LPG Booking Offer: ಅಗ್ಗವಾಗಿ LPG ಸಿಲಿಂಡರ್ ಪಡೆಯಲು ಉತ್ತಮ ಅವಕಾಶ, ಇಲ್ಲಿದೆ 2,700 ರೂ. ಆಫರ್!

ವಿಶೇಷ ಕೊಡುಗೆಯ ಅಡಿಯಲ್ಲಿ ನೀವು ಎಲ್‌ಪಿಜಿ ಸಿಲಿಂಡರ್‌ನ ಬುಕಿಂಗ್‌ನಲ್ಲಿ 2,700 ರೂ.ಗಳ ಬಂಪರ್ ಪ್ರಯೋಜನವನ್ನು ಪಡೆಯಬಹುದು.

Written by - Puttaraj K Alur | Last Updated : Jan 18, 2022, 01:25 PM IST
  • ಈಗ ನೀವೂ ಕೂಡ LPG ಸಿಲಿಂಡರ್ ಅನ್ನು ಅಗ್ಗವಾಗಿ ಬುಕ್ ಮಾಡಬಹುದು
  • ಎಲ್‌ಪಿಜಿ ಸಿಲಿಂಡರ್‌ನ ಬುಕಿಂಗ್‌ನಲ್ಲಿ 2,700 ರೂ.ಗಳ ಬಂಪರ್ ಪ್ರಯೋಜನ
  • ಈ ಲಾಭ ಪಡೆದುಕೊಳ್ಳಲು ಕೇವಲ ‘ಪೇಟಿಎಂ’ ಮೂಲಕ ಗ್ಯಾಸ್ ಬುಕ್ ಮಾಡಬೇಕು
LPG Booking Offer: ಅಗ್ಗವಾಗಿ LPG ಸಿಲಿಂಡರ್ ಪಡೆಯಲು ಉತ್ತಮ ಅವಕಾಶ, ಇಲ್ಲಿದೆ 2,700 ರೂ. ಆಫರ್!  title=
Paytmನೊಂದಿಗೆ LPG ಬುಕಿಂಗ್ ಮೇಲೆ ಬಂಪರ್ ಕ್ಯಾಶ್‌ಬ್ಯಾಕ್!

ನವದೆಹಲಿ: ಹಣದುಬ್ಬರ ಏರಿಕೆಯ ಮಧ್ಯೆ ನಿಮಗಾಗಿ ಒಳ್ಳೆಯ ಸುದ್ದಿಯಿದೆ. ಈಗ ನೀವು LPG ಸಿಲಿಂಡರ್ ಅನ್ನು ಅಗ್ಗವಾಗಿ ಬುಕ್ ಮಾಡಬಹುದು. ವಿಶೇಷ ಕೊಡುಗೆಯ ಅಡಿಯಲ್ಲಿ ನೀವು ಎಲ್‌ಪಿಜಿ ಸಿಲಿಂಡರ್‌ನ ಬುಕಿಂಗ್‌(LPG Booking Offers)ನಲ್ಲಿ 2,700 ರೂ.ಗಳ ಬಂಪರ್ ಪ್ರಯೋಜನವನ್ನು ಪಡೆಯಬಹುದು. ಈ ಕೊಡುಗೆಯಲ್ಲಿ ನೀವು ಇನ್ನೂ ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತೀರಿ.

ಈ ಲಾಭ ಪಡೆದುಕೊಳ್ಳಲು ನೀವು ಕೇವಲ ‘ಪೇಟಿಎಂ’ ಮೂಲಕ ಗ್ಯಾಸ್ ಬುಕ್(LPG Gas Booking) ಮಾಡಬೇಕು. ನೀವು ಯಾವ ಆಫರ್‌ಗಳನ್ನು ಪಡೆಯುತ್ತೀರಿ ಮತ್ತು ಈ ಆಫರ್‌ಗಳ ಲಾಭ ಪಡೆಯಲು ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿರಿ.

Paytmನೊಂದಿಗೆ LPG ಬುಕಿಂಗ್ ಮೇಲೆ ಬಂಪರ್ ಕ್ಯಾಶ್‌ಬ್ಯಾಕ್!

ಈ ವಿಶೇಷ ಕೊಡುಗೆಯ ಅಡಿಯಲ್ಲಿ ನೀವು Paytm ನೊಂದಿಗೆ LPG ಸಿಲಿಂಡರ್(LPG Gas) ಅನ್ನು ಬುಕ್ ಮಾಡಿದರೆ 2,700 ರೂ.ಗಳ ನೇರ ಪ್ರಯೋಜನ ಪಡೆಯುತ್ತೀರಿ. ವಾಸ್ತವವಾಗಿ Paytm LPG ಸಿಲಿಂಡರ್‌ಗಳ ಬುಕಿಂಗ್‌ನಲ್ಲಿ ಕ್ಯಾಶ್‌ಬ್ಯಾಕ್ ಮತ್ತು ಇತರ ಹಲವು ಬಹುಮಾನಗಳನ್ನು ಘೋಷಿಸಿದೆ. Paytm ಇದೀಗ 3 Pay 2700 Cashback Offer ಹೆಸರಿನ ಯೋಜನೆಯನ್ನು ಪ್ರಾರಂಭಿಸಿದೆ. ಹೊಸ ಬಳಕೆದಾರರು ಈ ಕೊಡುಗೆಯ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಇದರಲ್ಲಿ ಅವರು ಸತತ 3 ತಿಂಗಳ ಮೊದಲ ಬುಕಿಂಗ್‌ನಲ್ಲಿ  900 ರೂ.ವರೆಗೆ ಖಚಿತವಾದ ಕ್ಯಾಶ್‌ಬ್ಯಾಕ್ ಪಡೆಯಬಹುದು.

ಇದನ್ನೂ ಓದಿ: 7th Pay Commission: ತುಟ್ಟಿ ಭತ್ಯೆ ಲೆಕ್ಕಾಚಾರದಲ್ಲಿ ಬದಲಾವಣೆ, ಈಗ ಕೈ ಸೇರಲಿರುವ ವೇತನ ಎಷ್ಟು ?

900 ರೂ.ವರೆಗೆ ಕ್ಯಾಶ್‌ಬ್ಯಾಕ್

ಈ ಕೊಡುಗೆಯು ಕೆಲವು ನಿಯಮಗಳು ಮತ್ತು ಷರತ್ತುಗಳನ್ನು ಹೊಂದಿದೆ. ವಾಸ್ತವವಾಗಿ ಈ ಕ್ಯಾಶ್‌ಬ್ಯಾಕ್(Cashback) ಮೊದಲ ಬಾರಿಗೆ LPG ಸಿಲಿಂಡರ್‌ಗಳನ್ನು ಬುಕ್ ಮಾಡಿದ ಗ್ರಾಹಕರಿಗೆ ಮಾತ್ರ ಲಭ್ಯವಿರುತ್ತದೆ. ಪ್ರತಿ ತಿಂಗಳು 3 ಗ್ಯಾಸ್ ಸಿಲಿಂಡರ್‌ಗಳನ್ನು ಬುಕ್ ಮಾಡಿದರೆ ಮೊದಲ ಬುಕಿಂಗ್‌ನಲ್ಲಿ ನೀವು 900 ರೂ.ವರೆಗೆ ಕ್ಯಾಶ್‌ಬ್ಯಾಕ್ ಪಡೆಯುತ್ತೀರಿ. ಈ ಕ್ಯಾಶ್‌ಬ್ಯಾಕ್ 3 ತಿಂಗಳವರೆಗೆ ಲಭ್ಯವಿರುತ್ತದೆ. ಈ ಆಫರ್ ನಲ್ಲಿ ನೀವು 10 ರೂ.ನಿಂದ 900 ರೂ.ವರೆಗೆ ಖಚಿತ ಕ್ಯಾಶ್‌ಬ್ಯಾಕ್ ಪಡೆಯಬಹುದು.

ಇನ್ನೂ ಹಲವು ಆಫರ್‌ಗಳಿವೆ

ಇದಲ್ಲದೇ Paytm ಅಸ್ತಿತ್ವದಲ್ಲಿರುವ ಬಳಕೆದಾರರಿಗೆ ಪ್ರತಿ ಬುಕಿಂಗ್‌ನಲ್ಲಿ ಸ್ಥಿರ ಬಹುಮಾನಗಳನ್ನು ನೀಡುತ್ತಿದೆ. ಗ್ಯಾಸ್ ಬುಕ್ ಮಾಡಿದವರಿಗೆ 5,000 ಕ್ಯಾಶ್‌ಬ್ಯಾಕ್ ಪಾಯಿಂಟ್‌ಗಳನ್ನು ಉತ್ತಮ ಡೀಲ್‌ಗಳು ಮತ್ತು ಉನ್ನತ ಬ್ರ್ಯಾಂಡ್‌ಗಳಿಂದ ಉಡುಗೊರೆ ವೋಚರ್‌ಗಳಿಗಾಗಿ ರಿಡೀಮ್ ಮಾಡಿಕೊಳ್ಳಬಹುದು. Paytm ಕೆಲವು ಸಮಯದ ಹಿಂದೆ ತನ್ನ ಅಪ್ಲಿಕೇಶನ್‌ಗೆ ಹೊಸ ವೈಶಿಷ್ಟ್ಯವನ್ನು ಸೇರಿಸಿದೆ. ಇದರಲ್ಲಿ ಬಳಕೆದಾರರು ಸಿಲಿಂಡರ್ ಅನ್ನು ಬುಕ್ ಮಾಡಿದ ನಂತರ ವಿತರಣೆಯನ್ನು ಸಹ ಟ್ರ್ಯಾಕ್ ಮಾಡಬಹುದು. ಇದಲ್ಲದೇ ಸಿಲಿಂಡರ್ ತುಂಬುವ ರಿಮೈಂಡರ್ ಕೂಡ ಫೋನ್ ನಲ್ಲಿ ಬರಲಿದೆ.

‘Paytm ಪೋಸ್ಟ್‌ಪೇಯ್ಡ್’ ಯೋಜನೆ

ಈ ‘3 Pay 2700 Cashback Offer’ ಎಲ್ಲಾ 3 ಪ್ರಮುಖ LPG ಕಂಪನಿಗಳ ಸಿಲಿಂಡರ್‌(LPG Gas Cylinders)ಗಳ ಬುಕಿಂಗ್‌ಗೆ ಅನ್ವಯಿಸುತ್ತದೆ. ಅಂದರೆ ನೀವು Indane, HP Gas ಮತ್ತು BharatGas ನಲ್ಲಿಯೂ ಬುಕ್ ಮಾಡಬಹುದು. ‘Paytm ಪೋಸ್ಟ್‌ಪೇಯ್ಡ್’ ಎಂದು ಜನಪ್ರಿಯವಾಗಿರುವ ‘Paytm Now Pay Later’ ಪ್ರೋಗ್ರಾಂನಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ಗ್ರಾಹಕರು ಮುಂದಿನ ತಿಂಗಳು ಸಿಲಿಂಡರ್ ಬುಕಿಂಗ್ ಪಾವತಿಯನ್ನು ಮಾಡಲು ಅವಕಾಶವನ್ನು ಹೊಂದಿರುತ್ತಾರೆ.

ಇದನ್ನೂ ಓದಿ: Banking: ಎಷ್ಟು ರೀತಿಯ ಉಳಿತಾಯ ಖಾತೆಗಳಿವೆ? ಯಾವುದು ನಿಮ್ಮ ಪಾಲಿಗೆ ಬೆಸ್ಟ್

ನೀವು ಈ ರೀತಿ ಕ್ಯಾಶ್‌ಬ್ಯಾಕ್ ಪಡೆಯಬಹುದು..

1. ಇದಕ್ಕಾಗಿ ನೀವು ಮೊದಲು Paytm ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ.

2. ಇದರ ನಂತರ ಸಿಲಿಂಡರ್ ಬುಕಿಂಗ್‌ಗೆ ಹೋಗಿ. ನಂತರ ನಿಮ್ಮ ಗ್ಯಾಸ್ ಏಜೆನ್ಸಿಯನ್ನು ಆಯ್ಕೆಮಾಡಿ. ಇದರಲ್ಲಿ ನೀವು 3 ಆಯ್ಕೆಗಳನ್ನು ನೋಡುತ್ತೀರಿ - ಭಾರತ್ ಗ್ಯಾಸ್, ಇಂಡೇನ್ ಗ್ಯಾಸ್ ಮತ್ತು HP ಗ್ಯಾಸ್.

3. ಇದರ ನಂತರ ನಿಮ್ಮ ನೋಂದಾಯಿತ ಸಂಖ್ಯೆ ಅಥವಾ LPG ID ಅಥವಾ ಗ್ರಾಹಕ ಸಂಖ್ಯೆಯನ್ನು ನಮೂದಿಸಿ.

4. ಈ ಮಾಹಿತಿಯನ್ನು ಭರ್ತಿ ಮಾಡಿದ ನಂತರ ನೀವು Proceed ಬಟನ್ ಅನ್ನು ಒತ್ತುವ ಮೂಲಕ ಪಾವತಿ ಮಾಡಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News