Aadhaar- ವ್ಯಕ್ತಿಯ ಮರಣದ ನಂತರ ಆತನ ಆಧಾರ್ ಸಂಖ್ಯೆ ಏನಾಗುತ್ತೆ? ಸರ್ಕಾರ ಏನು ಮಾಡಲಿದೆ ಎಂದು ತಿಳಿಯಿರಿ

Aadhaar Latest News: ಕೆಲವೊಮ್ಮೆ ಕೆಲವು ಪ್ರಶ್ನೆಗಳಿಗೆ ಉತ್ತರ ತಿಳಿದಿರುವುದಿಲ್ಲ. ಇಂತಹ ಪ್ರಶ್ನೆಗಳಲ್ಲಿ ಒಂದು ಏನೆಂದರೆ, ಯಾವುದೇ ವ್ಯಕ್ತಿ ಮೃತ ಪಟ್ಟರೆ ಅವರ ಆಧಾರ್ ಸಂಖ್ಯೆಯನ್ನು ಸರ್ಕಾರ ಏನು ಮಾಡುತ್ತದೆ? ಎಂಬುದಾಗಿದೆ.

Written by - Yashaswini V | Last Updated : Aug 5, 2021, 12:25 PM IST
  • ವ್ಯಕ್ತಿಯ ಸಾವಿನ ನಂತರ ಆಧಾರ್ ಏನಾಗುತ್ತದೆ?
  • ಸತ್ತ ವ್ಯಕ್ತಿಯ ಆಧಾರ್ ಸಂಖ್ಯೆಯನ್ನು ರದ್ದುಗೊಳಿಸಲು ಸದ್ಯಕ್ಕೆ ಯಾವುದೇ ವ್ಯವಸ್ಥೆ ಇಲ್ಲ- ಸರ್ಕಾರದ ಸ್ಪಷ್ಟನೆ
  • ಮರಣ ಪ್ರಮಾಣಪತ್ರದೊಂದಿಗೆ ಆಧಾರ್ ಲಿಂಕ್ ಮಾಡಲು ನಡೆದಿದೆ ಸಿದ್ಧತೆ
Aadhaar- ವ್ಯಕ್ತಿಯ ಮರಣದ ನಂತರ ಆತನ ಆಧಾರ್ ಸಂಖ್ಯೆ ಏನಾಗುತ್ತೆ? ಸರ್ಕಾರ ಏನು ಮಾಡಲಿದೆ ಎಂದು ತಿಳಿಯಿರಿ title=
Aadhaar Latest News

ನವದೆಹಲಿ: Aadhaar Latest News- ಯಾವುದೇ ಕೆಲಸಕ್ಕೂ ಆಧಾರ್ ಕಾರ್ಡ್ ಒಂದು ಪ್ರಮುಖ ದಾಖಲೆಯಾಗಿದೆ. ಆಧಾರ್ ಕಾರ್ಡ್ ಇಲ್ಲದೇ ನಮ್ಮ ಅನೇಕ ಕೆಲಸಗಳು ಅಪೂರ್ಣವಾಗಿವೆ. ಇದು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ವಿಷಯವಾಗಿರಲಿ, ಸರ್ಕಾರಿ ಯೋಜನೆಗಳ ಲಾಭವನ್ನು ಪಡೆದುಕೊಳ್ಳುವುದಾಗಿರಲಿ ಅಥವಾ ಕರೋನಾ ಲಸಿಕೆಯನ್ನು ಪಡೆಯುವುದೇ ಆಗಿರಲಿ, ಎಲ್ಲೆಡೆ ಆಧಾರ್ ಅಗತ್ಯವಿದೆ. ಮನೆ ಖರೀದಿಯಿಂದ ಹಿಡಿದು  ಬ್ಯಾಂಕಿಂಗ್ ಕೆಲಸಗಳಿಗೆ ಸಂಬಂಧಿಸಿದಂತೆ ಪ್ರತಿ ಕೆಲಸಕ್ಕೂ ಆಧಾರ್ ಅಗತ್ಯವಿದೆ. ಆದರೆ ಯಾವುದೇ ವ್ಯಕ್ತಿ ಮೃತ ಪಟ್ಟ ನಂತರ ಅವರ ಆಧಾರ್ ಸಂಖ್ಯೆ ಏನಾಗುತ್ತದೆ ಎಂದು ತಿಳಿದಿದೆಯೇ?

ವ್ಯಕ್ತಿಯ ಸಾವಿನ ನಂತರ ಆಧಾರ್ ಏನಾಗುತ್ತದೆ?
ಸಾಮಾನ್ಯವಾಗಿ ನಾವು ಆಧಾರ್ ಕಾರ್ಡ್ (Aadhaar Card) ಪಡೆಯುವುದು ಹೇಗೆ? ಎಲ್ಲೆಲ್ಲಿ ಆಧಾರ್ ಆಗತ್ಯವಿದೆ ಎಂಬುದರ ಬಗ್ಗೆ ನಮಗೆ ತಿಳಿದಿರುತ್ತದೆ. ಆದರೆ ಯಾವುದೇ ವ್ಯಕ್ತಿಯ ಮರಣದ ಬಳಿಕ ಆತನ ಆಧಾರ್ ಕಾರ್ಡ್ ಏನಾಗುತ್ತದೆ ಎಂಬುದನ್ನು ಯಾವಾಗಲಾದರೂ ಯೋಚಿಸಿದ್ದೀರಾ? ವಾಸ್ತವವಾಗಿ, ಈ ಪ್ರಶ್ನೆಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrashekhar) ಅವರು ಲೋಕಸಭೆಯಲ್ಲಿ  ಉತ್ತರವನ್ನು ನೀಡಿದ್ದಾರೆ. ವ್ಯಕ್ತಿಯ ಸಾವಿನ ನಂತರ, ಆತನ ಆಧಾರ್ ಅನ್ನು ನಿಷ್ಕ್ರಿಯಗೊಳಿಸಲಾಗುವುದಿಲ್ಲ, ಏಕೆಂದರೆ ಅಂತಹ ಯಾವುದೇ ಅವಕಾಶವಿಲ್ಲ ಎಂದು ಅವರು ಹೇಳಿದರು.

ಇದನ್ನೂ ಓದಿ- UIDAI: Aadhaar Card ನಿಯಮ ಬದಲಾವಣೆ, ನಿಮ್ಮ ಮೇಲೆ ನೇರ ಪರಿಣಾಮ

ಆಧಾರ್ ರದ್ದುಗೊಳಿಸಲು ಯಾವುದೇ ವ್ಯವಸ್ಥೆ ಇಲ್ಲ: ಸರ್ಕಾರದ ಸ್ಪಷ್ಟನೆ:
ಸತ್ತ ವ್ಯಕ್ತಿಯ ಆಧಾರ್ ಸಂಖ್ಯೆಯನ್ನು ರದ್ದುಗೊಳಿಸಲು ಸದ್ಯಕ್ಕೆ ಯಾವುದೇ ವ್ಯವಸ್ಥೆ ಇಲ್ಲ ಎಂದು ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಆದಾಗ್ಯೂ, ಜನನ ಮತ್ತು ಮರಣ ನೋಂದಣಿ ಕಾಯಿದೆ 1969 ರ ಕರಡು ತಿದ್ದುಪಡಿಗಳ ಕುರಿತು ಯುಐಡಿಎಐ (UIDAI) ನಿಂದ ಭಾರತದ ರಿಜಿಸ್ಟ್ರಾರ್ ಜನರಲ್ ಸಲಹೆಗಳನ್ನು ಕೋರಿದ್ದು, ಮರಣ ಪ್ರಮಾಣಪತ್ರವನ್ನು ನೀಡುವಾಗ ಸತ್ತವರ ಆಧಾರ್ ಅನ್ನು ತೆಗೆದುಕೊಳ್ಳಬಹುದು ಎಂಬ ಬಗ್ಗೆ ಚಿಂತಿಸುತ್ತಿರುವುದಾಗಿ ಅವರು ಲೋಕಸಭೆಗೆ ತಿಳಿಸಿದರು.

ಮರಣ ಪ್ರಮಾಣಪತ್ರದೊಂದಿಗೆ ಆಧಾರ್ ಲಿಂಕ್ ಮಾಡಿ:
ಪ್ರಸ್ತುತ, ಜನನ ಮತ್ತು ಮರಣಗಳ ರಿಜಿಸ್ಟ್ರಾರ್ ಜನನ ಮತ್ತು ಸಾವಿನ ಅಂಕಿಅಂಶಗಳ ಪಾಲಕರು. ಆಧಾರ್ ಅನ್ನು ನಿಷ್ಕ್ರಿಯಗೊಳಿಸಲು ಸತ್ತವರ ಆಧಾರ್ ಸಂಖ್ಯೆಯನ್ನು ರಿಜಿಸ್ಟ್ರಾರ್‌ನಿಂದ ಪಡೆಯಲು ಪ್ರಸ್ತುತ ಯಾವುದೇ ಕಾರ್ಯವಿಧಾನವಿಲ್ಲ. ಆದರೆ ಈ ಘಟಕಗಳ ನಡುವೆ ಆಧಾರ್ ಸಂಖ್ಯೆಯನ್ನು ಹಂಚಿಕೊಳ್ಳುವ ಚೌಕಟ್ಟು ಜಾರಿಯಾದ ನಂತರ, ಅದನ್ನು ನಿಷ್ಕ್ರಿಯಗೊಳಿಸಲು ರಿಜಿಸ್ಟ್ರಾರ್ ಯುಐಡಿಎಐನೊಂದಿಗೆ ಸತ್ತವರ ಆಧಾರ್ ಸಂಖ್ಯೆಯನ್ನು ಹಂಚಿಕೊಳ್ಳಲು ಪ್ರಾರಂಭಿಸುತ್ತಾರೆ. ಆಧಾರ್ ಅನ್ನು ನಿಷ್ಕ್ರಿಯಗೊಳಿಸುವುದು ಅಥವಾ ಮರಣ ಪ್ರಮಾಣಪತ್ರದೊಂದಿಗೆ ಲಿಂಕ್ ಮಾಡುವುದರಿಂದ ಆಧಾರ್ ಮಾಲೀಕರ ಮರಣದ ನಂತರ ಅದನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯುತ್ತದೆ.

ಇದನ್ನೂ ಓದಿ-  Aadhaar Card Update: ಈಗ ನಿಮ್ಮ ಆಧಾರ್ ಕಾರ್ಡ್ ಕಳೆದುಹೋದರೂ ಚಿಂತಿಸಬೇಕಿಲ್ಲ

ಕಳೆದ ತಿಂಗಳು, UIDAI ನಿಮ್ಮ ಆಧಾರ್ ಸಂಖ್ಯೆಗೆ ಲಿಂಕ್ ಮಾಡಿದ ಮೊಬೈಲ್ ಸಂಖ್ಯೆಯನ್ನು ನಿಮ್ಮ ಮನೆಯಲ್ಲಿ ಪೋಸ್ಟ್‌ಮ್ಯಾನ್ ಮೂಲಕ ಅಪ್‌ಡೇಟ್ ಮಾಡುವ ಸಾಧ್ಯತೆಯನ್ನು ಪರಿಚಯಿಸಿತು. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಮತ್ತು ಯುಐಡಿಎಐ ಪೋಸ್ಟ್ ಮ್ಯಾನ್ ಗಳು ಆಧಾರ್ ಕಾರ್ಡ್ ಹೊಂದಿರುವವರ ಮೊಬೈಲ್ ಸಂಖ್ಯೆಗಳನ್ನು ಅಪ್ಡೇಟ್ ಮಾಡಲು ಅವಕಾಶ ಕಲ್ಪಿಸಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News