ಮುಂಬೈ: ಇತ್ತೀಚಿನ ದಿನಗಳಲ್ಲಿ ಚಿನ್ನದ ದರ ಆಕಾಶ ಮುಟ್ಟುತ್ತಿದೆ. ಮಧ್ಯಮ ವರ್ಗದವರಿಗೆ ಚಿನ್ನ ಖರೀದಿಸುವುದು ಕನಸಿನಂತೆ ಭಾಸವಾಗುತ್ತಿದೆ. ಆದರೆ ಕೇವಲ ಒಂದು ರೂಪಾಯಿಗೆ ಚಿನ್ನವನ್ನು ಖರೀದಿಸಬಹುದು ಎಂದು ನಿಮಗೆ ತಿಳಿದಿದೆಯೇ? ಈ ದಿನಗಳಲ್ಲಿ ಆನ್‌ಲೈನ್‌ನಲ್ಲಿ ಚಿನ್ನದ ಶಾಪಿಂಗ್ ಮಾಡಲಾಗುತ್ತಿದೆ ಮತ್ತು ಯಾವುದೇ ಗ್ರಾಹಕರು ಕೇವಲ ಒಂದು ರೂಪಾಯಿಗೆ ಚಿನ್ನವನ್ನು ಖರೀದಿಸಲು ಇದರಲ್ಲಿ ಅವಕಾಶವಿದೆ. ಶೇ.35 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿರುವ ಚಿನ್ನವನ್ನು ಖರೀದಿಸುವ ಭಾರತದ ಅತಿದೊಡ್ಡ ಡಿಜಿಟಲ್ ಪ್ಲಾಟ್‌ಫಾರ್ಮ್ ಆಗಿ ಹೊರಹೊಮ್ಮಿರುವುದಾಗಿ ಭಾರತದ ಪ್ರಮುಖ ಡಿಜಿಟಲ್ ಪಾವತಿ ವೇದಿಕೆ - ಫೋನ್‌ಪೇ ಸೋಮವಾರ ತಿಳಿಸಿದೆ. ಈ ವರ್ಷ ಹಬ್ಬದ ಅವಧಿಯಲ್ಲಿ (ದಸರಾದಿಂದ ದೀಪಾವಳಿಯವರೆಗೆ 21 ದಿನಗಳು) ತನ್ನ ಚಿನ್ನದ ಮಾರಾಟವು ಆರು ಪಟ್ಟು ಹೆಚ್ಚಾಗಿದೆ ಎಂದು ಕಂಪನಿ ಹೇಳಿದೆ.


COMMERCIAL BREAK
SCROLL TO CONTINUE READING

ಫೋನ್‌ಪೇ (Phonepe) 2017ರ ಡಿಸೆಂಬರ್‌ನಲ್ಲಿ ಚಿನ್ನದ (Gold) ವಿಭಾಗವನ್ನು ಪ್ರಾರಂಭಿಸಿತು ಮತ್ತು ಕಳೆದ 3 ವರ್ಷಗಳಲ್ಲಿ ಇದು ಸೇಫ್‌ಗೋಲ್ಡ್ ಮತ್ತು ಎಂಎಂಟಿಸಿ-ಪಿಎಎಮ್‌ಪಿ ಜೊತೆ ಪಾಲುದಾರಿಕೆ ಹೊಂದಿದ್ದು, ದೇಶಾದ್ಯಂತದ ಬಳಕೆದಾರರಿಗೆ ಆನ್‌ಲೈನ್ ಚಿನ್ನ (Online Gold) ಖರೀದಿಸಲು ಅನುವು ಮಾಡಿಕೊಡುತ್ತದೆ. ಫೋನ್‌ಪೇಯಲ್ಲಿ ಖರೀದಿಸಿದ ಚಿನ್ನವು 24 ಕ್ಯಾರೆಟ್ ನೈಜ ಚಿನ್ನವಾಗಿದ್ದು, ಗ್ರಾಹಕರ ಬಜೆಟ್‌ಗೆ ಅನುಗುಣವಾಗಿ ಅದನ್ನು ಯಾವಾಗ ಬೇಕಾದರೂ ಖರೀದಿಸಬಹುದು. ಚಿನ್ನದ ಆರಂಭಿಕ ಬೆಲೆ ಕೇವಲ 1 ರೂಪಾಯಿಯಿಂದ ಪ್ರಾರಂಭವಾಗುತ್ತದೆ.


ಕೇವಲ 1 ರೂಪಾಯಿಗೆ 24 ಕ್ಯಾರೆಟ್ ಚಿನ್ನ ಖರೀದಿಸಿ, ಸಿಗಲಿದೆ ಈ 5 ಅದ್ಭುತ ಲಾಭಗಳು


ಚಿನ್ನದ ಹೋಂ ಡೆಲಿವರಿ ಆಯ್ಕೆಯೂ ಇದೆ :
ಗ್ರಾಹಕರು ಚಿನ್ನದ ವಿತರಣೆಯ ಆಯ್ಕೆಯನ್ನು ಆರಿಸಿಕೊಳ್ಳಬಹುದು. ನಾಣ್ಯಗಳು ಅಥವಾ ಬಾರ್‌ಗಳ ರೂಪದಲ್ಲಿ ಚಿನ್ನ ನಿಮ್ಮ ಮನೆ ಬಾಗಿಲಿಗೆ ಬರಲಿದೆ. ಇದು ಅರ್ಧ ಗ್ರಾಂಗಿಂತ ಕಡಿಮೆ ಪ್ರಮಾಣದಲ್ಲಿ ಪ್ರಾರಂಭವಾಗುತ್ತದೆ. ಭಾರತದಾದ್ಯಂತ 18,500 ಕ್ಕೂ ಹೆಚ್ಚು ಗ್ರಾಹಕರು ಫೋನ್‌ಪೇಯಲ್ಲಿ ಚಿನ್ನವನ್ನು ಖರೀದಿಸಿದ್ದಾರೆ, ಅದರಲ್ಲಿ ಸಣ್ಣ ಪಟ್ಟಣಗಳು ​​ಮತ್ತು ನಗರಗಳಲ್ಲಿನ ಶೇಕಡಾ 60 ಕ್ಕೂ ಹೆಚ್ಚು ಗ್ರಾಹಕರು ಭಾಗಿಯಾಗಿದ್ದಾರೆ ಎಂದು ಕಂಪನಿ ತಿಳಿಸಿದೆ.


ಫೋನ್‌ಪೇ ಮ್ಯೂಚುವಲ್ ಫಂಡ್ಸ್ & ಗೋಲ್ಡ್ (Phone Pe Mutual Funds & Gold)  ಮುಖ್ಯಸ್ಥ ಟೆರೆನ್ಸ್ ಲೂಸಿಯನ್, ಹಬ್ಬದ ಋತುವಿಗೆ ಮುಂಚಿತವಾಗಿ ಈ ತಿಂಗಳಿನಲ್ಲಿ ಫೋನ್‌ಪೇ ಚಿನ್ನದ ಮಾರಾಟವನ್ನು ದಾಖಲಿಸಿದೆ. ನಮ್ಮಂತಹ ಪಾವತಿ ವೇದಿಕೆಯಲ್ಲಿ ಹೆಚ್ಚುತ್ತಿರುವ ವಿಶ್ವಾಸ, ಪ್ರವೇಶದ ಸುಲಭತೆ, ಕೈಗೆಟುಕುವ ಸಾಮರ್ಥ್ಯ ಮತ್ತು ಸುರಕ್ಷತೆಯಿಂದಾಗಿ  ಗ್ರಾಹಕರಿಗೆ ಡಿಜಿಟಲ್ ಶಾಪಿಂಗ್‌ನತ್ತ ಸಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.


ತನ್ನ ಬಳಕೆದಾರರಿಗೆ ಭರ್ಜರಿ ಸೇವೆ ಆರಂಭಿಸಿದೆ ಈ ಮೊಬೈಲ್ ವ್ಯಾಲೆಟ್ ಕಂಪನಿ


ಫೋನ್‌ಪೇ ಚಿನ್ನವನ್ನು ಖರೀದಿಸಲು ಉತ್ತಮವಾಗಿ ವಿನ್ಯಾಸಗೊಳಿಸಲಾದ ಪ್ಲ್ಯಾಟ್‌ಫಾರ್ಮ್‌ಗಳನ್ನು ಹೊಂದಿದೆ ಮತ್ತು ನಾವು ಅದರಲ್ಲಿ ಹೊಸ ವೈಶಿಷ್ಟ್ಯಗಳನ್ನು ನಿರಂತರವಾಗಿ ತರುತ್ತಿದ್ದೇವೆ. ನಮ್ಮ ಗ್ರಾಹಕರಿಗೆ ಪ್ರತಿ ತಿಂಗಳು ಚಿನ್ನ ಖರೀದಿಸಲು ಸಹಾಯ ಮಾಡಲು ನಾವು ಇತ್ತೀಚೆಗೆ ರಿಮೈಂಡರ್ ಸೌಲಭ್ಯವನ್ನು ಪ್ರಾರಂಭಿಸಿದ್ದೇವೆ. ನಿಯಮಿತವಾಗಿ ಹೂಡಿಕೆ ಮಾಡುವ ಮೂಲಕ ಗ್ರಾಹಕರು ತಮ್ಮ ಉಳಿತಾಯ ಗುರಿಗಳನ್ನು ಸಾಧಿಸಲು ಪ್ರೇರೇಪಿಸುವ ಮೈಲಿಗಲ್ಲು ಸೌಲಭ್ಯವನ್ನೂ ನಾವು ಇದರಲ್ಲಿ ಸೇರಿಸಿದ್ದೇವೆ ಎಂದವರು ವಿವರಿಸಿದರು.