BESCOM: ನಾನಾ ಕಾರಣಗಳಿಂದಾಗಿ ಜನರು ಪ್ರತಿ ತಿಂಗಳು ವಿದ್ಯುತ್ ಬಿಲ್ ಪಾವತಿ ಮಾಡುವುದನ್ನು ವಿಳಂಬ ಮಾಡುತ್ತಾರೆ. ಹಲವು ಬಾರಿ ವಿದ್ಯುತ್ ಬಿಲ್ ಪಾವತಿಯನ್ನು ಮರೆತೇ ಬಿಡುವುದೂ ಉಂಟು. ಕೆಲವರಂತೂ ತಿಂಗಳುಗಟ್ಟಲೆ ವಿದ್ಯುತ್ ಬಿಲ್ ಪಾವತಿಸುವುದೇ ಇಲ್ಲ. ಆದರೆ, ಇನ್ನು ಮುಂದೆ ಈ ರೀತಿ ಮಾಡಿದ್ರೆ ಕರೆಂಟ್ ಶಾಕ್ ಹೊಡೆಯುವುದಂತೂ ಗ್ಯಾರಂಟಿ. ಇನ್ಮುಂದೆ 3 ತಿಂಗಳು ವಿದ್ಯುತ್ ಬಿಲ್ ಕಟ್ಟಿಲ್ಲವೆಂದು ಸಿಬ್ಬಂದಿ ನಿಮ್ಮ ಮನೆ ಕರೆಂಟ್ ಫ್ಯೂಸ್ ತೆಗೆಯಲ್ಲ, ಬದಲಿಗೆ ನಿಮ್ಮ ವಿದ್ಯುತ್ ಕನೆಕ್ಷನ್ ಲೈಸೆನ್ಸ್ ಅನ್ನೇ ಕ್ಯಾನ್ಸಲ್ ಮಾಡ್ತಾರೆ...!


COMMERCIAL BREAK
SCROLL TO CONTINUE READING

ಹೌದು, ಇನ್ನು ಮುಂದೆ ವಿದ್ಯುತ್ ಬಿಲ್ ಪಾವತಿಸಲು ವಿಳಂಬ ಮಾಡುವವರಿಗೆ ಬೆಸ್ಕಾಂ ಕರೆಂಟ್ ಶಾಕ್ ನೀಡಲಿದೆ. ವಿದ್ಯುತ್ ಬಾಕಿ ಬಿಲ್ ಸಂಗ್ರಹಕ್ಕೆ ಗ್ರಾಹಕರ  ಮೇಲೆ ಹೊಸ ಬ್ರಹ್ಮಾಸ್ತ್ರ ಪ್ರಯೋಗಿಸಲು ಸಜ್ಜಾಗಿರುವ ಬೆಸ್ಕಾಂ, ಗ್ರಾಹಕರು ಸತತ ಮೂರು ತಿಂಗಳುಗಳ ಕಾಲ ವಿದ್ಯುತ್ ಬಿಲ್ ಅನ್ನು ಪಾವತಿಸದಿದ್ದಲ್ಲಿ, ವಿದ್ಯುತ್ ಸಂಪರ್ಕ ಒಪ್ಪಂದವನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳುತ್ತದೆ. ಒಪ್ಪಂದ ರದ್ದತಿಯ ನಂತರ ವಿದ್ಯುತ್ ಸಂಪರ್ಕ ಪಡೆಯಲು ಗ್ರಾಹಕರು ಹೊಸ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಬೇಕಿರುತ್ತದೆ.


ಎಲ್‌ಪಿಜಿ ಸಿಲಿಂಡರ್‌ನಲ್ಲಿ ದೊಡ್ಡ ಬದಲಾವಣೆ, ದೇಶದ ಪ್ರತಿ ಗ್ರಾಹಕರಿಗೂ ಸಿಗಲಿದೆ ನೇರ ಲಾಭ
 
ಆರ್ಥಿಕ ಪರಿಸ್ಥಿತಿ ಸುಧಾರಿಸಲು ಬೆಸ್ಕಾಂನಿಂದ ನೂತನ ಶಿಕ್ಷೆ ಪ್ರಯೋಗವನ್ನು ಆರಂಭಿಸಿದ್ದು ಈ ಕುರಿತಂತೆ ಬೆಸ್ಕಾಂ ಟ್ವೀಟ್ ಮೂಲಕ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ವಿದ್ಯುತ್ ಸಂಪರ್ಕ ಒಪ್ಪಂದ ರದ್ದುಗೊಳಿಸುವಂತಹ ತೊಂದರೆ ಬೇಡ ಅಂದರೆ ಸರಿಯಾದ ಟೈಮ್ ಗೆ ವಿದ್ಯುತ್ ಬಿಲ್ ಪಾವತಿಸಿ.


ಇದನ್ನೂ ಓದಿ- ಸರ್ಕಾರ ನಡೆಸುವ ಈ ಚಿಕ್ಕ ಪರೀಕ್ಷೆ ಪಾಸಾಗಿ, ಸ್ವಂತ ಉದ್ಯಮ ಆರಂಭಿಸಿ ಕೈತುಂಬಾ ಸಂಪಾದಿಸಿ


ವಿದ್ಯುತ್ ಬಿಲ್ ಅನ್ನು ಈ ರೀತಿ ಪಾವತಿಸಿ:
ಗ್ರಾಹಕರು ವಿದ್ಯುತ್ ಬಿಲ್ ಅನ್ನು ಪಾವತಿಸಲು ಎಲ್ಲಿಯೂ ಹೋಗಬೇಕಿಲ್ಲ. ಪ್ರಸ್ತುತ ಗ್ರಾಹಕರು ತಮ್ಮ ವಿದ್ಯುತ್ ಬಿಲ್ ಅನ್ನು ಮುಕ್ತವಾಗಿ ಬೆಸ್ಕಾಂ ವೆಬ್'ಸೈಟ್ ಅಥವಾ ಬೆಸ್ಕಾಂ ಮಿತ್ರ ಮೊಬೈಲ್ ಅಪ್ಲಿಕೇಷನ್ ಮೂಲಕ ಸುಲಭವಾಗಿ ಪಾವತಿಸಬಹುದಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.