ನವದೆಹಲಿ: ವೈದಿಕ ಜ್ಯೋತಿಷ್ಯದಲ್ಲಿ ಶನಿಯನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಏಕೆಂದರೆ ಶನಿ ದೇವನು ಕೆಲಸ-ಕಾರ್ಯಗಳ ಪ್ರಕಾರ ಫಲವನ್ನು ನೀಡುತ್ತಾನೆ. ಶನಿಯ ದುಷ್ಟ ಕಣ್ಣು ಬಿದ್ದರೆ ಜೀವನವೇ ನಾಶವಾಗುತ್ತದೆ, ಆದರೆ ಶನಿಯ ಅನುಗ್ರಹ ದೊರೆತೆರೆ ಸಾಮನ್ಯ ವ್ಯಕ್ತಿ ಸಹ ರಾಜನಾಗುತ್ತಾನೆ. 2023ರ ಆರಂಭದಲ್ಲಿ ಶನಿಯು ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ.


COMMERCIAL BREAK
SCROLL TO CONTINUE READING

ಈ ಶನಿಯು ಸ್ವರಾಶಿ ಕುಂಭ ರಾಶಿಯನ್ನು ಪ್ರವೇಶಿಸಲಿದೆ. 30 ವರ್ಷಗಳ ನಂತರ ಶನಿಯ ಈ ರಾಶಿ ಬದಲಾವಣೆಯಿಂದ ಎಲ್ಲಾ 12 ರಾಶಿಗಳ ಮೇಲೂ ದೊಡ್ಡ ಪರಿಣಾಮ ಬೀರಲಿದೆ. ಇದು ಕೆಲವು ರಾಶಿಗಳಿಗೆ ಸುವರ್ಣ ದಿನಗಳ ಆರಂಭವನ್ನು ಸೂಚಿಸುತ್ತದೆ. ಯಾವ ರಾಶಿಯವರಿಗೆ ಶನಿ ಸಂಕ್ರಮಣವು ಶುಭ ಫಲಿತಾಂಶಗಳನ್ನು ನೀಡುತ್ತದೆ ಎಂಬುದನ್ನು ತಿಳಿಯಿರಿ.


ಮೇಷ ರಾಶಿ: 2023ರ ಆರಂಭದಲ್ಲಿ ಸಂಭವಿಸುವ ಶನಿಯ ರಾಶಿ ಬದಲಾವಣೆಯು ಮೇಷ ರಾಶಿಯವರಿಗೆ ಬಲವಾದ ಪ್ರಯೋಜನಗಳನ್ನು ನೀಡುತ್ತದೆ. ಇವರ ಆದಾಯ ಹೆಚ್ಚಾಗುತ್ತದೆ, ಪೂರ್ವಜರ ಆಸ್ತಿಯಿಂದ ದೊಡ್ಡ ಲಾಭವಾಗಬಹುದು. ವ್ಯಾಪಾರಕ್ಕಾಗಿ ಇಲ್ಲಿಯವರೆಗೆ ಮಾಡಿದ ಯೋಜನೆಗಳಲ್ಲಿ ಕೆಲಸ ಮಾಡಲು ಇದು ಉತ್ತಮ ಸಮಯ. ಕೆಲಸದಲ್ಲಿನ ಬದಲಾವಣೆಗಳು ಯಶಸ್ಸನ್ನು ನೀಡುತ್ತವೆ.


ಇದನ್ನೂ ಓದಿ: Horoscope Today: ಈ ರಾಶಿಯವರಿಗೆ ವ್ಯವಹಾರದಲ್ಲಿ ಲಾಭದ ಜೊತೆಗೆ ಯಶಸ್ಸು ಸಿಗಲಿದೆ


ವೃಷಭ ರಾಶಿ: ಶನಿಯ ಸಂಚಾರವು ಕೆಲಸಗಳಲ್ಲಿ ಬರುವ ಎಲ್ಲಾ ಅಡೆತಡೆಗಳನ್ನು ನಿವಾರಿಸುತ್ತದೆ ಮತ್ತು ಕೆಲಸಗಳಲ್ಲಿ ಯಶಸ್ಸನ್ನು ತರುತ್ತದೆ. ವೃತ್ತಿಯಲ್ಲಿ ದೊಡ್ಡ ಪ್ರಗತಿಯನ್ನು ಸಾಧಿಸುವ ಸಾಧ್ಯತೆಗಳಿವೆ. ನೀವು ಉನ್ನತ ಸ್ಥಾನವನ್ನು ಪಡೆಯಬಹುದು ಮತ್ತು ಬಹಳಷ್ಟು ಹಣವನ್ನು ಪಡೆಯಬಹುದು. ನಿಮ್ಮ ಆದಾಯ ಹೆಚ್ಚಲಿದೆ. ಉದ್ಯಮಿಗಳಿಗೂ ಇದು ಉತ್ತಮ ಸಮಯ. ಹೊಸ ಪ್ರೇಮ ಸಂಬಂಧಗಳು ಪ್ರಾರಂಭವಾಗಲಿವೆ. ಅವಿವಾಹಿತರಿಗೆ ವಿವಾಹವಾಗಲಿದೆ.


ಮಿಥುನ ರಾಶಿ: ಶನಿ ಸಂಚಾರವು ಮಿಥುನ ರಾಶಿಯವರ ಮೇಲೆ ಉತ್ತಮ ಪ್ರಭಾವವನ್ನುಂಟು ಮಾಡಲಿದೆ. ಎರಡೂವರೆ ವರ್ಷಗಳ ನಂತರ ಸಿಕ್ಕಿರುವ ಈ ಪರಿಹಾರವು ಮಿಥುನ ರಾಶಿಯವರಿಗೆ ತುಂಬಾ ಶುಭಕರವಾಗಿರುತ್ತದೆ. ಅವರ ಕಷ್ಟಗಳು ದೂರವಾಗುತ್ತವೆ. ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಮುಕ್ತಿ ದೊರೆಯಲಿದೆ. ವೃತ್ತಿಯಲ್ಲಿ ಲಾಭವಿರುತ್ತದೆ, ಪೂರ್ವಜರ ಆಸ್ತಿಯಿಂದ ಲಾಭವಾಗುವ ಸಾಧ್ಯತೆಗಳಿವೆ.


ತುಲಾ ರಾಶಿ: ಶನಿಯ ಸಂಚಾರವು ತುಲಾ ರಾಶಿಯ ಸ್ಥಳೀಯರನ್ನು ಶನಿಯ ನೆರಳಿನಿಂದ ಮುಕ್ತಗೊಳಿಸುತ್ತದೆ. ಇದರೊಂದಿಗೆ ಅವರ ಪ್ರಗತಿಯ ಹಾದಿ ತೆರೆದುಕೊಳ್ಳುತ್ತದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಆದಾಯ ಜೊತೆಗೆ ಗೌರವವೂ ಹೆಚ್ಚಾಗುತ್ತದೆ. ಅವಿವಾಹಿತರಿಗೆ ವಿವಾಹವಾಗುವ ಸಾಧ್ಯತೆ ಇರುತ್ತದೆ.


ಇದನ್ನೂ ಓದಿ:  Garuda Purana: ಯಾವುದೇ ವ್ಯಕ್ತಿಗೆ ಸಾಯುವ ಮೊದಲು ಈ 5 ಮುನ್ಸೂಚನೆಗಳು ಸಿಗುತ್ತವೆ!


ಧನು ರಾಶಿ: ಶನಿಯು ಕುಂಭ ರಾಶಿಯನ್ನು ಪ್ರವೇಶಿಸಿದ ತಕ್ಷಣ  ಶನಿಯ ಏಳೂವರೆ ವರ್ಷಗಳು ಧನು ರಾಶಿಯಿಂದ ದೂರವಾಗುತ್ತವೆ. ಇದರೊಂದಿಗೆ ಬಹಳ ಸಮಯದ ನಂತರ ಅವರು ಹೆಚ್ಚಿನ ಪರಿಹಾರ ಪಡೆಯಲಿದ್ದಾರೆ. ಅವರ ಸಂಕಟ ದೂರವಾಗುತ್ತದೆ. ಧನ ನಷ್ಟದಿಂದ ಮುಕ್ತಿ ದೊರೆಯಲಿದೆ. ಆದಾಯದ ಸಾಧನಗಳು ಹೆಚ್ಚಾಗುತ್ತವೆ. ಆರೋಗ್ಯವು ಉತ್ತಮವಾಗಿರುತ್ತದೆ, ಅದೃಷ್ಟವು ನಿಮ್ಮನ್ನು ಬೆಂಬಲಿಸಲು ಪ್ರಾರಂಭಿಸುತ್ತದೆ.


(ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.