ನವದೆಹಲಿ: ನೀವು ಈ ತಿಂಗಳು ದುಬೈಗೆ ಪ್ರಯಾಣಿಸಲು ಬಯಸಿದರೆ, ನೀವು ಏರ್ ಇಂಡಿಯಾದೊಂದಿಗೆ ವಿಮಾನಗಳನ್ನು ಕಾಯ್ದಿರಿಸಬಹುದು. ಸರ್ಕಾರಿ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ (Air India) ಈ ತಿಂಗಳು ದೆಹಲಿ ಮತ್ತು ದುಬೈ (Dubai) ನಡುವೆ ವಿಮಾನಯಾನ ನಡೆಸುವುದಾಗಿ ಪ್ರಕಟಿಸಿದೆ. ಆದರೆ ಅದೇ ಸಮಯದಲ್ಲಿ ದುಬೈಗೆ ಪ್ರವೇಶಿಸುವ ಮೊದಲು ವಿಶೇಷ ನಿಯಮವನ್ನು ಪಾಲಿಸಬೇಕು. ಇಲ್ಲದಿದ್ದರೆ ನಿಮ್ಮನ್ನು ದುಬೈ ವಿಮಾನ ನಿಲ್ದಾಣದಿಂದ ಮತ್ತೆ ಭಾರತಕ್ಕೆ ಕಳುಹಿಸಬಹುದು.


COMMERCIAL BREAK
SCROLL TO CONTINUE READING

ನಮ್ಮ ಸಹಾಯಕ ವೆಬ್‌ಸೈಟ್ zeebiz.com ಪ್ರಕಾರ, ಏರ್ ಇಂಡಿಯಾ ಎಕ್ಸ್‌ಪ್ರೆಸ್ (Air India Express) ದುಬೈಗೆ ವಿಮಾನಗಳನ್ನು ಓಡಿಸುವುದಾಗಿ ಘೋಷಿಸಿದೆ. ಈ ವಿಮಾನವನ್ನು ದೆಹಲಿಯಿಂದ ದುಬೈಗೆ ನಡೆಸಲಾಗುವುದು. ಇದಕ್ಕೆ ಪ್ರತಿಯಾಗಿ ಈ ವಿಮಾನ ದುಬೈನಿಂದ ವಾರಣಾಸಿ ಮೂಲಕ ದೆಹಲಿಗೆ ಹಾರಲಿದೆ. ಈ ವಿಮಾನವನ್ನು ಅಕ್ಟೋಬರ್ 8 ಮತ್ತು 22 ರಂದು ನಡೆಸಲಾಗುವುದು. ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಈ ವಿಮಾನ ಹಾರಾಟದ ಟಿಕೆಟ್ ಕಾಯ್ದಿರಿಸಬಹುದಾಗಿದೆ. ಈ ವಿಮಾನಕ್ಕಾಗಿ ಏರ್ ಇಂಡಿಯಾ ವೆಬ್‌ಸೈಟ್, ಕಾಲ್ ಸೆಂಟರ್, ಸಿಟಿ ಆಫೀಸ್ ಅಥವಾ ಯಾವುದೇ ಅಧಿಕೃತ ಏಜೆಂಟ್ ಮೂಲಕ ಟಿಕೆಟ್ ಕಾಯ್ದಿರಿಸಬಹುದು.


ನೌಕರರನ್ನು 5 ವರ್ಷದ ವರೆಗೆ ವೇತನ ರಹಿತ ಕಡ್ಡಾಯ ರಜೆಗೆ ಕಳುಹಿಸಲು ಮುಂದಾದ ಏರ್ ಇಂಡಿಯಾ


ಈ ವಿಶೇಷ ನಿಯಮವನ್ನು ನೆನಪಿನಲ್ಲಿಡಿ:
ಕರೋನಾವೈರಸ್ (Coronavirus) ಸಾಂಕ್ರಾಮಿಕದ ಮಧ್ಯೆ ಯಾವುದೇ ದೇಶವನ್ನು ಪ್ರವೇಶಿಸುವ ಮೊದಲು ಕರೋನಾ ನಕಾರಾತ್ಮಕ ಪರೀಕ್ಷಾ ವರದಿಯನ್ನು ತೋರಿಸುವುದು ಈಗ ಕಡ್ಡಾಯವಾಗಿದೆ. ಏತನ್ಮಧ್ಯೆ ದುಬೈನ ಆರೋಗ್ಯ ಪ್ರಾಧಿಕಾರವು ಭಾರತದಿಂದ ಬರುವ ಪ್ರಯಾಣಿಕರಿಗಾಗಿ ಕೆಲವು ಲ್ಯಾಬ್‌ಗಳ ಹೆಸರನ್ನು ಬಿಡುಗಡೆ ಮಾಡಿದೆ. ಈ ಲ್ಯಾಬ್‌ಗಳಿಂದ ಬಿಡುಗಡೆಯಾದ ಕರೋನಾ ಪರೀಕ್ಷಾ ವರದಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಪ್ರಯಾಣಿಕರಿಗೆ ತಿಳಿಸಲಾಗಿದೆ.


ಈ ಲ್ಯಾಬ್‌ಗಳ ವರದಿಯನ್ನು ದುಬೈನಲ್ಲಿ ಸ್ವೀಕರಿಸಲಾಗುವುದಿಲ್ಲ:


  • Suryam lab in Jaipur

  • Microhealth lab in the cities of Kerala

  • Dr P.Bhasin Pathlabs p LTD in Delhi

  • Noble Diagnostic Center in Delhi


ಏರ್ ಇಂಡಿಯಾ Tata Airlines ಆಗಲಿದೆಯೇ? ಇದರ ಹಿಂದಿನ ಕಾರಣ...


ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ನೀವು ಯುಎಇಯಿಂದ ಭಾರತಕ್ಕೆ ಪ್ರಯಾಣಿಸುತ್ತಿದ್ದರೆ, COVID-19 ಆರ್‌ಟಿ-ಪಿಸಿಆರ್ ಪರೀಕ್ಷೆ (RT-PCR test) ನಿಮಗೆ ಮುಖ್ಯವಾಗಿದೆ. ಈ ಪರೀಕ್ಷಾ ವರದಿಯು ವಿಮಾನ ನಿಲ್ದಾಣದಲ್ಲಿ ನಿರ್ಬಂಧದಿಂದ ನಿಮ್ಮನ್ನು ಉಳಿಸಬಹುದು. ಪ್ರಯಾಣಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಎನ್‌ಎಂಸಿ ಹೆಲ್ತ್‌ಕೇರ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಕಂಪನಿಯು ಯುಎಇಯ ಅನೇಕ ನಗರಗಳಲ್ಲಿ COVID-19 RT-PCR ಪರೀಕ್ಷೆಯನ್ನು ನೀಡುತ್ತದೆ.