UAN ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವ ದಿನಾಂಕ ಡಿಸೆಂಬರ್ 31 ರವರೆಗೆ ವಿಸ್ತರಣೆ , ನಿಯಮ ಮತ್ತು ಷರತ್ತುಗಳೇನು ತಿಳಿಯಿರಿ

ಉದ್ಯೋಗಿಯ ಭವಿಷ್ಯ ನಿಧಿಯ  ಹಣವನ್ನು ಕಡಿತಗೊಳಿಸಿದರೆ,  12-ಅಂಕಿಯ ಯುನಿವರ್ಸಲ್ ಅಕೌಂಟ್ ನಂಬರ್ ಅನ್ನು  ಉದ್ಯೋಗದಾತರು ನೀಡುತ್ತಾರೆ. ಇದರಲ್ಲಿ, ಖಾತೆದಾರರ ಪಿಎಫ್ ಖಾತೆಯ ವಿವರಗಳು ಒಂದೇ ಸ್ಥಳದಲ್ಲಿ ಇರುತ್ತದೆ.   

Written by - Ranjitha R K | Last Updated : Sep 12, 2021, 10:19 AM IST
  • ಇಪಿಎಫ್‌ಒ ಚಂದಾದಾರರಿಗೆ ಅಗತ್ಯ ಮಾಹಿತಿ ಇದು
  • ಆಧಾರ್ ಜೊತೆ ಯುಎಎನ್ ಲಿಂಕ್ ಮಾಡುವ ಗಡುವು ವಿಸ್ತರಣೆ
  • ಡಿಸೆಂಬರ್ 31 ರವರೆಗೆ UAN ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಬಹುದು
UAN ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವ ದಿನಾಂಕ ಡಿಸೆಂಬರ್ 31 ರವರೆಗೆ ವಿಸ್ತರಣೆ , ನಿಯಮ ಮತ್ತು ಷರತ್ತುಗಳೇನು  ತಿಳಿಯಿರಿ title=
ಆಧಾರ್ ಜೊತೆ ಯುಎಎನ್ ಲಿಂಕ್ ಮಾಡುವ ಗಡುವು ವಿಸ್ತರಣೆ (file photo)

ನವದೆಹಲಿ : EPFO UAN Bank Account Details Update: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ  ಇಪಿಎಫ್ಒ   (EPFO) ಇಪಿಎಫ್ ಖಾತೆದಾರರಿಗೆ  ಪ್ರಮುಖ ಮಾಹಿತಿ ನೀಡಿದೆ.  EPFO ​​ಈಶಾನ್ಯ ಸಂಸ್ಥೆಗಳು ಮತ್ತು ಕೆಲವು ವರ್ಗದ ಸಂಸ್ಥೆಗಳಿಗಾಗಿ ಆಧಾರ್ ಜೊತೆ UAN ಅನ್ನು ಲಿಂಕ್ ಮಾಡುವ ಗಡುವನ್ನು 31 ಡಿಸೆಂಬರ್ 2021 ರವರೆಗೆ ವಿಸ್ತರಿಸಿದೆ. ಇಪಿಎಫ್‌ಒ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಟ್ವೀಟ್ ಮಾಡುವ ಮೂಲಕ ಈ ಮಾಹಿತಿಯನ್ನು ನೀಡಿದೆ. 

ಉದ್ಯೋಗಿಯ ಭವಿಷ್ಯ ನಿಧಿಯ  (Provident Fund) ಹಣವನ್ನು ಕಡಿತಗೊಳಿಸಿದರೆ,  12-ಅಂಕಿಯ ಯುನಿವರ್ಸಲ್ ಅಕೌಂಟ್ ನಂಬರ್ (Universal Account Number) ಅನ್ನು  ಉದ್ಯೋಗದಾತರು ನೀಡುತ್ತಾರೆ. ಇದರಲ್ಲಿ, ಖಾತೆದಾರರ ಪಿಎಫ್ ಖಾತೆಯ ವಿವರಗಳು ಒಂದೇ ಸ್ಥಳದಲ್ಲಿ ಇರುತ್ತದೆ. ಯುಎಎನ್ ಅನ್ನು ಇಪಿಎಫ್ ಖಾತೆಗೆ ಲಿಂಕ್ ಮಾಡಬೇಕಾಗುತ್ತದೆ. ಮತ್ತು ಇದು ಉದ್ಯೋಗಿಯ ಬ್ಯಾಂಕ್ ವಿವರಗಳನ್ನು ಸಹ ಒಳಗೊಂಡಿರುತ್ತದೆ. ಯುನಿವರ್ಸಲ್ ಅಕೌಂಟ್ ನಂಬರ್ (UAN)  ಅನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡುವ ಗಡುವು 1 ನೇ ಸೆಪ್ಟೆಂಬರ್ 2021 ಆಗಿತ್ತು . ಆದರೆ ಈಗ ಅದರ ಮಿತಿಯನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಲಾಗಿದೆ. 

ಇದನ್ನೂ ಓದಿ : ನೀವು ಬಳಸುವ ಅಡುಗೆ ಎಣ್ಣೆ ಶುದ್ದ ತೈಲವೋ ಕಲಬೆರಕೆಯೋ ಮನೆಯಲ್ಲಿಯೇ ಸುಲಭವಾಗಿ ಪರೀಕ್ಷಿಸಿಕೊಳ್ಳಿ

 ಇಪಿಎಫ್ ಮತ್ತು ಆಧಾರ್ ಲಿಂಕ್ ಈ ರೀತಿ ಮಾಡಿ :
 UAN ಜೊತೆ ಆಧಾರ್ ಅನ್ನು ನಾಲ್ಕು ರೀತಿಯಲ್ಲಿ ಲಿಂಕ್ ಮಾಡಬಹುದು. ಮೊದಲು ಮೆಂಬರ್  ಸೇವಾ ಪೋರ್ಟಲ್ ಮೂಲಕ, ಎರಡನೆಯದು UMANG ಆಪ್ ಮೂಲಕ, ಮೂರನೆಯದು ETP ಯ ಇ-ಕೆವೈಸಿ ಪೋರ್ಟಲ್ ನಲ್ಲಿ ಒಟಿಪಿ ಪರಿಶೀಲನೆ ಮೂಲಕ ಮತ್ತು ನಾಲ್ಕನೆಯದ್ದು, ಇಪಿಎಫ್ಒನ ಇ-ಕೆವೈಸಿ ಪೋರ್ಟಲ್ ನಲ್ಲಿ ಬಯೋಮೆಟ್ರಿಕ್ ಕ್ರೆಡೆನ್ಶಿಯಲ್   ಮೂಲಕ. 

ಹಂತ ಹಂತದ ಪ್ರಕ್ರಿಯೆ  :
1. ಇದಕ್ಕಾಗಿ, EPFO ​​ಸದಸ್ಯ e-SEWA ಪೋರ್ಟಲ್‌ https://unifiedportal-mem.epfindia.gov.in/ಗೆ ಹೋಗಿ
2. UAN ಸಂಖ್ಯೆ ಮತ್ತು ಪಾಸ್‌ವರ್ಡ್ ನಮೂದಿಸುವ ಮೂಲಕ ಲಾಗಿನ್ ಮಾಡಿ. 
3. ಇದರ ನಂತರ, ಮ್ಯಾನೇಜ್ ಟ್ಯಾಬ್‌ಗೆ ಹೋಗಿ, KYC ಮೇಲೆ ಕ್ಲಿಕ್ ಮಾಡಿ.  
4. ಇಲ್ಲಿ ಹೊಸ ಪುಟ ತೆರೆಯುತ್ತದೆ. KYC ಸೇರಿಸಿ, ನಿಮ್ಮ ಆಧಾರ್ ಸಂಖ್ಯೆ ಮತ್ತು PAN ಸಂಖ್ಯೆ  ನಮೂದಿಸಿ. 
5. Pending KYC ಟ್ಯಾಬ್‌ನಲ್ಲಿ ಎಲ್ಲಾ ವಿವರಗಳು ಕಾಣಿಸುತ್ತವೆ.  
6. ಇಲ್ಲಿಂದ EPFO ​​ಲಿಂಕ್ ಅನ್ನು ಅನುಮೋದಿಸುತ್ತದೆ.  ನಂತರ ನಿಮ್ಮ ಆಧಾರ್ ಮಾಹಿತಿ Approved  KYC ಟ್ಯಾಬ್‌ನಲ್ಲಿ ಬರುತ್ತದೆ 
ಈ ರೀತಿ ಆಧಾರ್ ಅನ್ನು EPF ಗೆ ಲಿಂಕ್ ಮಾಡಲಾಗುತ್ತದೆ. 

ಇದನ್ನೂ ಓದಿ : LIC Scheme:LICಯ ಈ ಸೂಪರ್ ಹಿಟ್ ಯೋಜನೆಯಲ್ಲಿ ಸಿಗುತ್ತಿದೆ 1ಕೋಟಿ ರೂ.ಗಳ ಲಾಭ, ಇಲ್ಲಿದೆ ಡಿಟೇಲ್ಸ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News