Fuel Tax Update: ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆಯ ಮಧ್ಯೆ ಮಹತ್ವದ ಮತ್ತು ಭಾರಿ ನೆಮ್ಮದಿ ನೀಡುವ ಘೋಷಣೆ ಮೊಳಗಿಸಿದ ವಿತ್ತ ಸಚಿವೆ

Petrol Price Today: ಇನ್ಮುಂದೆ ಪ್ರತಿ 15 ದಿನಗಳಿಗೊಮ್ಮೆ ಕಚ್ಚಾ ತೈಲ, ಡಿಸೇಲ್-ಪೆಟ್ರೋಲ್ ಹಾಗೂ ವಿಮಾನ ಇಂಧನಕ್ಕೆ ವಿಧಿಸಲಾಗಿರುವ ಹೊಸ ಹೊಸ ತೆರಿಗೆಯ ಪರಿಶೀಲನೆ ನಡೆಸಲಾಗುವುದು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಬನ್ನಿ ಈ ಕುರಿತಾದ ಹೊಸ ಅಪ್ಡೇಟ್ ತಿಳಿದುಕೊಳ್ಳೋಣ,   

Written by - Nitin Tabib | Last Updated : Aug 23, 2022, 09:20 PM IST
  • ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪೆಟ್ರೋಲ್, ಡೀಸೆಲ್ ಹಣದುಬ್ಬರದಿಂದ ಕಂಗೆಟ್ಟಿರುವ ದೇಶದ ಜನತೆಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ.
  • ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂಧನ ದರದ ಕುರಿತು ಮಹತ್ವದ ಘೋಷಣೆ ಮಾಡಿದ್ದಾರೆ.
Fuel Tax Update: ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆಯ ಮಧ್ಯೆ ಮಹತ್ವದ ಮತ್ತು ಭಾರಿ ನೆಮ್ಮದಿ ನೀಡುವ  ಘೋಷಣೆ ಮೊಳಗಿಸಿದ ವಿತ್ತ ಸಚಿವೆ title=
Petrol Price Today

FM On Fuel Tax: ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪೆಟ್ರೋಲ್, ಡೀಸೆಲ್ ಹಣದುಬ್ಬರದಿಂದ ಕಂಗೆಟ್ಟಿರುವ ದೇಶದ ಜನತೆಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂಧನ ದರದ ಕುರಿತು ಮಹತ್ವದ ಘೋಷಣೆ ಮಾಡಿದ್ದಾರೆ. ಪ್ರತಿ 15 ದಿನಗಳಿಗೊಮ್ಮೆ ಕಚ್ಚಾ ತೈಲ, ಡೀಸೆಲ್-ಪೆಟ್ರೋಲ್ ಮತ್ತು ವಿಮಾನ ಇಂಧನ (ಎಟಿಎಫ್) ಮೇಲೆ ವಿಧಿಸಲಾದ ಹೊಸ ತೆರಿಗೆಯನ್ನು ಸರ್ಕಾರ ಪರಿಶೀಲಿಸಲಿದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ. ವಾಸ್ತವವಾಗಿ, ಅಂತರರಾಷ್ಟ್ರೀಯ ಬೆಲೆಗಳನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರವು ಪ್ರತಿ ಹದಿನೈದು ದಿನಗಳಿಗೊಮ್ಮೆ ತೆರಿಗೆಗಳನ್ನು ಪರಿಶೀಲಿಸಲಿದೆ ಎಂದು ಅವರು ಹೇಳಿದ್ದಾರೆ.

ಹಣಕಾಸು ಸಚಿವರ ಮಹತ್ವದ ಘೋಷಣೆ
ಇದೊಂದು ಕಠಿಣ ಪರಿಸ್ಥಿತಿಯಾಗಿದ್ದು, ಜಾಗತಿಕವಾಗಿ ತೈಲ ಬೆಲೆಗಳು ಅನಿಯಂತ್ರಿತವಾಗಿವೆ ಎಂದು ವಿತ್ತ ಸಚಿವೆ ಸೀತಾರಾಮನ್ ಸಂವಾದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. "ನಾವು ರಫ್ತುಗಳನ್ನು ನಿರುತ್ಸಾಹಗೊಳಿಸಲು ಬಯಸುವುದಿಲ್ಲ. ಆದರೆ ದೇಶೀಯವಾಗಿ ಅದರ ಲಭ್ಯತೆಯನ್ನು ಹೆಚ್ಚಿಸಲು ಬಯಸುತ್ತೇವೆ" ಎಂದು ಅವರು ಹೇಳಿದ್ದಾರೆ. ತೈಲ ಲಭ್ಯತೆ ಇಲ್ಲದಿದ್ದಾಗ ಮತ್ತು ರಫ್ತು ಅಪ್ರತ್ಯಕ್ಷ ಲಾಭದೊಂದಿಗೆ ಮುಂದುವರಿದರೆ, ಅದರ ಸ್ವಲ್ಪ ಭಾಗ ನಮ್ಮ ನಾಗರಿಕರೂ ಕೂಡ ಭರಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-LPG Cylinder: ಕೇವಲ ರೂ.750ಕ್ಕೆ ಸಿಗಲಿದೆ ಅಡುಗೆ ಅನಿಲ ಸಿಲಿಂಡರ್! ಹೇಗೆ ಅಂತೀರಾ?

ಪೆಟ್ರೋಲ್, ಡೀಸೆಲ್ ಮತ್ತು ವಿಮಾನ ಇಂಧನದ ಮೇಲಿನ ರಫ್ತು ತೆರಿಗೆ
ಪೆಟ್ರೋಲ್, ಡೀಸೆಲ್ ಮತ್ತು ವಿಮಾನ ಇಂಧನ ರಫ್ತಿನ ಮೇಲೆ ತೆರಿಗೆ ವಿಧಿಸುವುದಾಗಿ ಸರ್ಕಾರ ಕಳೆದ ಶುಕ್ರವಾರ ಪ್ರಕಟಿಸಿದೆ. ಪೆಟ್ರೋಲ್ ಮತ್ತು ಎಟಿಎಫ್ ರಫ್ತಿಗೆ ಪ್ರತಿ ಲೀಟರ್‌ಗೆ 6 ರೂಪಾಯಿ ಮತ್ತು ಡೀಸೆಲ್ ರಫ್ತಿಗೆ ಲೀಟರ್‌ಗೆ 13 ರೂಪಾಯಿ ದರದಲ್ಲಿ ತೆರಿಗೆ ವಿಧಿಸಲಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ. ಈ ಹೊಸ ನಿಯಮ ಜುಲೈ 1 ರಿಂದ ಜಾರಿಗೆ ಬಂದಿದೆ.

ಇದನ್ನೂ ಓದಿ-Nitin Gadkari: ಹೂಡಿಕೆದಾರರಲ್ಲಿ ಭಾರಿ ಸಂತಸಕ್ಕೆ ಕಾರಣವಾದ ಕೇಂದ್ರ ಸಚಿವ ನಿತೀನ್ ಗಡ್ಕರಿ ಘೋಷಣೆ

ಸ್ಥಳೀಯವಾಗಿ ಉತ್ಪಾದಿಸುವ ತೈಲದ ಮೇಲೂ ತೆರಿಗೆ
ಇದರೊಂದಿಗೆ ಬ್ರಿಟನ್‌ ತರಹ ಸ್ಥಳೀಯವಾಗಿ ಉತ್ಪಾದನೆಯಾಗುವ ಕಚ್ಚಾ ತೈಲದ ಮೇಲೂ ತೆರಿಗೆ ವಿಧಿಸಲಾಗಿದೆ. ದೇಶೀಯವಾಗಿ ಉತ್ಪಾದನೆಯಾಗುವ ಕಚ್ಚಾ ತೈಲದ ಮೇಲೆ ಪ್ರತಿ ಟನ್‌ಗೆ 23,250 ರೂಪಾಯಿ ತೆರಿಗೆ ವಿಧಿಸಲಾಗಿದೆ. ಹೊಸ ತೆರಿಗೆಯು SEZ ಘಟಕಗಳಿಗೂ ಅನ್ವಯಿಸಲಿದೆ. ಆದರೆ, ಅವುಗಳ ರಫ್ತಿಗೆ ಯಾವುದೇ ನಿರ್ಬಂಧವಿಲ್ಲ ಎಂದು ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ಹೇಳಿದ್ದಾರೆ. ಇದರೊಂದಿಗೆ, ರೂಪಾಯಿ ಕುಸಿತದ ಕುರಿತು, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಸರ್ಕಾರವು ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ. ಆಮದಿನ ಮೇಲೆ ರೂಪಾಯಿ ಮೌಲ್ಯದ ಪ್ರಭಾವದ ಬಗ್ಗೆ ಸರ್ಕಾರಕ್ಕೆ ಸಂಪೂರ್ಣ ಮಾಹಿತಿ ಇದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News