Indian Currency Printing Cost- ಭಾರತೀಯ ಕರೆನ್ಸಿ ಅಥವಾ ಇಂಡಿಯನ್ ಕರೆನ್ಸಿ ಅಥವಾ ಪೈಸಾ, ರೂಪಾಯಿ ಯಾವುದೇ ಹೆಸರಿನಿಂದ ಕರೆದರೂ, ಮಾತಿಗೆ ಕೇವಲ ಅದೊಂದು ಪೇಪರ್ನಂತೆ ಎಂದು ಬಣ್ಣಿಸಿದರೂ ಹಣ ಇಲ್ಲದೆ ಯಾವುದೇ ಕೆಲಸ ಸಾಧ್ಯವಿಲ್ಲ. ಮಾರುಕಟ್ಟೆಯಲ್ಲಿ ಅವುಗಳ ಮೌಲ್ಯವು ತುಂಬಾ ಹೆಚ್ಚಾಗಿದೆ. ಅಂದಹಾಗೆ, ಈ ನೋಟುಗಳನ್ನು ವಿಶೇಷ ರೀತಿಯಲ್ಲಿ ಮಾಡಲಾಗಿದೆ. ಇದು ಅನೇಕ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿದೆ, ಈ ಕಾರಣದಿಂದಾಗಿ ಅವುಗಳು ಅನನ್ಯವಾಗಿವೆ. ಇಂತಹ ಅನನ್ಯತೆಗಳಿಂದಲೇ ನಾವು ನಕಲಿ ಮತ್ತು ನಿಜವಾದ ನೋಟುಗಳನ್ನು ಸುಲಭವಾಗಿ ಗುರುತಿಸಬಹುದು.
ಗಾಂಧೀಜಿಯವರ ಫೋಟೋಗೆ ಬಣ್ಣ, ಆರ್ಬಿಐ (RBI) ಎಂದು ಬರೆದ ಸ್ಟ್ರಿಪ್ನಂತಹ ಅನೇಕ ವಿಷಯಗಳಿವೆ. ನೋಟನ್ನು ಆಕರ್ಷಕವಾಗಿ ಮಾಡಲು ಕಾಲಕಾಲಕ್ಕೆ ವೈಶಿಷ್ಟ್ಯಗಳೂ ಬದಲಾಗುತ್ತವೆ. ಆದರೆ, 10, 20, 50, 100, 500 ಮತ್ತು 2 ಸಾವಿರ ರೂಪಾಯಿಗಳ ಈ ನೋಟುಗಳನ್ನು ಮುದ್ರಿಸಲು ಎಷ್ಟು ವೆಚ್ಚವಾಗುತ್ತದೆ (Indian Currency Printing Cost) ಎಂದು ನಿಮಗೆ ತಿಳಿದಿದೆಯೇ?
2000 ರೂ. ಮುಖಬೆಲೆ ನೋಟು ಮುದ್ರಿಸಲು ಎಷ್ಟು ವೆಚ್ಚವಾಗುತ್ತದೆ?
2000 ರೂ. ಮುಖಬೆಲೆಯ ನೋಟುಗಳ ಮುದ್ರಣದಿಂದಾಗಿ 2018-19ರಲ್ಲಿ ಬಹಳ ಕಡಿಮೆ ವೆಚ್ಚವಾಗಿದೆ. ಇದಕ್ಕೂ ಒಂದು ವರ್ಷದ ಮೊದಲು, ಈ ವೆಚ್ಚವು 2017-18ರಲ್ಲಿ ಹೆಚ್ಚಾಗಿತ್ತು ಮತ್ತು ಈಗ ಅದು ಗಣನೀಯವಾಗಿ ಕಡಿಮೆಯಾಗಿದೆ. 2019 ರಲ್ಲಿ ನೋಟುಗಳನ್ನು ಮುದ್ರಿಸಲು 65 ಪೈಸೆ ಕಡಿಮೆ ಖರ್ಚು ಮಾಡಲಾಗಿದೆ. 2018 ರಲ್ಲಿ 2000 ರೂಪಾಯಿ ನೋಟು ಮುದ್ರಿಸುವ 4 ರೂಪಾಯಿ 18 ಪೈಸೆ ವೆಚ್ಚವಾಗುತ್ತಿತ್ತು, 2019 ರಲ್ಲಿ ನೋಟು ಮುದ್ರಣ ವೆಚ್ಚ 3.53 ರೂಪಾಯಿಗೆ ಇಳಿಕೆಯಾಗಿದೆ. 2000 ರೂಪಾಯಿ ನೋಟು ಮುದ್ರಿಸಲು 3-4 ರೂ. ವೆಚ್ಚವಾಗುತ್ತದೆ. 2019-20 ರ ಅಂಕಿಅಂಶಗಳ ಪ್ರಕಾರ, ಉಳಿದ ನೋಟುಗಳನ್ನು ಮುದ್ರಿಸಲು ತಗಲುವ ವೆಚ್ಚ ಬೇರೆ ಬೇರೆಯಾಗಿದೆ.
ಇದನ್ನೂ ಓದಿ- Raam Currency: ಈ ದೇಶದಲ್ಲಿ ರಾಮನ ಚಿತ್ರವಿರುವ ನೋಟಿನ ಮೌಲ್ಯ ಎಷ್ಟು ಗೊತ್ತೇ?
ಯಾವ ನೋಟು ಮುದ್ರಣಕ್ಕೆ ಎಷ್ಟು ವೆಚ್ಚವಾಗಲಿದೆ?
* ₹ 500 ನೋಟಿನ ಮುದ್ರಣಕ್ಕೆ 2.65 ರೂ. ಖರ್ಚು ಮಾಡಲಾಗಿದೆ.
* ₹ 200 ನೋಟಿನ ಮುದ್ರಣಕ್ಕೆ 2.48. ರೂ. ವೆಚ್ಚವಾಗಲಿದೆ.
* ₹ 100 ನೋಟು ಮುದ್ರಿಸುವ ವೆಚ್ಚ 1.51 ರೂ.
* ₹ 50 ನೋಟಿನ ಮುದ್ರಣಕ್ಕೆ 1.22 ರೂ. ಖರ್ಚು ಮಾಡಲಾಗುವುದು.
* ₹ 20 ಮುಖಬೆಲೆಯ ನೋಟು ಮುದ್ರಣ ವೆಚ್ಚ ₹ 10 ನೋಟುಗಿಂತ ಕಡಿಮೆಯಾಗಿದ್ದು, ಸರ್ಕಾರ ಇದಕ್ಕಾಗಿ ಕೇವಲ 1 ಪೈಸೆ ಖರ್ಚು ಮಾಡಬೇಕಿದೆ.
₹ 10 ನೋಟು ಮುದ್ರಿಸುವ ವೆಚ್ಚ ರೂ .1.01 ಆಗಿದೆ.
ಹೊಸ ನೋಟು ಹಳೆಯದಕ್ಕಿಂತ ಅಗ್ಗ:
>> ಹೊಸ ನೋಟು ಮುದ್ರಣ (Currency Printing) ವೆಚ್ಚ ಹಳೆಯ ನೋಟಿಗಿಂತ ಕಡಿಮೆ ಎಂದು ಆರ್ಟಿಐನಲ್ಲಿ ಹೇಳಲಾಗಿದೆ.
>> ಹಳೆಯ 500 ರೂಪಾಯಿ ನೋಟು ಮುದ್ರಿಸಲು 3.09 ರೂ. ವೆಚ್ಚವಾಗುತ್ತಿತ್ತು. ಹೊಸ ನೋಟು ಮುದ್ರಣ ವೆಚ್ಚ ಅದಕ್ಕಿಂತ 44 ಪೈಸೆ ಕಡಿಮೆಯಿದೆ.
>> ಹಳೆಯ ಒಂದು ಸಾವಿರ ರೂಪಾಯಿ ನೋಟನ್ನು 3.54 ರೂಪಾಯಿಗೆ ಮುದ್ರಿಸಲಾಗಿದೆ. ಹೊಸ 2 ಸಾವಿರ ರೂಪಾಯಿ ನೋಟಿಗೆ 3.53 ರೂಪಾಯಿಗಳನ್ನು ಖರ್ಚು ಮಾಡಲಾಗಿದೆ.
ಇದನ್ನೂ ಓದಿ- SBI ಗ್ರಾಹಕರೇ ಗಮನಿಸಿ! ATM ಮೂಲಕ ಇಂತಹ ವಹಿವಾಟು ನಡೆಸಿದರೆ ಬೀಳುತ್ತೆ ಭಾರೀ ದಂಡ
ನೋಟುಗಳನ್ನು ಎಲ್ಲಿ ಮುದ್ರಿಸಲಾಗುವುದು?
ಈ ನೋಟುಗಳನ್ನು ಯಾರು ಮುದ್ರಿಸುತ್ತಾರೆ ಮತ್ತು ಎಲ್ಲಿ ಮುದ್ರಿಸಲಾಗುತ್ತದೆ? ಎಂಬ ಪ್ರಶ್ನೆ ಬಹುತೇಕ ಜನರಲ್ಲಿ ಇರುತ್ತದೆ. ಭಾರತ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಆದೇಶದ ಮೇರೆಗೆ ಭಾರತೀಯ ಕರೆನ್ಸಿ ನೋಟುಗಳನ್ನು ಮುದ್ರಿಸಲಾಗುತ್ತದೆ. ಇವುಗಳನ್ನು ಸರ್ಕಾರಿ ಮುದ್ರಣಾಲಯಗಳಲ್ಲಿ ಮಾತ್ರ ಮುದ್ರಿಸಲಾಗುತ್ತದೆ. ದೇಶಾದ್ಯಂತ ನಾಲ್ಕು ಮುದ್ರಣಾಲಯಗಳಿವೆ. ನಾಸಿಕ್, ದೇವಾಸ್, ಮೈಸೂರು ಮತ್ತು ಸಾಲ್ಬೋನಿ (ಪ. ಬಂಗಾಳ) ಗಳಲ್ಲಿ ನೋಟು ಮುದ್ರಣವನ್ನು ಮಾಡಲಾಗುತ್ತದೆ. ಅದನ್ನು ಮುದ್ರಿಸಲು ವಿಶೇಷ ರೀತಿಯ ಶಾಯಿಯನ್ನು ಬಳಸಲಾಗುತ್ತದೆ. ಇದನ್ನು ಸ್ವಿಸ್ ಕಂಪನಿಯು ತಯಾರಿಸಿದೆ. ವಿಭಿನ್ನ ಶಾಯಿಗಳು ವಿಭಿನ್ನ ಕೆಲಸಗಳನ್ನು ಮಾಡುತ್ತವೆ. ನೋಟು ಮುದ್ರಣವಾಗುವ ಕಾಗದವನ್ನು ವಿಶೇಷ ರೀತಿಯಲ್ಲಿ ತಯಾರಿಸಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ