ಪ್ರತಿ ವಾರ ಬದಲಾಗಲಿದೆಯೇ LPG ಬೆಲೆ! ಇದರ ಸತ್ಯಾಸತ್ಯತೆ ಏನು?

ಇತ್ತೀಚೆಗೆ 1 ಜನವರಿ, 2021ರಿಂದ ತೈಲ ಕಂಪನಿಗಳು ಪ್ರತಿ ವಾರ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಬದಲಾಯಿಸುತ್ತವೆ ಎಂಬ ವರದಿಗಳು ಹರಿದಾಡುತ್ತಿವೆ. ಈಗ ಪಿಐಬಿ ಈ ವಿಷಯಕ್ಕೆ ಸಂಬಂಧಿಸಿದ ಸತ್ಯಾಂಶದ ಬಗ್ಗೆ ಪಿಐಬಿ ಬೆಳಕು ಚೆಲ್ಲಿದೆ.

Written by - Yashaswini V | Last Updated : Dec 30, 2020, 03:26 PM IST
  • ಡಿಸೆಂಬರ್‌ನಲ್ಲಿ ತೈಲ ಕಂಪನಿಗಳು ಎಲ್‌ಪಿಜಿಯ ಬೆಲೆಯನ್ನು ಎರಡು ಬಾರಿ 50-50 ರೂಪಾಯಿಗಳಷ್ಟು ಹೆಚ್ಚಿಸಿವೆ
  • ಪೆಟ್ರೋಲ್, ಡೀಸೆಲ್ ದರದಳು ನಿತ್ಯ ಬದಲಾಗುವಂತೆ ಪ್ರತಿ ವಾರ ಎಲ್‌ಪಿಜಿ ಬೆಲೆ ಬದಲಾಗಲಿದೆ ಎಂಬ ವರದಿ
ಪ್ರತಿ ವಾರ ಬದಲಾಗಲಿದೆಯೇ LPG ಬೆಲೆ! ಇದರ ಸತ್ಯಾಸತ್ಯತೆ ಏನು? title=
LPG Cylinder price

ನವದೆಹಲಿ: ಹೊಸ ವರ್ಷದಲ್ಲಿ ತೈಲ ಕಂಪನಿಗಳು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ವಾರ  ಬದಲಾಯಿಸಲಿವೆ ಎಂಬ ಸುದ್ದಿ ಇತ್ತೀಚಿಗೆ ಕೇಳಿ ಬಂದಿತ್ತು. ಇದಲ್ಲದೆ ತಿಂಗಳಿಗೊಮ್ಮೆ ತೈಲ ದರವನ್ನು ಬದಲಾಯಿಸುವ ತೈಲ ಕಂಪನಿಗಳು ಡಿಸೆಂಬರ್ ತಿಂಗಳಲ್ಲಿ ಎರಡು ಬಾರಿ ಅನಿಲದ ಬೆಲೆಯನ್ನು ಹೆಚ್ಚಿಸಿದ್ದರಿಂದ ವಾರಕ್ಕೊಮ್ಮೆ ತೈಲ ದರ ಪರಿಷ್ಕರಿಸಲಾಗುವುದು ಎಂಬ ಸುದ್ದಿಗೆ ಪುಷ್ಟಿ ನೀಡಿದಂತಾಗಿತ್ತು. ಆದರೆ ಈ ಸುದ್ದಿಯಲ್ಲಿ ಎಷ್ಟು ಸತ್ಯವಿದೆ ಎಂದು ನಾವು ನಿಮಗೆ ಹೇಳಲಿದ್ದೇವೆ.

ತೈಲ ಕಂಪನಿಗಳು 100 ರೂಪಾಯಿ ಹೆಚ್ಚಿಸಿವೆ: 
ಡಿಸೆಂಬರ್‌ನಲ್ಲಿ ತೈಲ ಕಂಪನಿಗಳು ಎಲ್‌ಪಿಜಿಯ (LPG) ಬೆಲೆಯನ್ನು ಎರಡು ಬಾರಿ 50-50 ರೂಪಾಯಿಗಳಷ್ಟು ಹೆಚ್ಚಿಸಿವೆ. ಡಿಸೆಂಬರ್ 3 ರಂದು ಮೊದಲಿಗೆ ತೈಲ ದರವನ್ನು ಏರಿಸಲಾಯಿತು ಮತ್ತು ಎರಡನೇ ಬಾರಿಗೆ  ಡಿಸೆಂಬರ್ 15 ರಂದು 50 ರೂಪಾಯಿಗಳನ್ನು ಹೆಚ್ಚಿಸಲಾಯಿತು. ಈ ರೀತಿಯಾಗಿ ಡಿಸೆಂಬರ್‌ನಲ್ಲಿ ತೈಲ ದರದಲ್ಲಿ ಒಟ್ಟು 100 ರೂ. ಏರಿಕೆ ಆಗಿದೆ. ಈ ಸುದ್ದಿ ಮಾಧ್ಯಮಗಳಲ್ಲಿ ಬಂದ ನಂತರ  ಈಗ ಜನವರಿಯಿಂದ ಪೆಟ್ರೋಲ್, ಡೀಸೆಲ್ ದರದಳು ನಿತ್ಯ ಬದಲಾಗುವಂತೆ  ಪ್ರತಿ ವಾರ ಎಲ್‌ಪಿಜಿ ಬೆಲೆಗಳನ್ನು ಬದಲಾಯಿಸಲಾಗುತ್ತದೆ ಎಂದು ಹೇಳಲಾಗುತ್ತಿತ್ತು.

ಇದನ್ನೂ ಓದಿ: LPG Cylinder ಮೇಲೆ ಪಡೆಯಿರಿ 500 ರೂ. ಕ್ಯಾಶ್‌ಬ್ಯಾಕ್

ಈ ಕುರಿತಂತೆ ಪ್ರಕಟವಾಗಿದ್ದ ಸುದ್ದಿಯಲ್ಲಿ ತೈಲ ಕಂಪೆನಿಗಳು ಇಲ್ಲಿಯವರೆಗೆ ಗ್ರಾಹಕರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿನ ದೈನಂದಿನ ಬದಲಾವಣೆಗಳೊಂದಿಗೆ ಬೆರೆತುಕೊಂಡಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ಎಲ್ಪಿಜಿ ಬೆಲೆಗಳನ್ನು ಮೊದಲಿಗಿಂತ ಕಡಿಮೆ ಅವಧಿಯಲ್ಲಿ ಪರಿಷ್ಕರಿಸಿದರೂ ಅವರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ವರದಿಯಾಗಿತ್ತು.

ಪಿಐಬಿ ಫ್ಯಾಕ್ಟ್ ಚೆಕ್ ಏನು ಹೇಳುತ್ತೆ?
ಪಿಐಬಿ (ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ) ಈ ಸುದ್ದಿಗೆ ಸಂಬಂಧಿಸಿದಂತೆ ಫ್ಯಾಕ್ಟ್  ಚೆಕ್ (Fact Check) ಮಾಡಿದ್ದು ತೈಲ ಕಂಪನಿಗಳು ಈಗ ಗ್ಯಾಸ್ ಸಿಲಿಂಡರ್‌ಗಳ (Gas Cylinder) ಬೆಲೆಯನ್ನು ಪ್ರತಿದಿನ ಅಥವಾ ವಾರಕ್ಕೊಮ್ಮೆ ಬದಲಾಯಿಸುವ ಬಗ್ಗೆ ಯೋಚಿಸುತ್ತಿವೆ ಎಂದು ಕೆಲವು ಮಾಧ್ಯಮ ವರದಿಗಳಲ್ಲಿ ಹೇಳಲಾಗುತ್ತಿದೆ ಎಂದು ಪಿಐಬಿ ತನ್ನ ಟ್ವೀಟ್‌ನಲ್ಲಿ ಬರೆದಿದೆ. ಆದರೆ ಈ ಸುದ್ದಿ ಸಂಪೂರ್ಣವಾಗಿ ಸುಳ್ಳು. ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಗಳನ್ನು ಭಾರತ ಸರ್ಕಾರ ಘೋಷಿಸಿಲ್ಲ  ಎಂದು ಹೇಳಲಾಗಿದೆ. 

ಇದನ್ನೂ ಓದಿ: LPG Cylinder price: ಮತ್ತೆ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ

ಅಂದರೆ ಪ್ರತಿ ವಾರ ಅನಿಲ ಬೆಲೆಗಳನ್ನು ಪರಿಷ್ಕರಿಸುವ ಸುದ್ದಿ ಸಂಪೂರ್ಣವಾಗಿ ಸುಳ್ಳು ಎಂದು ಹೇಳಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News