Petrol Price Latest Update: ರಷ್ಯಾ-ಉಕ್ರೇನ್ ಯುದ್ಧದ ಪ್ರಭಾವ ಇದೀಗ ಭಾರತದ ಮೇಲೂ ಸ್ಪಷ್ಟವಾಗಿ ಗೋಚರಿಸಲಾರಂಭಿಸಿದೆ. ಈಗಾಗಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ.ಆದರೆ ತೈಲ ಕಂಪನಿಗಳು ಮಾತ್ರ ಯಾವುದೇ ರೀತಿಯ ನಷ್ಟಕ್ಕೆ ಒಳಗಾಗಲು ಬಯಸುತ್ತಿಲ್ಲ. ಇತ್ತೀಚೆಗಷ್ಟೇ ಪೆಟ್ರೋಲ್, ಡೀಸೆಲ್ ಬೆಲೆ ನಿಯಂತ್ರಿಸಲು ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು, ನಂತರ ಹಲವು ರಾಜ್ಯ ಸರ್ಕಾರಗಳು ವ್ಯಾಟ್ ಅನ್ನು ಕೂಡ ಇಳಿಸಿದ್ದವು. ಆದರೆ ಈಗ ದೇಶದಲ್ಲಿ ಹೊಸ ಬಿಕ್ಕಟ್ಟು ಆರಂಭಗೊಳ್ಳುತ್ತಿದೆ.
ತೈಲ ಮಾರಾಟ ಕಡಿತಗೊಲಿಸುತ್ತಿರುವ ಕಂಪನಿಗಳು
ಆದರೆ, ಈ ಮಧ್ಯೆ, ರಾಜಸ್ಥಾನದ ಎರಡು ತೈಲ ಕಂಪನಿಗಳು HPCL (ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್) ಮತ್ತು BPCL (ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್) ನಷ್ಟವನ್ನು ಕಡಿಮೆ ಮಾಡಲು ತೈಲ ಪಡಿತರ ಪ್ರಾರಂಭಿಸಿವೆ. ಇದರಿಂದ ಜನಸಾಮಾನ್ಯರಿಗೆ ಭಾರಿ ತೊಂದರೆಯಾಗುತ್ತಿದೆ. ಈ ಎರಡೂ ಕಂಪನಿಗಳ ಮಾರಾಟ ಅಧಿಕಾರಿಗಳು ಪೆಟ್ರೋಲ್ ಪಂಪ್ ಆಪರೇಟರ್‌ಗಳಿಗೆ 8 ಗಂಟೆಗಳ ಕಾಲ ಮಾತ್ರ ಪೆಟ್ರೋಲ್ ಮಾರಾಟ ಮಾಡಲು ಸೂಚಿಸುತ್ತಿದ್ದಾರೆ. ರಾತ್ರಿ 9 ಗಂಟೆಯ ನಂತರ ಪೆಟ್ರೋಲ್, ಡೀಸೆಲ್ ಮಾರಾಟ ಮಾಡಬಾರದು ಎಂಬ ನಿರ್ಬಂಧ ವಿಧಿಸುತ್ತಿದ್ದಾರೆ. ಅಂದರೆ ತೈಲ ಮಾರಾಟ ಕಡಿಮೆ ಮಾಡಬೇಕು ಎಂಬುದು ಇದರರ್ಥ.
ತೈಲ ಮಾರಾಟ ಕಡಿತಗೊಳಿಸಲು ಕಡಿಮೆ ಪೂರೈಕೆ ಎಂದು ಹೇಳಲಾಗುತ್ತಿದೆ, ಆದರೆ IOC (ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್) ತನ್ನ ಮಟ್ಟದಲ್ಲಿ ಸಂಪೂರ್ಣ ತೈಲವನ್ನು ಪೂರೈಸುತ್ತಿದೆ. ಅಂದರೆ ತೈಲ ಕಂಪನಿಗಳು ತಮ್ಮ ಲಾಭಕ್ಕಾಗಿ ಈ ರೀತಿ ಮಾಡುತ್ತಿವೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
ಪಂಪ್‌ನಲ್ಲಿ ಪೆಟ್ರೋಲ್-ಡೀಸೆಲ್ ಮಾರಾಟ ಸ್ಥಗಿತಗೊಂಡಿದೆ
ತೈಲ ಕಂಪನಿಗಳ ಈ ನಡೆಯಿಂದಾಗಿ ರಾಜಸ್ಥಾನದ 6700 ಪಂಪ್‌ಗಳ ಪೈಕಿ 4500 ಪಂಪ್‌ಗಳು ಒಣಗುವ ಹಂತ ತಲುಪಿವೆ. ಅಷ್ಟೇ ಅಲ್ಲ, ಜೂನ್ 11 ರಂದು ಎರಡನೇ ಶನಿವಾರ ಮತ್ತು ಜೂನ್ 12 ರಂದು ಭಾನುವಾರದ ಕಾರಣ ತೈಲ ಡಿಪೋಗಳನ್ನು ಮುಚ್ಚಲಾಗಿತ್ತು. ಇದಲ್ಲದೇ ರಿಲಯನ್ಸ್ ಮತ್ತು ಎಸ್ಸಾರ್ ಪಂಪ್‌ಗಳಲ್ಲಿ ತೈಲ ಮಾರಾಟವಾಗುತ್ತಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ಜಾಗತಿಕ ಬಿಕ್ಕಟ್ಟು ಇದಕ್ಕೆ ಕಾರಣ ಎಂದು ಬಿಪಿಸಿಎಲ್‌ನ ಡಿಪೋ ಉಸ್ತುವಾರಿ ಹೇಳಿದ್ದಾರೆ.
ರಾಜಸ್ಥಾನದಲ್ಲಿ ತೈಲ ಮಾರಾಟ ಹೇಗಿದೆ?
ಡೀಸೆಲ್: ದಿನಕ್ಕೆ 1.10 ಕೋಟಿ ಲೀಟರ್
ವಾರ್ಷಿಕ 400 ಕೋಟಿ ಲೀಟರ್
ಪೆಟ್ರೋಲ್: ದಿನಕ್ಕೆ 23 ಲಕ್ಷ ಲೀಟರ್
ವಾರ್ಷಿಕ 85 ಕೋಟಿ ಲೀಟರ್
ಇದನ್ನೂ ಓದಿ-PM Kisan: ಪಿಎಂ ಕಿಸಾನ್ ಕಂತಿನ ಹಣ ನೇರವಾಗಿ ರೈತರ ಮನೆಗೆ ತಲುಪಲಿದೆ, ಹೇಗೆ ಇಲ್ಲಿ ತಿಳಿಯಿರಿ
HPCL ಗೆ ಪತ್ರ ಬರೆಯಲಾಗಿದೆ
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಿಂದಾಗಿ ಹಣದುಬ್ಬರ ಏರಿಕೆಯಿಂದ ಜನಸಾಮಾನ್ಯರು ಈಗಾಗಲೇ ತೊಂದರೆಗೀಡಾಗಿದ್ದು, ನಂತರ ತೈಲದ ಕೊರತೆ ಅವರನ್ನು ಮತ್ತಷ್ಟು ತೊಂದರೆಗೀಡು ಮಾಡಿದೆ. ಈ ಕುರಿತು ಮಾತನಾಡಿರುವ ರಾಜಸ್ಥಾನ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಶನ್‌ನ ರಾಜ್ಯ ಅಧ್ಯಕ್ಷ ಸುನೀತ್ ಬಗೈ, 'ಎಚ್‌ಪಿಸಿಎಲ್ ಮತ್ತು ಬಿಪಿಸಿಎಲ್ ತಮ್ಮ ಡೀಲರ್‌ಗಳಿಗೆ ತೈಲ ಪೂರೈಕೆ ಮಾಡುತ್ತಿಲ್ಲ. ಎಚ್‌ಪಿಸಿಎಲ್‌ನ ಸಿಎಂಡಿ ಡಾ.ಪುಷ್ಪ್‌ಕುಮಾರ್ ಜೋಶಿ, ಬಿಪಿಸಿಎಲ್‌ನ ಕಾರ್ಯನಿರ್ವಾಹಕ ನಿರ್ದೇಶಕ ಪಿ.ಎಸ್.ರವಿ ಅವರಿಗೆ ಪರಿಸ್ಥಿತಿಯ ಬಗ್ಗೆ ಪತ್ರ ಬರೆಯಲಾಗಿದ್ದರೂ ಕೂಡ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.