ನವದೆಹಲಿ: ಜುಲೈ ತಿಂಗಳ ಕುಸಿತದ ನಂತರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಮತ್ತೆ ವೇಗವನ್ನು ಪಡೆದುಕೊಂಡಿದೆ. ಕಳೆದ ದಿನಗಳಲ್ಲಿ 90 ಡಾಲರ್‌ಗಿಂತ ಕೆಳಗಿಳಿದಿದ್ದ ಕಚ್ಚಾ ತೈಲ ಮತ್ತೆ 100 ಡಾಲರ್‌ಗಿಂತ ಹೆಚ್ಚಾಗಿದೆ. ಆದರೆ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್-ಡೀಸೆಲ್ ದರಗಳು 3 ತಿಂಗಳ ಹಳೆಯ ಮಟ್ಟದಲ್ಲಿಯೇ ಉಳಿದಿವೆ. 3 ತಿಂಗಳ ಹಿಂದೆ ಮಹಾರಾಷ್ಟ್ರ ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳಲ್ಲಿ ತೈಲ ಬೆಲೆಯಲ್ಲಿ ಬದಲಾವಣೆಯಾಗಿತ್ತು. ಮೇ 22ರಂದು ಕೇಂದ್ರ ಸರ್ಕಾರವು ತೈಲ ಬೆಲೆಯ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡುವ ಮೂಲಕ ಜನರಿಗೆ ದೊಡ್ಡ ರಿಲೀಫ್ ನೀಡಿತ್ತು.


COMMERCIAL BREAK
SCROLL TO CONTINUE READING

ಜುಲೈ ಮಧ್ಯದಲ್ಲಿ ಕಚ್ಚಾ ತೈಲವು 100 ಡಾಲರ್ ಮೀರಿ ತಲುಪಿತು , ಪ್ರತಿ ಬ್ಯಾರೆಲ್‌ಗೆ 90 ಡಾಲರ್‍ಗಿಂತ ಕಡಿಮೆ ತಲುಪಿದ ಕಚ್ಚಾ ತೈಲವು ಮತ್ತೆ ಏರಿಕೆ ದಾಖಲಿಸಿತು. ಗುರುವಾರ WTI ಕಚ್ಚಾ ಬೆಲೆ ಪ್ರತಿ ಬ್ಯಾರೆಲ್‌ಗೆ 95.33 ಡಾಲರ್‍ಗೆ ತಲುಪಿದೆ. ಬ್ರೆಂಟ್ ಕಚ್ಚಾ ತೈಲ ಕೂಡ ಏರಿಕೆ ಕಂಡಿದೆ ಮತ್ತು ಪ್ರತಿ ಬ್ಯಾರೆಲ್‌ಗೆ 101.8 ಡಾಲರ್‍ಗೆ ಏರಿಕೆಯಾಗಿದೆ. ಮಹಾರಾಷ್ಟ್ರದ ಏಕನಾಥ್ ಶಿಂಧೆ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪೆಟ್ರೋಲ್ ಮೇಲಿನ ವ್ಯಾಟ್ ಅನ್ನು 5 ರೂ. ಮತ್ತು ಡೀಸೆಲ್ ಮೇಲೆ 3 ರೂ. ಕಡಿತಗೊಳಿಸಿ ರಾಜ್ಯದ ಜನತೆಗೆ ತುಸು ನೆಮ್ಮದಿ ನೀಡಿತ್ತು. ಹೈದರಾಬಾದ್‌ನಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 110 ರೂ. ಮತ್ತು ಡೀಸೆಲ್ ಲೀಟರ್‌ಗೆ 97.82 ರೂ.ನಂತೆ ಮಾರಾಟವಾಗುತ್ತಿದೆ.


ಇದನ್ನೂ ಓದಿ: Fuel Tax Update: ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆಯ ಮಧ್ಯೆ ಮಹತ್ವದ ಮತ್ತು ಭಾರಿ ನೆಮ್ಮದಿ ನೀಡುವ ಘೋಷಣೆ ಮೊಳಗಿಸಿದ ವಿತ್ತ ಸಚಿವೆ


ಮೇ 22ರಂದು ಪ್ರಧಾನಿ ಮೋದಿ ಸರ್ಕಾರ ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು. ಇದರಿಂದ ಸಾರ್ವಜನಿಕರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಪೆಟ್ರೋಲ್ 8 ರೂ. ಮತ್ತು ಡೀಸೆಲ್ 6 ರೂ. ಕಡಿಮೆಯಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಕರ್ನಾಟಕ ಸೇರಿದಂತೆ ಕೆಲ ರಾಜ್ಯ ಸರ್ಕಾರಗಳು ವ್ಯಾಟ್ ಕಡಿತಗೊಳಿಸಿದ್ದವು.  


ನಿಮ್ಮ ನಗರದಲ್ಲಿ ಇಂದಿನ ತೈಲ ಬೆಲೆ  


- ಹೈದರಾಬಾದ್‌ನಲ್ಲಿ ಪೆಟ್ರೋಲ್ 109.66 ರೂ. ಮತ್ತು ಡೀಸೆಲ್ ಲೀಟರ್‌ಗೆ 97.82 ರೂ.


- ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ 96.72 ರೂ. ಮತ್ತು ಡೀಸೆಲ್ 89.62 ರೂ.


 - ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 111.35 ರೂ. ಮತ್ತು ಡೀಸೆಲ್ 97.28 ರೂ.


- ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 102.63 ರೂ. ಮತ್ತು ಡೀಸೆಲ್ 94.24 ರೂ. ಇದೆ.


- ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 106.03 ರೂ. ಮತ್ತು ಡೀಸೆಲ್ 92.76 ರೂ. ಇದೆ.


- ಲಕ್ನೋದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 96.57 ರೂ. ಮತ್ತು ಡೀಸೆಲ್ 89.76 ರೂ. ಇದೆ


- ಪಾಟ್ನಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 107.24 ರೂ. ಇದ್ದರೆ, ಡೀಸೆಲ್ 87.89 ರೂ. ಇದೆ.


- ನೋಯ್ಡಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 96.57 ರೂ. ಇದ್ದರೆ, ಡೀಸೆಲ್ 89.96 ರೂ. ಇದೆ.


-ಗುರುಗ್ರಾಮದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 97.18 ರೂ. ಇದ್ದರೆ, ಡೀಸೆಲ್ 90.05 ರೂ. ಇದೆ.


- ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 101.94 ರೂ. ಇದ್ದರೆ, ಡೀಸೆಲ್ 87.89 ರೂ. ಇದೆ.


 ಈ ರೀತಿ ನಿಮ್ಮ ನಗರದ ದರ ಪರಿಶೀಲಿಸಿ


ತೈಲ ಕಂಪನಿಗಳು SMS ಮೂಲಕ ದರಗಳನ್ನು ಪರಿಶೀಲಿಸುವ ಸೌಲಭ್ಯವನ್ನು ನೀಡುತ್ತವೆ. ನೀವು ಸಹ ನಿಮ್ಮ ನಗರದ ದರ ಪರಿಶೀಲಿಸಲು ಇಂಡಿಯನ್ ಆಯಿಲ್ (IOC) ಗ್ರಾಹಕರು RSP<ಡೀಲರ್ ಕೋಡ್> ಅನ್ನು ಬರೆದು 9224992249ಗೆ SMS ಕಳುಹಿಸಬೇಕು. HPCL ಗ್ರಾಹಕರು HPPRICE <ಡೀಲರ್ ಕೋಡ್> ಅನ್ನು 9222201122ಗೆ ಮತ್ತು BPCL ಗ್ರಾಹಕರು RSP<ಡೀಲರ್ ಕೋಡ್> 9223112222ಗೆ SMS ಮಾಡಬೇಕು.


ಇದನ್ನೂ ಓದಿ: ಮುಂದಿನ ತಿಂಗಳಿನಿಂದ ಎನ್‌ಪಿಎಸ್ ಖಾತೆ ತೆರೆಯಲು 10 ಸಾವಿರ ರೂಪಾಯಿ ಕಮಿಷನ್ ! ಪಿಎಫ್‌ಆರ್‌ಡಿಎ ಹೊಸ ಸೌಲಭ್ಯ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.