ನವದೆಹಲಿ : SBI home loan: ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗೃಹ ಸಾಲ ಬಡ್ಡಿದರವನ್ನು ಹೆಚ್ಚಿಸಿದೆ. ಹೊಸ ಬಡ್ಡಿ ದರಗಳು ಏಪ್ರಿಲ್ 1 ರಿಂದಲೇ ಜಾರಿಗೆ ಬಂದಿವೆ. ಎಸ್‌ಬಿಐ ಗೃಹ ಸಾಲದ ಮೇಲಿನ ಕನಿಷ್ಠ ಬಡ್ಡಿದರವನ್ನು (Interest Rate) ಶೇಕಡಾ 0.25 ರಷ್ಟು ಹೆಚ್ಚಿಸಲಾಗಿದೆ. ಅಂದರೆ, ಈಗ ಗ್ರಾಹಕರು ಗೃಹ ಸಾಲಕ್ಕೆ (Home loan) ಹೆಚ್ಚಿನ ಇಎಂಐ ಪಾವತಿಸಬೇಕಾಗುತ್ತದೆ. ಎಸ್‌ಬಿಐ ನಂತರ ಇತರ ಬ್ಯಾಂಕುಗಳು ಕನಿಷ್ಠ ಗೃಹ ಸಾಲದ ದರವನ್ನು ಹೆಚ್ಚಿಸಬಹುದು ಎನ್ನಲಾಗಿದೆ. 


COMMERCIAL BREAK
SCROLL TO CONTINUE READING

ಕನಿಷ್ಠ ಗೃಹ ಸಾಲದ ದರ 0.25%ರಷ್ಟು ಹೆಚ್ಚಳ : 
 ಎಸ್‌ಬಿಐ (SBI) ಕನಿಷ್ಠ ಗೃಹ ಸಾಲದ ದರವನ್ನು ಶೇಕಡಾ 0.25 ರಷ್ಟು ಹೆಚ್ಚಿಸಿದೆ, ಅಂದರೆ ಈಗ ಗೃಹ ಸಾಲವು 6.70 ಪ್ರತಿಶತದ ಬದಲು 6.95 ಪ್ರತಿಶತದಿಂದ ಪ್ರಾರಂಭವಾಗಲಿದೆ. ಕಳೆದ ತಿಂಗಳು, ಎಸ್‌ಬಿಐ ವಿಶೇಷ ಕೊಡುಗೆಯಡಿಯಲ್ಲಿ 6.70% ದರದಲ್ಲಿ ಗೃಹ ಸಾಲವನ್ನು (Home loan) ನೀಡಿತ್ತು.  ಈ ಕೊಡುಗೆ ಮಾರ್ಚ್ 31 ರವರೆಗೆ ಮಾತ್ರ ಇತ್ತು.  ಈಗ ಗೃಹ ಸಾಲದ ದರವನ್ನು ಶೇಕಡಾ 6.95 ಕ್ಕೆಏರಿಸಲಾಗಿದೆ. 


ಇದನ್ನೂ ಓದಿ : SBI YONO Super Saving Days: 50% ವರೆಗೆ ರಿಯಾಯಿತಿ ಜೊತೆಗೆ ಕ್ಯಾಶ್‌ಬ್ಯಾಕ್ ಕೂಡ ಲಭ್ಯ


6.95% ಕನಿಷ್ಠ ಬಡ್ಡಿದರ :
ಎಸ್‌ಬಿಐ ವೆಬ್‌ಸೈಟ್‌ನ ಪ್ರಕಾರ, ಬ್ಯಾಂಕ್ ಎಕ್ಸ್ಟರ್ನಲ್ ಬೆಂಚ್ ಮಾರ್ಕ್ ಲಿಂಕ್ಡ್ ರೇಟ್ (EBLR) ಗಿಂತ 0.4% ಹೆಚ್ಚಳ ಮಾಡಿ ಗೃಹ ಸಾಲವನ್ನು ನೀಡುತ್ತಿದೆ. EBLR ರಿಸರ್ವ್ ಬ್ಯಾಂಕಿನ (RBI) ರೆಪೊ ದರಕ್ಕೆ ಲಿಂಕ್ ಆಗಿರುತ್ತದೆ. ಇದು ಪ್ರಸ್ತುತ 6.65% ಆಗಿದೆ. ಇದರರ್ಥ ಎಸ್‌ಬಿಐ ಗೃಹ ಸಾಲವು ಈಗ  7% ದರದಲ್ಲಿ ಲಭ್ಯವಿದೆ. ಆದರೆ ಮಹಿಳೆಯರಿಗೆ ಗೃಹ ಸಾಲದ ಮೇಲೆ 0.05% ಹೆಚ್ಚುವರಿ ರಿಯಾಯಿತಿ ಸಿಗುತ್ತದೆ.  ಅಂದರೆ ಅವರಿಗೆ 6.95% ರಷ್ಟು ಗೃಹ ಸಾಲವನ್ನು ನೀಡಲಾಗುವುದು. 


ಪ್ರೋಸೆಸಿಂಗ್ ಚಾರ್ಜ್ ಕೂಡಾ  ಪಾವತಿಸಬೇಕಾಗುತ್ತದೆ : 
ಇದಲ್ಲದೆ, ಎಸ್‌ಬಿಐ ಗ್ರಾಹಕರು ಪ್ರೋಸೆಸಿಂಗ್ ಚಾರ್ಜ್ ಅನ್ನು ಸಹ ಪಾವತಿಸಬೇಕಾಗುತ್ತದೆ.  ಇದು ಒಟ್ಟು ಗೃಹ ಸಾಲದ 0.40% ದಷ್ಟು ಆಗಿರುತ್ತದೆ. ಅದರ ಮೇಲೆ ಜಿಎಸ್‌ಟಿಯನ್ನು (GST) ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ. ಗ್ರಾಹಕರಿಗೆ  ಪ್ರೋಸೆಸಿಂಗ್ ಚಾರ್ಜ್ ಕನಿಷ್ಠ 10,000 ರೂ ಮತ್ತು ಗರಿಷ್ಠ 30,000 ರೂವರೆಗೆ ಇರುತ್ತದೆ. 


ಇದನ್ನೂ ಓದಿ : SBI ಗ್ರಾಹಕರು ಈ ಹಂತಗಳ ಮೂಲಕ ಸುಲಭವಾಗಿ ಡೆಬಿಟ್ ಕಾರ್ಡ್ ಪಿನ್ ರಚಿಸಬಹುದು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.