SBI Earning opportunity:ಎಸ್ಬಿಐನೊಂದಿಗೆ ವ್ಯಾಪಾರ ಆರಂಭಿಸಿ, ಪ್ರತಿ ತಿಂಗಳು 60,000 ರೂ. ಗಳಿಸಿ..!
SBI Earning opportunity:ನೀವು ಮನೆಯಲ್ಲಿ ಕುಳಿತು ವ್ಯಾಪಾರವನ್ನು ಪ್ರಾರಂಭಿಸಲು ಬಯಸುವುದಾದರೆ ಅಥವಾ ಹೆಚ್ಚುವರಿ ಆದಾಯ ಗಳಿಸುವ ಬಗ್ಗೆ ಯೋಚಿಸುತ್ತಿದ್ದರೆ, ಉತ್ತಮವಾದ ವ್ಯಾಪಾರ ಕಲ್ಪನೆಯ ಮಾಹಿತಿ ಇಲ್ಲಿದೆ.
ನವದೆಹಲಿ : SBI Earning opportunity: ನೀವು ಮನೆಯಲ್ಲಿ ಕುಳಿತು ವ್ಯಾಪಾರವನ್ನು ಪ್ರಾರಂಭಿಸಲು ಬಯಸುವುದಾದರೆ ಅಥವಾ ಹೆಚ್ಚುವರಿ ಆದಾಯ ಗಳಿಸುವ ಬಗ್ಗೆ ಯೋಚಿಸುತ್ತಿದ್ದರೆ, ಉತ್ತಮವಾದ ವ್ಯಾಪಾರ ಕಲ್ಪನೆಯ ಮಾಹಿತಿ ಇಲ್ಲಿದೆ. ಈ ವ್ಯವಹಾರವನ್ನು ಪ್ರಾರಂಭಿಸುವ ಮೂಲಕ, ತಿಂಗಳಿಗೆ 60,000 ರೂ. ಗಳಿಸಬಹುದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಈ ಅವಕಾಶವನ್ನು ನೀಡುತ್ತಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ATM ಫ್ರ್ಯಾಂಚೈಸಿ (SBI ATM Franchise) ತೆಗೆದುಕೊಳ್ಳುವ ಮೂಲಕ ನೀವು ಇದನ್ನು ಗಳಿಸಬಹುದು.
ಫ್ರ್ಯಾಂಚೈಸಿ ಅನ್ನು ಹೇಗೆ ಪಡೆಯುವುದು ?
ಎಸ್‌ಬಿಐ ಎಟಿಎಂ ಫ್ರಾಂಚೈಸಿ (SBI ATM Franchise) ಪಡೆಯುವುದು ಬಹಳ ಸುಲಭ. ಯಾವ ಪ್ರದೇಶದಲ್ಲಿ ಎಟಿಎಂ (ATM) ಅಗತ್ಯವಿದೆ ಎಂಬುದನ್ನು ಹತ್ತಿರದ ಬ್ಯಾಂಕಿನಿಂದ ಕಂಡುಹಿಡಿಯಿರಿ. ಉದ್ದೇಶಿತ ಎಟಿಎಂಗೆ ಕೇವಲ 50 ರಿಂದ 80 ಅಡಿ ಜಾಗವಿದ್ದರೆ ಸಾಕು. 2 ಲಕ್ಷ ರೂ. ಭದ್ರತಾ ಠೇವಣಿ ಇಡುವ ಮೂಲಕ, ಫ್ರಾಂಚೈಸಿ ಖರೀದಿಸಬಹುದು. ಇದಲ್ಲದೇ, 3 ಲಕ್ಷ ರೂಪಾಯಿಯನ್ನು ಕಾರ್ಯನಿರತ ಬಂಡವಾಳವಾಗಿ ಜಮಾ ಮಾಡಬೇಕಾಗುತ್ತದೆ. ಈ ರೀತಿಯಾಗಿ, ಒಟ್ಟು 5 ಲಕ್ಷ ರೂ. ಹೂಡಿಕೆಯ ಅಗತ್ಯವಿರುತ್ತದೆ. ಇದು ಮರುಪಾವತಿಸಬಹುದಾದ ಠೇವಣಿಯಾಗಿರುತ್ತದೆ.
ಇದನ್ನೂ ಓದಿ: ಮಾರುಕಟ್ಟೆಯಲ್ಲಿ ದೂಳೆಬ್ಬಿಸುತ್ತಿವೆ OLA Electric ಸ್ಕೂಟರ್ : ಮಾರಾಟ ಆರಂಭವಾದ 2 ದಿನದಲ್ಲಿ ₹1100 ಕೋಟಿ ವ್ಯವಹಾರ
ಎಟಿಎಂ ಫ್ರಾಂಚೈಸಿಗಾಗಿ ಇಲ್ಲಿ ಅರ್ಜಿ ಸಲ್ಲಿಸುವುದೇ?
ಕೆಲವು ಕಂಪನಿಗಳು SBI ATM ಗಳ ಫ್ರಾಂಚೈಸಿಂಗ್ ನೀಡುತ್ತವೆ. ನೀವು ಅವರ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ (Online application) ಸಲ್ಲಿಸಬಹುದು. ಎಟಿಎಂಗಳನ್ನು ಸ್ಥಾಪಿಸುವ ಕಂಪನಿಗಳು ವಿಭಿನ್ನವಾಗಿವೆ. ಟಾಟಾ ಇಂಡಿಕಾಶ್ (Tata indicash), ಮುತ್ತೂಟ್ ಎಟಿಎಂ (Muthoot ATM) ಮತ್ತು ಇಂಡಿಯಾ ಒನ್ ಎಟಿಎಂ (India One ATM) ಭಾರತದಲ್ಲಿ ಮುಖ್ಯವಾಗಿ ಎಟಿಎಂಗಳನ್ನು ಸ್ಥಾಪಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ, ಈ ಎಲ್ಲಾ ಕಂಪನಿಗಳ ವೆಬ್‌ಸೈಟ್‌ಗಳಲ್ಲಿ ಆನ್‌ಲೈನ್‌ನಲ್ಲಿ ಲಾಗ್ ಇನ್ ಮಾಡುವ ಮೂಲಕ ಎಟಿಎಮ್‌ಗಾಗಿ ಅರ್ಜಿ ಸಲ್ಲಿಸಬಹುದು
ಈ ದಾಖಲೆಗಳು ಅಗತ್ಯ :
-ಗುರುತಿನ ಪುರಾವೆ (ಆಧಾರ್ ಕಾರ್ಡ್ (Aadhaar), ಪ್ಯಾನ್ ಕಾರ್ಡ್, ಮತದಾರರ ಕಾರ್ಡ್)
-ವಿಳಾಸ ಪುರಾವೆ (ಪಡಿತರ ಚೀಟಿ, ವಿದ್ಯುತ್ ಬಿಲ್)
-ಬ್ಯಾಂಕ್ ಖಾತೆ (Bank account) ಮತ್ತು ಪಾಸ್ ಬುಕ್
-ಫೋಟೋ, ಇ-ಮೇಲ್ ಐಡಿ, ಫೋನ್ ಸಂಖ್ಯೆ
-GST ಸಂಖ್ಯೆ
-ಹಣಕಾಸು ದಾಖಲೆಗಳು
ಇದನ್ನೂ ಓದಿ : How to surrender LIC policy: ಅವಧಿಗೂ ಮುನ್ನ ಎಲ್‌ಐಸಿ ಪಾಲಿಸಿಯನ್ನು ಸರೆಂಡರ್ ಮಾಡಬೇಕೇ? ಹಾಗಿದ್ದರೆ ಏನು ಮಾಡಬೇಕು ತಿಳಿಯಿರಿ
ಸಂಪಾದನೆ ಎಷ್ಟಿರುತ್ತದೆ ?
ಗಳಿಕೆಯ ಬಗ್ಗೆ ನೋಡುವುದಾದರೆ, ಪ್ರತಿ ನಗದು ವಹಿವಾಟಿಗೆ 8 ರೂ ಮತ್ತು ನಗದು ರಹಿತ ವಹಿವಾಟಿಗೆ 2 ರೂ. ಸಿಗುತ್ತದೆ. ಹೂಡಿಕೆಯ ಲಾಭವು ವಾರ್ಷಿಕ ಆಧಾರದ ಮೇಲೆ 33-50% ವರೆಗೆ ಇರುತ್ತದೆ. ಉದಾಹರಣೆಗೆ, ಎಟಿಎಂ ಮೂಲಕ ಪ್ರತಿದಿನ 250 ವಹಿವಾಟುಗಳನ್ನು ನಡೆಸಿದರೆ, ಅದರಲ್ಲಿ 65 ಪ್ರತಿಶತ ನಗದು ವಹಿವಾಟು ಮತ್ತು 35 ಪ್ರತಿಶತ ನಗದುರಹಿತ ವಹಿವಾಟು ಆಗಿದ್ದರೆ, ಮಾಸಿಕ ಆದಾಯವು 45 ಸಾವಿರ ರೂಪಾಯಿಗೆ ಹತ್ತಿರದಲ್ಲಿರುತ್ತದೆ. ಅದೇ ಸಮಯದಲ್ಲಿ, ಪ್ರತಿದಿನ 500 ವಹಿವಾಟು ಇದ್ದರೆ, ಸುಮಾರು 88-90 ಸಾವಿರ ಕಮಿಷನ್ ಪಡೆಯಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.