PM Kisan Yojana 2024: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಗಳಿಗೆ ಒಂದು ನೆಮ್ಮದಿಯ ಸುದ್ದಿ ಪ್ರಕಟಗೊಂಡಿದೆ. 16ನೇ ಕಂತಿನ ನಿರೀಕ್ಷೆಗೆ ಕೊನೆಗೂ ತೆರೆ ಬಿದ್ದಂತಾಗಿದೆ 16ನೇ ಕಂತಿನ ಹಣವನ್ನು ಶೀಘ್ರದಲ್ಲೇ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು ಎನ್ನಲಾಗಿದೆ. ಇದಕ್ಕಾಗಿ ಸರ್ಕಾರ ತನ್ನ ದಿನಾಂಕವನ್ನು ಔಪಚಾರಿಕವಾಗಿ ಪ್ರಕಟಿಸಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಪ್ರಧಾನಿ ಮೋದಿ ಅವರೇ ರೈತರ ಖಾತೆಗೆ ಹಣ ವರ್ಗಾವಣೆ ಮಾಡಲಿದ್ದಾರೆ. (Business News In Kannada)


COMMERCIAL BREAK
SCROLL TO CONTINUE READING

ಇದನ್ನೂ ಓದಿ-Formula 12-15-20, ಇದು 25ನೇ ವಯಸ್ಸಿನಲ್ಲಿ ಹೂಡಿಕೆ ಆರಂಭಿಸಿ 40ನೇ ವಯಸ್ಸಲ್ಲಿ ಕೋಟ್ಯಾಧಿಪತಿಯಾಗುವ ಸರಳ ಸೂತ್ರ!


ಪಿಎಂ ಕಿಸಾನ್‌ನ 16 ನೇ ಕಂತು ಯಾವಾಗ ಬಿಡುಗಡೆಯಾಗಲಿದೆ?
ಪ್ರಧಾನಿ ನರೇಂದ್ರ ಮೋದಿ ಅವರು 28 ಫೆಬ್ರವರಿ 2024 ರಂದು ಪಿಎಂ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್) 16 ನೇ ಕಂತು ಬಿಡುಗಡೆ ಮಾಡಲಿದ್ದಾರೆ. ಈ ಬಾರಿ 8 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗುವುದು ಎನ್ನಲಾಗಿದೆ. ಡಿಬಿಟಿ ಮೂಲಕ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ವರ್ಗಾವಣೆಯಾಗಲಿದೆ. ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ವಾರ್ಷಿಕ 6 ಸಾವಿರ ರೂಪಾಯಿ ಆರ್ಥಿಕ ನೆರವನ್ನು ನೀಡಲಾಗುತ್ತದೆ. ಈ ಮೊತ್ತವನ್ನು ಪ್ರತಿ 4 ತಿಂಗಳಿಗೊಮ್ಮೆ ರೈತರ ಖಾತೆಗೆ ರೂ.2-2 ಸಾವಿರ ರೂಪದಲ್ಲಿ ನೀಡಲಾಗುತ್ತದೆ. ಒಟ್ಟು 3 ಕಂತುಗಳಲ್ಲಿ ಈ ಹಣ ಬಿಡುಗೈಯಾಗುತ್ತದೆ. 


ಇದನ್ನೂ ಓದಿ-Tax Demand: ತೆರಿಗೆ ಪಾವತಿದಾರರಿಗೆ 1 ಲಕ್ಷ ರೂ.ಗಳ ತೆರಿಗೆ ಬಾಕಿ ಪಾವತಿಯಿಂದ ಸಿಕ್ತು ಮುಕ್ತಿ, ಇಲ್ಲಿದೆ ನಿಮಗೊಂದು ಲಾಭದ ಸುದ್ದಿ


5 ವರ್ಷಗಳಲ್ಲಿ 2.80 ಲಕ್ಷ ಕೋಟಿ ರೂ ಬಿಡುಗಡೆ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ 5 ವರ್ಷಗಳನ್ನು ಪೂರೈಸಿದೆ. ರೈತರ ಆರ್ಥಿಕ ಅಗತ್ಯಗಳನ್ನು ಪೂರೈಸಲು ಪಿಎಂ ಕಿಸಾನ್ ಯೋಜನೆಯನ್ನು 24 ಫೆಬ್ರವರಿ 2019 ರಂದು ಆರಂಭಿಸಲಾಗಿತ್ತು. ಇದುವರೆಗೆ 11 ಕೋಟಿಗೂ ಹೆಚ್ಚು ರೈತರಿಗೆ 2.80 ಲಕ್ಷ ಕೋಟಿ ರೂ. ಹಣವನ್ನು ಪಾವತಿಸಲಾಗಿದೆ. ಈ ಯೋಜನೆಯ ಅಡಿ ಇದುವರೆಗೆ ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಫಲಾನುಭವಿ ರೈತರಿಗಾಗಿ 15 ಕಂತುಗಳ ಹಣವನ್ನು ಬಿಡುಗಡೆ ಮಾಡಲಾಗಿದೆ. ಈ ಬಾರಿ 16ನೇ ಕಂತು ಬಿಡುಗಡೆಯಾಗಲಿದೆ. ಸರ್ಕಾರದ ಈ ಘೋಷಣೆ ರೈತರ ಪಾಲಿಗೆ ಭಾರಿ ನೆಮ್ಮದಿಯನ್ನು ತಂದಿದೆ. 16ನೇ ಕಂತಿನ ಹಣ 28 ಫೆಬ್ರವರಿ 2024 ರಂದು ಬಿಡುಗಡೆಯಾಗಲಿದೆ. ನವೆಂಬರ್ 15, 2023 ರಂದು, ಜಾರ್ಖಂಡ್‌ನ ಖುಂಟಿಯಿಂದ ಪಿಎಂ ಮೋದಿ ದೇಶಾದ್ಯಂತ 8.11 ಕೋಟಿ ರೈತರಿಗೆ 15 ನೇ ಕಂತಿನ 18.61 ಸಾವಿರ ಕೋಟಿ ರೂ. ಬಿಡುಗಡೆ ಮಾಡಿದ್ದರು. 


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.