Mahindra Offers: ಬಣ್ಣಗಳ ಹಬ್ಬ ಹೋಳಿ ಹಬ್ಬದ ಪ್ರಯುಕ್ತ ಆಯ್ದ ಕಾರುಗಳ ಮೇಲೆ ಮಹೀಂದ್ರಾ ಬಂಪರ್ ಡಿಸ್ಕೌಂಟ್‌ಗಳನ್ನು ಘೋಷಿಸಿದೆ. ಇದರಲ್ಲಿ ಗ್ರಾಹಕರು 3.02 ಲಕ್ಷ ರೂ.ವರೆಗೆ ಆಫರ್‌ಗಳನ್ನು ಪಡೆಯಬಹುದಾಗಿದೆ. XUV100, XUV300, Scorpio, Bolero Neo, Marazzo ಮತ್ತು Alturas G4 ನಲ್ಲಿ ಮಹೀಂದ್ರಾ ಈ ಕೊಡುಗೆಗಳನ್ನು ನೀಡಿದೆ. ಮಹೀಂದ್ರ ಥಾರ್ ಗ್ರಾಹಕರಲ್ಲಿ ತುಂಬಾ ಮೆಚ್ಚುಗೆಗೆ ಪಾತ್ರವಾಗಿರುವ ವಾಹನವಾಗಿದ್ದು, ಕಂಪನಿಯು ಈ ಆಫ್-ರೋಡರ್‌ನಲ್ಲಿ ಯಾವುದೇ ರಿಯಾಯಿತಿಯನ್ನು ನೀಡಿಲ್ಲ.
ಮಹೀಂದ್ರಾದ ಯಾವ ಕಾರುಗಳ ಮೇಲೆ ಎಷ್ಟು ರಿಯಾಯಿಸಿ ಲಭ್ಯವಿದೆ:
ಮಹೀಂದ್ರ KUV100 NXT:
ಮಹೀಂದ್ರಾ & ಮಹೀಂದ್ರಾ (Mahindra&Mahindra) ಈ ಸಣ್ಣ ಗಾತ್ರದ SUV ಯಲ್ಲಿ 61,055 ರೂ.ವರೆಗೆ ಕೊಡುಗೆಗಳನ್ನು ಒದಗಿಸಿದೆ. ಇವುಗಳಲ್ಲಿ ರೂ. 38,055 ರವರೆಗಿನ ನಗದು ರಿಯಾಯಿತಿಗಳು, ರೂ. 3,000 ವರೆಗಿನ ಕಾರ್ಪೊರೇಟ್ ರಿಯಾಯಿತಿಗಳು ಮತ್ತು ರೂ. 20,000 ವರೆಗಿನ ವಿನಿಮಯ ಕೊಡುಗೆಗಳು ಸೇರಿವೆ.
ಮಹೀಂದ್ರ XUV300:
ಈ ಕಾರಿನ ಮೇಲೆ 30,000 ರೂ.ವರೆಗಿನ ನಗದು ರಿಯಾಯಿತಿ, 10,000 ರೂ.ವರೆಗಿನ ಉಚಿತ ಆಕ್ಸೆಸರಿಗಳು, ರೂ. 25,000 ವರೆಗೆ ಎಕ್ಸ್‌ಚೇಂಜ್ ಆಫರ್ ಮತ್ತು ರೂ. 4,000 ವರೆಗೆ ಕಾರ್ಪೊರೇಟ್ ರಿಯಾಯಿತಿ ಸೇರಿದಂತೆ ಒಟ್ಟು ರೂ.69,000 ಆಫರ್‌ಗಳನ್ನು ನೀಡಲಾಗಿದೆ.
ಇದನ್ನೂ ಓದಿ- ಕೇವಲ 1 ರೂಪಾಯಿಯಲ್ಲಿ ಸ್ಕೂಟಿ ಮನೆಗೆ ತನ್ನಿ, ಈ ಕಂಪನಿಯಿಂದ 3 ದಿನಗಳ ವಿಶೇಷ ಕೊಡುಗೆ
ಮಹೀಂದ್ರ ಸ್ಕಾರ್ಪಿಯೋ :
ಗ್ರಾಹಕರ ನೆಚ್ಚಿನ ಮಹೀಂದ್ರ ಸ್ಕಾರ್ಪಿಯೊ (Mahindra Scorpio) ಎಸ್‌ಯುವಿ ಮೇಲೆ ಮಹೀಂದ್ರಾ ಒಟ್ಟು ರೂ.34,000 ವರೆಗೆ ಕೊಡುಗೆಗಳನ್ನು ನೀಡಿದೆ. ಇವುಗಳಲ್ಲಿ 15,000 ರೂ.ವರೆಗಿನ ಉಚಿತ ಪರಿಕರಗಳು, ರೂ. 4,000 ವರೆಗಿನ ಕಾರ್ಪೊರೇಟ್ ರಿಯಾಯಿತಿಗಳು ಮತ್ತು ರೂ. 15,000 ವರೆಗಿನ ವಿನಿಮಯ ಬೋನಸ್ ಸೇರಿವೆ.
ಮಹೀಂದ್ರ ಅಲ್ಟುರಾಸ್ ಜಿ4:
ಇದು ಮಹೀಂದ್ರಾದ ಅತ್ಯಂತ ದುಬಾರಿ SUV ಆಗಿದ್ದು, ಇದರ ಮೇಲೆ ಕಂಪನಿಯು 3.02 ಲಕ್ಷದವರೆಗೆ ರಿಯಾಯಿತಿಯನ್ನು ನೀಡುತ್ತಿದೆ. ಈ ಆಫರ್‌ಗಳಲ್ಲಿ 2.2 ಲಕ್ಷ ರೂ.ವರೆಗಿನ ನಗದು ರಿಯಾಯಿತಿ, ರೂ. 50,000 ವರೆಗಿನ ಎಕ್ಸ್‌ಚೇಂಜ್ ಬೋನಸ್, ರೂ. 11,500 ವರೆಗಿನ ಕಾರ್ಪೊರೇಟ್ ರಿಯಾಯಿತಿ ಮತ್ತು ರೂ. 20,000 ಮೌಲ್ಯದ ಉಚಿತ ಬಿಡಿಭಾಗಗಳು ಸೇರಿವೆ.
ಇದನ್ನೂ ಓದಿ- ಅರ್ಜಿ ಸಲ್ಲಿಸದೆಯೇ ಸಾವಿರಾರು ಮಂದಿಯ ಖಾತೆಗೆ ಬಿತ್ತು ಲೋನ್ ಹಣ, ತಾಂತ್ರಿಕ ಕಾರಣದಿಂದಾದ ಎಡವಟ್ಟು
ಮಹೀಂದ್ರ ಮರಾಜ್ಜೊ :
ಮಹೀಂದ್ರ ಮರಾಝೋ ಗ್ರಾಹಕರು 55,200 ರೂ.ವರೆಗಿನ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಇದರಲ್ಲಿ, ಬೇಸ್ M2 ಟ್ರಿಮ್‌ನಲ್ಲಿ 20,000 ರೂಪಾಯಿಗಳವರೆಗೆ ನಗದು ರಿಯಾಯಿತಿಯನ್ನು ನೀಡಲಾಗುತ್ತಿದ್ದು, ಉಳಿದ ಟ್ರಿಮ್‌ಗಳು 15,000 ರೂಪಾಯಿಗಳ ನಗದು ರಿಯಾಯಿತಿಯನ್ನು ಪಡೆಯುತ್ತಿವೆ. ಕಂಪನಿಯ ಕಾರಿನ ಮೇಲೆ 15,000 ರೂಪಾಯಿಗಳವರೆಗೆ ವಿನಿಮಯ ಬೋನಸ್ ಮತ್ತು 5,200 ರೂಪಾಯಿಗಳವರೆಗೆ ಕಾರ್ಪೊರೇಟ್ ರಿಯಾಯಿತಿಯನ್ನು ನೀಡಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.