ನವದೆಹಲಿ: ಒಂದು ವೇಳೆ ನೀವೂ ಕೂಡ ನೀವು ಎಚ್‌ಡಿಎಫ್‌ಸಿ ಬ್ಯಾಂಕ್(HDFC Bank)ನೊಂದಿಗೆ ಸೇರಿ ಕೆಲಸ ಮಾಡಲು ಬಯಸುತ್ತಿದ್ದರೆ, ಇಲ್ಲಿದೆ ಸುವರ್ಣಾವಕಾಶ. ಎಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಮೀಣ ಪ್ರದೇಶದಲ್ಲಿ ತನ್ನ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಲು ಬಯಸಿದೆ. ಇದಕ್ಕಾಗಿ, ಈ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಬ್ಯಾಂಕ್ ತನ್ನ ಬ್ಯಾಂಕ್ ಮಿತ್ರರ ಸಂಖ್ಯೆಯನ್ನು 25,000 ಕ್ಕೆ ಹೆಚ್ಚಿಸಲು ಯೋಜನೆ ರೂಪಿಸುತ್ತಿದೆ. ಬ್ಯಾಂಕ್ ನ ಓರ್ವ ಉನ್ನತ ಅಧಿಕಾರಿ ನೀಡಿರುವ ಮಾಹಿತಿಯ ಪ್ರಕಾರ ಪ್ರಸ್ತುತ ಬ್ಯಾಂಕ್ ಮಿತ್ರರ ಸಂಖ್ಯೆ 11,000 ರಷ್ಟಿದೆ ಎನ್ನಲಾಗಿದೆ.
ಎಚ್‌ಡಿಎಫ್‌ಸಿ ಬ್ಯಾಂಕಿನ ಸರ್ಕಾರಿ ಸಾಂಸ್ಥಿಕ ವ್ಯವಹಾರ ಮತ್ತು ಸ್ಟಾರ್ಟ್ಅಪ್‌ಗಳ ಮುಖ್ಯಸ್ಥೆ ಸ್ಮಿತಾ ಭಗತ್ ಮಾತನಾಡಿ, 'ದೇಶದ ದೂರದ ಪ್ರದೇಶಗಳಲ್ಲಿ ವಾಸಿಸುವ ಎಲ್ಲ ಗ್ರಾಹಕರಿಗೆ ಸಹ ಉತ್ತಮ ಬ್ಯಾಂಕಿಂಗ್ ಸೌಲಭ್ಯಗಳನ್ನು ಒದಗಿಸಲು ನಾವು ಯಾವಾಗಲೂ ಪ್ರಯತ್ನಿಸುತ್ತಿದ್ದೇವೆ. ನಮ್ಮ ಪ್ರಯತ್ನಗಳ ಭಾಗವಾಗಿ, ಈ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ನಾವು ಬ್ಯಾಂಕ್ ಸ್ನೇಹಿತರ ಸಂಖ್ಯೆಯನ್ನು 11,000 ದಿಂದ 25,000 ಕ್ಕೆ ಹೆಚ್ಚಿಸುತ್ತಿದ್ದೇವೆ ಎಂದಿದ್ದಾರೆ.
ಎಲ್ಲಾ ಬ್ಯಾಂಕಿಂಗ್ ಸೌಲಭ್ಯಗಳಾದ ಖಾತೆ ತೆರೆಯುವಿಕೆ, ಟರ್ಮ್ ಠೇವಣಿ, ಪಾವತಿ ಉತ್ಪನ್ನಗಳು ಮತ್ತು ಸಾಲಗಳು ಗ್ರಾಹಕರಿಗೆ ಬ್ಯಾಂಕ್ ಸ್ನೇಹಿತರ ಮೂಲಕ ಲಭ್ಯವಿರುತ್ತವೆ. ಬ್ಯಾಂಕ್ ತನ್ನ ಬ್ಯಾಂಕ್ ಮಿತ್ರ ಜಾಲವನ್ನು ವಿಸ್ತರಿಸಲು ಸರ್ಕಾರದ ಸಾಮಾನ್ಯ ಸೇವಾ ಕೇಂದ್ರಗಳನ್ನು (ಸಿಎಸ್‌ಸಿ) ಬಳಸುವುದರ ಬಗ್ಗೆಯೂ ಗಮನಹರಿಸಲಿದೆ ಎಂದು ಅವರು ಹೇಳಿದ್ದಾರೆ.
ಲಾಕ್‌ಡೌನ್ ಅವಧಿಯಲ್ಲಿ ಬ್ಯಾಂಕ್ ಕರಸ್ಪಾನ್ಡೆಂಟ್ ಗಳಿಗಾಗಿ ಬೇಡಿಕೆ ಗಮನಾರ್ಹವಾಗಿ ಹೆಚ್ಚಾಗಿದೆ. ಸರ್ಕಾರವು ನೆರವು ಹಣವನ್ನು ಜನ ಧನ್ ಮತ್ತು ಇತರ ಖಾತೆಗಳಿಗೆ ವರ್ಗಾಯಿಸಿದಾಗಿನಿಂದ ಬ್ಯಾಂಕುಗಳಲ್ಲಿನ ಗ್ರಾಹಕರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿದೆ. ಜನಸಂದಣಿಯನ್ನು ತಪ್ಪಿಸಲು ಬ್ಯಾಂಕುಗಳು ಜನರನ್ನು ಪ್ರೇರೇಪಿಸುತ್ತಿದ್ದರೂ. ಈ ಕೆಲಸಕಾಗಿ ಅವು ಬ್ಯಾಂಕ್ ಮಿತ್ರ ಅಥವಾ ಬ್ಯಾಂಕ್ ಕರಸ್ಪಾನ್ಡೆಂಟ್ ಗಳನ್ನು ನೆಮಿಸುತ್ತಿವೆ , ಅವರು ಗ್ರಾಹಕರಿಗೆ ಮನೆ ಮನೆಗೆ ಹಣ ತಲುಪಿಸುತ್ತಿದ್ದಾರೆ.
ಬ್ಯಾಂಕ್ ಮಿತ್ರರ ಕೆಲಸ ಏನು?
1. ಪ್ರಧಾನ್ ಮಂತ್ರಿ ಧನ್ ಯೋಜನೆ ಅಡಿಯಲ್ಲಿ ಉಳಿತಾಯ ಮತ್ತು ಇತರ ಸೌಲಭ್ಯಗಳ ಬಗ್ಗೆ ಶಿಕ್ಷಣ ಮತ್ತು ಜಾಗೃತಿ ಮೂಡಿಸುವುದು.
2. ಉಳಿತಾಯ ಮತ್ತು ಸಾಲಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾಹಿತಿ ಮತ್ತು ಸಲಹೆಯನ್ನು ನೀಡುವುದು.
3. ಗ್ರಾಹಕರನ್ನು ಗುರುತಿಸುವುದು. ಪ್ರಾಥಮಿಕ ಮಾಹಿತಿ, ಡೇಟಾವನ್ನು ಸಂಗ್ರಹಿಸುವುದು, ಫಾರ್ಮ್‌ಗಳನ್ನು ಇಡುವುದು.
4. ಜನರು ನೀಡಿದ ಮಾಹಿತಿಯನ್ನು ಪರಿಶೀಲಿಸುವುದು. ಖಾತೆದಾರ ನೀಡಿದ ಮೊತ್ತವನ್ನು ನಿರ್ವಹಿಸುವುದು ಮತ್ತು ಠೇವಣಿ ಇಡುವುದು.
5. ಅರ್ಜಿ ಮತ್ತು ಖಾತೆಗಳಿಗೆ ಸಂಬಂಧಿಸಿದ ನಮೂನೆಗಳನ್ನು ಭರ್ತಿ ಮಾಡುವುದು. ಸಮಯಕ್ಕೆ ಸರಿಯಾಗಿ ಪಾವತಿ ಮತ್ತು ಠೇವಣಿ ಇಡುವುದು.
6. ಒಬ್ಬರ ಹಣವನ್ನು ಸರಿಯಾದ ವ್ಯಕ್ತಿಗಳಿಗೆ ತಲುಪಿಸುವುದು ಮತ್ತು ಪಾವತಿ ಮಾಡುವುದು.
7. ಖಾತೆಗಳು ಮತ್ತು ಇತರ ಸೌಲಭ್ಯಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುವುದು.
ಬ್ಯಾಂಕ್ ಮಿತ್ರರಾಗಲು ಅರ್ಹತೆ ಏನು?
1. ಬ್ಯಾಂಕುಗಳು ನಿಯಮಿತವಾಗಿ ಇದರ ನೇಮಕಾತಿಗಾಗಿ ಜಾಹೀರಾತುಗಳನ್ನು ನೀಡುತ್ತವೆ ಮತ್ತು ಕೆಲವು ಬ್ಯಾಂಕುಗಳು ನೇರ ನೇಮಕಾತಿ ಮಾಡುತ್ತವೆ.
2. ಅರ್ಜಿ ಸಲ್ಲಿಸಲು, ನೀವು ಬ್ಯಾಂಕ್ ಮಿತ್ರದ ವೆಬ್‌ಲೈಟ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್ ಫಾರ್ಮ್ ಅನ್ನು ಭರ್ತಿ ಮಾಡಬಹುದು.
3. ಫಾರ್ಮ್ ನಲ್ಲಿ ನೀಡಲಾದ ಬ್ಯಾಂಕುಗಳಿಂದ ನಿಮ್ಮ ಪ್ರದೇಶದಲ್ಲಿ ಕೆಲಸ ಮಾಡುವ ಬ್ಯಾಂಕ್ ಅನ್ನು ಆರಿಸಿ ಮತ್ತು ಮಾಹಿತಿಯನ್ನು ಪಡೆದುಕೊಳ್ಳಿ.
4. ಆನ್‌ಲೈನ್ ಅರ್ಜಿಯನ್ನು ಪೂರ್ಣಗೊಳಿಸಿದ ನಂತರ, ನಿಮ್ಮ ಅರ್ಜಿಯನ್ನು ಪ್ರಾಥಮಿಕ ಪರಿಶೀಲನೆಗಾಗಿ ಕಳುಹಿಸಲಾಗುತ್ತದೆ.
5. ಪರಿಶೀಲನೆಯ ಕೊನೆಯಲ್ಲಿ, ನಿಮಗೆ ಇ-ಮೇಲ್ ಮೂಲಕ ಅರ್ಜಿಯ ದೃಡೀಕರಣ ನೀಡಲಾಗುತ್ತದೆ.
6. ಈಗ ನಿಮ್ಮ ಅರ್ಜಿಯನ್ನು ಆಯ್ದ ಬ್ಯಾಂಕ್ ಮತ್ತು BC (ಬಿಸಿನೆಸ್ ಕರೆಸ್ಪಾಂಡೆಂಟ್) ಗೆ ಕಳುಹಿಸಲಾಗುತ್ತದೆ.
7.BC ನಿಮ್ಮ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ ಮತ್ತು ಈ ಸಮಯದಲ್ಲಿ ನೀವು ಆಯ್ಕೆ ಮಾಡಿದ ಶಾಖೆಗೆ ನೀವು ದಾಖಲೆಗಳನ್ನು ಕೊಂಡೊಯ್ಯಬೇಕಾಗುತ್ತದೆ.