Tata Punch Launched: ಟಾಟಾ ಕಂಪನಿಯ ಅತ್ಯಂತ ಅಗ್ಗದ SUV ಬಿಡುಗಡೆ, ಬೆಲೆ ಕೇಳಿ ನೀವೂ ಆಶ್ಚರ್ಯಚಕಿತರಾಗುವಿರಿ

Tata Punch Launched: ಟಾಟಾ ಮೋಟಾರ್ಸ್ (Tata Motors) ತನ್ನ ಕಾಂಪ್ಯಾಕ್ಟ್ SUV Tata Punch ಬಿಡುಗಡೆ ಮಾಡಿದೆ. ಕಂಪನಿಯು ಈ ಕಾರಿನ ಆರಂಭಿಕ ಬೆಲೆಯನ್ನು ರೂ 5.49 ಲಕ್ಷ ನಿಗದಿಪಡಿಸಿದೆ. ಆ ಕಾರಿನ ಟಾಪ್ ವೆರಿಯಂಟ್ ಬೆಲೆ 9.09 ಲಕ್ಷ ರೂ. ನಿಗದಿಪಡಿಸಲಾಗಿದೆ. 

Written by - Nitin Tabib | Last Updated : Oct 18, 2021, 03:46 PM IST
  • ಟಾಟಾ ಮೋಟಾರ್ಸ್ ತನ್ನ ಕಾಂಪ್ಯಾಕ್ಟ್ SUV Tata Punch ಬಿಡುಗಡೆ ಮಾಡಿದೆ.
  • ಕಂಪನಿಯು ಈ ಕಾರಿನ ಆರಂಭಿಕ ಬೆಲೆಯನ್ನು ರೂ 5.49 ಲಕ್ಷ ನಿಗದಿಪಡಿಸಿದೆ.
  • ಆ ಕಾರಿನ ಟಾಪ್ ವೆರಿಯಂಟ್ ಬೆಲೆ 9.09 ಲಕ್ಷ ರೂ. ನಿಗದಿಪಡಿಸಲಾಗಿದೆ.
Tata Punch Launched: ಟಾಟಾ ಕಂಪನಿಯ ಅತ್ಯಂತ ಅಗ್ಗದ SUV ಬಿಡುಗಡೆ, ಬೆಲೆ ಕೇಳಿ ನೀವೂ ಆಶ್ಚರ್ಯಚಕಿತರಾಗುವಿರಿ

Tata Punch Launched: ಟಾಟಾ ಮೋಟಾರ್ಸ್ (Tata Motors) ತನ್ನ ಕಾಂಪ್ಯಾಕ್ಟ್ SUV Tata Punch ಬಿಡುಗಡೆ ಮಾಡಿದೆ. ಕಂಪನಿಯು ಈ ಕಾರಿನ ಆರಂಭಿಕ ಬೆಲೆಯನ್ನು ರೂ 5.49 ಲಕ್ಷ ನಿಗದಿಪಡಿಸಿದೆ. ಆ ಕಾರಿನ ಟಾಪ್ ವೆರಿಯಂಟ್ ಬೆಲೆ 9.09 ಲಕ್ಷ ರೂ. ನಿಗದಿಪಡಿಸಲಾಗಿದೆ.  ಈ ರೀತಿಯಲ್ಲಿ ಟಾಟಾ ಪಂಚ್ ಎಸ್‌ಯುವಿಯನ್ನು ಕಂಪನಿಯ Tiago ಹಾಗೂ  Nexon ನಡುವೆ ಬಿಡುಗಡೆ ಮಾಡಿದೆ. ಗ್ರಾಹಕರು ಈ ಎಸ್‌ಯುವಿಯನ್ನು ರೂ 21 ಸಾವಿರಕ್ಕೆ ಬುಕ್ ಮಾಡಬಹುದು. ಇಂದಿನಿಂದಲೇ ಕಾರಿನ ವಿತರಣೆಯೂ ಆರಂಭವಾಗಿದೆ.

ವಿವಿಧ ರೂಪಾಂತರಿಗಳು ಹಾಗೂ ಅವುಗಳ ಬೆಲೆಗಳು (Tata Punch Price)
ಕಾರನ್ನು ಒಟ್ಟು 4 ಟ್ರಿಮ್‌ಗಳಲ್ಲಿ (Parsona) ಮಾರುಕಟ್ಟೆಗೆ ಪರಿಚಯಿಸಲಾಗಿದೆ. Pure, Adventure, Accomplished ಹಾಗೂ Creative ರೂಪಾಂತರಿಗಳನ್ನು ನೀವು ಇರರಲ್ಲಿ ಕಾಣಬಹುದು.  ಮ್ಯಾನ್ಯುಯೆಲ್ ಟ್ರಾನ್ಸ್ಮಿಷನ್ ನೊಂದಿಗೆ PURE ರೂಪಾಂತರದ ಬೆಲೆ 5.49 ಲಕ್ಷ ರೂ. ನಿಗದಿಪಡಿಸಲಾಗಿದೆ.  MT ಗೇರ್‌ಬಾಕ್ಸ್‌ನೊಂದಿಗೆ ADVENTURE, ACCOMPLISHED ಹಾಗೂ CREATIVE ರೂಪಾಂತರಗಳ ಬೆಲೆ ಕ್ರಮವಾಗಿ ರೂ. 6.39 ಲಕ್ಷ, ರೂ. 7.29 ಲಕ್ಷ ಮತ್ತು ರೂ. 8.49 ಲಕ್ಷ ಇರಿಸಲಾಗಿದೆ.  AMT ರೂಪಾಂತರಕ್ಕಾಗಿ ನೀವು ಹೆಚ್ಚುವರಿಯಾಗಿ ರೂ.60,000  ಪಾವತಿಸಬೇಕಾಗುತ್ತದೆ. ವಿಶೇಷವೆಂದರೆ ಈ ಬೆಲೆಗಳು ಪರಿಚಯಾತ್ಮಕವಾಗಿದ್ದು, ಇವು 31 ಡಿಸೆಂಬರ್ 2021 ರವರೆಗೆ ಮಾನ್ಯ ಇರಲಿವೆ.

5 ಸ್ಟಾರ್ ಸೇಫ್ಟಿ ರೇಟಿಂಗ್
ಇದು ದೇಶದ ಅತ್ಯಂತ ಸುರಕ್ಷಿತ ಕಾರು ಆಗಿದೆ ಎಂದರೆ ತಪ್ಪಾಗಲಾರದು. ಇದು ಜಾಗತಿಕ NCAP ಕ್ರ್ಯಾಶ್ ಪರೀಕ್ಷೆಯಲ್ಲಿ 5 ಸ್ಟಾರ್ ರೇಟಿಂಗ್ ಪಡೆದಿದೆ. ಅಷ್ಟೇ ಅಲ್ಲ ಇದು ಭಾರತದ ಎಲ್ಲಾ ಇತರ ವಾಹನಗಳನ್ನು ಪಾಯಿಂಟ್ ಗಳ ಆದಾರದ ಮೇಲೆ ಹಿಂದಕ್ಕೆ ತಳ್ಳಿದೆ. ವಯಸ್ಕರ ಸುರಕ್ಷತಾ ರೇಟಿಂಗ್‌ನಲ್ಲಿ ಇದು 17 ರಲ್ಲಿ 16.45 ಅಂಕಗಳನ್ನು ಗಳಿಸಿದೆ. ಅಂತೆಯೇ, ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ, ಈ SUV 49 ರಲ್ಲಿ 40.89 ಅಂಕಗಳನ್ನು ಗಳಿಸಿದೆ. ಸುರಕ್ಷತೆಗಾಗಿ, ಡ್ಯುಯಲ್ ಏರ್‌ಬ್ಯಾಗ್‌ಗಳು, ABS ಜೊತೆಗೆ EBD, ಕಾರ್ನರಿಂಗ್ ಫಂಕ್ಷನಿಂಗ್ ಜೊತೆಗೆ ಫ್ರಂಟ್ ಫಾಗ್ ಲ್ಯಾಂಪ್‌ಗಳು , ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ರಿಯರ್ ಡಿಫೋಗರ್ ಮತ್ತು ಪಂಕ್ಚರ್ ರಿಪೇರಿ ಕಿಟ್‌ನಂತಹ ವೈಶಿಷ್ಟ್ಯಗಳನ್ನು ಇದರಲ್ಲಿ ಒದಗಿಸಲಾಗಿದೆ.

ಇದನ್ನೂ ಓದಿ-HOME LOAN LATEST - ಕನಸಿನ ಮನೆ ಖರೀದಿ, ವಾಹನ ಖರೀದಿಗೆ ಬಡ್ಡಿ ದರಗಳನ್ನು ಇಳಿಕೆ ಮಾಡಿದ ಈ ಸರ್ಕಾರಿ ಬ್ಯಾಂಕ್

ಇಂಜಿನ್ ಹಾಗೂ ಪರ್ಫಾರ್ಮೆನ್ಸ್ (Tata Punch Specifications)
ಟಾಟಾದ ಹೊಸ ಎಸ್‌ಯುವಿಯಲ್ಲಿ 1.2-ಲೀಟರ್ 3-ಸಿಲಿಂಡರ್ ನ್ಯಾಚುರಲ್-ಎಸ್ಪಿರೇಟೆಡ್  ಪೆಟ್ರೋಲ್ ಎಂಜಿನ್ ಇದೆ. ಇದೆ ಎಂಜಿನ್ ಅನ್ನು ಅಲ್ಟ್ರೋಜ್, ಟಿಗೊರ್ ಮತ್ತು ಟಿಯಾಗೊದಲ್ಲಿ ಬಳಸಲಾಗಿದೆ. ಈ ಎಂಜಿನ್ 6,000rpm ನಲ್ಲಿ 85bhp ಪವರ್ ಮತ್ತು 3,300rpm ನಲ್ಲಿ 113Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಮತ್ತು AMT (ಆಟೋಮೇಟೆಡ್ ಮ್ಯಾನುಯಲ್ ಟ್ರಾನ್ಸ್ ಮಿಷನ್) ಗೆ ಜೋಡಿಸಲಾಗಿದೆ. ಇದು ಎರಡು ಚಾಲನಾ ವಿಧಾನಗಳನ್ನು ಹೊಂದಿದೆ - ECO ಮತ್ತು CITY. ಇದು ಕ್ರೂಸ್ ಕಂಟ್ರೋಲ್ ಮತ್ತು ಐಡಲ್ ಸ್ಟಾರ್ಟ್ ಸ್ಟಾಪ್ ವ್ಯವಸ್ಥೆಯ ವೈಶಿಷ್ಟ್ಯಗಳನ್ನು ಒಳಗೊಂಡಿದೆ. 

ಇದನ್ನೂ ಓದಿ-Petrol-Diesel Prices Today : ವಾಹನ ಸವಾರರಿಗೆ ಬಿಗ್ ಶಾಕ್ : ಸತತ 4ನೇ ದಿನವು ಏರಿಕೆ ಕಂಡ ಪೆಟ್ರೋಲ್-ಡೀಸೆಲ್ ಬೆಲೆ!

ಟಾಟಾ ಪಂಚ್‌ನಲ್ಲಿ ಸಾಕಷ್ಟು ವೈಶಿಷ್ಟ್ಯಗಳನ್ನು ನೀಡಲಾಗಿದೆ. ಸಂಪೂರ್ಣ ಸ್ವಯಂಚಾಲಿತ ತಾಪಮಾನ ನಿಯಂತ್ರಣ, ಹೊಂದಾಣಿಕೆ ಮಾಡಬಹುದಾದ ಚಾಲಕ ಆಸನ, ಆಟೋ ಫೋಲ್ಡ್ ORVM, ಸ್ಟೀರಿಂಗ್ ಮೌಂಟೆಡ್ ನಿಯಂತ್ರಣಗಳು, ಟಿಲ್ಟ್ ಸ್ಟೀರಿಂಗ್ ಮತ್ತು ವೇಗದ USB ಚಾರ್ಜರ್ ನಂತಹ ವೈಶಿಷ್ಟ್ಯಗಳು ಟಾಟಾ ಪಂಚ್ ಅನ್ನು ಮೈಕ್ರೊ SUV ವಿಭಾಗದಲ್ಲಿ ಆಕರ್ಷಕ ಪ್ರತಿಸ್ಪರ್ಧಿಯನ್ನಾಗಿ ಮಾಡುತ್ತದೆ. ಇತರ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು ಡ್ರೈವರ್ ವಿಂಡೋ, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಜೊತೆ 7 ಇಂಚಿನ ಹರ್ಮನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7 ಇಂಚಿನ ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಐಆರ್ಎ ಸಂಪರ್ಕಿತ ಕಾರ್ ತಂತ್ರಜ್ಞಾನವನ್ನು ಹೊಂದಿದೆ. ಹೊಸ ಟಾಟಾ ಪಂಚ್ ಮಾರುತಿ ಸುಜುಕಿ ಇಗ್ನಿಸ್, ನಿಸ್ಸಾನ್ ಮ್ಯಾಗ್ನೈಟ್, ರೆನಾಲ್ಟ್ ಕಿಗರ್ ಮತ್ತು ಸ್ವಿಫ್ಟ್ ಮತ್ತು ಗ್ರ್ಯಾಂಡ್ ಐ 10 ನಿಯೋಸ್ ನೊಂದಿಗೆ ಸ್ಪರ್ಧಿಸಲಿದೆ.

ಇದನ್ನೂ ಓದಿ-7th Pay Commission: ಸರ್ಕಾರಿ ನೌಕರರಿಗೆ ಈ ತಿಂಗಳು ಸಿಗಲಿದೆಯಾ Triple Bonanza? ಇಲ್ಲಿದೆ Big Update!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

More Stories

Trending News