PPF Calculation: ನೀವು ಸಹ ಕೋಟ್ಯಾಧೀಶರಾಗಲು ಬಯಸುತ್ತಿದ್ದರೆ, ಇದೆ ಸರಿಯಾದ ಸಮಯವಾಗಿದೆ. ಕೋಟ್ಯಾಧೀಶರಾಗಲು, ಇಂದಿನಿಂದಲೇ ಹೂಡಿಕೆಯನ್ನು ಪ್ರಾರಂಭಿಸಿ. ಇದಕ್ಕಾಗಿ, ನಿಮಗೆ ಹೆಚ್ಚಿನ ಹೂಡಿಕೆ ಅಗತ್ಯವಿಲ್ಲ, ಆದರೆ ಪ್ರತಿ ತಿಂಗಳು ನಿಯಮಿತ ರೂಪದಲ್ಲಿ ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ಅತ್ಯಲ್ಪ ಹಣವನ್ನು ಹೂಡಿಕೆ ಮಾಡಬೇಕು. ಈ ಕೆಳಗೆ ಸೂಚಿಸಲಾಗಿರುವ ವಿಧಾನ ಅನುಸರಿಸಿ ನೀವು ಹೂಡಿಕೆ ಮಾಡುವುದನ್ನು ಮುಂದುವರಿಸಿದರೆ, ನಿವೃತ್ತಿಯ ಮುಂಚೆಯೇ ನೀವು ಕೋಟ್ಯಾಧೀಶರಾಗಬಹುದು.


COMMERCIAL BREAK
SCROLL TO CONTINUE READING

ದೀರ್ಘಾವಧಿಯ ಹೂಡಿಕೆ
ಸಾರ್ವಜನಿಕ ಭವಿಷ್ಯ ನಿಧಿಯು ದೀರ್ಘಾವಧಿಯ ಹೂಡಿಕೆಗೆ ಒಂದು ಉತ್ತಮ ಆಯ್ಕೆಯಾಗಿದೆ, ಇದರಲ್ಲಿ ನೀವು ಉತ್ತಮ ಆದಾಯವನ್ನು ಪಡೆಯಬಹುದು. PPF ನಲ್ಲಿ, ನೀವು ಒಂದು ವರ್ಷದಲ್ಲಿ 1.5 ಲಕ್ಷದವರೆಗೆ ಹೂಡಿಕೆ ಮಾಡಬಹುದು, ಅಂದರೆ ತಿಂಗಳಿಗೆ 12,500 ರೂ. ಹೂಡಿಕೆ ಮಾಡಬಹುದು. ಒಂದು ವೇಳೆ ನೀವೂ ಕೂಡ ಕೋಟ್ಯಾಧೀಶರಾಗಳು ಬಯಸುತ್ತಿದ್ದೆರೆ, ನೀವು ಪ್ರತಿ ತಿಂಗಳು ಎಷ್ಟು ಹೂಡಿಕೆ ಮಾಡಬೇಕು ಮತ್ತು ಎಷ್ಟು ಸಮಯದವರೆಗೆ ಹೂಡಿಕೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.


PPF ನಲ್ಲಿ 7.1% ಬಡ್ಡಿ ಸಿಗುತ್ತದೆ
ಪ್ರಸ್ತುತ, ಕೇಂದ್ರ ಸರ್ಕಾರವು PPF ಖಾತೆಗಳಿಗೆ ಶೇ. 7.1 ವಾರ್ಷಿಕ ಬಡ್ಡಿಯನ್ನು ನೀಡುತ್ತದೆ. 15 ವರ್ಷಗಳವರೆಗೆ ನೀವು ಇದರಲ್ಲಿ ಹೂಡಿಕೆ ಮಾಡಬಹುದು. ಅದರಂತೆ, ತಿಂಗಳ ಹೂಡಿಕೆಯ ಒಟ್ಟು ಮೌಲ್ಯ 12500 ರೂ. ಆಗಿರುತ್ತದೆ. ಅಂದರೆ 15 ವರ್ಷಗಳ ಬಳಿಕ ನಿಮ್ಮ ಒಟ್ಟು ಮೊತ್ತ ರೂ.40,68,209 ರೂ. ಆಗಿರುತ್ತದೆ. ಅಂದರೆ ನಿಮ್ಮ ಒಟ್ಟು ಹೂಡಿಕೆ 22.5 ಲಕ್ಷ ರೂ. ಮತ್ತು ಅದರ ಬಡ್ಡಿ 18,18,209 ರೂ.


ಒಂದು ಕೋಟಿ ರೂಪಾಯಿಗಳ ನಿಧಿ ಹೇಗೆ ನಿರ್ಮಿಸಬೇಕು?
ಪ್ರಕರಣ ಸಂಖ್ಯೆ-1

1. ನಿಮಗೆ 30 ವರ್ಷ ವಯಸ್ಸಾಗಿದೆ ಎಂದಿಟ್ಟುಕೊಳ್ಳಿ ಮತ್ತು ನೀವು PPF ನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದ್ದೀರಿ ಎಂದು ಭಾವಿಸೋಣ
2. 15 ವರ್ಷಗಳ ಕಾಲ PPF ನಲ್ಲಿ ಪ್ರತಿ ತಿಂಗಳು 12500 ರೂ.ಗಳನ್ನು ಠೇವಣಿ ಮಾಡಿದ ನಂತರ, ನೀವು 40,68,209 ರೂ. ಪಡೆಯಬಹುದು.
3. ಈಗ ಈ ಹಣವನ್ನು ಹಿಂಪಡೆಯಬೇಕಾಗಿಲ್ಲ, ನೀವು 5-5 ವರ್ಷಗಳ ಅವಧಿಗೆ PPF ಅನ್ನು ಹಾಗೆಯೇ ಮುಂದುವರೆಸಿ.
4. ಅಂದರೆ, 15 ವರ್ಷಗಳ ನಂತರ, ಇನ್ನೂ 5 ವರ್ಷಗಳವರೆಗೆ ಹೂಡಿಕೆ ಅಂದರೆ, 20 ವರ್ಷಗಳ ನಂತರ ಈ ಮೊತ್ತ 66,58,288 ರೂ. ಆಗುತ್ತದೆ
5. 20 ವರ್ಷಗಳ ಬಳಿಕ ಮತ್ತೆ 5 ವರ್ಷಗಳವರೆಗೆ ನಿಮ್ಮ ಹೂಡಿಕೆಯನ್ನು ವಿಸ್ತರಿಸಿ, ಅಂದರೆ, 25 ವರ್ಷಗಳ ನಂತರ ಮೊತ್ತವು - 1,03,08,015 ರೂ. ಆಗುತ್ತದೆ. ಈ ರೀತಿಯಲ್ಲಿ ನೀವು ಕೋಟ್ಯಾಧೀಶರಾಗುವಿರಿ
ಅಂದರೆ, ನೀವು 30 ನೇ ವಯಸ್ಸಿನಲ್ಲಿ ಪ್ರತಿ ತಿಂಗಳು 12500 ರೂಪಾಯಿಗಳನ್ನು PPF ನಲ್ಲಿ ಹೂಡಿಕೆ ಮಾಡಿದರೆ, ನಂತರ 25 ವರ್ಷಗಳ ನಂತರ, ಅಂದರೆ 55 ನೇ ವಯಸ್ಸಿನಲ್ಲಿ ನೀವು ಕೋಟ್ಯಾಧೀಶರಾಗುವಿರಿ. PPF ಖಾತೆಯ ಮುಕ್ತಾಯ ಅವಧಿಯು 15 ವರ್ಷಗಳು ಎಂಬುದನ್ನು ನೆನಪಿನಲ್ಲಿಡಿ. ಈ ಖಾತೆಯನ್ನು 15 ವರ್ಷಗಳವರೆಗೆ ವಿಸ್ತರಿಸಬೇಕಾದರೆ, ಈ ಖಾತೆಯನ್ನು ಮುಂದಿನ ಐದು ವರ್ಷಗಳವರೆಗೆ ವಿಸ್ತರಿಸಬಹುದು.


ಇದನ್ನೂ ಓದಿ-Petrol-Diesel Update: ಪೆಟ್ರೋಲ್-ಡಿಸೇಲ್ ಭಾರಿ ಕೊರತೆ! ಈ ರಾಜ್ಯದ 4500 ಪಂಪ್ ಗಳ ಸಪ್ಲೈ ಮೇಲೆ ನಿರ್ಭಂಧ


ಪ್ರಕರಣ ಸಂಖ್ಯೆ-2
ನೀವು 12500 ರೂಪಾಯಿ ಬದಲಿಗೆ ಸ್ವಲ್ಪ ಕಡಿಮೆ ಮೊತ್ತವನ್ನು PPF ನಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದು, ಆದರೆ 55 ನೇ ವಯಸ್ಸಿನಲ್ಲಿ ಕೋಟ್ಯಾಧೀಶರಾಗಲು ಬಯಸುತ್ತಿದ್ದರೆ ನೀವು ಸ್ವಲ್ಪ ಮುಂಚಿತವಾಗಿ ಹೂಡಿಕೆಯನ್ನು ಪ್ರಾರಂಭಿಸಬೇಕು.
1. 25 ನೇ ವಯಸ್ಸಿನಲ್ಲಿ, ನೀವು ಪ್ರತಿ ತಿಂಗಳು ನಿಮ್ಮ PPF ಖಾತೆಯಲ್ಲಿ 10,000 ಹೂಡಿಕೆಯನ್ನು ಪ್ರಾರಂಭಿಸಿದ್ದೀರಿ ಎಂದು ಭಾವಿಸೋಣ.
2. ಶೇಕಡಾ 7.1 ರ ಪ್ರಕಾರ, 15 ವರ್ಷಗಳ ನಂತರ ನೀವು ಒಟ್ಟು ಮೌಲ್ಯವನ್ನು 32,54,567 ರೂ. ಆಗುತ್ತದೆ.
3. ಈಗ ಅದನ್ನು ಮತ್ತೆ 5 ವರ್ಷಗಳವರೆಗೆ ವಿಸ್ತರಿಸಿ, 20 ವರ್ಷಗಳ ನಂತರ ಒಟ್ಟು ಮೌಲ್ಯ 53,26,631 ರೂ. ಆಗುತ್ತದೆ.
4. ಅದನ್ನು ಮತ್ತೆ 5 ವರ್ಷಗಳವರೆಗೆ ವಿಸ್ತರಿಸಿ, 25 ವರ್ಷಗಳ ನಂತರ ನಿಮ್ಮ ಒಟ್ಟು ಮೌಲ್ಯ  82,46,412 ರೂ. ಆಗುತ್ತದೆ.
5. ಅದನ್ನು ಮತ್ತೆ 5 ವರ್ಷಗಳವರೆಗೆ ವಿಸ್ತರಿಸಿದರೆ, ಅಂದರೆ 30 ವರ್ಷಗಳ ನಂತರ ಒಟ್ಟು ಮೌಲ್ಯ  1,23,60,728 ರೂ.ಆಗುತ್ತದೆ.
6. ಅಂದರೆ, ನೀವು 55 ನೇ ವಯಸ್ಸಿನಲ್ಲಿ ನೀವು ಕೋಟ್ಯಾಧೀಶರಾಗುವಿರಿ.


ಇದನ್ನೂ ಓದಿ-Business Idea: ಕೇವಲ 25 ಸಾವಿರ ರೂ.ಗಳನ್ನು ಹೂಡಿಕೆ ಮಾಡಿ ಈ ಉದ್ಯಮದಿಂದ 72 ಲಕ್ಷ ರೂ.ಗಳವರೆಗೆ ನೀವು ಸಂಪಾದಿಸಬಹುದು, ಇಲ್ಲಿದೆ ವಿವರ?


ಪ್ರಕರಣ ಸಂಖ್ಯೆ 3
ತಿಂಗಳಿಗೆ 10,000 ರೂ. ಬದಲಿಗೆ ಕೇವಲ 7500 ರೂ. ಠೇವಣಿ ಇಟ್ಟರೂ 55 ವರ್ಷಕ್ಕೆ ನೀವು ಕೋಟ್ಯಾಧೀಶರಾಗಬಹುದು. ಆದರೆ ನೀವು 20ನೇ ವಯಸ್ಸಿನಲ್ಲಿ ಹೂಡಿಕೆ ಆರಂಭಿಸಬೇಕು.


1. ನೀವು 7.1% ಬಡ್ಡಿಯಲ್ಲಿ 15 ವರ್ಷಗಳ ಕಾಲ PPF ನಲ್ಲಿ ರೂ 7500 ಠೇವಣಿ ಇರಿಸಿದರೆ, ಆಗ ನಿಮ್ಮ ಒಟ್ಟು ಮೌಲ್ಯ ರೂ 24,40,926 ಆಗುತ್ತದೆ.
2. 5 ವರ್ಷಗಳ ಬಳಿಕ, ಅಂದರೆ, 20 ವರ್ಷಗಳ ನಂತರ ಈ ಮೊತ್ತ 39,94,973 ರೂ. ಆಗುತ್ತದೆ.
3. ಮುಂದಿನ 5 ವರ್ಷಗಳ ನಂತರ ಅಂದರೆ 25 ವರ್ಷಗಳ ನಂತರ, ಈ ಮೊತ್ತ ರೂ 61,84,809ಕ್ಕೆ ತಲುಪುತ್ತದೆ.
4. ಮತ್ತೆ 5 ವರ್ಷಗಳ ನಂತರ, ಅಂದರೆ, 30 ವರ್ಷಗಳ ನಂತರ ಈ ಮೊತ್ತ  ರೂ 92,70,546ಕ್ಕೆ ತಲುಪುತ್ತದೆ
5. ಇನ್ನೂ 5 ವರ್ಷಗಳವರೆಗೆ ಹೂಡಿಕೆಯನ್ನು ಮುಂದುವರೆಸಿದರೆ, 35 ವರ್ಷಗಳ ನಂತರ ಮೊತ್ತವು ರೂ 1,36,18,714 ಆಗಿರುತ್ತದೆ.
6. ಅಂದರೆ, ನೀವು 55 ವರ್ಷ ವಯಸ್ಸಿನವರಾಗಿದ್ದಾಗ, ನೀವು ರೂ.1.25 ಕೋಟಿಗಿಂತ ಹೆಚ್ಚಿನ ಮೊತ್ತವನ್ನು ಹೊಂದುವಿರಿ. ನೆನಪಿಡಿ, ಕೋಟ್ಯಾಧೀಶರಾಗುವ ಮುಖ್ಯ ತಂತ್ರವೆಂದರೆ ಪಿಪಿಎಫ್ ಕಂಪೌಂಡಿಂಗ್ ಲಾಭವನ್ನು ಪಡೆದುಕೊಳ್ಳುವುದು, ಮುಂಚಿತವಾಗಿ ಹೂಡಿಕೆಯನ್ನು ಪ್ರಾರಂಭಿಸಿ ಮತ್ತು ತಾಳ್ಮೆಯಿಂದ ಹೂಡಿಕೆ ಮಾಡುವುದನ್ನು ಮುಂದುವರಿಸಿದರೆ ನೀವೂ ಕೂಡ ಕೋಟ್ಯಾಧೀಶರಾಗಬಹುದು.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.         


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.