Horoscope Today: ಈ ರಾಶಿಯವರಿಗೆ ವ್ಯವಹಾರದಲ್ಲಿ ಲಾಭದ ಜೊತೆಗೆ ಯಶಸ್ಸು ಸಿಗಲಿದೆ

Horoscope Today (25-12-2022): ಮೇಷ ರಾಶಿಯವರಿಗೆ ವಾಹನ ಅಪಘಾತದ ಮುನ್ಸೂಚನೆ ಇದೆ. ಮಿಥುನ ರಾಶಿಯವರು ಯಾವುದೇ ಕೆಲಸದಲ್ಲಿ ನಿರ್ಲಕ್ಷ್ಯ ಮಾಡಬಾರದು. ವೃಶ್ಚಿಕ ರಾಶಿಯವರಿಗೆ ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ.

Written by - Zee Kannada News Desk | Last Updated : Dec 25, 2022, 06:09 AM IST
  • ಕನ್ಯಾ ರಾಶಿಯವರಿಗೆ ವ್ಯಾಪಾರದಲ್ಲಿ ಲಾಭ, ಸಾಲವಾಗಿ ಕೊಟ್ಟ ಹಣ ವಾಪಸ್ ಬರಲಿದೆ
  • ತುಲಾ ರಾಶಿಯವರಿಗೆ ಸಮಾಜದಲ್ಲಿ ಗೌರವ ಸಿಗಲಿದೆ, ಹಿರಿಯರ ಸಲಹೆ ಪಡೆಯಿರಿ
  • ಧನು ರಾಶಿಯವರ ಕೌಟುಂಬಿಕ ಕಲಹಗಳು ಕೊನೆಗೊಳ್ಳುತ್ತವೆ, ಯಾರಿಗೂ ಸಾಲ ಕೊಡಬೇಡಿ
Horoscope Today: ಈ ರಾಶಿಯವರಿಗೆ ವ್ಯವಹಾರದಲ್ಲಿ ಲಾಭದ ಜೊತೆಗೆ ಯಶಸ್ಸು ಸಿಗಲಿದೆ title=
ಇಂದಿನ ರಾಶಿಭವಿಷ್ಯ

Today Astrology (25-12-2022): ತುಲಾ ರಾಶಿಯವರಿಗೆ ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ವೃಶ್ಚಿಕ ರಾಶಿಯವರಿಗೆ ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ. ಧನು ರಾಶಿಯವರ ಕೌಟುಂಬಿಕ ಕಲಹಗಳು ಕೊನೆಗೊಳ್ಳುತ್ತವೆ. ಭಾನುವಾರದ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ನಿಮ್ಮ ಪ್ರಮುಖ ಕೆಲಸಗಳು ವಿಳಂಬವಾಗಲಿದೆ. ವಾಹನ ಅಪಘಾತದ ಮುನ್ಸೂಚನೆ ಇದೆ. ನಿಮ್ಮ ಹಣೆಬರಹವನ್ನು ನಂಬಿರಿ. ಬಾಳೆ ಹಣ್ಣನ್ನು ದಾನ ಮಾಡಿ.

ಅದೃಷ್ಟದ ಬಣ್ಣ- ಹಳದಿ

ವೃಷಭ ರಾಶಿ: ಆತ್ಮೀಯ ಸ್ನೇಹಿತರನ್ನು ಭೇಟಿಯಾಗುವ ಅವಕಾಶವಿದೆ. ಮಧ್ಯಾಹ್ನದ ನಂತರ ನಿಮಗೆ ಸಮಯವು ಅನುಕೂಲಕರವಾಗಿರುತ್ತದೆ. ಸಂಬಂಧದಲ್ಲಿ ಮಧುರತೆ ಇರುತ್ತದೆ. ಅನ್ನ ದಾನ ಮಾಡಿ.

ಅದೃಷ್ಟದ ಬಣ್ಣ- ನೀಲಿ

ಮಿಥುನ ರಾಶಿ: ಯಾವುದೇ ಕೆಲಸದಲ್ಲಿ ನಿರ್ಲಕ್ಷ್ಯ ಬೇಡ. ಮನೆಯಲ್ಲಿ ಅತಿಥಿಯನ್ನು ನಿರೀಕ್ಷಿಸಲಾಗಿದೆ. ಕೌಟುಂಬಿಕ ಕಲಹಗಳು ಕೊನೆಗೊಳ್ಳುತ್ತವೆ. ಖಿಚಡಿ ದಾನ ಮಾಡಿ.

ಅದೃಷ್ಟದ ಬಣ್ಣ - ಗುಲಾಬಿ

ಕರ್ಕಾಟಕ ರಾಶಿ: ನಿಮ್ಮ ಮನಸ್ಸು ದಿನವಿಡೀ ಚಂಚಲವಾಗಿರುತ್ತದೆ. ಇತರರಿಗೆ ಸಹಾಯ ಮಾಡಲು ಪ್ರಯತ್ನಿಸಿ. ಹೊರಗಿನ ಆಹಾರವನ್ನು ಆದಷ್ಟು ತಪ್ಪಿಸಿ. ಸಕ್ಕರೆಯನ್ನು ದಾನ ಮಾಡಿ.

ಅದೃಷ್ಟದ ಬಣ್ಣ – ಬಿಳಿ

ಇದನ್ನೂ ಓದಿ: Chanakya Niti : ಜೀವನದಲ್ಲಿ ಯಾವಾಗಲೂ ಯಶಸ್ಸು ಸಿಗಲು ಅನುಸರಿಸಿ ಚಾಣಕ್ಯನ ಈ ನೀತಿಗಳನ್ನು!

ಸಿಂಹ ರಾಶಿ: ಮಧ್ಯಾಹ್ನದ ವೇಳೆಗೆ ಪ್ರಮುಖ ಕೆಲಸಗಳನ್ನು ಮುಗಿಸಲು ಸಾಧ್ಯವಾಗುತ್ತದೆ. ಮನೆಯಲ್ಲಿ ಶುಭ ಕಾರ್ಯಕ್ರಮಗಳು ನಡೆಯಲಿವೆ. ಯಾರನ್ನೂ ನೋಯಿಸಬೇಡಿ. ಬೆಲ್ಲವನ್ನು ದಾನ ಮಾಡಿ.

ಅದೃಷ್ಟದ ಬಣ್ಣ- ಕೆಂಪು

ಕನ್ಯಾ ರಾಶಿ: ವ್ಯಾಪಾರದಲ್ಲಿ ಲಾಭವಾಗಲಿದೆ. ಸಾಲ ಕೊಟ್ಟ ಹಣ ವಾಪಸ್ ಬರಲಿದೆ. ಯಾವುದೇ ಕಾರಣಕ್ಕೂ ಹತಾಶರಾಗಬೇಡಿ. ಅನ್ನದಾನ ಮಾಡಿ.

ಅದೃಷ್ಟದ ಬಣ್ಣ- ಮರೂನ್

ತುಲಾ ರಾಶಿ: ನಿಮಗೆ ಸಮಾಜದಲ್ಲಿ ಗೌರವ ಸಿಗಲಿದೆ. ಹಿರಿಯರ ಸಲಹೆ ಪಡೆಯಿರಿ. ಭರವಸೆಯನ್ನು ಉಳಿಸಿಕೊಳ್ಳಿ. ತರಕಾರಿಗಳನ್ನು ದಾನ ಮಾಡಿ.

ಅದೃಷ್ಟದ ಬಣ್ಣ- ನೀಲಿ

ವೃಶ್ಚಿಕ ರಾಶಿ: ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ. ಅತಿಥಿಯೊಂದಿಗೆ ವಾದ ಮಾಡಬೇಡಿ. ಮನೆಯ ದಕ್ಷಿಣ ಭಾಗವನ್ನು ಸ್ವಚ್ಛವಾಗಿಡಿ. ಸಿಹಿತಿಂಡಿಗಳನ್ನು ದಾನ ಮಾಡಿ.

ಅದೃಷ್ಟದ ಬಣ್ಣ- ಕೆಂಪು

ಇದನ್ನೂ ಓದಿ: Tulsi Plant: ಒಂದೇ ರಾತ್ರಿಯಲ್ಲಿ ಅದೃಷ್ಟ ಬದಲಾಗಬೇಕೇ? ತುಳಸಿ ಕುಂಡದ ಮೇಲೆ ಈ ಚಿಹ್ನೆಗಳನ್ನು ರಚಿಸಿ

ಧನು ರಾಶಿ: ಕೌಟುಂಬಿಕ ಕಲಹಗಳು ಕೊನೆಗೊಳ್ಳುತ್ತವೆ. ಯಾರಿಗೂ ಸಾಲ ಕೊಡಬೇಡಿ. ಸ್ಥಗಿತಗೊಂಡ ಕಾರ್ಯಗಳು ಪೂರ್ಣಗೊಳ್ಳಲು ಪ್ರಾರಂಭಿಸುತ್ತವೆ. ಹಳದಿ ಅಕ್ಕಿಯನ್ನು ದಾನ ಮಾಡಿ.

ಅದೃಷ್ಟದ ಬಣ್ಣ- ಕೇಸರಿ

ಮಕರ ರಾಶಿ: ನಿಮ್ಮ ಎಲ್ಲಾ ಚಿಂತೆಗಳು ದೂರವಾಗಲಿವೆ. ಸಂಬಂಧದಲ್ಲಿನ ಹುಳುಕು ಸಹ ಕೊನೆಗೊಳ್ಳುತ್ತದೆ. ವಯಸ್ಸಾದ ಮಹಿಳೆಯ ಪಾದಗಳನ್ನು ಸ್ಪರ್ಶಿಸಿ ಆಶೀರ್ವಾದ ಪಡೆಯಿರಿ. ತುಪ್ಪವನ್ನು ದಾನ ಮಾಡಿ.

ಅದೃಷ್ಟದ ಬಣ್ಣ - ಗುಲಾಬಿ

ಕುಂಭ ರಾಶಿ: ನಿಮ್ಮ ಹಿರಿಯರನ್ನು ಗೌರವಿಸಿ. ಸಂಜೆಯವರೆಗೆ ಸಮಯವು ನಿಮಗೆ ಸರಿಹೊಂದುತ್ತದೆ. ವ್ಯಾಪಾರದಲ್ಲಿ ಸಿಕ್ಕಿಹಾಕಿಕೊಂಡ ಹಣವನ್ನು ಮರಳಿ ಪಡೆಯುವಿರಿ. ವಸ್ತ್ರದಾನ ಮಾಡಿ.

ಅದೃಷ್ಟದ ಬಣ್ಣ- ಹಸಿರು

ಮೀನ ರಾಶಿ: ಬೇಗ ಮನೆಯಿಂದ ಹೊರಡಿ. ಅಗತ್ಯವಿರುವ ಸಂಬಂಧಿಗೆ ಸಹಾಯ ಮಾಡಿ. ನಿಮ್ಮ ಮಾತುಗಳನ್ನು ನಿಯಂತ್ರಿಸಿ. ಮೊಸರು ದಾನ ಮಾಡಿ.

ಅದೃಷ್ಟದ ಬಣ್ಣ- ಮರೂನ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News