Petrol-Diesel Price: ಸೆಂಚುರಿಗೆ ಸನಿಹದಲ್ಲಿ ಪೆಟ್ರೋಲ್, ಡೀಸೆಲ್ ರೇಟ್..! ಇನ್ನೂ ಹೆಚ್ಚಾಗುತ್ತಾ ಬೆಲೆ..?

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ  (Petrol Diesel Price) ಸೆಂಚುರಿ ಬಾರಿಸುವ  ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಕೃಷಿ ಸೆಸ್ ಹಾಕಿದ ಮೇಲೆ ಪೆಟ್ರೋಲ್ ಡೀಸೆಲ್ ಸಾರ್ವಕಾಲಿಕ ಬೆಲೆ ಏರಿಕೆ ದಾಖಲಿಸಿದೆ.

Written by - Ranjitha R K | Last Updated : Feb 7, 2021, 08:29 AM IST
  • ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸೆಂಚುರಿ ಬಾರಿಸುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ
  • ದೆಹಲಿ, ಮುಂಬಯಿ, ಕೋಲ್ಕತ್ತಾ ಮತ್ತು ಚೆನ್ನೈ ಈ ನಾಲ್ಕು ಮಹಾಮೆಟ್ರೋ ನಗರಗಳಲ್ಲಿ ಪೆಟ್ರೋಲ್ ದುಬಾರಿಯಾಗಿದೆ.
  • ಪ್ರತಿದಿನ ಬೆಳಗ್ಗೆ 6ಗಂಟೆಗೆ ಪೆಟ್ರೋಲಿಯಂ ಉತ್ಪನ್ನಗಳ ಲೇಟೆಸ್ಟ್ ರೇಟ್ ಗೊತ್ತಾಗುತ್ತದೆ.
Petrol-Diesel Price: ಸೆಂಚುರಿಗೆ ಸನಿಹದಲ್ಲಿ ಪೆಟ್ರೋಲ್, ಡೀಸೆಲ್ ರೇಟ್..! ಇನ್ನೂ ಹೆಚ್ಚಾಗುತ್ತಾ ಬೆಲೆ..? title=
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸೆಂಚುರಿ ಬಾರಿಸುವ ಎಲ್ಲಾ ಲಕ್ಷಣಗಳು (file photo)

ನವದೆಹಲಿ : ಪೆಟ್ರೋಲ್ ಮತ್ತು ಡೀಸೆಲ್ ಬೆಲೆ  (Petrol Diesel Price) ಸೆಂಚುರಿ ಬಾರಿಸುವ  ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಕೃಷಿ ಸೆಸ್ ಹಾಕಿದ ಮೇಲೆ ಪೆಟ್ರೋಲ್ ಡೀಸೆಲ್ ಸಾರ್ವಕಾಲಿಕ ಬೆಲೆ ಏರಿಕೆ ದಾಖಲಿಸಿದೆ. ಕೃಷಿ ಸೆಸ್ (Agri Cess) ಹೊರೆ ಸಾಮಾನ್ಯ ನಾಗರಿಕರ ಮೇಲೆ ಬೀಳಲು ಬಿಡುವುದಿಲ್ಲ ಎಂದು ಹಣಕಾಸು ಸಚಿವೆ  ನಿರ್ಮಲಾ ಸೀತಾರಾಮನ್ (Nirmala Sitaraman) ಹೇಳಿಬಿಟ್ಟಿದ್ದಾರೆ. ಪೆಟ್ರೋಲ್ ಗಗನಕ್ಕೇರುವ ರೀತಿ ನೋಡಿದರೆ, ಹಾಗೆ ಅನ್ನಿಸುತ್ತಿಲ್ಲ. 

ದೆಹಲಿ, ಮುಂಬಯಿ, ಕೋಲ್ಕತ್ತಾ ಮತ್ತು ಚೆನ್ನೈ ಈ ನಾಲ್ಕು ಮಹಾಮೆಟ್ರೋ ನಗರಗಳಲ್ಲಿ (Metro City) ಪೆಟ್ರೋಲ್ (Petrol) ದುಬಾರಿಯಾಗಿದೆ. ವಾಣಿಜ್ಯ ನಗರಿ ಮುಂಬಯಿನಲ್ಲಿ (Mumbai) ಪೆಟ್ರೊಲ್  ಪ್ರತಿ ಲೀಟರಿಗೆ 93.49 ರೂಪಾಯಿ ಮುಟ್ಟಿದೆ. ದೆಹಲಿಯಲ್ಲಿ (Delhi) ಪೆಟ್ರೋಲ್ ದರ 89.95 ರೂಪಾಯಿ ಅಜೂಬಾಜು ಇದೆ.  ಚೆನ್ನೈನಲ್ಲಿ ಪ್ರತಿ ಲೀಟರಿಗೆ 89.39 ಮತ್ತು ಕೊಲ್ಕತ್ತಾದಲ್ಲಿ ಪ್ರತಿಲೀಟರಿಗೆ 83.99 ರೂಪಾಯಿ ದಾಖಲಿಸಿದೆ.  

ಇದನ್ನೂ ಓದಿ : Share Market Updates Today, ಐವತ್ತೊಂದು ಸಾವಿರ ಗಡಿ ದಾಟಿದ ಸೆನ್ಸೆಕ್ಸ್

ಕರೋನಾ ಮಹಾ ಮಾರಿಯ (coronavirus) ನಡುವೆಯೂ 2020ರ ಫೆಬ್ರವರಿ 7 ರಂದು ದೆಹಲಿ, ಕೋಲ್ಕತ್ತಾ, ಮುಂಬಯಿ ಮತ್ತು ಚೆನ್ನೈನಲ್ಲಿ ಪೆಟ್ರೋಲ್  ಬೆಲೆ ಕ್ರಮವಾಗಿ 72.68, 75.36, 78.34 ಮತ್ತು 75.51 ರೂಪಾಯಿ ಆಗಿತ್ತು.  ಅಂಕಿ ಅಂಶಗಳನ್ನು ನೋಡಿದರೆ ಪೆಟ್ರೋಲ್ ಬೆಲೆಯಲ್ಲಿ ಸರಿಸುಮಾರು 20 ರೂಪಾಯಿ, ಡೀಸೆಲ್ (Diesel) ಬೆಲೆಯಲ್ಲಿ 15 ರೂಪಾಯಿ ಏರಿಕೆ ಕಳೆದ ಒಂದು ವರ್ಷದಲ್ಲಿ ಆಗಿದೆ. ಪ್ರತಿದಿನ ಬೆಳಗ್ಗೆ 6ಗಂಟೆಗೆ ಪೆಟ್ರೋಲಿಯಂ ಉತ್ಪನ್ನಗಳ ಲೇಟೆಸ್ಟ್ ರೇಟ್ ಗೊತ್ತಾಗುತ್ತದೆ. 

ಬೆಂಗಳೂರಿನಲ್ಲೂ (Bengaluru) ಪೆಟ್ರೋಲ್ 90ರ ಸನಿಹದಲ್ಲಿದೆ. ಪೆಟ್ರೋಲ್ ಬೆಲೆ 89.85 ರೂಪಾಯಿ ಹಾಗೂ ಡೀಸೆಲ್  ಬೆಲೆ 81.76 ರೂಪಾಯಿ ಆಗಿದೆ.  ಮಂಗಳೂರು (Mangaluru), ಹುಬ್ಬಳ್ಳಿ (Hubballi) ಮತ್ತು ಮೈಸೂರಿನಲ್ಲಿ (Mysore) ಪೆಟ್ರೋಲ್ ಬೆಲೆ ಕ್ರಮವಾಗಿ 89.09 ರೂಪಾಯಿ, 89.84 ರೂಪಾಯಿ, 89.58 ರೂಪಾಯಿ ಆಗಿದೆ. 

ಇದನ್ನೂ ಓದಿ : LPG Cylinders Price: ಗ್ರಾಹಕರಿಗೆ ಎಲ್‌ಪಿಜಿ ಸಿಲಿಂಡರ್ ಬೆಲೆ ಹೆಚ್ಚಳದ ಶಾಕ್

ಎಸ್ ಎಂಎಸ್ ಮಾಡಿ ರೇಟ್ ತಿಳಿದುಕೊಳ್ಳಿ.
ಎಸ್ ಎಂ ಎಸ್ (SMS) ಮಾಡಿ ನೀವು ಪೆಟ್ರೋಲ್ ಮತ್ತು ಡೀಸೆಲ್ ಆ ದಿನದ ರೇಟ್ ತಿಳಿದುಕೊಳ್ಳಬಹುದು. ಇಂಡಿಯನ್ ಆಯಿಲ್ ಗ್ರಾಹಕರು ಆರ್ ಎಸ್ ಪಿ RSP ಎಂದು ಬರೆದು  9224992249 ಎಸ್ ಎಂ ಎಸ್ ಮಾಡಿ ರೇಟ್ ತಿಳಿದುಕೊಳ್ಳಬಹುದು. ಬಿಪಿಸಿಎಲ್ (BPCL) ಕಂಪನಿಯವರು RSP ಎಂದು ಬರೆದು 9223112222 ಸಂಖ್ಯೆಗೆ ಮತ್ತು ಹೆಚ್ ಪಿಸಿಎಲ್ ಕಂಪನಿಯ (HPCL) ಗ್ರಾಹಕರು HPPrice ಎಂದು ಬರೆದು 9222201122  ಎಸ್ ಎಂ ಎಸ್ ಮಾಡಿ ರೇಟ್ (New rate) ತಿಳಿದುಕೊಳ್ಳಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News