Train Ticket Insurance Benefits: ರೈಲ್ವೆ ಟಿಕೆಟ್ ಬುಕಿಂಗ್ ವೇಳೆ ವಿಮೆ ಮಾಡಿಸುವುದರಿಂದ ಸಿಗುತ್ತೆ ಈ ಎಲ್ಲಾ ಪ್ರಯೋಜನ
Train Ticket Insurance Benefits: ಪ್ರತಿಯೊಬ್ಬ ಪ್ರಯಾಣಿಕರು ರೈಲು ಟಿಕೆಟ್ ಕಾಯ್ದಿರಿಸುವಾಗ ಕಡ್ಡಾಯವಾಗಿ ವಿಮೆಯನ್ನು ತೆಗೆದುಕೊಳ್ಳುವುದು ಉತ್ತಮ.
Train Ticket Insurance Benefits: ಸಾಮಾನ್ಯವಾಗಿ ನಾವು ರೈಲು ಟಿಕೆಟ್ ಬುಕ್ ಮಾಡುವಾಗ ಒಮ್ಮೆ ಪ್ರಯಾಣದ ವಿವರಗಳನ್ನು ಪರಿಶೀಲಿಸಿ ನಂತರ ಪಾವತಿ ಮಾಡುತ್ತೇವೆ. ಆದರೆ, ಅವಸರದಲ್ಲಿ ಅಥವಾ ಉದ್ದೇಶಪೂರ್ವಕವಾಗಿ ಭಾರತೀಯ ರೈಲ್ವೇ (Indian Railways) ನೀಡುವ ರೈಲು ಟಿಕೆಟ್‌ಗಳ ವಿಮೆಯನ್ನು ತೆಗೆದುಕೊಳ್ಳುವುದಿಲ್ಲ. 50 ಪೈಸೆಗಿಂತ ಕಡಿಮೆ ಇರುವ ಈ ವಿಮೆ ಎಷ್ಟು ಉಪಯುಕ್ತ ಎಂದು ನಿಮಗೆ ತಿಳಿದಿದೆಯೇ? ಇದರ ಜೊತೆಗೆ ಈ ವಿಮೆ ನಿಮಗೆ ಯಾವ ಸಂದರ್ಭಗಳಲ್ಲಿ ಉಪಯುಕ್ತವಾಗಬಹುದು ಎಂಬುದನ್ನು ತಿಳಿದಿರುವುದು ಕೂಡ ಬಹಳ ಮುಖ್ಯ.
ಐಆರ್‌ಸಿಟಿಸಿ (IRCTC) ಮೂಲಕ ರೈಲು ಟಿಕೆಟ್ ಕಾಯ್ದಿರಿಸುವ (Train Ticket Booking) ಎಲ್ಲಾ ಗ್ರಾಹಕರಿಗೆ ಈ ಸೌಲಭ್ಯವು ಕಡ್ಡಾಯವಾಗಿ ಲಭ್ಯವಿತ್ತು. ಆದರೆ ಸೆಪ್ಟೆಂಬರ್ 2018 ರಿಂದ, ಇದಕ್ಕಾಗಿ ಕನಿಷ್ಠ ಶುಲ್ಕವನ್ನು ವಿಧಿಸಲಾಗುತ್ತದೆ. ವಿಮಾ ಕಂತಿನ ಮೊತ್ತವು 50 ಪೈಸೆಗಿಂತ ಕಡಿಮೆಯಿದ್ದು ಟಿಕೆಟ್ ಕಾಯ್ದಿರಿಸುವಾಗ ಪ್ರತಿಯೊಬ್ಬರೂ ಈ ಆಯ್ಕೆಯನ್ನು ಆರಿಸಿಕೊಳ್ಳುವಂತೆ ಸೂಚಿಸಲಾಗಿದೆ.
ಸಾವು ಅಥವಾ ತಾತ್ಕಾಲಿಕ ಅಂಗವೈಕಲ್ಯದ ಸಂದರ್ಭದಲ್ಲಿ ರೈಲು ಪ್ರಯಾಣ ವಿಮೆಯ (Train Ticket Insurance) ಅಡಿಯಲ್ಲಿ 10 ಲಕ್ಷ ರೂ. ಪರಿಹಾರ ಲಭ್ಯವಿದೆ. ಪ್ರಯಾಣದ ಸಮಯದಲ್ಲಿ ರೈಲು ಅಪಘಾತ ಅಥವಾ ಯಾವುದೇ ರೀತಿಯ ಸನ್ನಿವೇಶದಲ್ಲಿ ಈ ವಿಮೆ ತುಂಬಾ ಉಪಯುಕ್ತವಾಗಿದೆ. ಶಾಶ್ವತ ಭಾಗಶಃ ಅಂಗವೈಕಲ್ಯದ ಸಂದರ್ಭದಲ್ಲಿ, ವಿಮೆಯ ವ್ಯಾಪ್ತಿಯು 7.5 ಲಕ್ಷಗಳವರೆಗೆ ಇರುತ್ತದೆ. ಆ ಸಮಯದಲ್ಲಿ ಆಸ್ಪತ್ರೆ ಮತ್ತು ಚಿಕಿತ್ಸೆಗಾಗಿ ರೂ. 2 ಲಕ್ಷದವರೆಗೆ ಆರ್ಥಿಕ ಸಹಾಯ ಲಭ್ಯವಿದೆ. ಈ ಮೊತ್ತವು ಸಾವು ಮತ್ತು ಅಂಗವೈಕಲ್ಯ ವ್ಯಾಪ್ತಿಗೆ ಹೆಚ್ಚುವರಿಯಾಗಿರುತ್ತದೆ. ರೈಲು ಅಪಘಾತ, ಕಳ್ಳತನ, ದೌರ್ಜನ್ಯ ಅಥವಾ ಅಂತಹ ಯಾವುದೇ ಪರಿಸ್ಥಿತಿಗೆ ಈ ವಿಮೆಯ ಅಡಿಯಲ್ಲಿ ಕವರೇಜ್ ಲಭ್ಯವಿದೆ.
ಇದನ್ನೂ ಓದಿ- Indian Railways: ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್! ಪ್ರಯಾಣದ ವೇಳೆ ಸಿಗಲಿದೆ ಈ ಸೌಲಭ್ಯ
ಹಕ್ಕು ಸಲ್ಲಿಸುವ ಪ್ರಕ್ರಿಯೆ ಏನು ಎಂದು ತಿಳಿಯಿರಿ?
ಇದಕ್ಕಾಗಿ, ಐಆರ್‌ಸಿಟಿಸಿ (IRCTC) ಮೂರು ವಿಮಾ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಮೂರು ಕಂಪನಿಗಳು ಭಾರತೀಯ ಎಕ್ಸಾ ಜನರಲ್ ಇನ್ಶೂರೆನ್ಸ್, ಬಜಾಜ್ ಅಲಿಯಾನ್ಸ್ ಜನರಲ್ ಇನ್ಶೂರೆನ್ಸ್, ಶ್ರೀರಾಮ್ ಜನರಲ್ ಇನ್ಶೂರೆನ್ಸ್ ಕಂಪನಿ ಮತ್ತು ICICI ಲೊಂಬಾರ್ಡ್ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್. ಈ ಮೂರು ಕಂಪನಿಗಳಲ್ಲಿ ಯಾವುದಾದರೂ ಒಂದರಿಂದ ನೀವು ಈ ವಿಮೆಯನ್ನು ಖರೀದಿಸಬಹುದು.
ಇದನ್ನು ನಿಮಗೆ ಐಆರ್‌ಸಿಟಿಸಿ ಮೂಲಕ ಒದಗಿಸಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಅಂತಹ ಎಲ್ಲಾ ಹಕ್ಕುಗಳನ್ನು ವಿಮಾ ಕಂಪನಿಯ ವೆಬ್‌ಸೈಟ್‌ಗೆ ನಿರ್ದೇಶಿಸಲಾಗುತ್ತದೆ. ಟಿಕೆಟ್ ಕಾಯ್ದಿರಿಸುವ ಸಮಯದಲ್ಲಿ ವಿಮೆಯನ್ನು ಖರೀದಿಸಿದ ನಂತರ, ಪಾಲಿಸಿ ಡಾಕ್ಯುಮೆಂಟ್ ಅನ್ನು ನಿಮಗೆ ಇಮೇಲ್ ಮೂಲಕ ಕಳುಹಿಸಲಾಗುತ್ತದೆ.
ಇದನ್ನೂ ಓದಿ- 10, 20, 50, 100, 500 ಮತ್ತು ₹ 2 ಸಾವಿರ ನೋಟುಗಳ ಮುದ್ರಣ; ಯಾವ ನೋಟು ಮುದ್ರಣಕ್ಕೆ ಹೆಚ್ಚು ವೆಚ್ಚವಾಗುತ್ತೆ?
ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ವಿಷಯವೆಂದರೆ ಸಂಬಂಧಿತ ಕಂಪನಿಯು ದಾಖಲಾತಿ ವಿವರಗಳನ್ನು ಭರ್ತಿ ಮಾಡಬೇಕು. ನೀವು ಇದನ್ನು ಮಾಡದಿದ್ದರೆ, ನೀವು ನಷ್ಟವನ್ನು ಭರಿಸಬೇಕಾಗಬಹುದು. ಅಗತ್ಯವಿದ್ದರೆ, ಅದನ್ನು ಕಾನೂನುಬದ್ಧ ಉತ್ತರಾಧಿಕಾರಿಗೆ ವಿಲೇವಾರಿ ಮಾಡಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ