ಇಳಿಕೆಯಾಗಲಿದೆ LPG ದರ : ಪೆಟ್ರೋಲಿಯಂ ಸಚಿವರು ನೀಡಿದ್ದಾರೆ ಪ್ರಮುಖ ಸುಳಿವು..!
ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ದರಗಳು ಇಳಿಕೆಯಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ದರ ಇನ್ನಷ್ಟು ಇಳಿಕೆಯಾಗಲಿವೆ ಎಂದು ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ನವದೆಹಲಿ : LPG Price Latest News : ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಎರಡು ತಿಂಗಳಲ್ಲಿ 125 ರೂಪಾಯಿಗಳವರೆಗೆ ದುಬಾರಿಯಾದ ಏಪ್ರಿಲ್ 1 ರಂದು ತೈಲ ಮಾರುಕಟ್ಟೆ ಕಂಪನಿಗಳು 10 ರೂ. ಬೆಲೆ ಕಡಿತಗೊಳಿಸಿದೆ. ಇದೀಗ ಮತ್ತಷ್ಟು ಬೆಲೆ ಇಳಿಯಲಿದೆ ಎನ್ನಲಾಗಿದೆ. ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಕೂಡಾ ಬೆಲೆ ಇಳಿಕೆ ಬಗ್ಗೆ ಸುಳಿವು ನೀಡಿದ್ದಾರೆ.
ಇನ್ನೂ ಕಡಿಮೆಯಾಗಲಿವೆ ಎಲ್‌ಪಿಜಿ ದರ :
ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ (LPG) ದರಗಳು ಇಳಿಕೆಯಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ದರ ಇನ್ನಷ್ಟು ಇಳಿಕೆಯಾಗಲಿವೆ ಎಂದು ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ (International market) ಬೆಲೆಗಳನ್ನು ಕಡಿಮೆಯಾಗಿರುವುದರ ಪ್ರಯೋಜನವನ್ನು ಗ್ರಾಹಕರಿಗೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : LPG Booking : ಕೇವಲ 9 ರೂಪಾಯಿಗೆ ಸಿಲಿಂಡರ್ ಸಿಗಬೇಕಾದರೆ ಹೀಗೆ ಮಾಡಿ
2 ತಿಂಗಳಲ್ಲಿ 125 ರೂ ಹೆಚ್ಚಳ:
ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಎಲ್‌ಪಿಜಿಯ ಬೆಲೆ 125 ರೂಪಾಯಿಯಷ್ಟು ಏರಿಕೆಯಾಗಿತ್ತು. ಫೆಬ್ರವರಿ 4 ರಂದು ಸಿಲಿಂಡರ್ (Cylinder) ಬೆಲೆ 25 ರೂ.ಗೆ ಏರಿಕೆ ಕಂಡಿತ್ತು. ನಂತರ ಫೆಬ್ರವರಿ 15 ರಂದು ಮತ್ತೆ 50 ರೂ. ಹೆಚ್ಚಳವಾಗಿತ್ತು. ಇದಾದ ಬಳಿಕ ಫೆಬ್ರವರಿ 25 ರಂದು ಮತ್ತು ಮಾರ್ಚ್ 1 ರಂದು ಮತ್ತೆ ಎರಡು ಬಾರಿ 25 ರೂ. ಏರಿಕೆಯಾಗಿತ್ತು .
ಒಪೆಕ್ ರಾಷ್ಟ್ರಗಳು ಸಹ ಉತ್ಪಾದನೆಯನ್ನು ಹೆಚ್ಚಿಸಲಿವೆ :
ಕಚ್ಚಾ ತೈಲ ಉತ್ಪಾದನೆಯನ್ನು ಹೆಚಿಸಲು ಒಪೆಕ್ (OPEC) ರಾಷ್ಟ್ರಗಳು ನಿರ್ಧರಿಸಿದ್ದು, ಇದರಿಂದಾಗಿ ಕಚ್ಚಾ ಬೆಲೆಯಲ್ಲಿ ಮತ್ತಷ್ಟು ಕಡಿಮೆಯಾಗಬಹುದು. ಇದರ ಲಾಭ ದೇಶದ ಗ್ರಾಹಕರಿಗೆ (Customers) ಸಿಗಲಿದೆ. ಇತ್ತೀಚಿನ ದಿನಗಳಲ್ಲಿ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 64 ಡಾಲರ್ ಗಿಂತ ಹೆಚ್ಚಿದೆ. ಕೆಲವು ದಿನಗಳ ಹಿಂದೆ ಇ ಬೆಲೆ 71 ಡಾಲರ್ ತಲುಪಿತ್ತು.
ಇದನ್ನೂ ಓದಿ : LPG Gas Cylinder: 819 ರೂ. ಗ್ಯಾಸ್ ಸಿಲಿಂಡರ್ ಅನ್ನು 119 ರೂ.ಗೆ ಖರೀದಿಸಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.