ನವದೆಹಲಿ: SBI PensionSeva Website News - ಎಸ್‌ಬಿಐ ತನ್ನ ಹಿರಿಯ ನಾಗರಿಕ ಗ್ರಾಹಕರಿಗೆ ವಿಶೇಷ ಕೊಡುಗೆಯೊಂದನ್ನು ನೀಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ವಿಶೇಷವಾಗಿ ಪಿಂಚಣಿದಾರರಿಗೆ https://www.ptensionseva.sbi/ ಅಪ್‌ಗ್ರೇಡ್ ವೆಬ್‌ಸೈಟ್ ಸೇವೆಯನ್ನು ಆರಂಭಿಸಿದೆ. ಇದರ ಅಡಿಯಲ್ಲಿ, ಬ್ಯಾಂಕ್ ಪಿಂಚಣಿಗೆ ಸಂಬಂಧಿಸಿದ ಕೆಲಸವನ್ನು ಹೆಚ್ಚು ಸುಲಭಗೊಳಿಸಾಲಿದೆ. ಇದರಲ್ಲಿ, ಗ್ರಾಹಕರು ಪಿಂಚಣಿಗೆ ಸಂಬಂಧಿಸಿದ ಎಲ್ಲಾ ರೀತಿಯ ಸೇವೆಗಳನ್ನು ಪಡೆಯಬಹುದು. ಈ ವೆಬ್‌ಸೈಟ್‌ನಲ್ಲಿ ನೀವೇ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಬಳಿಕ ನೀವು ನಿಮ್ಮ ಖಾತೆಗೆ ಲಾಗ್ ಇನ್ ಆಗಬೇಕು ಮತ್ತು ಅದರ ನಂತರ ನೀವು ವೆಬ್‌ಸೈಟ್ ಅನ್ನು ಬಳಸಬಹುದು. State Bank Of India ಆರಂಭಿಸಿರುವ ಈ ಸೇವೆಯ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ ಬನ್ನಿ.
Good news for all Pensioners!
We have revamped our PensionSeva website for you to manage all your pension related services with ease.Click here: https://t.co/pM0XAgtzuc#PensionSeva #Pension #SBI pic.twitter.com/xioULTSMKC
— State Bank of India (@TheOfficialSBI) September 11, 2021
ಸಿಗಲಿವೆ ಈ ಮಹತ್ವದ ಸೌಕರ್ಯಗಳು (SBI PensionSeva Website)
1. ಎಸ್ಬಿಐ ಮಾಗಿರುವ ಟ್ವೀಟ್ ಪ್ರಕಾರ, ನೀವು ವೆಬ್ಸೈಟ್ನಲ್ಲಿ ಅರಿಯರ್ ಕ್ಯಾಲ್ಕ್ಯುಲೆಶನ್ ಶೀಟ್ ಡೌನ್ಲೋಡ್ ಮಾಡಬಹುದು.
2. ಇದರ ಹೊರತಾಗಿ, ನೀವು ಅದರಲ್ಲಿ ಪಿಂಚಣಿ ಸ್ಲಿಪ್ ಅಥವಾ ನಮೂನೆ -16 ಅನ್ನು ಡೌನ್‌ಲೋಡ್ ಮಾಡಬಹುದು.
3. ಇದರಲ್ಲಿ ನಿಮ್ಮ ಪಿಂಚಣಿ ಲಾಭದ ವಿವರಗಳ ಮಾಹಿತಿಯನ್ನು ಸಹ ನೀವು ಪಡೆಯಬಹುದು.
4. ನೀವು ಎಲ್ಲೋ ಯಾವುದೇ ಹೂಡಿಕೆ ಮಾಡಿದ್ದರೆ, ನೀವು ಅದನ್ನು ಸಹ ಇದರಲ್ಲಿ ನೋಡಬಹುದು.
5. ಹಾಗೆಯೇ ನೀವು ಜೀವನ ಪ್ರಮಾಣಪತ್ರದ ಸ್ಥಿತಿಯನ್ನುಸಹ ನೀವು ಪರಿಶೀಲಿಸಬಹುದು.
6. ನೀವು ಬ್ಯಾಂಕಿನಲ್ಲಿ ಮಾಡಿದ ವಹಿವಾಟು ವಿವರಗಳನ್ನು ನೋಡಬಹುದು. ಒಟ್ಟಾರೆಯಾಗಿ, ಪಿಂಚಣಿಗೆ ಸಂಬಂಧಿಸಿದ ಕೆಲಸವು ಇದೀಗ ತುಂಬಾ ಸುಲಭವಾಗಲಿದೆ.
ಇದನ್ನೂ ಓದಿ-SBI Alert:ಈ ಕೆಲಸ ಮಾಡದೇ ಹೋದಲ್ಲಿ ನಿಂತೇ ಹೋಗಬಹುದು ಬ್ಯಾಂಕಿಂಗ್ ಸೇವೆ
ಸಿಗಲಿವೆ ಹಲವು ಎಕ್ಸ್ಟೆಂಡೆಡ್ ಲಾಭಗಳು ಸಿಗಲಿವೆ (SBI Pension Scheme)
1. ಈ ವೆಬ್‌ಸೈಟ್‌ನಲ್ಲಿ ನೋಂದಾಯಿಸಿದ ನಂತರ, ನೀವು ಅನೇಕ ಪ್ರಯೋಜನಗಳನ್ನು ಪಡೆಯಬಹುದು
2. ಪಿಂಚಣಿ ಪಾವತಿ ವಿವರಗಳ ಕುರಿತು ಮೊಬೈಲ್ ಫೋನಿನಲ್ಲಿ ನೀವು ನೋಟಿಫಿಕೆಶನ್ ಪಡೆಯಬಹುದು.
3. ಲೈಫ್ ಸರ್ಟಿಫಿಕೇಷನ್ ಸೌಲಭ್ಯವು ಶಾಖೆಯಲ್ಲಿ ಸಿಗಲಿದೆ.
4. ಪಿಂಚಣಿ ಸ್ಲಿಪ್ ಅನ್ನು ಇ-ಮೇಲ್ ಮೂಲಕ ಪಡೆಯಬಹುದು.
5. ನೀವು ಯಾವುದೇ SBI ಶಾಖೆಯಲ್ಲಿ ನಿಮ್ಮ ಜೀವನ ಪ್ರಮಾಣಪತ್ರವನ್ನು ಸಲ್ಲಿಸಲು ಇದರಿಂದ ಸಾಧ್ಯವಾಗಲಿದೆ.
ಈ ಸಂಖ್ಯೆಗಳನ್ನು ನಿಮ್ಮ ಮೊಬೈಲ್ ನಲ್ಲಿ ಸಂಗ್ರಹಿಸಿ (Pension Seva SBI For Pensioners)
ಒಂದು ವೇಳೆ ವೆಬ್ ಸೈಟ್ ಬಳಕೆ ಮಾಡುವಾಗ ನೀವು ಯಾವುದೇ ರೀತಿಯ ತಾತ್ನ್ರಿಕ ಅಡಚಣೆ ಎದುರಿಸಿದರೆ, ನೀವು ಬ್ಯಾಂಕ್ ಅನ್ನು ಸಂಪರ್ಕಿಸಬಹುದು. ಲಾಗಿನ್ ಆಗುವಲ್ಲಿ ನೀವು ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ನೀವು 'ಎರರ್ ಸ್ಕ್ರೀನ್ ಶಾಟ್' ನೊಂದಿಗೆ support.ptensionseva@sbi.co.in ಗೆ ಇಮೇಲ್ ಕಳುಹಿಸಬಹುದು. ಇದರೊಂದಿಗೆ, ನೀವು 8008202020 ಸಂಖ್ಯೆಗೆ UNHAPPY ಎಂದು SMS ಮಾಡಿಯೂ ಕೂಡ ದೂರು ನೀಡಬಹುದು. ಇದಲ್ಲದೇ, ನೀವು ಗ್ರಾಹಕ ಸೇವಾ ಸಂಖ್ಯೆಸಂಖ್ಯೆಗಳಾಗಿರುವ - 18004253800/1800112211 ಅಥವಾ 08026599990 ಅನ್ನು ಸಹ ಸಂಪರ್ಕಿಸಿ ದೂರು ನೀಡಬಹುದು.
ಇದನ್ನೂ ಓದಿ-SBI ATM Franchise: ಈ ದಾಖಲೆಗಳನ್ನು ಸಲ್ಲಿಸಿ, ಪ್ರತಿ ತಿಂಗಳು 60 ಸಾವಿರ ರೂ.ವರೆಗೆ ಸಂಪಾದಿಸಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.