ಮುಂದಿನ ತಿಂಗಳಿನಿಂದ ಎನ್‌ಪಿಎಸ್ ಖಾತೆ ತೆರೆಯಲು 10 ಸಾವಿರ ರೂಪಾಯಿ ಕಮಿಷನ್ ! ಪಿಎಫ್‌ಆರ್‌ಡಿಎ ಹೊಸ ಸೌಲಭ್ಯ

ಈ ಕ್ರಮದ ಉದ್ದೇಶವು NPS ಖಾತೆಗಳನ್ನು ತೆರೆಯುವ ಪಾಯಿಂಟ್ ಆಫ್ ಪ್ರೆಸೆನ್ಸ್ ಫೆಸಿಲಿಟೇಟರ್‌ಗಳು ಅನುಭವಿಸುವ ನಷ್ಟವನ್ನು ತಪ್ಪಿಸುವುದು ಮತ್ತು ಪರಿಹಾರವನ್ನು ಒದಗಿಸುವುದು.  ಈ ಕ್ರಮವು ಎನ್‌ಪಿಎಸ್ ಖಾತೆ ತೆರೆಯಲು ಶ್ರಮಿಸುತ್ತಿರುವ ಪಿಒಪಿಗಳಿಗೆ ಉತ್ತೇಜನ ನೀಡುತ್ತದೆ ಎನ್ನುವುದು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಭಿಪ್ರಾಯ. 

Written by - Ranjitha R K | Last Updated : Aug 24, 2022, 12:22 PM IST
  • ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಗೆ ಖಾತೆ ತೆರೆಯುವ ನಿಯಮಗಳಲ್ಲಿ ಪ್ರಮುಖ ಬದಲಾವಣೆ
  • ಪಿಒಪಿಗಳಿಗೆ ಕನಿಷ್ಠ 15 ರೂಪಾಯಿ ಮತ್ತು ಗರಿಷ್ಠ 10 ಸಾವಿರ ರೂ. ಕಮಿಷನ್
  • ಸೆಪ್ಟೆಂಬರ್ 1ರಿಂದ ಜಾರಿಗೆ ಬರಲಿರುವ ಈ ಯೋಜನೆ
ಮುಂದಿನ ತಿಂಗಳಿನಿಂದ  ಎನ್‌ಪಿಎಸ್ ಖಾತೆ ತೆರೆಯಲು 10 ಸಾವಿರ ರೂಪಾಯಿ ಕಮಿಷನ್ ! ಪಿಎಫ್‌ಆರ್‌ಡಿಎ ಹೊಸ ಸೌಲಭ್ಯ title=
Commission On NPS Account (file photo)

ನವದೆಹಲಿ : ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಗೆ ಖಾತೆ ತೆರೆಯುವ ನಿಯಮಗಳಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದೆ. ಈಗ ಎನ್‌ಪಿಎಸ್‌ಗಾಗಿ ಖಾತೆ ತೆರೆಯುವ ಸೌಲಭ್ಯವನ್ನು ಒದಗಿಸುವ ಪಿಒಪಿಗೆ  ಸೆಪ್ಟೆಂಬರ್‌ನಿಂದ ಕಮಿಷನ್ ಪಡೆಯುತ್ತದೆ. ಸೆಪ್ಟೆಂಬರ್ 1ರಿಂದ ಜಾರಿಗೆ ಬರಲಿರುವ ಈ ಯೋಜನೆಯಲ್ಲಿ ಪಿಒಪಿಗಳಿಗೆ ಕನಿಷ್ಠ 15 ರೂಪಾಯಿ ಮತ್ತು ಗರಿಷ್ಠ 10 ಸಾವಿರ ರೂ.  ವರೆಗೆ ಕಮಿಷನ್ ಸಿಗಲಿದೆ. ಚಂದಾದಾರರು ತಮ್ಮ ಖಾತೆಯಿಂದ ನೇರವಾಗಿ  ಆಲ್ ಸಿಟಿಜನ್ ಮಾಡೆಲ್  ಮೂಲಕ ನೇರವಾಗಿ ತಮ್ಮ ಖಾತೆಯಿಂದ ಸಂಬಂಧಪಟ್ಟ ವಿಭಾಗಕ್ಕೆ  ಹಣ ವರ್ಗಾಯಿಸುವ ಆಯ್ಕೆ ಆರಿಸಿಕೊಂಡಾಗ  ಮಾತ್ರ  ಪಿಒಪಿಗೆ ಕಮಿಷನ್ ಸಿಗುತ್ತದೆ. 

PFRDAಯ ಕ್ರಮದಿಂದ  PoPಗೆ ಸಿಗಲಿದೆ ಪ್ರೋತ್ಸಾಹ : 
ಈ ಕ್ರಮದ ಉದ್ದೇಶವು NPS ಖಾತೆಗಳನ್ನು ತೆರೆಯುವ ಪಾಯಿಂಟ್ ಆಫ್ ಪ್ರೆಸೆನ್ಸ್ ಫೆಸಿಲಿಟೇಟರ್‌ಗಳು ಅನುಭವಿಸುವ ನಷ್ಟವನ್ನು ತಪ್ಪಿಸುವುದು ಮತ್ತು ಪರಿಹಾರವನ್ನು ಒದಗಿಸುವುದು. ಈ ಕ್ರಮವು ಎನ್‌ಪಿಎಸ್ ಖಾತೆ ತೆರೆಯಲು ಶ್ರಮಿಸುತ್ತಿರುವ ಪಿಒಪಿಗಳಿಗೆ ಉತ್ತೇಜನ ನೀಡುತ್ತದೆ ಎನ್ನುವುದು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಭಿಪ್ರಾಯ. 

ಇದನ್ನೂ ಓದಿ : Gold Price Today : ಭರ್ಜರಿ ಇಳಿಕೆ ಕಂಡ ಚಿನ್ನ, ಖರೀದಿಗೆ ಶುಭ ಸಮಯ

ಹೂಡಿಕೆ ಮಾಡಿದ ಮೊತ್ತದ ಮೇಲೆ 0.20 ಪ್ರತಿಶತ ಕಮಿಷನ್ : 
PFRDA ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, NPS ವಿಸ್ತರಣೆಯ ಪ್ರಯತ್ನಗಳನ್ನು ಬೆಂಬಲಿಸಲು ಸೆಪ್ಟೆಂಬರ್ 1, 2022 ರಿಂದ ಜಾರಿಗೆ ಬರುವಂತೆ ಹೂಡಿಕೆ ಮಾಡಿದ ಮೊತ್ತದ ಮೇಲೆ 0.20% ಕಮಿಷನ್ ಪಾವತಿಸಲು ನಿರ್ಧರಿಸಲಾಗಿದೆ. ಈ ಕುರಿತ ಕಮಿಷನ್ ಅನ್ನು ಸಂಬಂಧಪಟ್ಟ ಪಿಒಪಿಗೆ ನೀಡಲಾಗುವುದು. ನೇರ ವರ್ಗಾವಣೆಯ ಮೇಲೆ ನಿಗದಿತ ಅವಧಿಗೆ POPಗೆ ಪಾವತಿಸಬೇಕಾದ ಕಮಿಷನ್ ಕೊಡುಗೆ ಮೊತ್ತದ 0.20 ಪ್ರತಿಶತವಾಗಿರುತ್ತದೆ.

ಕನಿಷ್ಠ ಕಮಿಷನ್ ಮೊತ್ತ 15 ರೂಪಾಯಿ : 
ಈ ರೀತಿ ಕನಿಷ್ಠ 15 ರೂ. ಮತ್ತು ಗರಿಷ್ಠ 10 ಸಾವಿರ ರೂ. ವರೆಗೆ ಕಮಿಷನ್ ನೀಡಲಾಗುವುದು. ಈ ಕಮಿಷನ್ ಅನ್ನು ಗ್ರಾಹಕರು ಹೂಡಿಕೆ ಮಾಡಿದ ಯೂನಿಟ್‌ಗಳ ಸಂಖ್ಯೆಯನ್ನು ಕಡಿತಗೊಳಿಸಿದ ನಂತರ ನಿಗದಿತ ಮಧ್ಯಂತರಗಳಲ್ಲಿ ವಿಧಿಸಲಾಗುತ್ತದೆ. ಸಂಬಂಧಪಟ್ಟ ಏಜೆನ್ಸಿಗೆ ನೇರವಾಗಿ ಹಣವನ್ನು ವರ್ಗಾಯಿಸುವ ಸೌಲಭ್ಯವನ್ನು ಗ್ರಾಹಕ ಕೇಂದ್ರಿತ ವಿಧಾನವಾಗಿ ಪರಿಚಯಿಸಲಾಗಿದೆ. 

ಇದನ್ನೂ ಓದಿ : Fuel Tax Update: ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆಯ ಮಧ್ಯೆ ಮಹತ್ವದ ಮತ್ತು ಭಾರಿ ನೆಮ್ಮದಿ ನೀಡುವ ಘೋಷಣೆ ಮೊಳಗಿಸಿದ ವಿತ್ತ ಸಚಿವೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News