ಈ ಬ್ಯಾಂಕ್ ರೈತರಿಗೆ ನೀಡುತ್ತಿದೆ 2 ಲಕ್ಷ ರೂಪಾಯಿ, ಅರ್ಜಿ ಸಲ್ಲಿಸುವುದು ಹೇಗೆ ತಿಳಿಯಿರಿ
PNB Agriculture Loan: ಪಿಎನ್ ಬಿಯಲ್ಲಿ ಖಾತೆಯನ್ನು ಹೊಂದಿದ್ದು, ನೀವು ಕೂಡಾ ರೈತರಾಗಿದ್ದರೆ, 2 ಲಕ್ಷ ರೂಪಾಯಿಗಳ ಲಾಭವನ್ನು ಬ್ಯಾಂಕ್‌ನಿಂದ ನೀಡಲಾಗುತ್ತಿದೆ. ರೈತರ ಆದಾಯ ಹೆಚ್ಚಿಸಲು ಸರ್ಕಾರ ಮತ್ತು ಬ್ಯಾಂಕ್‌ನಿಂದ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
PNB Agriculture Loan : ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ಇದು ಪ್ರಮುಖ ಸುದ್ದಿ. ಪಿಎನ್ ಬಿಯಲ್ಲಿ ಖಾತೆಯನ್ನು ಹೊಂದಿದ್ದು, ನೀವು ಕೂಡಾ ರೈತರಾಗಿದ್ದರೆ, ಬ್ಯಾಂಕ್‌ನಿಂದ 2 ಲಕ್ಷ ರೂ.ಗಳ ಲಾಭವನ್ನು ನೀಡಲಾಗುತ್ತಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ರಾಹಕರಿಗೆ ಹಲವು ರೀತಿಯ ಸೌಲಭ್ಯಗಳನ್ನು ಒದಗಿಸುತ್ತದೆ. ರೈತರ ಆದಾಯ ಹೆಚ್ಚಿಸಲು ಸರ್ಕಾರ ಮತ್ತು ಬ್ಯಾಂಕ್‌ನಿಂದ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಮೂಲಕ ರೈತರಿಗೆ ಆರ್ಥಿಕ ನೆರವು ಕೂಡ ನೀಡಲಾಗುತ್ತಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಅಧಿಕೃತ ಟ್ವೀಟ್‌ನಲ್ಲಿ PNB ಸ್ವರ್ಣಿಮ್ - ಕೃಷಿ ಚಿನ್ನದ ಸಾಲ ಯೋಜನೆ ಮೂಲಕ ಯಾವುದೇ ಋತುವಿನಲ್ಲಿ ನಿಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಬಹುದು ಎಂದು ಹೇಳಿದೆ. ಅಲ್ಲದೆ ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ನಿಮ್ಮ ಮನೆಯ ಹತ್ತಿರದ ಶಾಖೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದೆ.
ಇದನ್ನೂ ಓದಿ : Gold Price Today : ಎರಡು ದಿನಗಳ ನಂತರ ಭರ್ಜರಿ ಇಳಿಕೆ ಕಂಡ ಚಿನ್ನದ ಬೆಲೆ , ಬೆಳ್ಳಿ ಕೂಡಾ ಭಾರೀ ಅಗ್ಗ
ಈಗ ರೈತರು ತಮ್ಮ ಕೃಷಿ ಸಂಬಂಧಿತ ಅಗತ್ಯಗಳನ್ನು ಪೂರೈಸಲು ಚಿಂತಿಸಬೇಕಾಗಿಲ್ಲ ಎಂದು ಪಿಎನ್ ಬಿ ಹೇಳಿದೆ. ಕೃಷಿಗೆ ಸಂಬಂಧಿಸಿದ ಸಂಪನ್ಮೂಲಗಳು ಮತ್ತು ಹಣಕ್ಕಾಗಿ ಕೃಷಿ ಚಿನ್ನದ ಸಾಲ ಯೋಜನೆಯ ಲಾಭವನ್ನು ಪಡೆಯಬಹುದು.
ಈ ಸಾಲದ ವಿಶೇಷತೆ :
1. ಚಿನ್ನದ ಆಭರಣಗಳ ಮೇಲೆ ಸಾಲವನ್ನು ಪಡೆಯಬಹುದು.
2. ಸಾಲವನ್ನು ತೆಗೆದುಕೊಳ್ಳುವ ಪ್ರಕ್ರಿಯೆಯು ತುಂಬಾ ಸುಲಭವಾಗಿದೆ.
3. ಸಿಗುತ್ತದೆ 2 ಲಕ್ಷ ರೂಪಾಯಿ ಲೋನ್
4. ಪೇಪರ್ ವರ್ಕ್ ಕೂಡಾ ಕಡಿಮೆ
5. ಗರಿಷ್ಠ 10 ಲಕ್ಷದವರೆಗೆ ಸಾಲವನ್ನು ತೆಗೆದುಕೊಳ್ಳಬಹುದು.
ಇದನ್ನೂ ಓದಿ : Arecanut Today Price: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ದಿಢೀರ್ ಕುಸಿತ!
ಈ ಯೋಜನೆಯ ಲಾಭ ಪಡೆಯಲು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ವೆಬ್‌ಸೈಟ್ pnbindia.in ಗೆ ಭೇಟಿ ನೀಡಬಹುದು. ಇಲ್ಲಿ ನೀವು ಸಾಲದ ಬಗ್ಗೆ ಸಂಪೂರ್ಣ ಮಾಹಿತಿ ಸಿಗಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.