ನವದೆಹಲಿ : ಪೇಟಿಎಂ (Paytm) ಬಳಕೆದಾರರಿಗೆ 1 ಲಕ್ಷದವರೆಗೆ ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ. ಡಿಜಿಟಲ್ ಪೇಮೆಂಟ್ (Digital payment) ಮತ್ತು ಹಣಕಾಸು ಸೇವೆಗಳ ಸಂಸ್ಥೆ ಪೇಟಿಎಂ ಹಬ್ಬದ ಸಮಯದಲ್ಲಿ ಪ್ರಚಾರಕ್ಕಾಗಿ 100 ಕೋಟಿ ರೂಪಾಯಿಯನ್ನು ಮೀಸಲಿಟ್ಟಿದೆ.  ಸೋಮವಾರ ಪೇಟಿಎಂ ಸ್ವತಃ ಈ ಮಾಹಿತಿಯನ್ನು ನೀಡಿದೆ. ಈ ಅಭಿಯಾನದ ಅಡಿಯಲ್ಲಿ, ಕಂಪನಿಯು ತನ್ನ ಗ್ರಾಹಕರಿಗೆ ಬಂಪರ್ ಕ್ಯಾಶ್‌ಬ್ಯಾಕ್ (Paytm Cashback) ನೀಡುತ್ತದೆ. 


COMMERCIAL BREAK
SCROLL TO CONTINUE READING

ಲಕ್ಷಾಂತರ ಹಣ ಗಳಿಸಲು ಪೇಟಿಎಂ ಅವಕಾಶ :
ಇದರೊಂದಿಗೆ, ಯುಪಿಐ ಮತ್ತು ಬೈ ನೌ ಪೇ ಲೇಟರ್ ವ್ಯಾಪಕ ಪ್ರಸರಣಕ್ಕಾಗಿ ಕಂಪನಿಯು ಅಭಿಯಾನಗಳನ್ನು ನಡೆಸುತ್ತಿದೆ. ಕಂಪನಿಯು ಭಾರತದ ಬಹುತೇಕ ಎಲ್ಲಾ ಜಿಲ್ಲೆಗಳ ಗ್ರಾಹಕರಿಗೆ ಮಾರುಕಟ್ಟೆ ಪ್ರಚಾರವಾಗಿ 'ಪೇಟಿಎಂ ಕ್ಯಾಶ್‌ಬ್ಯಾಕ್ ಧಮಾಕಾ'  (Paytm cashback dhamaka) ಆರಂಭಿಸಿದೆ. ಅಂದರೆ ಈ ದೀಪಾವಳಿ ಹಬ್ಬದ ವೇಳೆಯಲ್ಲಿ ಹಣ ಗಳಿಕೆಗೂ ಅವಕಾಶ.    


ಇದನ್ನೂ ಓದಿ : Tata Punch Launched: ಟಾಟಾ ಕಂಪನಿಯ ಅತ್ಯಂತ ಅಗ್ಗದ SUV ಬಿಡುಗಡೆ, ಬೆಲೆ ಕೇಳಿ ನೀವೂ ಆಶ್ಚರ್ಯಚಕಿತರಾಗುವಿರಿ


ಈ ಅಭಿಯಾನದ ಅಡಿಯಲ್ಲಿ, ಪೇಟಿಎಂ (paytm) ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣದಂತಹ ರಾಜ್ಯಗಳ ಮೇಲೆ ಹೆಚ್ಚು ಗಮನ ಹರಿಸುತ್ತಿದೆ. "ಕಂಪನಿ ಮತ್ತು ಅದರ ಪಾಲುದಾರರು ಹಬ್ಬದ ಸಮಯದಲ್ಲಿ ಮಾರ್ಕೆಟಿಂಗ್ ಚಟುವಟಿಕೆಗಳಿಗಾಗಿ 100 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿರುವುದಾಗಿ ಪೇಟಿಎಂ ಸೋಮವಾರ ಹೇಳಿದೆ.


ಎಲ್ಲಿಯವರೆಗೆ ನಡೆಯಲಿದೆ ಅಭಿಯಾನ ? 
ಭಾರತದಲ್ಲಿ ಡಿಜಿಟಲ್ ಪಾವತಿಗಳನ್ನು (Digital payment) ಉತ್ತೇಜಿಸುವುದರೊಂದಿಗೆ, ಈ ಅಭಿಯಾನವು ಜನರಿಗೆ ಕ್ಯಾಶ್‌ಬ್ಯಾಕ್ ಗೆಲ್ಲುವ ಅವಕಾಶವನ್ನು ನೀಡುತ್ತದೆ. ಪೇಟಿಎಂ ಯುಪಿಐ (UPI) ಬಗ್ಗೆಯೂ ಅರಿವು ಮೂಡಿಸುತ್ತದೆ. ಈ ಅಭಿಯಾನವು ನವೆಂಬರ್ 14 ರವರೆಗೆ ನಡೆಯಲಿದೆ. 


ಇದನ್ನೂ ಓದಿ :  Online fraud : ನೀವು ಕೂಡಾ ಆನ್ಲೈನ್ ಫ್ರಾಡ್ ಗೆ ಒಳಗಾಗಿದ್ದರೆ ಹೀಗೆ ನಿಮ್ಮ ಹಣವನ್ನು ವಾಪಸ್ ಪಡೆಯಬಹುದು


ಪ್ರತಿದಿನ 10 ಲಕ್ಷ ರೂ.ವರೆಗೆ ಗೆಲ್ಲುವ ಅವಕಾಶ :
ಈ ಅಭಿಯಾನದ ಅಡಿಯಲ್ಲಿ, ಜನರಿಗೆ ಡಿಜಿಟಲ್ ಪಾವತಿ ಮತ್ತು ಹಣ ವರ್ಗಾವಣೆ, ಪೇಟಿಎಂ ವಾಲೆಟ್ (Paytm Wallet) ಮತ್ತು ಪೇಟಿಎಂ ಪೋಸ್ಟ್‌ಪೇಯ್ಡ್ ಪ್ರಚಾರಕ್ಕಾಗಿ ಪೇಟಿಎಂ ಯುಪಿಐ ಬಗ್ಗೆ ತಿಳಿಸಲಾಗುವುದು. ಈ ಅಭಿಯಾನದ ಅಡಿಯಲ್ಲಿ ಪ್ರತಿ ದಿನ 10 ಅದೃಷ್ಟಶಾಲಿ ವಿಜೇತರು 1 ಲಕ್ಷ ರೂ ಗೆಲ್ಲಬಹುದು. 10,000 ವಿಜೇತರು 100ರೂ  ಕ್ಯಾಶ್ಬ್ಯಾಕ್ ಪಡೆಯುತ್ತಾರೆ. ಇನ್ನೂ 10,000 ಬಳಕೆದಾರರು 50 ರೂ ಕ್ಯಾಶ್ ಬ್ಯಾಕ್ (Cashback) ಪಡೆಯುತ್ತಾರೆ. ಈ ಕೊಡುಗೆಯ ಅಡಿಯಲ್ಲಿ, ದೀಪಾವಳಿಯ ಸಮಯದಲ್ಲಿ ಬಳಕೆದಾರರು ಪ್ರತಿದಿನ 10 ಲಕ್ಷದವರೆಗೆ ಗೆಲ್ಲಬಹುದು.


ಕ್ಯಾಶ್ ಬ್ಯಾಕ್ ಪಡೆಯುವುದು ಹೇಗೆ ಗೊತ್ತಾ?
ಈ ಕೊಡುಗೆಯನ್ನು ಪಡೆಯಲು, ನಿಮ್ಮ ಮೊಬೈಲ್, ಬ್ರಾಡ್‌ಬ್ಯಾಂಡ್ ಡಿಟಿಎಚ್ ರೀಚಾರ್ಜ್, ಬಿಲ್ ಪಾವತಿ, ಹಣ ವರ್ಗಾವಣೆ, ಪ್ರಯಾಣದ ಟಿಕೆಟ್ ಬುಕಿಂಗ್, ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ, ಚಲನಚಿತ್ರ ಟಿಕೆಟ್ ಬುಕಿಂಗ್, ಫಾಸ್ಟ್ ಟ್ಯಾಗ್ ಪಾವತಿ, ಆನ್‌ಲೈನ್ ಮತ್ತು ಆಫ್‌ಲೈನ್ ಕಿರಾಣಾ ಅಂಗಡಿ ವಹಿವಾಟು ಇತ್ಯಾದಿಗಳಿಗೆ ಪೇಟಿಎಂ ಅನ್ನು ಬಳಸಬೇಕು. ಇದಾದ ನಂತರ, ಕ್ಯಾಶ್‌ಬ್ಯಾಕ್ ಅನ್ನು ಕಂಪನಿಯು ಒದಗಿಸುತ್ತದೆ. ದೀಪಾವಳಿಯ ಸಮಯದಲ್ಲಿ ಪೇಟಿಎಂನಿಂದ ಬಿಲ್ ಪಾವತಿ ಅಥವಾ ನಗದು ವರ್ಗಾವಣೆಯನ್ನು ಮಾಡಿದರೆ ಕ್ಯಾಶ್‌ಬ್ಯಾಕ್ ಪಡೆಯಬಹುದು.


 ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ