ಮುಂಬೈ : ನಿಯಂತ್ರಿತ ಸಂಸ್ಥೆಗಳ ವಿರುದ್ಧ ಸಾರ್ವಜನಿಕ ದೂರುಗಳ ಪರಿಹಾರದ ಜವಾಬ್ದಾರಿಯನ್ನು ಯಾವುದೇ ಹೊರಗಿನ ಏಜೆನ್ಸಿಗೆ ವಹಿಸಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಸ್ಪಷ್ಟಪಡಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ (Social media)ಹರಿದಾಡುತ್ತಿರುವ ಸುದ್ದಿಗಳನ್ನು ಗಮನದಲ್ಲಿಟ್ಟುಕೊಂಡು, RBI ಈ  ಹೇಳಿಕೆ  ನೀಡಿದೆ. 


COMMERCIAL BREAK
SCROLL TO CONTINUE READING

ದೂರುಗಳ ಪರಿಹಾರಕ್ಕೆ ಈಗಾಗಲೇ ವ್ಯವಸ್ಥೆ ಮಾಡಲಾಗಿದೆ :
ರಿಸರ್ವ್ ಬ್ಯಾಂಕ್ ಇಂಟಿಗ್ರೇಟೆಡ್ ಒಂಬುಡ್ಸ್‌ಮನ್ ಸ್ಕೀಮ್ 2021 (RB-IOS) ಅಡಿಯಲ್ಲಿ ದೂರುಗಳ ಪರಿಹಾರಕ್ಕಾಗಿ ವ್ಯವಸ್ಥೆಗಳನ್ನು ಈಗಾಗಲೇ ಮಾಡಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸಂದೇಶಗಳಲ್ಲಿ, ರಿಸರ್ವ್ ಬ್ಯಾಂಕ್ (Reserve Bank Of India) ಮೇಲ್ವಿಚಾರಣೆಯಲ್ಲಿರುವ ಘಟಕಗಳ ವಿರುದ್ಧ ಶುಲ್ಕವನ್ನು ಪಾವತಿಸುವ ಮೂಲಕ, ಥರ್ಡ್ ಪಾರ್ಟಿಗೆ ದೂರು ನೀಡಬಹುದು. ಮಾತ್ರವಲ್ಲ, ವಿಚಾರಣೆಯನ್ನು ಶೀಘ್ರವೇ ಮುಗಿಸಬಹುದು ಎಂದು  ನೀಡಬಹುದು ಮತ್ತು ಆರಂಭಿಕ ವಿಚಾರಣೆಯನ್ನು ಪಡೆಯಬಹುದು ಎಂದು ಈ ಸಂದೇಶಗಳಲ್ಲಿ ಹೇಳಲಾಗಿದೆ. 


ಇದನ್ನೂ ಓದಿ : Mahindra Offers: ಗ್ರಾಹಕರಿಗೆ ಮಹೀಂದ್ರಾ ಹೋಳಿ ಕೊಡುಗೆ, ಕಾರುಗಳ ಮೇಲೆ 3 ಲಕ್ಷಕ್ಕೂ ಹೆಚ್ಚು ರಿಯಾಯಿತಿ


ಉಚಿತ ದೂರು ನಿವಾರಣಾ ವ್ಯವಸ್ಥೆ ಜಾರಿಯಲ್ಲಿದೆ :
ನಿಯಂತ್ರಿತ ಸಂಸ್ಥೆಗಳ ವಿರುದ್ಧದ ದೂರುಗಳ ಇತ್ಯರ್ಥಕ್ಕೆ ಯಾವುದೇ ಏಜೆನ್ಸಿಯೊಂದಿಗೆ ಆರ್‌ಬಿಐ (RBI) ಯಾವುದೇ ಪ್ರಸ್ತಾಪವನ್ನು ಹೊಂದಿಲ್ಲ ಎಂದು ಕೇಂದ್ರ ಬ್ಯಾಂಕ್ ಹೇಳಿದೆ. RB-IOS ಅಡಿಯಲ್ಲಿ ಯಾವುದೇ ಶುಲ್ಕವನ್ನು ಪಾವತಿಸಲು ಯಾವುದೇ ನಿಬಂಧನೆಗಳಿಲ್ಲದೆ RBI ಉಚಿತ ದೂರು ಪರಿಹಾರ ವ್ಯವಸ್ಥೆಯನ್ನು ಜಾರಿಗೆ ತಂದಿದೆ.


ನಿಯಂತ್ರಿತ ಸಂಸ್ಥೆಗಳ ವಿರುದ್ಧ ಯಾವುದೇ ದೂರನ್ನು ಗ್ರಾಹಕರು ನೇರವಾಗಿ ಸೆಂಟ್ರಲ್ ಬ್ಯಾಂಕ್‌ನ ಪೋರ್ಟಲ್ ಅಥವಾ ಇ-ಮೇಲ್ ಮೂಲಕ ಸಲ್ಲಿಸಬಹುದು ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ಕುಂದುಕೊರತೆ ನಿರ್ವಹಣಾ ವ್ಯವಸ್ಥೆ (CMS) ಪೋರ್ಟಲ್‌ನಲ್ಲಿ ಮಾಡಲಾದ ದೂರುಗಳ ಪ್ರಗತಿಯನ್ನು ಸಹ ವೀಕ್ಷಿಸಬಹುದು ಎಂದು ಆರ್‌ಬಿಐ ಹೇಳಿದೆ.


ಇದನ್ನೂ ಓದಿ :  Aadhaar Card: ಮೊಬೈಲ್ ಸಂಖ್ಯೆ ಇಲ್ಲದೆ ಆಧಾರ್ ಡೌನ್‌ಲೋಡ್ ಮಾಡಿ, ಸುಲಭ ಮಾರ್ಗ ತಿಳಿಯಿರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.