಳಕೆಯ ಮೂಲಕ ಇದು ನಿರ್ವಹಣೆಯಾಗಲಿದೆ. ಈ ಪ್ರೀ ಪೇಡ್ ವೌಚರ್ಗಳು (eRupi Prepaid eVoucher) ಆರೋಗ್ಯ ಹಾಗೂ ಸರ್ಕಾರಿ ಸೇವೆಗಳಂತಹ ನಿರ್ಧಿಷ್ಟ ಸೇವೆಗಳಿಗೆ ಬಳಕೆಯಾಗಲಿವೆ. ಅಂದರೆ, ಹಣಕಾಸಿನ ಸಹಾಯ ನೀದಬೇಕಾದವರು ಮೊದಲೇ ಬ್ಯಾಂಕ್ ನಿಂದ ಈ ವೌಚರ್ ಗಳನ್ನು ಖರೀದಿಸಬೇಕಾಗಲಿದೆ. ನಂತರ ಅವುಗಳನ್ನು SMS ಹಾಗೂ QR ಕೋಡ್ ಮೂಲಕ ಹಂಚಿಕೊಳ್ಳಬಹುದು. ಇದಕ್ಕಾಗಿ ವ್ಯಕ್ತಿಯ ಬಳಿ ಬ್ಯಾಂಕ್ ಖಾತೆ, ಡಿಜಿಟಲ್ ಪಾವತಿ ಆಪ್ ಅಥವಾ ಸ್ಮಾರ್ಟ್ ಫೋನ್ ಅಥವಾ ಇಂಟರ್ನೆಟ್ ಕನೆಕ್ಷನ್ ಅವಶ್ಯಕತೆ ಇಲ್ಲ. ಆದರೆ. ಆನ್ಲೈನ್ ಪೇಮೆಂಟ್ ಗೆ ಇವುಗಳ ಅವಶ್ಯಕತೆ ಬೀಳುತ್ತದೆ. ಈ ವೌಚರ್ ಗಳ ಮೂಲಕ ಸ್ವೀಕರಿಸಲಾಗುವ QR ಕೋಡ್ ಅಥವಾ SMS ಅನ್ನು ಸೇವಾ ಪೂರೈಕೆದಾರರಿಗೆ ಒದಗಿಸುವ ಮೂಲಕ ವೌಚರ್ ಅನ್ನು ನಗದಾಗಿ ಪರಿವರ್ತಿಸಬಹುದು. 

ಇದನ್ನೂ ಓದಿ-LPG Cylinder Booking: ಎಲ್‌ಪಿಜಿ ಸಿಲಿಂಡರ್ ಬುಕ್ ಮಾಡಲು ಈ ಸುಲಭ ಮಾರ್ಗಗಳನ್ನು ಅನುಸರಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News