Bank Holidays list : ಇಂದಿನಿಂದ ಐದು ದಿನಗಳವರೆಗೆ ಬ್ಯಾಂಕ್ ರಜೆ

Bank Holidays in September: ಗ್ರಾಹಕರು ಮತ್ತು ಉದ್ಯೋಗಿಗಳಿಗೆ ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ಆರ್‌ಬಿಐ ವರ್ಷದ ಆರಂಭದಲ್ಲಿಯೇ ಬ್ಯಾಂಕ್ ರಜೆಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ.

Written by - Ranjitha R K | Last Updated : Sep 7, 2022, 03:22 PM IST
  • ಇಂದಿನಿಂದ ಸತತ 5 ದಿನಗಳವರೆಗೆ ಬ್ಯಾಂಕ್ ರಜೆ
  • ಸೆಪ್ಟೆಂಬರ್‌ನಲ್ಲಿ ಒಟ್ಟು 13 ದಿನಗಳ ರಜೆ
  • ಯಾವ ನಗರಗಳಲ್ಲಿ ಬ್ಯಾಂಕ್‌ ರಜೆ
Bank Holidays list : ಇಂದಿನಿಂದ ಐದು ದಿನಗಳವರೆಗೆ ಬ್ಯಾಂಕ್ ರಜೆ  title=
Bank Holiday list (file photo)

Bank Holidays in September: ಇಂದಿನಿಂದ ಸತತ 5 ದಿನಗಳವರೆಗೆ ಬ್ಯಾಂಕ್‌ ಮುಚ್ಚಿರುತ್ತದೆ. ರಿಸರ್ವ್ ಬ್ಯಾಂಕ್ ನೀಡಿರುವ ಬ್ಯಾಂಕ್ ರಜೆಗಳ ಪಟ್ಟಿಯ ಪ್ರಕಾರ ಇಂದಿನಿಂದ ಅಡಿ ದಿನಗಳವರೆಗೆ ಬ್ಯಾಂಕ್ ಕಾರ್ಯ ನಿರ್ವಹಿಸುವುದಿಲ್ಲ. ಗ್ರಾಹಕರು ಮತ್ತು ಉದ್ಯೋಗಿಗಳಿಗೆ ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ಆರ್‌ಬಿಐ ವರ್ಷದ ಆರಂಭದಲ್ಲಿಯೇ ಬ್ಯಾಂಕ್ ರಜೆಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ.

ಸೆಪ್ಟೆಂಬರ್‌ನಲ್ಲಿ ಒಟ್ಟು 13 ದಿನಗಳ ರಜೆ : 
ಸೆಪ್ಟೆಂಬರ್‌ನಲ್ಲಿ ಒಟ್ಟು 13 ದಿನಗಳವರೆಗೆ  ಬ್ಯಾಂಕ್ ರಜೆ ಇರಲಿದೆ.  ಈ ಪೈಕಿ ಸೆಪ್ಟೆಂಬರ್ 1, 4 ಮತ್ತು 6 ರ ರಜಾದಿನಗಳು ಈಗಾಗಲೇ ಕಳೆದಿವೆ. ಮುಂದಿನ 5 ದಿನಗಳವರೆಗೆ ಏಕೆ ಮತ್ತು ಯಾವ ನಗರಗಳಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ  ಎನ್ನುವುದನ್ನು ನೋಡೋಣ. 

ಇದನ್ನೂ ಓದಿ SBI Digital Banking: ಎಸ್‌ಬಿಐ ಡಿಜಿಟಲ್ ಬ್ಯಾಂಕಿಂಗ್ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ

- 7 ನೇ ಮತ್ತು 8 ನೇ ಸೆಪ್ಟೆಂಬರ್ - ಓಣಂ
- 9 ನೇ ಸೆಪ್ಟೆಂಬರ್ - ಇಂದ್ರಜಾತ
- 10 ನೇ ಸೆಪ್ಟೆಂಬರ್ - ಶ್ರೀ ನಾರಾಯಣ ಗುರು ಜಯಂತಿ / 2 ನೇ ಶನಿವಾರ
- 11 ನೇ ಸೆಪ್ಟೆಂಬರ್ - ಭಾನುವಾರ 

ಯಾವ ನಗರಗಳಲ್ಲಿ ಬ್ಯಾಂಕ್‌ ರಜೆ : 
ಓಣಂ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 7 ಮತ್ತು 8 ರಂದು ತಿರುವನಂತಪುರಂ ಮತ್ತು ಕೊಚ್ಚಿಯಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಸೆಪ್ಟೆಂಬರ್ 9 ರಂದು, ಇಂದ್ರಜಾತದಿಂದಾಗಿ ಸಿಕ್ಕಿಂನ ಗ್ಯಾಂಗ್ಟಾಕ್ ನಲ್ಲಿ ಬ್ಯಾಂಕ್ ರಜೆ ಇರುತ್ತದೆ. ಆರ್‌ಬಿಐ ಕ್ಯಾಲೆಂಡರ್ ಪ್ರಕಾರ, ಶ್ರೀ ನಾರಾಯಣ ಗುರು ಜಯಂತಿಯಂದು ಕೇರಳದ ತಿರುವನಂತಪುರಂ ಮತ್ತು ಕೊಚ್ಚಿಯ ಬ್ಯಾಂಕ್‌ಗಳು ಸೆಪ್ಟೆಂಬರ್ 10 ರಂದು ಮುಚ್ಚಲ್ಪಡುತ್ತವೆ.

ಇದನ್ನೂ ಓದಿ ಪಿಎಂ ಕಿಸಾನ್‌ನ 12ನೇ ಕಂತು ನಿಮ್ಮ ಖಾತೆ ಸೇರಿದೆಯೇ? ಈ ರೀತಿ ಪರಿಶೀಲಿಸಿ

ಅಧಿಕೃತ ಪಟ್ಟಿಯನ್ನು ಪರಿಶೀಲಿಸಿ : 
ಬ್ಯಾಂಕ್ ರಜಾದಿನಗಳ ಕುರಿತು ಹೆಚ್ಚಿನ ಮಾಹಿತಿಗಾಗಿ,  ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ಲಿಂಕ್ https://rbi.org.in/Scripts/HolidayMatrixDisplay.aspx ಗೆ ಭೇಟಿ ನೀಡಬಹುದು. ಇಲ್ಲಿ ನೀವು ಪ್ರತಿ ತಿಂಗಳು ಪ್ರತಿ ರಾಜ್ಯದ ಬ್ಯಾಂಕ್ ರಜಾದಿನಗಳ ಮಾಹಿತಿ ಸಿಗಲಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News