Bank Strike on 19th November : ಬ್ಯಾಂಕ್‌ಗೆ ಸಂಬಂಧಿಸಿದ ಏನೇ ಕೆಲಸ ಇದ್ದರೂ ಇನ್ನೆರಡು ದಿನಗಳಲ್ಲಿ ಪೂರೈಸಿಕೊಳ್ಳಿ. ಯಾಕೆಂದರೆ ನವೆಂಬರ್ 19 ರಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ಒಂದು ದಿನದ ಮುಷ್ಕರಕ್ಕೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕಿಂಗ್ ಸೇವೆಯೊಂದಿಗೆ ಎಟಿಎಂ ಸೇವೆಯೂ ವ್ಯತ್ಯಯವಾಗಲಿದೆ. ಬ್ಯಾಂಕ್ ನೌಕರರು ಮುಷ್ಕರ ನಡೆಸುವುದರಿಂದ ಬ್ಯಾಂಕಿನ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಲಿದೆ.
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ :
ಭಾರತೀಯ ಬ್ಯಾಂಕ್ ಅಸೋಸಿಯೇಷನ್ ಮುಷ್ಕರ ನಡೆಸುವಂತೆ ಕೇಳಿಕೊಂಡಿರುವುದಾಗಿ, ಬ್ಯಾಂಕ್ ಆಫ್ ಬರೋಡಾ ಷೇರು ವಿನಿಮಯ ಕೇಂದ್ರಗಳಿಗೆ ತನ್ನ ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ. ಒಕ್ಕೂಟವು ತನ್ನ ಬೇಡಿಕೆಗಳಿಗೆ ಸಂಬಂಧಿಸಿದಂತೆ ನವೆಂಬರ್ 19, 2022 ರಂದು ಮುಷ್ಕರ ನಡೆಸುವುದಾಗಿ ಈ ನೋಟಿಸ್‌ನಲ್ಲಿ, ಹೇಳಿದೆ. ಅಂದರೆ ನವೆಂಬರ್ 19 ರಂದು ಬ್ಯಾಂಕ್ ಗಳ ಕೆಲಸ ಸ್ಥಗಿತವಾಗಲಿದೆ.
ಇದನ್ನೂ ಓದಿ : Gold Price Today : ಮತ್ತೆ ದುಬಾರಿಯಾಯಿತು ಚಿನ್ನ.! ಬೆಳ್ಳಿ ಅಗ್ಗ
ಬ್ಯಾಂಕ್ ಉದ್ಯೋಗಿಗಳ ಯೋಜನೆ ಏನು? :
ಮುಷ್ಕರದ ದಿನದಂದು ಬ್ಯಾಂಕ್ ಶಾಖೆಗಳು ಮತ್ತು ಕಚೇರಿಗಳಲ್ಲಿ ಕೆಲಸವನ್ನು ಮುಂದುವರಿಸಲು ಎಲ್ಲಾ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಬ್ಯಾಂಕ್ ಹೇಳಿದೆ. ಆದರೆ ಬ್ಯಾಂಕ್ ನೌಕರರು ಮುಷ್ಕರ ಮಾಡಿದರೆ, ಬ್ಯಾಂಕ್ ಶಾಖೆಗಳು ಮತ್ತು ಕಚೇರಿಗಳ ಕಾರ್ಯನಿರ್ವಹಣೆಯ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರಬಹುದು.
ಶನಿವಾರ ಬ್ಯಾಂಕ್ ನೌಕರರ ಮುಷ್ಕರದ ಕಾರಣ ಬ್ಯಾಂಕ್ ವ್ಯವಹಾರಗಳು ನಡೆಯುವುದಿಲ್ಲ. ಮರುದಿನ ಭಾನುವಾರ ರಜೆ ಇರಲಿದೆ. ಹೀಗಾಗಿ ಬ್ಯಾಂಕ್ ಗೆ ಸಂಬಂಧಿಸಿದ ಯಾವುದೇ ಕೆಲಸ ಇತ್ಯರ್ಥಪಡಿಸಬೇಕಾದರೆ ಸೋಮವಾರದವರೆಗೆ ಕಾಯಲೇ ಬೇಕು. ಇತ್ಯರ್ಥಪಡಿಸಿಕೊಳ್ಳಿ. ಎರಡು ದಿನಗಳ ಕಾಲ ಎಟಿಎಂಗಳಲ್ಲಿ ಹಣದ ಕೊರತೆಯಾಗುವ ಸಂಭವ ಕೂಡಾ ಇದೆ.
ಇದನ್ನೂ ಓದಿ : Business Opportunity: ಸರ್ಕಾರ ನಡೆಸುವ ಈ ಚಿಕ್ಕ ಪರೀಕ್ಷೆ ಪಾಸಾಗಿ, ಸ್ವಂತ ಉದ್ಯಮ ಆರಂಭಿಸಿ ಕೈತುಂಬಾ ಸಂಪಾದಿಸಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.