ನವದೆಹಲಿ : ಮಾರುತಿ ಸುಜುಕಿ ನಂತರ ಇದೀಗ ಟಾಟಾ ಮೋಟಾರ್ಸ್ (TATA Motors) ಕೂಡ ತನ್ನ ಎಲ್ಲಾ ಕಾರುಗಳ ಬೆಲೆಯನ್ನು ಹೆಚ್ಚಿಸಿದೆ. ಹೆಚ್ಚಿಸಿದ ಬೆಲೆಗಳು ನಾಳೆಯಿಂದ ಅಂದರೆ ಜನವರಿ 19 ರಿಂದ ಜಾರಿಗೆ ಬರಲಿದೆ. ಎಲ್ಲಾ ಕಾರುಗಳ ಸರಾಸರಿ (Car price) ಬೆಲೆಯನ್ನು ಶೇಕಡಾ 0.9 ರಷ್ಟು ಹೆಚ್ಚಿಸಲಾಗಿದೆ. ಇದಲ್ಲದೆ, ಗ್ರಾಹಕರ ಪ್ರತಿಕ್ರಿಯೆಯ ಆಧಾರದ ಮೇಲೆ, ಕೆಲವು ರೂಪಾಂತರಗಳ ಬೆಲೆಗಳನ್ನು 10,000 ರೂ.ವರೆಗೆ ಕಡಿತಗೊಳಿಸಲಾಗಿದೆ. ಇಂದು ಹೊಸ ಟಾಟಾ ಕಾರನ್ನು ಬುಕ್ (Car booking) ಮಾಡಿದರೆ, ಈ ಕಾರನ್ನು ಪ್ರಸ್ತುತ ಬೆಲೆಯಲ್ಲಿ ಖರೀದಿಸಬಹುದು. 


COMMERCIAL BREAK
SCROLL TO CONTINUE READING

ಬೆಲೆ ಏರಿಕೆ ಹಿಂದಿನ   ಕಾರಣ :
ಟಾಟಾ ಮೋಟಾರ್ಸ್ (TATA Motors) ಮಾತ್ರವಲ್ಲ, ಮಾರುತಿ ಸುಜುಕಿ (Maruti Suzuki), ಮಹೀಂದ್ರಾ ಮತ್ತು ಎಲ್ಲಾ ದೊಡ್ಡ ಬ್ರ್ಯಾಂಡ್‌ಗಳು ಜನವರಿ 2022 ರಿಂದ ತಮ್ಮ ವಾಹನಗಳ ಬೆಲೆಯನ್ನು ಹೆಚ್ಚಿಸಿವೆ. ಎಲ್ಲಾ ಕಂಪನಿಗಳು ಒಮ್ಮತದಿಂದ ಬೆಲೆ ಏರಿಕೆಯನ್ನೇ ಬಹು ದೊಡ್ಡ ಕಾರಣ ಎಂದು ಹೇಳಿದೆ. ಕಂಪನಿಗಳ ಮತ್ತೊಂದು ಪ್ರಮುಖ ಸಮಸ್ಯೆ ಎಂದರೆ ಸೆಮಿಕಂಡಕ್ಟರ್ ಚಿಪ್‌ಗಳ ಜಾಗತಿಕ ಕೊರತೆ. ಸದ್ಯಕ್ಕೆ  ಈ ಸಮಸ್ಯೆಯಿಂದ ಮುಕ್ತಿ ಕಾಣುತ್ತಿಲ್ಲ. ಗಮನಿಸಬೇಕಾದ ಸಂಗತಿಯೆಂದರೆ, ದೀರ್ಘಕಾಲದವರೆಗೆ ಆಟೋ ಜಗತ್ತು (Auto world) ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಭವಿಷ್ಯದಲ್ಲಿ ಈ ವಲಯದ ಮುಂದೆ ಇನ್ನೂ ಅನೇಕ  ಸವಾಲುಗಳು ಎದುರಾಗಬಹುದು. 


ಇದನ್ನೂ ಓದಿ :  PM Kisan ನಿಯಮದಲ್ಲಿ ಬದಲಾವಣೆ , ಈ ದಾಖಲೆ ಇಲ್ಲದಿದ್ದರೆ ಖಾತೆ ಸೇರುವುದಿಲ್ಲ ಹಣ


ಈ ಕಾರುಗಳ ಮಾರಾಟದ ಮೇಲೆ ಬೆಲೆ ಏರಿಕೆಯ ಪರಿಣಾಮವೇನು?
ಕಂಪನಿಗಳು ತಮ್ಮ ಕಾರಿನ ಬೆಲೆಯನ್ನು ಹೆಚ್ಚಿಸುವುದರಿಂದ ಈ ಕಾರುಗಳ ಮಾರಾಟದ (Car  price) ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಕಾಲವೇ ನಿರ್ಧರಿಸಬೇಕು. ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (SIAM) ಒದಗಿಸಿದ ಮಾಹಿತಿಯ ಪ್ರಕಾರ, ಡಿಸೆಂಬರ್ 2021 ರಲ್ಲಿ ಸುಮಾರು 2.19 ಲಕ್ಷ ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಲಾಗಿದೆ. ಇದು ಡಿಸೆಂಬರ್ 2020 ಕ್ಕೆ ಹೋಲಿಸಿದರೆ ಶೇಕಡಾ 13 ರಷ್ಟು ಕುಸಿತವನ್ನು ದಾಖಲಿಸುತ್ತದೆ. ಕಂಪನಿಯು ಈ ಡೇಟಾವನ್ನು SIAM ಗೆ ಒದಗಿಸದ ಕಾರಣ ಟಾಟಾ ಮೋಟಾರ್ಸ್ ವಾಹನಗಳನ್ನು ಈ ಮಾರಾಟದ ಅಂಕಿ ಅಂಶದಲ್ಲಿ ಸೇರಿಸಲಾಗಿಲ್ಲ.


ಇದನ್ನೂ ಓದಿ :  LPG Booking Offer: ಅಗ್ಗವಾಗಿ LPG ಸಿಲಿಂಡರ್ ಪಡೆಯಲು ಉತ್ತಮ ಅವಕಾಶ, ಇಲ್ಲಿದೆ 2,700 ರೂ. ಆಫರ್!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.