ನವದೆಹಲಿ: ಕೆಲವರಿಗೆ ಹಳೆಯ ನೋಟು, ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸವಿರುತ್ತದೆ. ಕೆಲವರು ದೇಶ-ವಿದೇಶದ ವಿವಿಧ ಮುಖಬೆಲೆಯ ನೋಟುಗಳನ್ನು ಸಂಗ್ರಹಿಸುತ್ತಿರುತ್ತಾರೆ. ಅದೃಷ್ಟದ ಸಂಖ್ಯೆ ಇರುವ ನೋಟು ಮತ್ತು ಕಾಯಿನ್ ಗಳಿಗೆ ಬೇಡಿಕೆ ಮತ್ತು ಬೆಲೆ ಹೆಚ್ಚಾಗಿರುತ್ತದೆ. ಅಂಕಿ-ಸಂಖ್ಯೆಗಳಿಗೆ ಮಹತ್ವ ನೀಡಿ ಹಳೆಯ ನೋಟುಗಳನ್ನು ಖರೀದಿಸಲಾಗುತ್ತದೆ. ಆನ್‌ಲೈನ್ ನಲ್ಲಿ ಹಳೆಯ ನೋಟುಗಳು(Old Currency Notes) ಮತ್ತು ಕಾಯಿನ್ ಗಳ ಮಾರಾಟ, ಖರೀದಿ ನಡೆಯುತ್ತಿರುತ್ತದೆ. ಆದರೆ ಎಚ್ಚರಿಕೆ ಇರಲಿ ಹಳೆ ನೋಟು ಮಾರಾಟ ಮತ್ತು ಖರೀದಿ ನೆಪದಲ್ಲಿ ನೀವು ವಂಚನೆಗೆ ತುತ್ತಾಗಬಹುದು.  


COMMERCIAL BREAK
SCROLL TO CONTINUE READING

ಹೌದು, ಭಾರತೀಯ ರಿಸರ್ವ್ ಬ್ಯಾಂಕ್(Reserve Bank of India) ಹಳೆಯ ನೋಟುಗಳು ಮತ್ತು ನಾಣ್ಯಗಳ ಆನ್‌ಲೈನ್ ಮಾರಾಟ ಮತ್ತು ಖರೀದಿಯ ಬಗ್ಗೆ ಎಚ್ಚರಿಕೆಯ ಸಂದೇಶವನ್ನು ನೀಡಿದೆ. ಆರ್‌ಬಿಐನ ಹೆಸರು/ಲೋಗೋವನ್ನು ಮೋಸದಿಂದ ಬಳಸಿ ವಂಚಕರ ಜಾಲವು ಜನರಿಗೆ ಪಂಗನಾಮ ಹಾಕುತ್ತಿದೆಯಂತೆ. ಸ್ವಲ್ಪ ಎಚ್ಚರ ತಪ್ಪಿದರೂ ನೀವು ಕೂಡ ಮೋಸ ಹೋಗಬಹುದು. ಹೀಗಾಗಿ ಹಳೆಯ ನೋಟು, ನಾಣ್ಯಗಳನ್ನು ಖರೀದಿ ಅಥವಾ ಮಾರಾಟ ಮಾಡುವಾಗ ಜಾಗೃತರಾಗಿರಬೇಕು.


ಇದನ್ನೂ ಓದಿ: e-RUPI Digital Payment: ಡಿಜಿಟಲ್ ಪಾವತಿ ಉತ್ತೇಜಿಸುವ E-RUPIಯ 10 ಪ್ರಯೋಜನ ತಿಳಿಯಿರಿ


ಹಳೆಯ ನೋಟುಗಳು ಮತ್ತು ನಾಣ್ಯಗಳ ಖರೀದಿ ಮತ್ತು ಮಾರಾಟಕ್ಕೆ ಸಂಬಂಧಿಸಿದ ವಹಿವಾಟುಗಳಲ್ಲಿ ಸಾರ್ವಜನಿಕರಿಂದ ಶುಲ್ಕ/ ಕಮಿಷನ್/ ತೆರಿಗೆಯನ್ನು ಪಡೆಯುತ್ತಿರುವುದು ಭಾರತೀಯ ರಿಸರ್ವ್ ಬ್ಯಾಂಕ್ ಗಮನಕ್ಕೆ ಬಂದಿದೆಯಂತೆ. ವಿವಿಧ ಆನ್‌ಲೈನ್/ ಆಫ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಈ ವಂಚನೆ ನಡೆಯುತ್ತಿದೆ ಅಂತಾ ಆರ್‌ಬಿಐ ಹೇಳಿಕೆಯಲ್ಲಿ ತಿಳಿಸಿದ್ದು, ಮೋಸ ಹೋಗದಿರುವಂತೆ(Online Fraud) ಎಚ್ಚರಿಕೆ ವಹಿಸಿ ಎಂದು ಜನರಿಗೆ ಸಲಹೆ ನೀಡಿದೆ.


ಭಾರತೀಯ ರಿಸರ್ವ್ ಬ್ಯಾಂಕ್ ಇಂತಹ ಯಾವುದೇ ವಿಚಾರಗಳಿಗೆ ಸಂಬಂಧಿಸಿದಂತೆ ವ್ಯವಹರಿಸುವುದಿಲ್ಲ. ಅಲ್ಲದೆ ಯಾವುದೇ ರೀತಿಯ ಶುಲ್ಕಗಳು/ ಕಮಿಷನ್ ಅನ್ನು  ಎಂದಿಗೂ ಬಯಸುವುದಿಲ್ಲ ಅಂತಾ ಸ್ಪಷ್ಟಪಡಿಸಿದೆ. ಇಂತಹ ವಹಿವಾಟುಗಳಲ್ಲಿ ಆರ್‌ಬಿಐ ಪರವಾಗಿ ಯಾವುದೇ ಸಂಸ್ಥೆ/ ಕಂಪನಿ/ ವ್ಯಕ್ತಿ ಇತ್ಯಾದಿಗಳಿಗೆ ಶುಲ್ಕ/ ಕಮೀಷನ್ ಸಂಗ್ರಹಿಸಲು ಆರ್‌ಬಿಐ ಅಧಿಕಾರ ನೀಡಿಲ್ಲ ಎಂದು ಸೆಂಟ್ರಲ್ ಬ್ಯಾಂಕ್ ಹೇಳಿದೆ.


ಇದನ್ನೂ ಓದಿ: Aadhaar for NRI: ಎನ್ಆರ್ ಐ ಗಳು ಕೂಡಾ ಮಾಡಿಸಬಹುದು ಆಧಾರ್ ಕಾರ್ಡ್..! UIDAI ತಂದಿದೆ ಹೊಸ ನಿಯಮ


ಇಂತಹ ಕಾಲ್ಪನಿಕ/ ಮೋಸದ ಕೊಡುಗೆಗಳ ಮೂಲಕ ಜನರಿಂದ ಹಣ ಪಡೆದುಕೊಳ್ಳಲು ಆರ್‌ಬಿಐ(RBI) ಹೆಸರು ಬಳಸುವ ಯಾವುದೇ ವಂಚನೆಗೆ ಬಲಿಯಾಗಬೇಡಿ. ಈ ವಿಷಯದಲ್ಲಿ ಅತ್ಯಂತ ಜಾಗರೂಕರಾಗಿರಿ ಎಂದು ಆರ್‌ಬಿಐ ಜನರಿಗೆ ಸಲಹೆ ನೀಡಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ