ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಖಾಸಗಿ ವಲಯದ ಎರಡನೇ ಅತಿ ದೊಡ್ಡ ಬ್ಯಾಂಕ್ HDFCಗೆ ಬಿಗ್ ಶಾಕ್ ನೀಡಿದೆ. HDFC ಮೇಲೆ ಕೆಲ ನಿಬಂಧನೆಗಳನ್ನು ವಿಧಿಸಿರುವ RBI, ಬ್ಯಾಂಕ್ ನ ಎಲ್ಲ ಡಿಜಿಟಲ್ ವ್ಯವಹಾರಗಳನ್ನು ನಿರ್ಬಂಧಿಸಿದೆ. ಈ ನಿರ್ಬಂಧನೆಯಲ್ಲಿ ನೂತನ ಕ್ರೆಡಿಟ್ ಕಾರ್ಡ್ ಗಳು ಕೂಡ ಸೇರಿವೆ. ಆದರೆ, RBI ವಿಧಿಸಿರುವ ಈ ನಿಬಂಧನೆ ಕೇವಲ ತಾತ್ಕಾಲಿಕವಾಗಿವೆ.  ಕಳೆದ ಎರಡು ವರ್ಷಗಳಲ್ಲಿ ಮೂರನೇ ಬಾರಿಗೆ RBI, HDFC ಮೇಲೆ ನಿರ್ಬಂಧನೆ ವಿಧಿಸುತ್ತಿರುವುದು ಇಲ್ಲಿ ಗಮನಾರ್ಹ.


COMMERCIAL BREAK
SCROLL TO CONTINUE READING

ಇದನ್ನು ಓದಿ-Lakshmi Vilas Bank ವಿಲೀನದ ಬಗ್ಗೆ RBI ಏನು ಹೇಳಿದೆ?


ಈ ನಿರ್ಬಂಧನೆಯ ಕುರಿತು ಮಾಹಿತಿ ನೀಡಿರುವ HDFC ಬ್ಯಾಂಕ್, ಬ್ಯಾಂಕ್ ನ ಡಿಜಿಟಲ್ ವ್ಯವಹಾರದ ಮೇಲೆ RBI ತಾತ್ಕಾಲಿಕ ನಿರ್ಬಂಧನೆ ವಿಧಿಸಿ ಆದೇಶ ಹೊರಡಿಸಿದೆ. ಇವುಗಳಲ್ಲಿ ಕ್ರೆಡಿಟ್ ಕಾರ್ಡ್ ಜಾರಿಗೂ ಕೂಡ ತಡೆ ಶಾಮೀಲಾಗಿದೆ. ಜೊತೆಗೆ ಬ್ಯಾಂಕ್ ಮಂಡಳಿಗೆ ನ್ಯೂನತೆಗಳನ್ನು ಸರಿಪಡಿಸಿ ಹೊಣೆಗಾರಿಕೆಯನ್ನು ಗೊತ್ತುಪಡಿಸಲು ಸೂಚಿಸಿದೆ ಎಂದಿದೆ.


ಇದನ್ನು ಓದಿ- ಬ್ಯಾಂಕ್ ಖಾತೆಯಲ್ಲಿ ಮೋಸವಾಗಿದ್ದರೆ, ನಿಮ್ಮೆಲ್ಲಾ ಹಣ ಹಿಂತಿರುಗಿಸಲಾಗುತ್ತದೆ! ಇಲ್ಲಿದೆ ದಾರಿ


HDFC ಬ್ಯಾಂಕ್ ತನ್ನ ಡಿಜಿಟಲ್ 2.0 ಉಪಕ್ರಮದಡಿಯಲ್ಲಿ ಯಾವುದೇ ಹೊಸ ಚಟುವಟಿಕೆಗಳನ್ನು ನಡೆಸಬಾರದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸೂಚಿಸಿದೆ. ಹೊಸ ಕ್ರೆಡಿಟ್ ಕಾರ್ಡ್ ಗ್ರಾಹಕರನ್ನು ವಿತರಿಸುವುದನ್ನು ನಿಲ್ಲಿಸಿ ಎಂದೂ ಕೂಡ ಹೇಳಿದೆ. ವಾಸ್ತವವಾಗಿ, ಬ್ಯಾಂಕ್ ಕಳೆದ ಎರಡು ವರ್ಷಗಳಿಂದ ತನ್ನ ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಮತ್ತು ಪಾವತಿ ಉಪಯುಕ್ತತೆ ಸೇವೆಗಳಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ.


ಇದನ್ನು ಓದಿ- ಮನೆ-ಕಾರ್ ಖರೀದಿಸಲು ಈ ಬ್ಯಾಂಕುಗಳಿಂದ ಸಿಗುತ್ತಿದೆ ಬಂಪರ್ ರಿಯಾಯಿತಿ


ಡಿಜಿಟಲ್ ಸೇವೆಗಳಲ್ಲಿ ಅಡಚಣೆ
ಎಚ್‌ಡಿಎಫ್‌ಸಿ ಬ್ಯಾಂಕಿನ ಡಿಜಿಟಲ್ ಸೇವೆಗಳ ಗ್ರಾಹಕರು ಅಡೆತಡೆಗಳಿಂದಾಗಿ ನಿರಂತರವಾಗಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಆರ್‌ಬಿಐ ಕೂಡ ಇದೀಗ ಬ್ಯಾಂಕನ್ನು ಮಂಡಳಿಯನ್ನು ಪ್ರಶ್ನಿಸಿದೆ. ವಾಸ್ತವವಾಗಿ, ಎಚ್‌ಡಿಎಫ್‌ಸಿ ಬ್ಯಾಂಕಿನ ಡೇಟಾ ಕೇಂದ್ರದಲ್ಲಿನ ಅವ್ಯವಸ್ಥೆಯಿಂದಾಗಿ, ಅದರ ಯುಪಿಐ ಪಾವತಿ, ಎಟಿಎಂ ಸೇವೆಗಳು ಮತ್ತು ಕಾರ್ಡ್ ಪಾವತಿಗಳನ್ನು ನಿಲ್ಲಿಸಲಾಗಿದೆ. ಇದರಿಂದಾಗಿ ಗ್ರಾಹಕರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.


ಇದನ್ನು ಓದಿ - HDFC ಬ್ಯಾಂಕ್ ನಲ್ಲಿ 14 ಸಾವಿರ ಉದ್ಯೋಗಾವಕಾಶ, ಈ ಕೆಲಸ ಮಾಡುವುದು ಅವಶ್ಯಕ


ಆರ್‌ಬಿಐ ಗಂಭೀರ ವಿಷಯ ಹೇಳಿದೆ
ಎಚ್‌ಡಿಎಫ್‌ಸಿ ಬ್ಯಾಂಕಿನ ಡಿಜಿಟಲ್ ಸೇವೆಗಳಲ್ಲಿ, ಕಳೆದ ಎರಡು ವರ್ಷಗಳಲ್ಲಿ ಮೂರು ಬಾರಿ ಇಂತಹ ಅಡಚಣೆಗಳು ಎದುರಾಗಿವೆ.  ಇದೇ ವೇಳೆ ತನ್ನ ಡೇಟಾ ಕೇಂದ್ರದಲ್ಲಿ ಸಮಸ್ಯೆ ಇದ್ದರೆ, ಇದಕ್ಕೆ ಕಾರಣವನ್ನು ವಿವರಿಸಬೇಕು ಎಂದು RBI ಸೂಚಿಸಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಎಚ್‌ಡಿಎಫ್‌ಸಿ ಬ್ಯಾಂಕ್ ಕಳೆದ ಎರಡು ವರ್ಷಗಳಲ್ಲಿ ವ್ಯವಸ್ಥೆ ಮತ್ತು ಪ್ರಕ್ರಿಯೆಯಲ್ಲಿ ಸಾಕಷ್ಟು ಸುಧಾರಣೆಗಳನ್ನು ಮಾಡಲಾಗಿದೆ ಎಂದು ಹೇಳಿತ್ತು. ಆದರೆ, ಆರ್‌ಬಿಐ ಬ್ಯಾಂಕಿನ ಹಕ್ಕುಗಳ ಹೊರತಾಗಿಯೂ ಸಮಸ್ಯೆಗಳಿವೆ ಎಂದು ಹೇಳಿದ್ದು, ಇದು ಬಹಳ ಗಂಭೀರ ವಿಷಯವಾಗಿದೆ ಎಂದಿದೆ.