LPG Booking : ಕೇವಲ 9 ರೂಪಾಯಿಗೆ ಸಿಲಿಂಡರ್ ಸಿಗಬೇಕಾದರೆ ಹೀಗೆ ಮಾಡಿ

LPG  ಬುಕಿಂಗ್ ಮತ್ತು ಪಾವತಿಯ ಮೇಲೆ, Paytm ತನ್ನ ಗ್ರಾಹಕರಿಗೆ ಬಂಪರ್ ಕೊಡುಗೆಯನ್ನು ನೀಡಿದೆ. ಈ offer ಅಡಿಯಲ್ಲಿ  ಗ್ರಾಹಕರು 809 ರೂಪಾಯಿ ಬೆಲೆಯ ಗ್ಯಾಸ್ ಸಿಲಿಂಡರ್ ಅನ್ನು ಕೇವಲ 9 ರೂಪಾಯಿಗೆ ಪಡೆಯಬಹುದಾಗಿದೆ.

Written by - Ranjitha R K | Last Updated : Apr 2, 2021, 01:07 PM IST
  • ಕೇವಲ 9 ರೂಪಾಯಿಗೆ ಸಿಗಲಿದೆ LPG ಸಿಲಿಂಡರ್
  • Paytm ನಲ್ಲಿ ಕ್ಯಾಶ್‌ಬ್ಯಾಕ್ ಪಡೆಯುವುದು ಹೇಗೆ ತಿಳಿಯಿರಿ
  • LPG ಬುಕ್ ಮಾಡುವ ಪ್ರಕ್ರಿಯೆ ಹೀಗಿದೆ
LPG Booking : ಕೇವಲ 9 ರೂಪಾಯಿಗೆ ಸಿಲಿಂಡರ್  ಸಿಗಬೇಕಾದರೆ ಹೀಗೆ ಮಾಡಿ   title=
ಕೇವಲ 9 ರೂಪಾಯಿಗೆ ಸಿಗಲಿದೆ LPG ಸಿಲಿಂಡರ್ (file photo)

ನವದೆಹಲಿ : LPG Booking Offer : ಎಲ್‌ಪಿಜಿ ಬೆಲೆ ಏಪ್ರಿಲ್ 1 ರಿಂದ ಸಿಲಿಂಡರ್‌ಗೆ 10 ರೂ. ಕಡಿಮೆಯಾಗಿದೆ. ಈ ಬೆಲೆ ಇಳಿಕೆ ಕೋಟ್ಯಂತರ ಗ್ರಾಹಕರ ಸಮಾಧಾನಕ್ಕೆ ಕಾರಣವಾಗಿದೆ. ಆದರೆ ಸಬ್ಸಿಡಿ ರಹಿತ 14.2 ಕೆಜಿಯ  LPG ಗ್ಯಾಸ್ ಸಿಲಿಂಡರ್ ಗೆ ಈಗಲೂ   809 ರೂ. ಪಾವತಿಸಬೇಕಾಗುತ್ತದೆ. ಆದರೆ, ಕೇವಲ 9 ರೂಪಾಯಿಗೆ 809 ರೂಪಾಯಿ ಬೆಲೆಯ ಸಿಲಿಂಡರ್  ಪಡೆಯಬಹುದು.  9 ರೂಪಾಯಿಗೆ ಸಿಲಿಂಡರ್ ಸಿಗಬೇಕಾದರೆ ಏನು ಮಾಡಬೇಕು ಎನ್ನುವ ಮಾಹಿತಿ ಇಲ್ಲಿದೆ. 

ಕೇವಲ 9 ರೂಪಾಯಿಗೆ ಸಿಗಲಿದೆ 809 ರೂಪಾಯಿ ಬೆಲೆಯ ಸಿಲಿಂಡರ್!
LPG  ಬುಕಿಂಗ್ ಮತ್ತು ಪಾವತಿಯ ಮೇಲೆ, Paytm ತನ್ನ ಗ್ರಾಹಕರಿಗೆ ಬಂಪರ್ ಕೊಡುಗೆಯನ್ನು ನೀಡಿದೆ. ಈ offer ಅಡಿಯಲ್ಲಿ  ಗ್ರಾಹಕರು 809 ರೂಪಾಯಿ ಬೆಲೆಯ ಗ್ಯಾಸ್ ಸಿಲಿಂಡರ್ ಅನ್ನು ಕೇವಲ 9 ರೂಪಾಯಿಗೆ ಪಡೆಯಬಹುದಾಗಿದೆ. Paytm ಕ್ಯಾಶ್‌ಬ್ಯಾಕ್ ಆಫ್ಫೆರ್ ಅಡಿಯಲ್ಲಿ ಗ್ರಾಹಕರು  ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಿದರೆ,  800 ರೂ.ಗಳ ಕ್ಯಾಶ್‌ಬ್ಯಾಕ್ (Cash back) ಪಡೆಯಬಹುದು.

ಇದನ್ನೂ ಓದಿ :  LPG Gas Cylinder: 819 ರೂ. ಗ್ಯಾಸ್ ಸಿಲಿಂಡರ್ ಅನ್ನು 119 ರೂ.ಗೆ ಖರೀದಿಸಿ

Paytm ನಲ್ಲಿ ಕ್ಯಾಶ್‌ಬ್ಯಾಕ್ ಪಡೆಯುವುದು ಹೇಗೆ?
Paytm ನ ಈ ಆಫರ್ ನ ಲಾಭವನ್ನು ಏಪ್ರಿಲ್ 30 ರವರೆಗೆ ಪಡೆಯಬಹುದು. Paytm ಮೂಲಕ ಮೊದಲ ಸಲ ಗ್ಯಾಸ್ ಸಿಲಿಂಡರ್ ಬುಕ್ ಮಾಡುವ ಗ್ರಾಹಕರಿಗೆ ಈ ಲಾಭ ಸಿಗಲಿದೆ. Paytm  ಮೂಲಕ  ಸಿಲಿಂಡರ್‌ ಬುಕ್ ಮಾಡುವಾಗ ಈ ಆಫರ್ ಅಡಿಯಲ್ಲಿ ಸ್ಕ್ರ್ಯಾಚ್ ಕಾರ್ಡ್ (Scratch Card) ಸಿಗಲಿದೆ. ಈ ಕಾರ್ಡ್ ನ ಕ್ಯಾಶ್ ಬ್ಯಾಕ್ ವ್ಯಾಲ್ಯೂ ೮೦೦ರೂ ಆಗಿರಲಿದೆ. ಈ ಆಫರ್  LPG ಬುಕ್ಕಿಂಗ್ ವೇಳೆ ಅದರಷ್ಟಕ್ಕೆ ಅನ್ವಯವಾಗಲಿದೆ. ಕನಿಷ್ಟ ೫೦೦ ರೂಪಾಯಿಯ ಪೇಮೆಂಟ್ಗೆ ಈ ಆಫರ್ ಅಪ್ಲೈ ಆಗಲಿದೆ. ಈ ಕ್ಯಾಶ್ಬ್ಯಾಕ್ ಗಾಗಿ ಸ್ಕ್ರ್ಯಾಚ್ ಕಾರ್ಡ್  ಓಪನ್ ಮಾಡಬೇಕು. ಬಿಲ್ ಪಾವತಿ ನಂತರ ಈ ಕ್ಯಾಶ್ ಬ್ಯಾಕ್ ನಿಮಗೆ ಸಿಗಲಿದೆ. ಕ್ಯಾಶ್ ಬ್ಯಾಕ್ ಮೌಲ್ಯ 10 ರೂಪಾಯಿಯಿಂದ ೮೦೦ ರೂಪಾಯಿವರೆಗೆ ಇರಲಿದೆ. ಈ ಕಾರ್ಡ್ ಅನ್ನು 7 ದಿನಗಳ ಒಳಗೆ ಬಳಸಿಕೊಳ್ಳಬೇಕು. ೭ ದಿನಗಳ ನಂತರ ಈ ಸ್ಕ್ರ್ಯಾಚ್ ಕಾರ್ಡ್ ಮಾನ್ಯ ವಾಗಿರುವುದಿಲ್ಲ. 

 LPG  ಬುಕ್ ಮಾಡುವ ಪ್ರಕ್ರಿಯೆ ಹೇಗೆ?  
ಈ ಕೊಡುಗೆಯ ಲಾಭವನ್ನು ಪಡೆಯಬೇಕಾದರೆ ಮೊದಲು ಮೊಬೈಲ್ (Mobile) ಫೋನ್‌ನಲ್ಲಿ Paytm ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.
-ನಂತರ, ನಿಮ್ಮ ಗ್ಯಾಸ್ ಏಜೆನ್ಸಿಯಿಂದ ಸಿಲಿಂಡರ್ ಬುಕಿಂಗ್ ಮಾಡಿ. 
- Paytm ಅಪ್ಲಿಕೇಶನ್‌ನಲ್ಲಿ Show more ಆಯ್ಕ ಮೇಲೆ ಕ್ಲಿಕ್ ಮಾಡಿ. 
-  ನಂತರ Recharge and Pay Bills  ಮೇಲೆ ಕ್ಲಿಕ್ ಮಾಡಿ. 
- ಇದರ ನಂತರ, book a cylinder  ಆಯ್ಕೆ ಕಾಣುತ್ತದೆ. 
- ಈಗ ಗ್ಯಾಸ್ ಪ್ರೋವೈಡ ರ್ ಅನ್ನು ಆಯ್ಕೆಮಾಡಿ. 
- ಬುಕಿಂಗ್ ಮಾಡುವ ಮೊದಲು, FIRSTLPG ಯ ಪ್ರೋಮೋ ಕೋಡ್  ನಮೂದಿಸುವುದನ್ನು ಮರೆಯಬೇಡಿ
- ಬುಕಿಂಗ್ ಮಾಡಿದ 24 ಗಂಟೆಗಳ ಒಳಗೆ ಕ್ಯಾಶ್‌ಬ್ಯಾಕ್ ಸ್ಕ್ರ್ಯಾಚ್ ಕಾರ್ಡ್ ಪಡೆಯುತ್ತೀರಿ. 
-ಈ ಸ್ಕ್ರ್ಯಾಚ್ ಕಾರ್ಡ್ ಅನ್ನು 7 ದಿನಗಳ ಒಳಗೆ ಬಳಸಬೇಕಾಗುತ್ತದೆ.

ಇದನ್ನೂ ಓದಿ :  LPG subsidy ಬರುತ್ತಿಲ್ಲವೇ? ಮತ್ತೆ ಅದರ ಲಾಭ ಪಡೆಯಲು ಈ ವಿಧಾನ ಅಳವಡಿಸಿಕೊಳ್ಳಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News