Inflation Rate in India: ದೇಶದಲ್ಲಿ ಹಣದುಬ್ಬರ ಒಂದು ದೊಡ್ಡ ಸಮಸ್ಯೆಯಾಗಿ ಹೊರಹೊಮ್ಮಿದೆ. ಹಣದುಬ್ಬರ ಹೆಚ್ಚಾದಂತೆ ಅದು ಸಾಮಾನ್ಯ ಜನರ ಜೇಬಿನ ಮೇಲೂ ಪ್ರಭಾವ ಬೀರುತ್ತದೆ. ಏತನ್ಮಧ್ಯೆ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ದೇಶದಲ್ಲಿ ಹಣದುಬ್ಬರ ಅಧಿಕವಾಗಿದೆ ಎಂಬುದನ್ನು ಒಪ್ಪಿಕೊಂಡಿದೆ. ಈ ದೃಷ್ಟಿಯಿಂದ, ಹಣದುಬ್ಬರದ ಹೆಚ್ಚಳದ ಕುರಿತಾದ ಆತಂಕಗಳನ್ನು ದೃಢವಾಗಿ ನಿಗ್ರಹಿಸಲು ವಿತ್ತೀಯ ನೀತಿಯ ಅವಶ್ಯಕತೆಯಿದೆ ಎಂದು ಅದು ಹೇಳಿದೆ. ಚಿಲ್ಲರೆ ಹಣದುಬ್ಬರದಲ್ಲಿ ಮೂರು ತಿಂಗಳ ಅವಧಿಯ ಕುಸಿತವು ಆಗಸ್ಟ್‌ನಲ್ಲಿ ನಿಂತುಹೋಗಿದೆ ಮತ್ತು ಪ್ರಮುಖವಾಗಿ ಖಾದ್ಯ ಪದಾರ್ಥಗಳ ಬೆಲೆ ಏರಿಕೆಯಿಂದ ಅದು ಶೇಕಡಾ 7 ಕ್ಕೆ ತಲುಪಿದೆ.


COMMERCIAL BREAK
SCROLL TO CONTINUE READING

ಹಣದುಬ್ಬರ ಹೆಚ್ಚಾಗಬಹುದು
ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಹಣದುಬ್ಬರವು ಸತತ ಎಂಟನೇ ತಿಂಗಳಿಗೆ ರಿಸರ್ವ್ ಬ್ಯಾಂಕ್‌ನ ಸಾಮಾನ್ಯ ಮಟ್ಟವಾಗಿರುವ ಶೇ. 6 ಕ್ಕಿಂತ ಹೆಚ್ಚಾಗಿದೆ. ವಿತ್ತೀಯ ನೀತಿಯನ್ನು ಪರಿಗಣಿಸುವಾಗ RBI ಮುಖ್ಯವಾಗಿ ಚಿಲ್ಲರೆ ಹಣದುಬ್ಬರ ದರವನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಆರ್‌ಬಿಐ ಡೆಪ್ಯುಟಿ ಗವರ್ನರ್ ಮೈಕೆಲ್ ದೇಬಬ್ರತಾ ಪಾತ್ರ ನೇತೃತ್ವದ ತಂಡವು ಬರೆದ ಲೇಖನದಲ್ಲಿ, ಜಾಗತಿಕ ಆರ್ಥಿಕತೆಯಲ್ಲಿ ಆರ್ಥಿಕ ಚಟುವಟಿಕೆಯಲ್ಲಿನ ಮಂದಗತಿಯು ಹಣದುಬ್ಬರ ಏರಿಕೆಗೆ ಕಾರಣವಾಗಬಹುದು ಮತ್ತು ಪ್ರಸ್ತುತ ಅದು ಹೆಚ್ಚಾಗಲಿದೆ ಎನ್ನಲಾಗಿದೆ.


ಇದನ್ನೂ ಓದಿ-Nirmala Sitharaman: ವಂಚನೆಗಳನ್ನು ತಡೆಗಟ್ಟಲು ಬ್ಯಾಂಕ್ ಗಳಿಗೆ ಸಲಹೆ ನೀಡಿದ ವಿತ್ತ ಸಚಿವೆ


ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸಿ
ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಆರ್ಥಿಕ ಬೆಳವಣಿಗೆಯ ಮಟ್ಟದಲ್ಲಿ ಸ್ವಲ್ಪ ಮಂದಗತಿ ಕಂಡುಬಂದಿದ್ದು, ಭಾರತೀಯ ಆರ್ಥಿಕತೆಯು ಅದರಿಂದ ಹೊರಬರುವತ್ತ ಸಾಗುತ್ತಿದೆ ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ. ಲೇಖನದಲ್ಲಿ ಪ್ರಕಟಗೊಂಡ ಮಾಹಿತಿ ಪ್ರಕಾರ, ಒಟ್ಟಾರೆ ಬೇಡಿಕೆಯು ಬಲವಾಗಿ ಮುಂದುವರೆದಿದ್ದು, ಹಬ್ಬದ ಪ್ರಾರಂಭದೊಂದಿಗೆ ಅದು ಹೆಚ್ಚಾಗುವ ನಿರೀಕ್ಷೆಯಿದೆ. ದೇಶೀಯ ಮಟ್ಟದಲ್ಲಿನ ಆರ್ಥಿಕ ಪರಿಸ್ಥಿತಿಗಳು ಸಹ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸಲಿವೆ.


ಇದನ್ನೂ ಓದಿ-ವೃದ್ಧಾಪ್ಯದಲ್ಲಿ ಖಚಿತ ಆದಾಯ: 1000 ರೂ. ಹೂಡಿಕೆಯಿಂದ ಪ್ರತಿ ತಿಂಗಳು 20 ಸಾವಿರ ಪಿಂಚಣಿ!


ಈ ದಿನದಂದು ಮುಂದಿನ ಸಭೆ ನಡೆಯಲಿದೆ
ಆದರೆ, ಈ ಲೇಖನದಲ್ಲಿ ವ್ಯಕ್ತಪಡಿಸಲಾಗಿರುವ ಅಭಿಪ್ರಾಯಗಳು ಕೇವಲ ಲೇಖಕರ ಅಭಿಪ್ರಾಯಗಳಾಗಿದ್ದು, ರಿಸರ್ವ್ ಬ್ಯಾಂಕ್‌ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ ಎಂದು ಕೇಂದ್ರ ಬ್ಯಾಂಕ್ ಸ್ಪಷ್ಟಪಡಿಸಿದೆ. ಆರ್‌ಬಿಐ ಗವರ್ನರ್ ನೇತೃತ್ವದ ಹಣಕಾಸು ನೀತಿ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ, ಹಣದುಬ್ಬರವನ್ನು ನಿಯಂತ್ರಿಸಲು ಸೆಂಟ್ರಲ್ ಬ್ಯಾಂಕ್ ಮೇ ತಿಂಗಳಿನಿಂದ ರೆಪೊ ದರವನ್ನು ಶೇ. 1.40 ರಷ್ಟು ಹೆಚ್ಚಿಸಿದೆ. ವಿತ್ತೀಯ ಸಮಿತಿಯ ಮುಂದಿನ ಸಭೆಯು ಸೆಪ್ಟೆಂಬರ್ 28 ರಿಂದ 30, 2022 ರವರೆಗೆ ನಡೆಯಲಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.