ನವದೆಹಲಿ: SBI Latest News: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಮಹತ್ವದ ಮಾಹಿತಿ ಇದೆ. ನಾಳೆ ಮತ್ತು ನಾಡಿದ್ದು, ಕೆಲ ಸಮಯದವರೆಗೆ ಆನ್‌ಲೈನ್ ಬ್ಯಾಂಕಿಂಗ್  (Online banking) ಸೇವೆಗಳು ನಡೆಯುವುದಿಲ್ಲ. ನೀವು ಎಸ್‌ಬಿಐ (SBI) ಗ್ರಾಹಕರಾಗಿದ್ದರೆ , ಆ ಸಮಯದಲ್ಲಿ  ಯಾವುದೇ ರೀತಿಯ ಆನ್‌ಲೈನ್ ವಹಿವಾಟು ಮಾಡದಿರುವುದು ಉತ್ತಮ. 


COMMERCIAL BREAK
SCROLL TO CONTINUE READING

 ಆಗಸ್ಟ್ 6-7ರಂದು ಮುಚ್ಚಿರುತ್ತದೆ ಎಸ್‌ಬಿಐನ ಆನ್‌ಲೈನ್ ಬ್ಯಾಂಕಿಂಗ್ ಸೇವೆ :
ಎಸ್‌ಬಿಐ (SBI) ತನ್ನ ಆನ್‌ಲೈನ್ ಬ್ಯಾಂಕಿಂಗ್ (Online banking) ಸೇವೆಗಳನ್ನು ಆಗಸ್ಟ್ 6-7ರಂದು ಕೆಲವು ಗಂಟೆಗಳ ಕಾಲ ಸ್ಥಗಿತಗೊಳಿಸುವುದಾಗಿ  ಹೇಳಿದೆ. ನಿರ್ವಹಣಾ ಕಾರ್ಯಗಳಿಂದಾಗಿ, ಸೇವೆಗಳನ್ನು ಸ್ವಲ್ಪ ಸಮಯದವರೆಗೆ ನಿಲ್ಲಿಸಲಾಗುವುದು ಎಂದು ಎಸ್‌ಬಿಐ ಮಾಹಿತಿ ನೀಡಿದೆ.   ಈ ಸಮಯದಲ್ಲಿ, ಗ್ರಾಹಕರು ಎಸ್‌ಬಿಐನ ಇಂಟರ್ನೆಟ್ ಬ್ಯಾಂಕಿಂಗ್ (SBI internet banking) ಸೇವೆಗಳನ್ನು ಬಳಸಲು ಸಾಧ್ಯವಾಗುವುದಿಲ್ಲ. ಇದರಲ್ಲಿ ಯೋನೊ (SBI Yono), ಯೋನೊ ಲೈಟ್ (SBI Yono Lite) ಮತ್ತು ಯೋನೊ ಬಿಸ್ನೆಸ್ ಸೇರಿದಂತೆ ಇತರ ಡಿಜಿಟಲ್ ಬ್ಯಾಂಕಿಂಗ್ ಪ್ಲಾಟ್‌ಫಾರ್ಮ್‌ಗಳು ಸೇರಿವೆ.


ಇದನ್ನೂ ಓದಿ : Aadhaar- ವ್ಯಕ್ತಿಯ ಮರಣದ ನಂತರ ಆತನ ಆಧಾರ್ ಸಂಖ್ಯೆ ಏನಾಗುತ್ತೆ? ಸರ್ಕಾರ ಏನು ಮಾಡಲಿದೆ ಎಂದು ತಿಳಿಯಿರಿ


ಈ ಸಮಯದಲ್ಲಿ ಲಭ್ಯವಿರುವುದಿಲ್ಲ ಆನ್‌ಲೈನ್  ಸೇವೆಗಳು :
ಎಸ್‌ಬಿಐ ನೀಡಿರುವ ಮಾಹಿತಿ ಪ್ರಕಾರ ಬ್ಯಾಂಕಿನ ಎಲ್ಲಾ ಡಿಜಿಟಲ್ ಬ್ಯಾಂಕಿಂಗ್ ಪ್ಲಾಟ್‌ಫಾರ್ಮ್‌ಗಳು  (Digital banking) ಆಗಸ್ಟ್ 6  22.45 ರಿಂದ ಆಗಸ್ಟ್ 7 ರ 01.15 ಗಂಟೆಯವರೆಗೆ ಕಾರ್ಯ ನಿರ್ವಹಿಸುವುದಿಲ್ಲ. ಈ ಕುರಿತು  ಟ್ವೀಟ್ ಮೂಲಕ ಬ್ಯಾಂಕ್ ಮಾಹಿತಿ ನೀಡಿದೆ. ಆಗಸ್ಟ್ 6 ಮತ್ತು ಆಗಸ್ಟ್ 7 ರ ನಡುವೆ, ಎಸ್‌ಬಿಐನ ಆನ್‌ಲೈನ್ ಸೇವೆಗಳನ್ನು ಒಟ್ಟು 150 ನಿಮಿಷಗಳವರೆಗೆ ಸ್ಥಗಿತಗೊಳಿಸಲಾಗುವುದು. 


ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State bank of India) ದೇಶಾದ್ಯಂತ 22,000 ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ಡಿಸೆಂಬರ್ 31, 2020 ರ ಹೊತ್ತಿಗೆ, ಬ್ಯಾಂಕಿನ ಇಂಟರ್ನೆಟ್ ಬ್ಯಾಂಕಿಂಗ್ (Internet banking) ಗ್ರಾಹಕರ ಸಂಖ್ಯೆ ಸುಮಾರು 8.5 ಕೋಟಿ  ಮತ್ತು ಮೊಬೈಲ್ ಬ್ಯಾಂಕ್ ಗ್ರಾಹಕರ ಸಂಖ್ಯೆ 1.9 ಕೋಟಿ . ಇನ್ನು ಬ್ಯಾಂಕಿನ UPI ಗ್ರಾಹಕರ ಸಂಖ್ಯೆ ಸುಮಾರು 13.5 ಕೋಟಿ ಆಗಿದೆ. . ಬ್ಯಾಂಕಿನ ಆನ್‌ಲೈನ್ ಸೇವೆಯನ್ನು ಸ್ಥಗಿತಗೊಳಿಸುವುದರಿಂದ ಅನೇಕ ಗ್ರಾಹಕರು ತೊಂದರೆಗೊಳಗಾಗುತ್ತಾರೆ.


ಇದನ್ನೂ ಓದಿ : PM Jan-Dhan Yojana: ಪಿಎಂ ಜನ್-ಧನ್ ಖಾತೆಗಳ ಸಂಖ್ಯೆ 3 ಪಟ್ಟು ಹೆಚ್ಚಳ, 2.30 ಲಕ್ಷದವರೆಗೆ ನೇರ ಲಾಭ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ