ನವದೆಹಲಿ: ದಿನೇ ದಿನೇ ಏರಿಕೆ ಕಾಣುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಿಂದ ಜನಸಾಮಾನ್ಯರು ಹೈರಾಣಾಗಿದ್ದಾರೆ. ಅಗತ್ಯವಸ್ತುಗಳ ಬೆಲೆ ಏರಿಕೆ ಜೊತೆಗೆ ಇಂಧನ ದರದ ಏರಿಕೆಯು ಗ್ರಾಹಕರ ಮೇಲೆ ಬರೆ ಎಳೆದಂತಾಗಿದೆ. ಕೊನೆಯದಾಗಿ ಸೆಪ್ಟೆಂಬರ್ 5 ರಂದು ಇಂಧನ ದರದಲ್ಲಿ ಏರಿಳಿಕೆ ಆಗಿತ್ತು. ಅಂದಿನಿಂದ ಇಂದಿನವರೆಗೂ ದರಗಳು ಸ್ಥಿರವಾಗಿವೆ ಉಳಿದಿವೆ. ಸೆ.5 ರಂದು ಪ್ರತಿ ಲೀಟರ್‌ಗೆ 15 ಪೈಸೆ ಇಳಿಕೆ ಮಾಡಲಾಗಿತ್ತು. ಇದರ ಹೊರತಾಗಿಯೂ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದೇಶಾದ್ಯಂತ ದಾಖಲೆ ಮಟ್ಟದಲ್ಲಿವೆ. ದೇಶದ 4 ಮಹಾನಗರಗಳನ್ನು ಹೋಲಿಸಿದರೆ ಮುಂಬೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅತ್ಯಂತ ದುಬಾರಿಯಾಗಿದೆ.


COMMERCIAL BREAK
SCROLL TO CONTINUE READING

IOCL ಪ್ರಕಾರ, ದೇಶದ ದೆಹಲಿಯಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ(Petrol Price) 101.19 ರೂ. ಮತ್ತು ಡೀಸೆಲ್ ಬೆಲೆ 88.62 ರೂ. ಇದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 104.70 ರೂ. ಮತ್ತೆ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 94.04 ರೂ. ಇದೆ.


ಇದನ್ನೂ ಓದಿ: NPS Rule Change: NPS ನಿಯಮಗಳಲ್ಲಿ ಭಾರಿ ಬದಲಾವಣೆ


ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು IOCL ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಬಿಡುಗಡೆ ಮಾಡುತ್ತದೆ. ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ(Petrol and Diesel Price)ಯನ್ನು ನೀವು ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅಥವಾ SMS ಮೂಲಕ ತಿಳಿದುಕೊಳ್ಳಬಹುದು.


ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ :


ನಗರ

ಪೆಟ್ರೋಲ್

ಡೀಸೆಲ್

ದೆಹಲಿ

101.19 ರೂ.

88.62 ರೂ.

ಮುಂಬೈ

107.26 ರೂ.

96.19 ರೂ.

ಚೆನ್ನೈ

98.96 ರೂ.

93.26 ರೂ.

ಬೆಂಗಳೂರು

104.70 ರೂ.

94.04 ರೂ.

ಕೋಲ್ಕತ್ತಾ

101.72 ರೂ.

91.84 ರೂ.

ನೋಯ್ಡಾ

98.52 ರೂ.

89.21ರೂ.

ಜೈಪುರ

108.17 ರೂ.

97.76 ರೂ.

ಭೋಪಾಲ್

109.63 ರೂ.

97.43 ರೂ.


ಇದನ್ನೂ ಓದಿ: Online Passport Apply : ಈಗ ಮನೆಯಿಂದಲೇ Passport ಗೆ ಅರ್ಜಿ ಸಲ್ಲಿಸಬಹುದು - ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ!


ನಿಮ್ಮ ನಗರದ ದರಗಳನ್ನು ಈ ರೀತಿ ಪರಿಶೀಲಿಸಿ


ದೇಶದ 3 ತೈಲ ಮಾರುಕಟ್ಟೆ ಕಂಪನಿಗಳಾದ ಎಚ್‌ಪಿಸಿಎಲ್, ಬಿಪಿಸಿಎಲ್(BPSL) ಮತ್ತು ಐಒಸಿ ಬೆಳಿಗ್ಗೆ 6 ಗಂಟೆಯ ನಂತರ ಹೊಸ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಬಿಡುಗಡೆ ಮಾಡುತ್ತವೆ. ಹೊಸ ದರಗಳಿಗಾಗಿ, ನೀವು ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಮಾಹಿತಿಯನ್ನು ಪಡೆಯಬಹುದು. ಅದೇ ಸಮಯದಲ್ಲಿ, ನೀವು ಮೊಬೈಲ್ ಫೋನ್‌ಗಳಲ್ಲಿ SMS ಮೂಲಕ ದರವನ್ನು ಪರಿಶೀಲಿಸಬಹುದು. 92249 92249 ಗೆ SMS ಕಳುಹಿಸುವ ಮೂಲಕ ನೀವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ಬಗ್ಗೆಯೂ ತಿಳಿದುಕೊಳ್ಳಬಹುದು. ನೀವು ಆರ್‌ಎಸ್‌ಪಿ <ಸ್ಪೇಸ್> ಪೆಟ್ರೋಲ್ ಪಂಪ್ ಡೀಲರ್ ಕೋಡ್ ಅನ್ನು 92249 92249 ಗೆ ಕಳುಹಿಸಬೇಕು. ನೀವು ದೆಹಲಿಯಲ್ಲಿದ್ದರೆ ಮತ್ತು ಸಂದೇಶದ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ತಿಳಿಯಲು ಬಯಸಿದರೆ, ನೀವು RSP 102072 ಗೆ 92249 92249 ಗೆ ಕಳುಹಿಸಬೇಕು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.