Tax Demand: ತೆರಿಗೆ ಪಾವತಿದಾರರಿಗೆ 1 ಲಕ್ಷ ರೂ.ಗಳ ತೆರಿಗೆ ಬಾಕಿ ಪಾವತಿಯಿಂದ ಸಿಕ್ತು ಮುಕ್ತಿ, ಇಲ್ಲಿದೆ ನಿಮಗೊಂದು ಲಾಭದ ಸುದ್ದಿ

Tax Demand Rule: ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಇತ್ತೀಚೆಗೆ ಆದೇಶವೊಂದನ್ನು ಹೊರಡಿಸಿದ್ದು, ತೆರಿಗೆ ಇಲಾಖೆಯು ಜನವರಿ 31, 2024 ರವರೆಗೆ ಬಾಕಿ ಉಳಿದಿರುವ ಹಳೆಯ ಅರ್ಹ ತೆರಿಗೆ ಬೇಡಿಕೆಗಳನ್ನು ರದ್ದುಗೊಳಿಸುವುದಾಗಿ ಹೇಳಿದೆ. (Business News In Kannada)  

Written by - Nitin Tabib | Last Updated : Feb 20, 2024, 04:17 PM IST
  • ತೆರಿಗೆ ಬೇಡಿಕೆಯ ಮೇಲಿನ ಈ ವಿನಾಯಿತಿಯು ಪ್ರತಿ ತೆರಿಗೆದಾರರಿಗೆ ಅಂದರೆ ಒಂದು ಪ್ಯಾನ್ ಕಾರ್ಡ್‌ಗೆ ರೂ 1 ಲಕ್ಷದವರೆಗೆ ಮಾತ್ರ ಇರುತ್ತದೆ.
  • ಯಾರೊಬ್ಬರ ಒಟ್ಟು ಬೇಡಿಕೆ ಮೊತ್ತವು ರೂ 1 ಲಕ್ಷಕ್ಕಿಂತ ಹೆಚ್ಚಿದ್ದರೆ,
  • ಅದು ರೂ 1 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಮೊತ್ತಕ್ಕೆ ಮಾತ್ರ ಅನ್ವಯಿಸುತ್ತದೆ,
Tax Demand: ತೆರಿಗೆ ಪಾವತಿದಾರರಿಗೆ 1 ಲಕ್ಷ ರೂ.ಗಳ ತೆರಿಗೆ ಬಾಕಿ ಪಾವತಿಯಿಂದ ಸಿಕ್ತು ಮುಕ್ತಿ, ಇಲ್ಲಿದೆ ನಿಮಗೊಂದು ಲಾಭದ ಸುದ್ದಿ title=

Tax Demand Waives Off: ದೇಶಾದ್ಯಂತದ ಕೋಟ್ಯಾಂತರ ತೆರಿಗೆ ಪಾವತಿದಾರರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. 2024 ರ ಮಧ್ಯಂತರ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸರ್ಕಾರವು ಬಾಕಿ ಉಳಿದಿರುವ ಸಣ್ಣ ನೇರ ತೆರಿಗೆ ಬೇಡಿಕೆಗಳನ್ನು ಮನ್ನಾ ಮಾಡಲಾಗುವುದು ಎಂದು ಘೋಷಿಸಿದ್ದರು. 2009-10ರ ಆರ್ಥಿಕ ವರ್ಷದವರೆಗಿನ ಅವಧಿಗೆ 25,000 ರೂ.ವರೆಗೆ ಮತ್ತು 2010-11 ರಿಂದ 2014-15 ರವರೆಗಿನ ಅವಧಿಯಲ್ಲಿ 10,000 ರೂ.ವರೆಗಿನ ಬಾಕಿ ಇರುವ ನೇರ ತೆರಿಗೆ ಬೇಡಿಕೆಗಳನ್ನು ಷರತ್ತು ಬದ್ಧವಾಗಿ  ಹಿಂಪಡೆಯಲಾಗುವುದು ಎಂದು ಹೇಳಿದ್ದರು. ಈಗ ಸರ್ಕಾರವು ಸಣ್ಣ ಬಾಕಿ ಇರುವ ತೆರಿಗೆ ಬೇಡಿಕೆಗಳನ್ನು ಮನ್ನಾ ಮಾಡಲು ಯೋಜನೆಯನ್ನು ಆರಂಭಿಸಿದ್ದು, ಇದರಲ್ಲಿ ಪ್ರತಿಯೊಬ್ಬ ತೆರಿಗೆದಾರರಿಗೆ 1 ಲಕ್ಷದವರೆಗಿನ ತೆರಿಗೆ ಬಾಕಿಗಳ ಮೇಲೆ ಪರಿಹಾರವನ್ನು ನೀಡಲಾಗುತ್ತದೆ. (Business News In Kannada)

ತೆರಿಗೆ ಬೇಡಿಕೆಯ ಕುರಿತು ಆದೇಶ ಹೊರಡಿಸಿದ ಸಿಬಿಡಿಟಿ 
ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ತನ್ನ ಆದೇಶವೊಂದರಲ್ಲಿ ತೆರಿಗೆ ಇಲಾಖೆಯು ಜನವರಿ 31, 2024 ರವರೆಗೆ ಬಾಕಿ ಇರುವ ಹಳೆಯ ಅರ್ಹ ತೆರಿಗೆ ಬೇಡಿಕೆಗಳನ್ನು ರದ್ದುಗೊಳಿಸಲಾಗುತ್ತಿದೆ ಎಂದು ಹೇಳಿದೆ. ಈ ಆದೇಶವನ್ನು ಫೆಬ್ರವರಿ 31 ರಂದು ಹೊರಡಿಸಲಾಗಿದೆ, ಇದನ್ನು ಫೆಬ್ರವರಿ 19, 2024 ರಂದು ಪ್ರಕಟಿಸಲಾಗಿದೆ. ಇದು "ಅರ್ಹ ಬಾಕಿಯಿರುವ ತೆರಿಗೆ ಬೇಡಿಕೆಯನ್ನು ಮನ್ನಾ ಮಾಡಲಾಗಿದೆ ಎಂದು ಹೇಳಿದೆ. ಇದರಿಂದ ನೀವೂ ಕೂಡ ನಿಮ್ಮ ಖಾತೆಗೆ ಲಾಗಿನ್ ಆಗಿ Pending Action > Response to Outstanding Demand ಗೆ ಭೇಟಿ ನೀಡಿ 'Extinguished Demands' ನ ಸ್ಥಿತಿಯನ್ನು ಪರಿಶೀಲಿಸಬಹುದು. 

ಇದನ್ನೂ ಓದಿ-Tata Group Latest Update: ಬೆಳವಣಿಗೆಯಲ್ಲಿ ಪಾಕಿಸ್ತಾನದ ಅರ್ಥವ್ಯವಸ್ಥೆಯನ್ನೂ ಹಿಂದಿಕ್ಕಿದ ಟಾಟಾ ಸಮೂಹ!

ಈ ಷರತ್ತುಗಳು ಅನ್ವಯಿಸುತ್ತವೆ
ಬಾಕಿ ಉಳಿದಿರುವ ಎಲ್ಲಾ ರೀತಿಯ ಆದಾಯ ತೆರಿಗೆ, ಸಂಪತ್ತು ತೆರಿಗೆ ಮತ್ತು ಉಡುಗೊರೆ ತೆರಿಗೆಯ ಮೇಲೆ ಜನವರಿ 31, 2024 ರವರೆಗೆ ಬಾಕಿ ಇರುವ ಬೇಡಿಕೆಯು ಅನ್ವಯವಾಗುತ್ತದೆ. ಇದರ ಅಡಿಯಲ್ಲಿ 2009-10ನೇ ಹಣಕಾಸು ವರ್ಷಕ್ಕೆ 25,000 ಮತ್ತು 2010-11 ರಿಂದ 2014-15 ರ ಆರ್ಥಿಕ ವರ್ಷಕ್ಕೆ 10,000 ರೂ. ಈ ಮಿತಿಯ ಅಡಿಯಲ್ಲಿ ಬಡ್ಡಿ, ದಂಡ ಮತ್ತು ಸೆಸ್ ಇತ್ಯಾದಿಗಳನ್ನು ಸಹ ಅದಕ್ಕೆ ಆದಾಗ್ಯೂ, ಟಿಡಿಎಸ್-ಟಿಸಿಎಸ್ ಅಡಿಯಲ್ಲಿ ಬಾಕಿ ಇರುವ ತೆರಿಗೆ ಬೇಡಿಕೆಯ ಮೇಲೆ ಈ ವಿನಾಯಿತಿಯು ಅನ್ವಯಿಸುವುದಿಲ್ಲ.

ಇದನ್ನೂ ಓದಿ-High Return FD Scheme: ಒಂದೇ ವರ್ಷದ ಸ್ಥಿರ ಠೇವಣಿ ಮೇಲೆ ಜಬರ್ದಸ್ತ್ ಲಾಭ ಗಳಿಸಬೇಕೆ? ಈ ಸರ್ಕಾರಿ ಬ್ಯಾಂಕ್ ಬಡ್ಡಿದರ ಹೆಚ್ಚಿಸಿದೆ!

ತೆರಿಗೆ ಬೇಡಿಕೆಯ ಮೇಲಿನ ಈ ವಿನಾಯಿತಿಯು ಪ್ರತಿ ತೆರಿಗೆದಾರರಿಗೆ ಅಂದರೆ ಒಂದು ಪ್ಯಾನ್ ಕಾರ್ಡ್‌ಗೆ ರೂ 1 ಲಕ್ಷದವರೆಗೆ ಮಾತ್ರ ಇರುತ್ತದೆ. ಯಾರೊಬ್ಬರ ಒಟ್ಟು ಬೇಡಿಕೆ ಮೊತ್ತವು ರೂ 1 ಲಕ್ಷಕ್ಕಿಂತ ಹೆಚ್ಚಿದ್ದರೆ ಅದು ರೂ 1 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಮೊತ್ತಕ್ಕೆ ಮಾತ್ರ ಅನ್ವಯಿಸುತ್ತದೆ, ಅವರು ಉಳಿದ ಬೇಡಿಕೆಯನ್ನು ಠೇವಣಿ ಮಾಡಬೇಕಾಗುತ್ತದೆ. ಅಲ್ಲದೆ, ಬೇಡಿಕೆಯ ಮೇಲಿನ ರಿಯಾಯಿತಿಯ ಮೇಲೆ ಮರುಪಾವತಿಯನ್ನು ಕ್ಲೈಮ್ ಮಾಡಲಾಗುವುದಿಲ್ಲ. ಈ ರಿಯಾಯಿತಿಯನ್ನು ಪಡೆಯಲು ನೀವು ಏನನ್ನೂ ಮಾಡಬೇಕಾಗಿಲ್ಲ. ಆದಾಯ ತೆರಿಗೆ ಇಲಾಖೆಯ ಸೆಂಟ್ರಲ್ ಪ್ರೊಸೆಸಿಂಗ್ ಸೆಲ್ ಈ ತಿದ್ದುಪಡಿಯನ್ನು ಸ್ವಯಂಚಾಲಿತವಾಗಿ ಜಾರಿಗೊಳಿಸುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News