ನವದೆಹಲಿ : ಇಂದು ಎಲ್ಲಾ ಯುವಕರು ತಮ್ಮದೇ ಆದ ಉದ್ಯೋಗ ಮಾಡಲು ಬಯಸುತ್ತಾರೆ. ಇದಕ್ಕಾಗಿ ಅವರಿಗೂ ಒಂದು ಉಪಾಯ ಮತ್ತು ಯೋಜನೆ ಇದೆ, ಆದರೆ ಕೊರತೆ ಅಂತ ಉಂಟಾಗುವುದು ಹಣ ಸಮಸ್ಯೆ ಮಾತ್ರ. ಹಣವಿಲ್ಲದೆ ಸ್ವಯಂ ಉದ್ಯೋಗ ಆರಂಭಿಸಲು ಪರದಾಡುತ್ತಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರ ಸ್ವಂತ ಉದ್ಯಮ ಆರಂಭಿಸಲು 10 ಲಕ್ಷದವರೆಗೆ ಸಾಲ ನೀಡುತ್ತಿದೆ. ನೀವು ಸಹ ಸ್ವಯಂ ಉದ್ಯೋಗಿಯಾಗಲು ಬಯಸಿದರೆ, ನೀವು ಅದಕ್ಕೆ ಅರ್ಜಿ ಸಲ್ಲಿಸಬಹುದು.


COMMERCIAL BREAK
SCROLL TO CONTINUE READING

ಸಣ್ಣ ಉದ್ಯಮಿಗಳು ಸಾಲ ಪಡೆಯಬಹುದು!


ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆ(Pradhan Mantri Mudra Loan Yojana) ಅಡಿಯಲ್ಲಿ, ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಕೈಗೆಟುಕುವ ದರದಲ್ಲಿ ಸಾಲಗಳನ್ನು ನೀಡಲಾಗುತ್ತದೆ. ಕೇಂದ್ರ ಸರ್ಕಾರದ ಈ ಯೋಜನೆಯು 2015 ರಲ್ಲಿ ಪ್ರಾರಂಭವಾಯಿತು ಮತ್ತು ಸಣ್ಣ ಉದ್ಯಮಿಗಳಿಗೆ ಸುಲಭವಾಗಿ ಸಾಲ ನೀಡುವುದು ಇದರ ಉದ್ದೇಶವಾಗಿದೆ.


ಇದನ್ನೂ ಓದಿ : 4 ವರ್ಷಗಳ ನಂತರ ಬಡ್ಡಿದರ ಹೆಚ್ಚಿಸಲಿದೆ ಆರ್ಬಿಐ; ನಿಮ್ಮ ಸಾಲದ EMI ಮೇಲೆ ದೊಡ್ಡ ಪರಿಣಾಮ!


ಮೂರು ವಿಭಾಗಗಳಲ್ಲಿ ಸಾಲ ಲಭ್ಯವಿದೆ


ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆಯಡಿ ಮೂರು ವಿಭಾಗಗಳಲ್ಲಿ ಸಾಲಗಳನ್ನು ನೀಡಲಾಗುತ್ತದೆ. ಮೊದಲ ವರ್ಗದ ಶಿಶು ಅಡಿಯಲ್ಲಿ 50 ಸಾವಿರದವರೆಗೆ ಸಾಲ ನೀಡಲಾಗುತ್ತದೆ. ಎರಡನೇ ವರ್ಗದ ಕಿಶೋರ್ ಅಡಿಯಲ್ಲಿ 50 ಸಾವಿರದಿಂದ 5 ಲಕ್ಷದವರೆಗೆ ಸಾಲ ನೀಡಿದರೆ, ಮೂರನೇ ವರ್ಗದ ತರುಣ್ ಅಡಿಯಲ್ಲಿ 5 ಲಕ್ಷದಿಂದ 10 ಲಕ್ಷದವರೆಗೆ ಸಾಲ ನೀಡಲಾಗುತ್ತದೆ. ಸಾಲದ ಮರುಪಾವತಿ ಅವಧಿಯನ್ನು ಐದು ವರ್ಷಗಳವರೆಗೆ ವಿಸ್ತರಿಸಬಹುದು.


ಖಾತರಿ ಇಲ್ಲದೆ ಸಾಲ ಪಡೆಯಿರಿ


ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆಯಡಿ ಸರ್ಕಾರವು ಖಾತರಿಯಿಲ್ಲದೆ ಸಾಲವನ್ನು ನೀಡುತ್ತದೆ. ಸಾಲ(Loan)ವನ್ನು ಪಡೆಯಲು ಯಾವುದೇ ಪ್ರಕ್ರಿಯೆ ಶುಲ್ಕವಿಲ್ಲ. ಇದರಲ್ಲಿ ಕನಿಷ್ಠ ಬಡ್ಡಿ ದರ ಸುಮಾರು 12 ಪ್ರತಿಶತ. ಬಡ್ಡಿದರಗಳು ಸಾಲದ ಮೊತ್ತ ಮತ್ತು ಮರುಪಾವತಿ ಅವಧಿಯನ್ನು ಅವಲಂಬಿಸಿರುತ್ತದೆ.


18 ವರ್ಷ ಸಾಲಕ್ಕೆ ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು


ಸಾಲ ಪಡೆಯಲು ಕನಿಷ್ಠ ವಯಸ್ಸು 18 ವರ್ಷವಾಗಿರಬೇಕು. ಅಲ್ಲದೆ, ಕ್ರೆಡಿಟ್ ಸ್ಕೋರ್ ಸರಿಯಾಗಿರಬೇಕು, ಇಲ್ಲದಿದ್ದರೆ ಬ್ಯಾಂಕ್ ಸಾಲ(Bank Loan) ನೀಡಲು ನಿರಾಕರಿಸಬಹುದು. ಸಾಲ ಪಡೆಯಲು ಆಧಾರ್ ಕಾರ್ಡ್, ನಾಮಿನಿ ಮತ್ತು ವ್ಯಾಪಾರ ಯೋಜನೆ ನೀಡಬೇಕು. ಸರಿಯಾದ ದಾಖಲೆಗಳು ಲಭ್ಯವಿದ್ದರೆ ಮತ್ತು ಯೋಜನೆಯನ್ನು ಒಪ್ಪಿಕೊಂಡರೆ ಅರ್ಜಿ ಸಲ್ಲಿಸಿದ 10 ದಿನಗಳಲ್ಲಿ ಸಾಲ ಲಭ್ಯವಿದೆ.


ಇದನ್ನೂ ಓದಿ : Mutual Fund : ಇಂದೇ ಪತ್ನಿ ಹೆಸರಿನಲ್ಲಿ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿ, ನಿವೃತ್ತಿ ನಂತರ ಕೋಟ್ಯಾಧಿಪತಿಗಳಾಗಿ!


ನೀವು ಮುದ್ರಾ ಸಾಲಕ್ಕಾಗಿ ಇಲ್ಲಿ ಅರ್ಜಿ ಸಲ್ಲಿಸಬಹುದು


ಈ ಯೋಜನೆಯಡಿಯಲ್ಲಿ ಸಾರ್ವಜನಿಕ, ಖಾಸಗಿ, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು, ಸಹಕಾರಿ ಬ್ಯಾಂಕ್‌ಗಳು(Co-Operative Bank) ಇತ್ಯಾದಿಗಳಿಂದ ಸಾಲ ಪಡೆಯಬಹುದು. ಈ ಯೋಜನೆಯಡಿಯಲ್ಲಿ 27 ಸಾರ್ವಜನಿಕ ವಲಯದ ಬ್ಯಾಂಕ್‌ಗಳು, 17 ಖಾಸಗಿ ಬ್ಯಾಂಕ್‌ಗಳು, 27 ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು ಮತ್ತು 25 ಮೈಕ್ರೋ ಫೈನಾನ್ಸ್ ಸಂಸ್ಥೆಗಳನ್ನು ಸೇರಿಸಲಾಗಿದೆ.


ಲೋನ್ ಪಡೆಯಲು ಮುದ್ರಾ ಲೋನ್ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ. ಸಾಲದ ಅರ್ಜಿ ನಮೂನೆಯನ್ನು ಭರ್ತಿ ಮಾಡಿ. ಮುದ್ರಾ ಸಾಲ ನೀಡುವ ಬ್ಯಾಂಕ್‌ನಲ್ಲಿ ಅರ್ಜಿಯನ್ನು ಸಲ್ಲಿಸಿ. ಅರ್ಜಿಯನ್ನು ಅನುಮೋದಿಸಿದರೆ ನೀವು ಸಾಲವನ್ನು ಪಡೆಯುತ್ತೀರಿ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.