PM Jan-Dhan Yojana: ಪಿಎಂ ಜನ್-ಧನ್ ಖಾತೆಗಳ ಸಂಖ್ಯೆ 3 ಪಟ್ಟು ಹೆಚ್ಚಳ, 2.30 ಲಕ್ಷದವರೆಗೆ ನೇರ ಲಾಭ

PM Jan-Dhan Yojana: 2015 ರಿಂದ 2021 ಜುಲೈ 21 ರವರೆಗೆ, ಪಿಎಂ ಜನ್ ಧನ್ ಯೋಜನೆಯ ಖಾತೆಗಳ ಸಂಖ್ಯೆ 3 ಪಟ್ಟು ಹೆಚ್ಚಾಗಿದೆ. ಈ ಯೋಜನೆಯಲ್ಲಿ ತೆರೆಯಲಾದ ಖಾತೆಗಳ ಸಂಖ್ಯೆ ಕೆಲವು ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾಗಿದೆ.

Written by - Yashaswini V | Last Updated : Aug 5, 2021, 11:03 AM IST
  • 'ಪಿಎಂ ಜನ್ ಧನ್ ಯೋಜನೆಯ' ಖಾತೆಯು 3 ಪಟ್ಟು ಹೆಚ್ಚಾಗಿದೆ
  • ಖಾತೆಗಳ ಸಂಖ್ಯೆಯು ಮಾರ್ಚ್ 2015 ರಲ್ಲಿ 14.72 ಕೋಟಿಯಿಂದ ಜುಲೈ 21, 2021 ರವರೆಗೆ 42.76 ಕೋಟಿಗೆ ಏರಿಕೆಯಾಗಿದೆ
  • ಜನ-ಧನ್ ಖಾತೆ ತೆರೆಯಲು ಕೆವೈಸಿ ಅಡಿಯಲ್ಲಿ ದಾಖಲೆ ಪರಿಶೀಲನೆ ಮಾಡಲಾಗುತ್ತದೆ
PM Jan-Dhan Yojana: ಪಿಎಂ ಜನ್-ಧನ್ ಖಾತೆಗಳ ಸಂಖ್ಯೆ 3 ಪಟ್ಟು ಹೆಚ್ಚಳ, 2.30 ಲಕ್ಷದವರೆಗೆ ನೇರ ಲಾಭ title=
PM Jan-Dhan Yojana

PM Jan-Dhan Yojana: ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಜನ್ ಧನ್ ಯೋಜನೆ ಸಾರ್ವಜನಿಕರಿಂದ ಉತ್ತಮ ಮೆಚ್ಚುಗೆ ಗಳಿಸುತ್ತಿದೆ. ಈ ಯೋಜನೆಯಲ್ಲಿ ತೆರೆಯಲಾದ ಖಾತೆಗಳ ಸಂಖ್ಯೆ ಕೆಲವು ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾಗಿದೆ. ಈ ಮಾಹಿತಿಯನ್ನು ಹಣಕಾಸು ಸೇವೆಗಳ ಇಲಾಖೆ (DFS) ಟ್ವೀಟ್ ಮಾಡಿದೆ. ಡಿಎಫ್‌ಎಸ್ ಟ್ವೀಟ್‌ನಲ್ಲಿ 'ಪಿಎಂ ಜನ್ ಧನ್ ಯೋಜನೆಯ' ಖಾತೆಯು 3 ಪಟ್ಟು ಹೆಚ್ಚಾಗಿದೆ. ಮಾಹಿತಿಯ ಪ್ರಕಾರ, ಖಾತೆಗಳ ಸಂಖ್ಯೆಯು ಮಾರ್ಚ್ 2015 ರಲ್ಲಿ 14.72 ಕೋಟಿಯಿಂದ ಜುಲೈ 21, 2021 ರವರೆಗೆ 42.76 ಕೋಟಿಗೆ ಏರಿಕೆಯಾಗಿದೆ ಎಂದು ತಿಳಿಸಿದೆ.

ಹಣಕಾಸು ಸೇವೆಗಳ ಇಲಾಖೆಯು ತನ್ನ ಟ್ವೀಟ್‌ನಲ್ಲಿ, 'PMJDY ಖಾತೆಗಳಲ್ಲಿ ಠೇವಣಿ ಇಟ್ಟ ಮೊತ್ತವು ಆರಂಭದಿಂದಲೂ ಅನೇಕ ಬೆಳವಣಿಗೆಗಳನ್ನು ಸಾಧಿಸಿದೆ (ಮಾರ್ಚ್ 15 ರಲ್ಲಿ ರೂ. 15,670 ಕೋಟಿಯಿಂದ ಮಾರ್ಚ್ 21 ಕ್ಕೆ ರೂ. 145,551 ಕೋಟಿಗೆ). ಹಣಕಾಸು ಸೇರ್ಪಡೆ ಕಾರ್ಯಕ್ರಮದ ಯಶಸ್ಸಿಗೆ ಇದು ಒಂದು ದೊಡ್ಡ ಪುರಾವೆಯಾಗಿದೆ ಎಂದು ಹೇಳಿದೆ.

ಇದನ್ನೂ ಓದಿ- ಹಳೆಯ ನೋಟು, ನಾಣ್ಯಗಳ ಆನ್‌ಲೈನ್ ಮಾರಾಟ ಮತ್ತು ಖರೀದಿ: ಆರ್‌ಬಿಐನ ಎಚ್ಚರಿಕೆಯ ಸಂದೇಶ..!

2.30 ಲಕ್ಷ ಪ್ರಯೋಜನಗಳು ಲಭ್ಯ:
>> ಜನ್-ಧನ್ ಖಾತೆದಾರರಿಗೆ 2.30 ಲಕ್ಷ ರೂ. ಲಾಭವನ್ನು ನೀಡಲಾಗುತ್ತದೆ.
>> ಯಾವುದೇ ಬ್ಯಾಂಕಿನಲ್ಲಿ ಖಾತೆ ತೆರೆದ ಮೇಲೆ ಜನ್ ಧನ್ ಖಾತೆದಾರರಿಗೆ ಆಕಸ್ಮಿಕ ವಿಮಾ ರಕ್ಷಣೆಯನ್ನು ನೀಡಲಾಗುತ್ತದೆ.
>> ಖಾತೆದಾರರಿಗೆ 1,00,000 ಆಕಸ್ಮಿಕ ವಿಮೆ ಸೌಲಭ್ಯವನ್ನು ನೀಡಲಾಗುತ್ತದೆ.
>> 30,000 ರೂ.ಗಳ ಸಾಮಾನ್ಯ ವಿಮೆಯನ್ನು (General Insurance) ನೀಡಲಾಗುತ್ತದೆ.
>> ಮತ್ತೊಂದೆಡೆ, ಜನ್-ಧನ್ ಖಾತೆದಾರರಿಗೆ ಅಪಘಾತವಾದರೆ, ಆತನಿಗೆ 30,000 ರೂ.
ಖಾತೆದಾರರು ಅಪಘಾತದಲ್ಲಿ ಮೃತಪಟ್ಟರೆ, ಅವರ ಕುಟುಂಬದವರಿಗೆ 2 ಲಕ್ಷ ರೂ. ವಿಮಾ ಸೌಲಭ್ಯ ನೀಡಲಾಗುವುದು.
>> ಈ ಹಿನ್ನೆಲೆಯಲ್ಲಿ, ಜನ್ ಧನ್ ಖಾತೆದಾರರು ರೂ 2.30 ಲಕ್ಷದವರೆಗೆ ಪ್ರಯೋಜನ ಪಡೆಯಬಹುದು.

ಇದಲ್ಲದೇ, ಗ್ರಾಹಕರು ಕನಿಷ್ಠ ಬ್ಯಾಲೆನ್ಸ್ (Jan-Dhan A/C Minimum Balance) ಬಗ್ಗೆ ಚಿಂತಿಸಬೇಕಾಗಿಲ್ಲ. ಈ ಖಾತೆಯಲ್ಲಿ, ಸರ್ಕಾರಿ ಗ್ರಾಹಕರಿಗೆ 10000 ರೂ. ಓವರ್‌ಡ್ರಾಫ್ಟ್ ಸೌಲಭ್ಯವನ್ನು ನೀಡಲಾಗಿದೆ. ಇದರೊಂದಿಗೆ, ಉಳಿತಾಯ ಖಾತೆಯಂತೆ ಬಡ್ಡಿಯ ಲಾಭವು ಲಭ್ಯವಿದೆ. ಮೊಬೈಲ್ ಬ್ಯಾಂಕಿಂಗ್‌ನ ಪ್ರಯೋಜನವನ್ನು ಸಹ ನೀಡಲಾಗಿದೆ. ಇದಲ್ಲದೇ, ನಗದು ಹಿಂಪಡೆಯುವಿಕೆ ಮತ್ತು ಖರೀದಿಗಳಿಗೆ ರೂಪೇ ಕಾರ್ಡ್ ಲಭ್ಯವಿದೆ.

ಇದನ್ನೂ ಓದಿ- Indian Railway: ಇ-ಕ್ಯಾಟರಿಂಗ್ ಸೇವೆ ಪುನರಾರಂಭಿಸಿದ ಐಆರ್‌ಸಿಟಿಸಿ, ನೀವು ಈ ರೀತಿ ಫುಡ್ ಆರ್ಡರ್ ಮಾಡಬಹುದು

ಖಾತೆ ತೆರೆಯುವುದು ಹೇಗೆ?
ಪ್ರಧಾನಮಂತ್ರಿ ಜನ್-ಧನ್ ಯೋಜನೆಯಡಿ, ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಖಾತೆಗಳನ್ನು ತೆರೆಯಲಾಗುತ್ತದೆ. ಆದರೆ, ನಿಮಗೆ ಬೇಕಾದರೆ, ನೀವು ಯಾವುದೇ ಹತ್ತಿರದ ಬ್ಯಾಂಕಿನಲ್ಲಿ ನಿಮ್ಮ ಜನ್ ಧನ್ ಖಾತೆಯನ್ನು ತೆರೆಯಬಹುದು. ನೀವು ಬೇರೆ ಯಾವುದೇ ಉಳಿತಾಯ ಖಾತೆಯನ್ನು ಹೊಂದಿದ್ದರೆ ನೀವು ಅದನ್ನು ಜನ್ ಧನ್ ಖಾತೆಗೆ ಸಹ ಪರಿವರ್ತಿಸಬಹುದು. ಜನ್ ಧನ್ ಖಾತೆಯನ್ನು ತೆರೆಯಲು ದಾಖಲೆ ಅಗತ್ಯವಿದೆ. ಭಾರತದಲ್ಲಿ ವಾಸಿಸುವ ಯಾವುದೇ ಪ್ರಜೆ, ಅವರ ವಯಸ್ಸು 10 ವರ್ಷ ಅಥವಾ ಅದಕ್ಕಿಂತ ಹೆಚ್ಸಿದ್ಧರೆ ಜನ್ ಧನ್ ಖಾತೆಯನ್ನು ತೆರೆಯಬಹುದು.

ಯಾವ ದಾಖಲೆಗಳು ಅಗತ್ಯವಿದೆ?
ಜನ-ಧನ್ ಖಾತೆ ತೆರೆಯಲು ಕೆವೈಸಿ ಅಡಿಯಲ್ಲಿ ದಾಖಲೆ ಪರಿಶೀಲನೆ ಮಾಡಲಾಗುತ್ತದೆ. ಈ ದಾಖಲೆಗಳನ್ನು ಬಳಸಿ ಜನ್ ಧನ್ ಖಾತೆಯನ್ನು ತೆರೆಯಬಹುದು. ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಚಾಲನಾ ಪರವಾನಗಿ, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್, MNREGA ಜಾಬ್ ಕಾರ್ಡ್ ಬಳಸಿ ನೀವು ಖಾತೆ ತೆರೆಯಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News