ನವದೆಹಲಿ: ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎಸ್‌ಬಿಐ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ಜನ ಧನ್ ಖಾತೆದಾರರಿಗೆ ಹೆಚ್ಚಿನ ಅನುಕೂಲಗಳನ್ನ ನೀಡಲು ಮುಂದಾಗಿದೆ. ಹೌದು, ನೀವು ಜನ ಧನ್ ಖಾತೆಯನ್ನ ಹೊಂದಿದ್ರೆ, ಅಥ್ವಾ ಅದನ್ನ ತೆರೆಯಲು ಯೋಜಿಸುತ್ತಿದ್ರೆ ಈ ಸುದ್ದಿ ನಿಮಗಾಗಿ.


COMMERCIAL BREAK
SCROLL TO CONTINUE READING

ಬ್ಯಾಂಕ್ ತನ್ನ ಖಾತೆದಾರರಿಗೆ 2 ಲಕ್ಷ ರೂಪಾಯಿಗಳ ಲಾಭವನ್ನ ನೀಡುತ್ತಿದ್ದು, ಈ ಬಗ್ಗೆ ಬ್ಯಾಂಕ್(SBI Bank) ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಅಂದ್ಹಾಗೆ, ಆಗಸ್ಟ್ 19, 2020 ರ ಹೊತ್ತಿಗೆ, ಈ ಯೋಜನೆಯಡಿ 40.35 ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಈ ಯೋಜನೆಯಡಿ, ಬ್ಯಾಂಕುಗಳು, ಅಂಚೆ ಕಚೇರಿಗಳು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಜೀರೋ ಬ್ಯಾಲೆನ್ಸ್‌ ಖಾತೆಯನ್ನ ತೆರೆಯಲಾಗುತ್ತೆ.


EPF ಖಾತೆಯಲ್ಲಿ ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ


ಎಸ್‌ಬಿಐ ಟ್ವೀಟ್(SBI Tweet) ಮಾಡಿದೆ..! ಎಸ್‌ಬಿಐ ರುಪೇ ಪೇ ಧನ್ ಕಾರ್ಡ್‌ಗಾಗಿ ನೀವು ಅರ್ಜಿ ಸಲ್ಲಿಸಿದರೆ, ನಿಮಗೆ 2 ಲಕ್ಷ ರೂಪಾಯಿಗಳವರೆಗೆ ಅಪಘಾತ ವಿಮೆ ಸಿಗುತ್ತದೆ ಎಂದು ಎಸ್‌ಬಿಐ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದೆ. ಇದಕ್ಕಾಗಿ, ನೀವು 90 ದಿನಗಳಿಗೊಮ್ಮೆ ಈ ಕಾರ್ಡ್ʼನ್ನ ಸ್ವೈಪ್ ಮಾಡಬೇಕು. ಈ ರೀತಿ ಮಾಡುವುದ್ರಿಂದ ನಿಮ್ಗೆ 2 ಲಕ್ಷ ರೂಪಾಯಿಗಳ ಅಪಘಾತ ವಿಮೆ ಅರ್ಹತೆ ಪಡೆಯುತ್ತೀರಿ.


Loan ಪಡೆಯುವವರಿಗೆ ನೆಮ್ಮದಿಯ ಸುದ್ದಿ ಪ್ರಕಟಿಸಿದ RBI, Repo Rate ನಲ್ಲಿ ಯಥಾಸ್ಥಿತಿ ಕಾಯ್ದ ಕೇಂದ್ರೀಯ ಬ್ಯಾಂಕ್


ಈ ಸರ್ಕಾರಿ ಖಾತೆಯಡಿಯಲ್ಲಿ ಗ್ರಾಹಕರು ಅನೇಕ ವಿಶೇಷ ಸೌಲಭ್ಯಗಳನ್ನ ಪಡೆಯುತ್ತಾರೆ. ಬ್ಯಾಂಕ್ ಗ್ರಾಹಕರಿಗೆ ರುಪೇ ಕಾರ್ಡ್(Rupay Card SBI) ಸೌಲಭ್ಯವನ್ನ ಸಹ ಒದಗಿಸುತ್ತಿದೆ. ಅದರಡಿಯಲ್ಲಿ ನೀವು ಹಣವನ್ನ ಹಿಂಪಡೆಯಬೋದು.


Driving Licence: Traffic Rules ಉಲ್ಲಂಘಿಸುವ ಮುನ್ನ ಎಚ್ಚರ


- ಜನ ಧನ್ ಖಾತೆ ಇದ್ದರೆ, ಪಿಎಂ ಕಿಸಾನ್ ಮತ್ತು ಶ್ರಮಯೋಗಿ ಮಾಂಧನ್ ಅವರಂತಹ ಯೋಜನೆಗಳಲ್ಲಿ ಪಿಂಚಣಿಗಾಗಿ ಖಾತೆಗಳನ್ನ ತೆರೆಯಲಾಗುತ್ತೆ.


- ದೇಶಾದ್ಯಂತ ಹಣ ವರ್ಗಾವಣೆ ಸೌಲಭ್ಯ


- ಸರ್ಕಾರದ ಯೋಜನೆಗಳ ಪ್ರಯೋಜನಗಳ ಲೆಕ್ಕಕ್ಕೆ ಹಣ ನೇರವಾಗಿ ಬರುತ್ತದೆ.


Share Market Updates Today, ಐವತ್ತೊಂದು ಸಾವಿರ ಗಡಿ ದಾಟಿದ ಸೆನ್ಸೆಕ್ಸ್


ಖಾತೆ ತೆರೆಯಲು ಈ ದಾಖಲೆಗಳು ಅಗತ್ಯವಾಗಿರುತ್ತದೆ. ಆಧಾರ್ ಕಾರ್ಡ್ ಅಥವಾ ಪಾಸ್‌ಪೋರ್ಟ್ ಅಥವಾ ಚಾಲನಾ ಪರವಾನಗಿ ಅಥವಾ ಪ್ಯಾನ್ ಕಾರ್ಡ್, ಮತದಾರರ ಕಾರ್ಡ್, ಎನ್‌ಆರ್‌ಇಜಿಎ ಜಾಬ್ ಕಾರ್ಡ್, ಅಧಿಕೃತವಾಗಿ ನೀಡಲಾದ ಪತ್ರ, ಇದರಲ್ಲಿ ಹೆಸರು, ವಿಳಾಸ ಮತ್ತು ಆಧಾರ್ ಸಂಖ್ಯೆಯನ್ನ ಬರೆಯಲಾಗಿದೆ, ಗೆಜೆಟೆಡ್ ಅಧಿಕಾರಿ ನೀಡಿದ ಪತ್ರ, ಲಗತ್ತಿಸಲು ದೃಢೀಕರಿಸಿದ ಫೋಟೋ.


ಇನ್ಮುಂದೆ PFನಲ್ಲಿ ಸಿಗಲ್ಲ ಈ ದೊಡ್ಡ ರಿಯಾಯಿತಿ, 1.2 ಲಕ್ಷ ಚಂದಾದಾರರಿಗೆ ಆಘಾತ


ಹೊಸ ಖಾತೆ ತೆರೆಯಲು ನೀವು ಇದನ್ನ ಮಾಡಬೇಕಾಗುತ್ತದೆ..! ನಿಮ್ಮ ಹೊಸ ಜನ ಧನ್ ಖಾತೆಯನ್ನ ತೆರೆಯಲು ನೀವು ಬಯಸಿದರೆ ನೀವು ಹತ್ತಿರದ ಬ್ಯಾಂಕ್‌ಗೆ ಹೋಗಿ ಖಾತೆ ತೆರೆಯಬೋದು. ಇದಕ್ಕಾಗಿ, ನೀವು ಬ್ಯಾಂಕಿನಲ್ಲಿ ಒಂದು ಫಾರ್ಮ್ ಅನ್ನು ಭರ್ತಿ ಮಾಡಬೇಕು. ಅದರಲ್ಲಿ ಹೆಸರು, ಮೊಬೈಲ್ ಸಂಖ್ಯೆ, ಬ್ಯಾಂಕ್ ಶಾಖೆಯ ಹೆಸರು, ಅರ್ಜಿದಾರರ ವಿಳಾಸ, ನಾಮಿನಿ, ವ್ಯವಹಾರ / ಉದ್ಯೋಗ ಮತ್ತು ವಾರ್ಷಿಕ ಆದಾಯ ಮತ್ತು ಅವಲಂಬಿತರ ಸಂಖ್ಯೆ, ಎಸ್‌ಎಸ್‌ಎ ಕೋಡ್ ಅಥವಾ ವಾರ್ಡ್ ಸಂಖ್ಯೆ, ಟೌನ್ ಕೋಡ್ ಇತ್ಯಾದಿಗಳನ್ನ ನೀಡಬೇಕಾಗುತ್ತೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.